ಕೇಂದ್ರೀಯ ಸಂಸ್ಥೆಗಳ ವಿರುದ್ಧ ಕೇರಳ ಸರ್ಕಾರದಿಂದ ನ್ಯಾಯಾಂಗ ತನಿಖೆಗೆ ಹೈಕೋರ್ಟ್ ತಡೆ

ರಾಜತಾಂತ್ರಿಕ ಚಾನೆಲ್ ಮೂಲಕ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಪಿತೂರಿಯ ಪ್ರಶ್ನೆಯನ್ನು ವಿಶೇಷ ನ್ಯಾಯಾಲಯವು ತನಿಖೆಯ ಮೇಲ್ವಿಚಾರಣೆಯಲ್ಲಿ ಪರಿಶೀಲಿಸಬೇಕೆಂದು ಕೋರ್ಟ್ ಹೇಳಿದೆ. ತಿರುವನಂತಪುರಂ: ಕೇರಳದ ಪಿಣರಾಯಿ ವಿಜಯನ್ ಸರ್ಕಾರ ನೇಮಿಸಿದ್ದ ಕೇಂದ್ರೀಯ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ನ್ಯಾಯಾಧೀಶರಾದ ವಿ.ಕೆ ಮೋಹನನ್ ನೇತೃತ್ವದಲ್ಲಿ ಕೇರಳ ಸರ್ಕಾರ ರಚಿಸಿದ್ದ ನ್ಯಾಯಾಂಗ ಆಯೋಗಕ್ಕೆ … Continued

ಎಟಿಎಂನಲ್ಲಿ ದುಡ್ಡಿಲ್ಲದಿದ್ರೆ ಬ್ಯಾಂಕುಗಳು 10 ಸಾವಿರ ರೂ.ದಂಡ ಕಟ್ಬೇಕು ಎಂದ ಆರ್​ಬಿಐ..!

ನವದೆಹಲಿ: ಅಕ್ಟೋಬರ್ ನಿಂದ ಬ್ಯಾಂಕ್​ ಗ್ರಾಹಕರಿಗೆ ಎಟಿಎಂನಲ್ಲಿ ಹಣ ಬರದೇ ವಿಫಲವಾದರೆ ಬ್ಯಾಂಕ್​ ದಂಡ ಪಾವತಿಸಬೇಕಾಗುತ್ತದೆ. ಎಟಿಎಂ ಒಳಗೆ ಹಣ ಇಲ್ಲದಿದ್ದರೆ ಬ್ಯಾಂಕ್‌ಗಳಿಗೆ ದಂಡ ವಿಧಿಸುವ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪರಿಚಯಿಸಿದೆ. ಎಟಿಎಂಗಳಲ್ಲಿ ನಗದು ಲಭ್ಯವಿಲ್ಲದ ಕಾರಣ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆ ತಪ್ಪಿಸಲು ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಎಟಿಎಂಗಳ … Continued

ಸಂಸತ್ತಿನ ಮುಂಗಾರು ಅಧಿವೇಶನ: ಲೋಕಸಭೆ ಕಾರ್ಯನಿರ್ವಹಿಸಿದ್ದು ಕೇವಲ 21 ಗಂಟೆಗಳು ಮಾತ್ರ ಎಂದ ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಇಂದು (ಬುಧವಾರ) ಕೊನೆಗೊಂಡ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಕೇವಲ 21 ಗಂಟೆ 14 ನಿಮಿಷಗಳ ಕಾಲ ಕಾರ್ಯನಿರ್ವಹಿಸಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬುಧವಾರ ಸ್ಪಷ್ಟಪಡಿಸಿದ್ದಾರೆ. ಲೋಕಸಭಾಧ್ಯಕ್ಷರು ಕೆಳಮನೆಯ ಸಭೆಗೆ ನಿಗದಿಪಡಿಸಿದ 96 ಗಂಟೆಗಳಲ್ಲಿ 74 ಗಂಟೆಗಳ 46 ನಿಮಿಷಗಳ ಕಾಲ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಲೋಕಸಭೆಯನ್ನು ಮುಂದೂಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ … Continued

ಹಿಮಾಚಲ ಪ್ರದೇಶ ಕಿನ್ನೌರ್​ನಲ್ಲಿ ಭೂ ಕುಸಿತ; ಅವಶೇಷಗಳ ಅಡಿಯಲ್ಲಿ 40 ಜನ ಪ್ರಯಾಣಿಕರಿದ್ದ ಬಸ್

ಹಿಮಾಚಲ ಪ್ರದೇಶದ ಕಿನ್ನೌರ್​ನಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. 40 ಪ್ರಯಾಣಿಕರು ಹೊತ್ತೊಯ್ಯುತ್ತಿದ್ದ ಬಸ್​ ಸಂಚಾರ ನಡೆಸುವಾಗ ಈ ಅವಘಡ ನಡೆದಿದ್ದು, ಪ್ರಾಯಾಣಿಕರು ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಜನರ ರಕ್ಷಣಾ ಕಾರ್ಯಾಚರಣೆಗೆ ಪೊಲೀಸರೊಂದಿಗೆ ಸ್ಥಳೀಯ ಆಡಳಿತ ಕೂಡ ಮುಂದಾಗಿದ್ದು, ಎನ್​ಡಿ ಆರ್​ಎಫ್​ ಗೆ ಕೂಡ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಅವಘಡದಲ್ಲಿ … Continued

ಇಸ್ರೋದಿಂದ ಭೂ ವೀಕ್ಷಣೆ ಉಪಗ್ರಹ ಇಒಎಸ್-03 ಉಡಾವಣೆಗೆ ಕ್ಷಣಗಣನೆ

ಶ್ರೀಹರಿಕೋಟ: ಇಸ್ರೋ ಮತ್ತೊಂದು ಉಪಗ್ರಹ ಉಡಾವಣೆ ಉಡಾವಣೆ ಮಾಡಲು ಕ್ಷಣಗಣನೆ ಆರಂಭವಾಗಿದೆ. ಭಾರತವು ತನ್ನ ಅತ್ಯಾಧುನಿಕ ಜಿಯೋ-ಇಮೇಜಿಂಗ್ ಉಪಗ್ರಹ ಜಿಎಸ್ ಎಲ್ ವಿ-ಎಫ್ 10/ಇಒಎಸ್-03 ಅನ್ನು ಆಗಸ್ಟ್ 12ರ ಬೆಳಗ್ಗೆ 5:43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆ ಮಾಡಲಿದೆ. ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಫೆಬ್ರವರಿ 28 ರಂದು, ಇಸ್ರೋ 18 ಸಣ್ಣ … Continued

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 80 ಕೋಟಿ ರೂ. ಮೌಲ್ಯದ ಅಂಬರ್​​​ಗ್ರೀಸ್​ ಪತ್ತೆ ಹಚ್ಚಿದ ಪೊಲೀಸರು, ಐವರ ಬಂಧನ

ಬೆಂಗಳೂರು: ಸಮುದ್ರದಲ್ಲಿ ಸಿಗುವ ಅಂಬರ್​​​ಗ್ರೀಸ್​ ಎಂಬ ತಿಮಿಂಗಲದ ವಾಂತಿ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸಿದ 5 ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಅಂಬರ್​​​ಗ್ರೀಸ್​ ವಶಪಡಿಸಿಕೊಳ್ಳಲಾಗಿದೆ. ತಿಮಿಂಗಿಲ ಮೂಲದಿಂದ ಪಡೆಯುವ ಅಂಬರ್​ಗ್ರೀಸ್​​ ಎಂಬ ಪದಾರ್ಥವನ್ನು ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಬಂಧಿತರನ್ನು ಬೆಂಗಳೂರಿನ … Continued

ತೆಲಂಗಾಣ: ಕಾರಿನ ಡಿಕ್ಕಿಯಲ್ಲಿ ದಹನವಾದ ಸ್ಥಿತಿಯಲ್ಲಿ ಬಿಜೆಪಿ ನಾಯಕನ ಶವ ಪತ್ತೆ

ಹೈದರಾಬಾದ್: ತೆಲಂಗಾಣದ ಮೇದಕ್‌ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಉದ್ಯಮಿ ವಿ.ಶ್ರೀನಿವಾಸ್ ಪ್ರಸಾದ್ ರ ಸುಟ್ಟ ಕಾರಿನ ಡಿಕ್ಕಿಯಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಆರೋಪಿಗಳು ಶ್ರೀನಿವಾಸ್ ಅವರ ಕಾರಿನೊಂದಿಗೆ ಬೆಳಿಗ್ಗೆ ಬೆಂಕಿ ಹಚ್ಚಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದನ ದೀಪ್ತಿ ಹೇಳಿದ್ದಾರೆ. … Continued

ಸಿಬಿಎಸ್‌ಇ 10 ನೇ, 12ನೇ ಕಂಪಾರ್ಟ್‌ಮೆಂಟ್‌ ಪರೀಕ್ಷೆ-2021ರ ದಿನಾಂಕದ ಪಟ್ಟಿ ಬಿಡುಗಡೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE ) 10 ಮತ್ತು 12ನೇ ತರಗತಿಯ ಖಾಸಗಿ ವಿದ್ಯಾರ್ಥಿಗಳ ಸುಧಾರಣಾ ಮತ್ತು ಕಂಪಾರ್ಟ್‌ಮೆಂಟ್‌ ಪರೀಕ್ಷೆಗಳಿಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ವೇಳಾಪಟ್ಟಿಯಂತೆ 10ನೇ ತರಗತಿ ಪರೀಕ್ಷೆಗಳು ಆಗಸ್ಟ್ 25 ರಂದು ಪ್ರಾರಂಭಗೊಂಡು, ಸೆಪ್ಟೆಂಬರ್ 8ಕ್ಕೆ ಮುಕ್ತಾಯಗೊಳ್ಳಲಿದೆ. ಇನ್ನು 12ನೇ ತರಗತಿ ಪರೀಕ್ಷೆ ಆಗಸ್ಟ್ 25ರಂದು ಪ್ರಾರಂಭವಾಗಿ ಸೆಪ್ಟೆಂಬರ್ 15ಕ್ಕೆ ಮುಕ್ತಾಯಗೊಳ್ಳುತ್ತದೆ. … Continued

ಕೋವಿಡ್ -19: ಭಾರತದಲ್ಲಿ 38,353 ಹೊಸ ಪ್ರಕರಣ ವರದಿ

ನವದೆಹಲಿ: ಕಳೆದ 24 ಗಂಟೆಗಳಲ್ಲಿ (ಬುಧವಾರ) ಸೋಂಕಿನಿಂದಾಗಿ 38,353 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 497 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಪ್‌ಡೇಟ್ ಪ್ರಕಾರ ಭಾರತ ತಿಳಿಸಿದೆ. ಬುಧವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ, ದೇಶದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳು 3,86,351 ರಷ್ಟಿದ್ದು, ಕಳೆದ 24 ಗಂಟೆಗಳಲ್ಲಿ, ಸಕ್ರಿಯ … Continued

ಕೇರಳದ ಪತ್ತನಂತಿಟ್ಟಿನಲ್ಲಿ ಲಸಿಕೆ ಹಾಕಿದವರಲ್ಲಿ 20,000ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು, ತೀವ್ರತೆ ಕಡಿಮೆ

ನವದೆಹಲಿ: ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಲಸಿಕೆ ಹಾಕಿದವರಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಸೋಂಕುಗಳು ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ ಕೇಂದ್ರ ತಂಡದ ಗಮನ ಸೆಳೆದಿದೆ. ಜಿಲ್ಲೆಯಲ್ಲಿ ಇದುವರೆಗೆ ಒಂದು ಡೋಸ್ ಲಸಿಕೆ ಪಡೆದವರಲ್ಲಿ 14,974 ಕೋವಿಡ್ ಪ್ರಕರಣಗಳು ಮತ್ತು ಎರಡು ಡೋಸ್ ಲಸಿಕೆಯ ನಂತರ 5,042 ಸೋಂಕುಗಳು ವರದಿಯಾಗಿವೆ ಎಂದು ಅಧಿಕಾರಿಗಳು ಮಂಗಳವಾರ ಕೇಂದ್ರ ಆರೋಗ್ಯ … Continued