ನಟ ಪುನೀತ್‌ ರಾಜಕುಮಾರಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಅಕಾಲಿಕ ಮರಣ ಹೊಂದಿದ ಪ್ರತಿಭಾವಂತ ಸಿನೆಮಾ ನಟ ಪುನೀತ್‌ ರಾಜಕುಮಾರ ಅವರಿಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿ (padmashri award) ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತುಮಕೂರಿನ ಗುಬ್ಬಿಯಲ್ಲಿ ಮಾತನಾಡಿದ ಅವರು, ತಾನು ಈ ಸಂಬಂಧ ಕೇಂದ್ರ ಸರ್ಕಾರ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು. ಪುನೀತ್ ರಾಜ್ … Continued

ಹಾನಗಲ್, ಸಿಂದಗಿ ಉಪಚುನಾವಣೆ : ನಾಳೆ ಮತ ಎಣಿಕೆ, ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕದ ಹಾನಗಲ್‌ ಹಾಗೂ ಸಿಂದಗಿ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆಯು ನಾಳೆ (ನವೆಂಬರ್ 2) ನಡೆಯಲಿದೆ. ಮತ ಎಣಿಕೆಯ ಬಳಿಕ ಚುನಾವಣಾ ಆಯೋಗ ಕೆಲ ಮಾರ್ಗಸೂಚಿಗಳನ್ನು ವಿಧಿಸಿದ್ದು, ವಿಜಯೋತ್ಸವವನ್ನು ಆಚರಿಸಲು ಅವಕಾಶ ಇಲ್ಲ. ವಿಜೇತ ಅಭ್ಯರ್ಥಿ ಚುನಾವಣಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲು ಸಹ ಷರತ್ತು‌ ವಿಧಿಸಲಾಗಿದೆ. ವಿಜೇತ ಅಭ್ಯರ್ಥಿಯೊಂದಿಗೆ ಪ್ರಮಾಣಪತ್ರ … Continued

ಜನರ ಮನೆ ಬಾಗಿಲಿಗೆ ಸರ್ಕಾರದ ಆಡಳಿತ: ಜನ ಸ್ಪಂದನ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ, ೫೬ ಸೇವೆಗಳ ಸೇರ್ಪಡೆ

ಬೆಂಗಳೂರು: ಆಡಳಿತವನ್ನು ಜನರ ಮನೆಯ ಬಾಗಿಲಿಗೇ ತಲುಪಿಸುವ ಜನ ಸೇವಕ ಮತ್ತು ಜನ ಸ್ಪಂದನ ಯೋಜನೆ ರಾಜ್ಯದಲ್ಲಿ ಇಂದಿನಿಂದ ಜಾರಿಯಾಗಿದ್ದು, ರಾಜ್ಯದ ಜನತೆ ಸರ್ಕಾರದ ಸೇವೆಗಳನ್ನು ಮನೆ ಬಾಗಿಲಲ್ಲೇ ಪಡೆದುಕೊಳ್ಳಬಹುದಾಗಿದೆ. ವಿಧಾನಸೌಧದಲ್ಲಿ ಕನ್ನಡ ರಾಜ್ಯೋತ್ಸವದ ದಿನ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ ಸೇವಕ ಮತ್ತು ಜನ ಸ್ಪಂದನ ಯೋಜನೆಗೆ ಚಾಲನೆ ನೀದರು. ನಾಗರಿಕರು … Continued

ಪುನೀತ್​ ರಾಜಕುಮಾರ 2 ಕಣ್ಣುಗಳು 4 ಜನರಿಗೆ ಅವಳವಡಿಕೆ: ಹೇಗೆಂದು ವೈದ್ಯರಿಂದ ಮಾಹಿತಿ

ಬೆಂಗಳೂರು: ಬದುಕಿದ್ದಾಗ ಅನೇಕರಿಗೆ ಸಹಾಯ ಹಸ್ತ ಚಾಚಿದ್ದ ಪುನೀತ್​ ರಾಜ್​ಕುಮಾರ್​ ಸಾವಿನ ನಂತರವೂ ಅವರು ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ಅವರ ಎರಡು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಲಾಗಿದೆ. ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಡಾ. ರಾಜ್​ಕುಮಾರ್ ಕೂಡ ಕಣ್ಣುಗಳನ್ನು ದಾನ ಮಾಡಿದ್ದರು. ಅವರ … Continued

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: 17 ಆರೋಪಿಗಳ ವಿರುದ್ಧ ಆರೋಪ ರೂಪಣೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 17 ಆರೋಪಿಗಳ ವಿರುದ್ಧ ಬೆಂಗಳೂರಿನ ಸಂಘಟಿತ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ ಆರೋಪ ರೂಪಿಸಿದೆ. ಪ್ರಕರಣದ ವಿಚಾರಣೆ ಆರಂಭಿಸಲು ನ್ಯಾಯಾಲಯ ಡಿಸೆಂಬರ್‌ 8ರಂದು ದಿನಾಂಕ ಪ್ರಕಟಿಸಲಿದೆ. ಈ ಕುರಿತು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದ್ದು, ವರದಿ ಪ್ರಕಾರ, ಅಮೋಲ್ ಕಾಳೆ ಸೇರಿದಂತೆ 17 … Continued

ಪುನೀತ್ ಓದಿಸುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದ ತಮಿಳು ನಟ ವಿಶಾಲ್…!:ವರದಿ

ಬೆಂಗಳೂರು: ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದು ತಮಿಳು ನಟ ವಿಶಾಲ್​ ಭಾನುವಾರ (ಅಕ್ಟೋಬರ್ 31) ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರಿಂದ ಉಚಿತ ಶೈಕ್ಷಣಿಕ ನೆರವು ಪಡೆಯುತ್ತಿರುವ 1800 ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದಾಗಿ ತಮಿಳು ನಟ ವಿಶಾಲ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. . ಹೃದಯಾಘಾತದಿಂದ ಪುನೀತ್ ರಾಜ್​ಕುಮಾರ್ ಅಕ್ಟೋಬರ್ 29 … Continued

ಕರ್ನಾಟಕದ 11 ಜಿಲ್ಲೆಗಳಲ್ಲಿ ಶೂನ್ಯ ಕೊರೊನಾ ಸೋಂಕು ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ 292 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 11 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 245 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌ ರಾಜ್ಯದಲ್ಲಿ‌ ಇಂದು ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ,ದಾರವಾಡ, ಗದಗ, ಕೊಪ್ಪಳ, ರಾಯಚೂರು ,ರಾಮನಗರ, ವಿಜಯಪುರ ಮತ್ತು ಯಾದಗಿರಿ ಸೇರಿ ಹನ್ನೊಂದು … Continued

ದಟ್ಟ ಕಾನನದ ಅಕ್ಷರ ಗೊತ್ತಿಲ್ಲದ ಕುಣಬಿ ಸಮುದಾಯದ ಜಾನಪದ ಭಂಡಾರ ಮಹಾದೇವ ವೇಳಿಪಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕಾರ್ಟೋಳಿಯ ಮಹಾದೇವ ಬುಧೊ ವೇಳಿಪ   (೯೨ ವರ್ಷ) ಜಿಲ್ಲೆಯ ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಣಬಿ ಸಮುದಾಯದ ಜಾನಪದ ಭಂಡಾರ. ಅಕ್ಷರವೇ ಗೊತ್ತಿರದಿದ್ದರೂ ಅಪಾರವಾದ ಜನಪದದ ಭಂಡಾರವಿದೆ. ಅರಣ್ಯವೇ ಅವರ ಬದುಕು. ಇಂದು ಅಗತ್ಯವಿರುವ ಬೆಳೆದು ಉಣ್ಣುವವರು. ಜೊಯಿಡಾದಿಂದ ಹದಿನೈದು ದೂರವಿರುವ ಕಾರ್ಟೋಳಿ ಎಂಬ ಹಳ್ಳಿಯಲ್ಲಿ ತಮ್ಮ … Continued

ಪುನೀತ್ ನಿಧನದ ಹಿನ್ನೆಲೆ: ಶೀಘ್ರವೇ ಜಿಮ್, ಫಿಟ್‌ನೆಸ್‌ ಸೆಂಟರ್‌ಗಳಿಗೆ ಮಾರ್ಗಸೂಚಿ-ಡಾ.ಸುಧಾಕರ

ಚಿಕ್ಕಬಳ್ಳಾಪುರ: ನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಧ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿಮ್ ಹಾಗೂ ಫಿಟ್‌ನೆಸ್‌ ಸೆಂಟರ್‌ಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮಾರ್ಗಸೂಚಿಗಳ ರಚನೆ ಮಾಡುವ ಚಿಂತನೆ ನಡೆದಿದೆ ಎಂದುಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ನಟ ಪುನೀತ್ ಸಾವಿನ ನಂತರ ಜಿಮ್ ಬಗ್ಗೆ ಗೊಂದಲದ ಪ್ರಶ್ನೆ ಉದ್ಭವವಾಗಿದೆ. ಬಹಳ ಜನ … Continued

ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಸಲು ಒತ್ತಾಯಿಸಿ ಸಿಎಂಗೆ ಹೊರಟ್ಟಿ ಪತ್ರ

ಹುಬ್ಬಳ್ಳಿ: ನವಂಬರ್‌ ಕೊನೆಯಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಐಇ ಅವರಿಗೆ ಪತ್ರ ಬರೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ 25 ಸದಸ್ಯರುಗಳು 2022 ರ ಜನೆವರಿ 5 ರಂದು ನಿವೃತ್ತಿ ಹೊಂದಲಿದ್ದಾರೆ. … Continued