ಕಾಶ್ಮೀರದಲ್ಲಿ 2 ಪ್ರತ್ಯೇಕ ಎನ್‌ಕೌಂಟರ್‌: ನಾಲ್ವರು ಉಗ್ರರ ಹೊಡೆದುರುಳಿಸಿದ ಸೇನೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಪಿಯಾನ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಹೊಡೆದುರುಳಿಸಿದರೆ, ಪುಲ್ವಾಮಾದಲ್ಲಿ ಇಬ್ಬರು ಗುರುತು ಪತ್ತೆಯಾಗದ ಉಗ್ರರನ್ನು ಕೊಲ್ಲಲಾಗಿದೆ. ಶೋಪಿಯಾನ್‌ನ ಚೌಗಮ್ ಗ್ರಾಮ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ … Continued

6ನೇ ತರಗತಿಯ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಸೈಫ್-ಕರೀನಾ ಮಗನ ಹೆಸರು ಏನೆಂದು ಪ್ರಶ್ನೆ: ವಿವಾದದ ಕಿಡಿ

ಮಧ್ಯಪ್ರದೇಶದ ಖಾಸಗಿ ಶಾಲೆಯ ಪರೀಕ್ಷೆಯು ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮಗನ ಹೆಸರನ್ನು ಪ್ರಶ್ನೆಯಾಗಿ ಕೇಳಿದೆ ಮತ್ತು ಇದು ಪಾಲಕರು ಹುಬ್ಬೇರಿಸುವಂತೆ ಮಾಡಿದೆ. 6ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಇಂತಹ ಪ್ರಶ್ನೆ ಕೇಳಿರುವ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಲೆಯ ಪೋಷಕರ … Continued

ಲೂಧಿಯಾನ ಕೋರ್ಟ್ ಸ್ಪೋಟದ ಹಿಂದೆ ಖಲಿಸ್ಥಾನ್, ಡ್ರಗ್ ಪೆಡ್ಲರ್ ಗಳ ಕೈವಾಡ: ಪಂಜಾಬ್ ಡಿಜಿಪಿ

ಚಂಡೀಗಡ: ಗುರುವಾರ ಲೂಧಿಯಾನ ಕೋರ್ಟ್ ಸಂಕೀರ್ಣದಲ್ಲಿ ನಡೆದ ಸ್ಫೋಟದ ತನಿಖೆಯ ಸಂದರ್ಭದಲ್ಲಿ ಖಲಿಸ್ತಾನಿ ಅಂಶಗಳು, ದರೋಡೆಕೋರರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ಸಂಪರ್ಕ ಕಂಡುಬಂದಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಹೇಳಿದ್ದಾರೆ. ಈ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್‌ಐ ಪಾತ್ರವೂ ಇದೆ ಎಂದು ಶಂಕಿಸಲಾಗಿದೆ ಎಂದರು. ಖಲಿಸ್ತಾನಿ ಅಂಶಗಳು, ದರೋಡೆಕೋರರು ಮತ್ತು ಡ್ರಗ್ ಸ್ಮಗ್ಲರ್‌ಗಳಿಗೆ ಲಿಂಕ್ … Continued

ಅಪರೂಪದ ಘಟನೆಯಲ್ಲಿ ಎರಡು ಸಿಂಹಗಳನ್ನು ಬೆದರಿಸಿ ಓಡಿಸಿ ಜೀವ ಉಳಿಸಿಕೊಂಡ ಗೂಳಿ…! ಈ ದೃಶ್ಯ ವಿಡಿಯೊದಲ್ಲಿ ಸೆರೆ

ಬಹಳ ಅಪರೂಪದ ಘಟನೆಯೊಂದರಲ್ಲಿ ಗೂಳಿಯೊಂದು ಎರಡು ಸಿಂಹಿಗಳನ್ನೇ ಹೆದರಿಸಿ ಓಡಿಸಿದೆ. ಈ ಅಪರೂಪದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ ಎರಡು ಹೆಣ್ಣು ಸಿಂಹಗಳು ರಾತ್ರಿ ಹೊತ್ತು ಊರಿನೊಳಗೆ ಬರುವುದನ್ನು ಕಾಣಬಹುದು.. ಹೊರಗೆ ಕಟ್ಟಿ ಹಾಕಿದ್ದ ಗೂಳಿಯನ್ನು ನೋಡಿ ಅದರ ಮೇಲೆ ದಾಳಿ ಮಾಡಲು ಬಂದಿದ್ದವು… ಆದರೆ, ಗೂಳಿಯ ಧೈರ್ಯದ ಮುಂದೆ ಇವುಗಳ ಆಟ ನಡೆಯಲಿಲ್ಲ ಎಂಬುದನ್ನು … Continued

ಓಮಿಕ್ರಾನ್ ಬೆದರಿಕೆ: ಕರ್ನಾಟಕವೂ ಸೇರಿ10 ರಾಜ್ಯಗಳಿಗೆ ಬಹು-ಶಿಸ್ತಿನ ತಂಡ ನಿಯೋಜಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಕ್ಷಿಪ್ರ ಹೆಚ್ಚಳವು ದೇಶವನ್ನು ಹೆಚ್ಚಿನ ಅಲರ್ಟ್‌ನಲ್ಲಿ ಇರಿಸಿದೆ, ಕೋವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಕರಣ ಹೊಂದಿರುವ 10 ರಾಜ್ಯಗಳಲ್ಲಿ ಬಹು-ಶಿಸ್ತಿನ ಕೇಂದ್ರ ತಂಡಗಳನ್ನು ನಿಯೋಜಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಗುರುತಿಸಲಾದ 10 ರಾಜ್ಯಗಳಿಗೆ ಬಹು-ಶಿಸ್ತಿನ ಕೇಂದ್ರ ತಂಡಗಳನ್ನು ನಿಯೋಜಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅವುಗಳಲ್ಲಿ ಕೆಲವು … Continued

ಕಳ್ಳರಿಗೂ ಮಾನವೀಯತೆ…! ಕದ್ದಿದ್ದಕ್ಕೆ ಕ್ಷಮೆ ಕೋರಿದ ಪತ್ರ ಸಮೇತ ಬಡ ಮಾಲೀಕನ ಕದ್ದ ವಸ್ತುಗಳನ್ನು ವಾಪಸ್‌ ಇಟ್ಟು ಹೋದ ಕಳ್ಳರು..!

ಲಕ್ನೋ: ಕ್ಷಮೆ ಕೋರಿದ ಪತ್ರದೊಂದಿಗೆ ಕಳ್ಳರು ತಾವು ಕದ್ದ ವಸ್ತುಗಳನ್ನು ವಾಪಸ್​​ ಮಾಡಿರುವ ಕುತೂಹಲಕಾರಿ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ. ಬಂದಾ ಜಿಲ್ಲೆಯ ಗ್ರಾಮದ ಬಳಿ ವೆಲ್ಡಿಂಗ್ ಶಾಪ್ ಆರಂಭಿಸಲು ದಿನೇಶ್ ತಿವಾರಿ ಎಂಬವರು ಸಾಲ ಮಾಡಿ ಅಂಗಡಿಗೆ ಕೆಲವು ವಸ್ತುಗಳನ್ನು ಖರೀದಿಸಿ ತಂದಿಟ್ಟಿದ್ದರು. ಆದರೆ ಈ ಅಂಗಡಿಯ ಬೀಗ ಒಡೆದು ಒಳನುಗ್ಗಿರುವ … Continued

400ರ ಗಡಿದಾಟಿದ ಭಾರತದ ಓಮಿಕ್ರಾನ್ ಸೋಂಕಿತರ ಸಂಖ್ಯೆ, ಮಾರ್ಚ್ 2020ರ ನಂತರ ಕೋವಿಡ್ ಚೇತರಿಕೆ ದರವೂ ಅತ್ಯಧಿಕ

ನವದೆಹಲಿ: ವೇಗವಾಗಿ ಬೆಳೆಯುತ್ತಿರುವ ಓಮಿಕ್ರಾನ್ ಕೋವಿಡ್ ರೂಪಾಂತರವು ಭಾರತದಲ್ಲಿ 400 ಸಂಖ್ಯೆಗಳನ್ನು ದಾಟಿದೆ. ಇದೆವೇಳೆ ದೇಶವು ಮಾರ್ಚ್ 2020 ರಿಂದ 98.40 ಪ್ರತಿಶತದಷ್ಟು ಅತಿಹೆಚ್ಚು ಕೋವಿಡ್ ಚೇತರಿಕೆ ದರವನ್ನು ದಾಖಲಿಸಿದೆ. ಪ್ರಸ್ತುತ, ಭಾರತವು ಓಮಿಕ್ರಾನ್ ರೂಪಾಂತರದ 415 ಪ್ರಕರಣಗಳನ್ನು ಹೊಂದಿದೆ ಮತ್ತು ಹೊಸ ರೂಪಾಂತರದ ಹರಡುವಿಕೆಯನ್ನು ಮೊಟಕುಗೊಳಿಸಲು ರಾತ್ರಿ ಕರ್ಫ್ಯೂಗಳು ಮತ್ತು ದೇಶಾದ್ಯಂತ ದೊಡ್ಡ ಸೇರುವಿಕೆ … Continued

ಕಪುರ್ಥಾಲಾ ಹತ್ಯೆ: ಅಮಾಯಕನೊಬ್ಬ ಮೃತಪಟ್ಟಿದ್ದಕ್ಕೆ ಕ್ಷಮೆ ಕೋರಿದ ಪಂಜಾಬ್ ಪೊಲೀಸರು

ನವದೆಹಲಿ: ಕಪುರ್ತಲಾ ಗುರುದ್ವಾರದಲ್ಲಿ ಅಪರಿಚಿತ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಶುಕ್ರವಾರ ಕ್ಷಮೆಯಾಚಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಲಂಧರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಗುರಿಂದರ್ ಸಿಂಗ್ ಧಿಲ್ಲೋನ್, “ಒಬ್ಬ ಅಮಾಯಕ ಮತ್ತು ನಿರಾಯುಧ ವ್ಯಕ್ತಿ ಕ್ರೂರ ದಾಳಿಯಲ್ಲಿ ಮೃತಪಟ್ಟಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ” ಎಂದು ಹೇಳಿದರು. ಗುರುದ್ವಾರದ ಉಸ್ತುವಾರಿ ಅಮರಜೀತ್ ಸಿಂಗ್ ಅವರನ್ನು … Continued

ಓಮಿಕ್ರಾನ್ ಭೀತಿ: ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿ

ನವದೆಹಲಿ​​: ದೇಶಾದ್ಯಂತ ಓಮಿಕ್ರಾನ್​ ಭೀತಿ ಹೆಚ್ಚಾಗಿದ್ದು, ಈಗಾಗಲೇ ಬಹುತೇಕ ಎಲ್ಲ ರಾಜ್ಯಗಳಲ್ಲೂ ಹೊಸ ಸೋಂಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಹೆಚ್ಚಿನ ವೈರಾಣು ಪ್ರಕರಣ ಕಾಣಿಸಿಕೊಳ್ಳಲು ಶುರುವಾಗಿರುವ ಕಾರಣ ಹೊಸ ಹೊಸ ಮಾರ್ಗಸೂಚಿ ಜಾರಿಗೊಳ್ಳುತ್ತಿವೆ. ಹರಿಯಾಣದಲ್ಲಿ ಓಮಿಕ್ರಾನ್​​​ ಸೋಂಕು ಹೆಚ್ಚಾಗಿರುವ ಕಾರಣ ಶುಕ್ರವಾರದಿಂದ ನೈಟ್ ಕರ್ಫ್ಯೂ ಜಾರಿಗೊಳ್ಳುತ್ತಿದ್ದು, ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯ ವರೆಗೆ ಈ … Continued

ಲುಧಿಯಾನ ಸ್ಫೋಟ: ಆರೋಪಿ ಬಾಂಬರ್ ವಜಾಗೊಂಡ ಪೋಲೀಸ್ ಎಂದು ಗುರುತಿಸಿದ ಪೊಲೀಸರು, ಉದ್ದೇಶದ ತನಿಖೆ

ನವದೆಹಲಿ: ಲುಧಿಯಾನ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯನ್ನು ವಜಾಗೊಂಡ ಪೊಲೀಸ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗಗನ್‌ದೀಪ್‌ ಎಂಬವರನ್ನು ಪೊಲೀಸ್‌ ಇಲಾಖೆಯಿಂದ ವಜಾಗೊಳಿಸಲಾಯಿತು, ಇದು ಅವನ ಮತ್ತು ಅವನ ಹೆಂಡತಿಯ ನಡುವೆ ಮನಸ್ತಾಪಕ್ಕೆ ಕಾರಣವಾಯಿತು. ಬಳಿಕ ಾತ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ, ಸ್ಫೋಟದ ವೇಳೆ ಗಗನ್‌ದೀಪ್ ಮೊಬೈಲ್ ಫೋನ್ ಸ್ಫೋಟಗೊಂಡಿದೆ. ಆದರೆ … Continued