ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ನಿಧನ

ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ಇಂದು, ಸೋಮವಾರ ಮಧ್ಯಾಹ್ನ 1:30ಕ್ಕೆ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಗಳಿದ್ದ ಅವರು ಅಲ್ಪ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಸಿದ್ಧರದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ಅವರು ಶಿಕ್ಷಕರನ್ನು ಸಂಘಟಿಸಿದ್ದರು. ತಾಲೂಕಾ ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು‌. 1983 … Continued

ನೇಗಿನಹಾಳ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ : ಡೆತ್ ನೋಟ್‌ನಲ್ಲೇನಿದೆ?

ಬೈಲಹೊಂಗಲ: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡ ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಪಾರ್ಥಿವ ಶರೀರದ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಭಾನುವಾರ ರಾತ್ರಿ ಮಠದ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸ್ವಾಮೀಜಿಗಳು ಬರೆದಿದ್ದು ಎಂದು ಹೇಳಲಾಗುವ ಡೆತ್ ನೋಟ್ … Continued

ಬಳ್ಳಾರಿ ಗ್ರಾಮಾಂತರದಲ್ಲೊಂದು ವಿಚಿತ್ರ ಘಟನೆ; ಮೃತ ಬಾಲಕನನ್ನು ಬದುಕಿಸಲು ದೇಹವನ್ನು ಉಪ್ಪಿನಲ್ಲಿಟ್ಟ ಗ್ರಾಮಸ್ಥರು….!

ಬಳ್ಳಾರಿ: ನೀರಿನ ಹೊಂಡದಲ್ಲಿ ಈಜಲು ಹೋಗಿದ್ದ ಬಾಲಕ ಸಾವಿಗೀಡಾಗಿದ್ದು, ಉಪ್ಪಿನ ರಾಶಿಯಲ್ಲಿ ಮಲಗಿಸಿದರೆ ಬದುಕಿ ಉಳಿಯುತ್ತಾನೆ ಎಂಬ ನಂಬಿಕೆಯಿಂದ ಬಾಲಕನ ಮೃತದೇಹವನ್ನು ಗಂಟೆಗಟ್ಟಲೆ ಉಪ್ಪಿನ ರಾಶಿ ಮಧ್ಯೆ ಮಲಗಿಸಿಟ್ಟ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಸಿರವಾರ ಗ್ರಾಮದಲ್ಲಿ ನೀರಿನ ಹೊಂಡದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಸುರೇಶ(10) ಎಂಬ ಬಾಲಕ ಮೃತಪಟ್ಟಿದ್ದಾನೆ. … Continued

ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್‌ಹೌಸ್‌ಗೆ ನುಗ್ಗಿದ ನೀರು: ಕಾವೇರಿ ನೀರು ಪೂರೈಕೆಗೆ ಎರಡು ದಿನ ತೊಂದರೆ

ಬೆಂಗಳೂರು: ಕಾವೇರಿ ನದಿಯಿಂದ ನಗರಕ್ಕೆ ನೀರನ್ನು ಮೇಲಕ್ಕೆ ಎತ್ತುವ ಪಂಪಿಂಗ್ ಸ್ಟೇಷನ್ ಮಂಡ್ಯದಲ್ಲಿ ಮುಳುಗಿರುವ ಕಾರಣ ಬೆಂಗಳೂರಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಸರಬರಾಜು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಮಳವಳ್ಳಿ ಟಿಕೆ ಹಳ್ಳಿ ನೀರು ಸರಬರಾಜು ಘಟಕ ಜಲಾವೃತವಾಗಿದೆ. ಹೀಗಾಗಿ ಯಂತ್ರೋಪಕರಣಗಳು ನೀರಲ್ಲಿ ಮುಳುಗಡೆಯಾಗಿದೆ. ನೀರನ್ನು ಹೊರಹಾಕಲು ಹಾಗೂ ನೀರಿನಿಂದ ಯಂತ್ರ ಮೇಲೆತ್ತಲು ಸಿಬ್ಬಂದಿ ಪರದಾಡುತ್ತಿದ್ದಾರೆ. ಹೀಗಾಗಿ … Continued

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮುರುಘಾ ಶರಣರಿಗೆ ಸೆಪ್ಟೆಂಬರ್ 14ರ ವರೆಗೆ ನ್ಯಾಯಾಂಗ ಬಂಧನ

ಚಿತ್ರದುರ್ಗ: ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಶರಣರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಇಂದು, ಸೋಮವಾರ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುರುಘಾ ಶರಣರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿದರು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮುರುಘಾ ಶರಣರಿಗೆ ಸೆಪ್ಟೆಂಬರ್ 14ರವರೆಗೆ 9 … Continued

ಆತ್ಮಹತ್ಯೆ ಮಾಡಿಕೊಂಡ ನೇಗಿನಹಾಳ ಬಸವ ಸಿದ್ಧಲಿಂಗ ಸ್ವಾಮೀಜಿ

ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿ ಅವರು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಮಹಿಳೆಯರಿಬ್ಬರು ಸ್ವಾಮೀಜಿಗಳ ಸಂಸ್ಕಾರ ಹಾಗೂ ಚಾರಿತ್ರ್ಯ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. … Continued

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಹಲವು ಜನವಸತಿ ಪ್ರದೇಶಗಳು ಜಲಾವೃತ | ವೀಡಿಯೊಗಳನ್ನು ವೀಕ್ಷಿಸಿ

ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ, ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹದಂತಹ ಪರಿಸ್ಥಿತಿಗಳ ನಡುವೆ ಅನೇಕ ಪ್ರದೇಶಗಳು ಮುಳುಗಿವೆ, ಜನರನ್ನು ಸ್ಥಳಾಂತರಿಸಲು ತೆಪ್ಪಗಳನ್ನು ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳ್ಳಂದೂರು, ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಹೊರ ವರ್ತುಲ ರಸ್ತೆ ಮತ್ತು ಬಿಇಎಂಎಲ್ ಲೇಔಟ್ ಸೇರಿದಂತೆ ಕೆಲವು ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ … Continued

ನವೆಂಬರ್‌ 23ಕ್ಕೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ: ಅನುಭವಿ ಕಾನೂನು ತಜ್ಞರ ನೇಮಕ ಮಾಡ್ತೇವೆ ಎಂದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಸುಪ್ರೀಂಕೋರ್ಟ್‌ನಲ್ಲಿ ನವೆಂಬರ್ 23ರಂದು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಷಯ ವಿಚಾರಣೆಗೆ ಬರಲಿದ್ದು, ರಾಜ್ಯದ ಪರವಾಗಿ ವಾದ ಮಂಡಿಸಲು ಅನುಭವಿ ಹಾಗೂ ಹಿರಿಯ ಕಾನೂನು ತಜ್ಞರ ತಂಡವನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟ‌ನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಾನುವಾರ ಆಗಮಿಸಿದ್ದ ಅವರು, ಹುಬ್ಬಳ್ಳಿ … Continued

ನೇತ್ರ ದಾನದ ಬಗ್ಗೆ ಅರಿವು ಮೂಡಿಸಲು ಸೈಕಲ್ ಜಾಥಾ

ಬೆಂಗಳೂರು : ಗೋ ಗ್ರೀನ್ ಮತ್ತು ಡಾಕ್ಟರ್ ಅಗರವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಇಂದು, ಭಾನುವಾರ “ನೇತ್ರ ದಾನ – ಮಹಾ ದಾನ ” ಎಂಬ ಘೋಷ ವಾಕ್ಯದೊಂದಿಗೆ ನೇತ್ರ ದಾನದ ಬಗ್ಗೆ ಜನಲ್ಲಿ ಅರಿವು ಮೂಡಿಸಲು ಬೆಂಗಳೂರಿನ ಬನಶಂಕರಿಯಲ್ಲಿ ಸೈಕಲ್ ಜಾಥಾ ನಡೆಸಲಾಯಿತು . ಜಾಥಾದಲ್ಲಿ ನೂರಾರು ಸೈಕಲ್ ಪಟುಗಳು ಭಾಗವಹಿಸಿದ್ದರು. ಸೈಕಲ್‌ ಜಾಥಾಕ್ಕೆ … Continued

ಸ್ಥಳ ಮಹಜರ್‌ ನಡೆಸಲು ಮುರುಘಾ ಶರಣರನ್ನು ಮಠಕ್ಕೆ ಕರೆತಂದ ಪೊಲೀಸರು

ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಸ್ಥಳ ಮಹಜರ್‌ ನಡೆಸಲು ಮುರುಘಾ ಮಠಕ್ಕೆ ಭಾನುವಾರ ಕರೆತಂದರು. ಪೊಲೀಸ್ ವಶದಲ್ಲಿರುವ ಆರೋಪಿ ಮುರುಘಾ ಶರಣರನ್ನು ತನಿಖಾಧಿಕಾರಿಗಳು ಶುಕ್ರವಾರ ರಾತ್ರಿಯಿಂದ ವಿಚಾರಣೆಗೆ ಒಳಪಡಿಸಿದ್ದಾರೆ. ಭಾನುವಾರ ಬೆಳಿಗ್ಗೆ 11:45 ಮುರುಘಾ ಮಠಕ್ಕೆ ಕರೆತಂದು ಸ್ಥಖ ಮಹಜರು ನಡೆಸಿದ್ದಾರೆ. ಡಿವೈಎಸ್‌ಪಿ ಕಚೇರಿಯಿಂದ … Continued