ಭೂಗತ ಪಾತಕಿ ದಾವೂದ್ ಆಪ್ತ ರಿಯಾಜ್ ಜತೆ ಫಡ್ನವೀಸ್ ನಂಟು: ಸಚಿವ ನವಾಬ್‌ ಮಲಿಕ್ ಆರೋಪ

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ರಿಯಾಜ್ ಭಾಟಿ ಜತೆ ನಿಕಟ ಸಂಪರ್ಕ ಇದೆ ಎಂದು ಹೈಡ್ರೋಜನ್ ಬಾಂಬ್ ಸಿಡಿಸುತ್ತೇನೆ ಎಂದು ಹೇಳಿದ್ದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನವಾಬ್ ಮಲಿಕ್, ರಿಯಾಜ್ ಭಾಟಿ ಯಾರು? ದಾವೂದ್ ಜತೆ ನಿಕಟ … Continued

ದೆಹಲಿಯ ಗಡಿಯಲ್ಲಿ ಮತ್ತೊಬ್ಬ ರೈತನ ಸಾವು: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ ಮತ್ತೊಬ್ಬ ರೈತ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಮೃತ ರೈತನನ್ನು ಪಂಜಾಬಿನ ಅಮ್ರೋಹ್ ಜಿಲ್ಲೆಯ ನಿವಾಸಿ ಗುರುಪ್ರೀತ್ ಸಿಂಗ್  (45) ಎಂದು ಗುರುತಿಸಲಾಗಿದೆ. ಕುಂಡ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥೀವ ಶರೀರವನ್ನು … Continued

ಹರಿಕುಮಾರ್ ಭಾರತದ ನೌಕಾ ಪಡೆಯ ನೂತನ ಮುಖ್ಯಸ್ಥ

ನವದೆಹಲಿ: ದೇಶದ ನೌಕಾಪಡೆ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಆರ್ ಹರಿ ಕುಮಾರ್ ನೇಮಕಗೊಂಡಿದ್ದಾರೆ. ನವೆಂಬರ್‌ ೩೦ ರಂದು ಹರಿಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನೌಕಾಪಡೆಯ ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.೩೦ ರಂದು ನಿವೃತ್ತರಾಗಲಿದ್ದಾರೆ. ಉಪಅಡ್ಮಿರಲ್ ಕುಮಾರ್ ಅವರು ಪ್ರಸ್ತುತ ವೆಸ್ಟ್ರನ್ ನೌಕಾ ಕಮಾಂಡ್ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಅಡ್ಮಿರಲ್ ಆರ … Continued

ವಿರಾಟ್ ಕೊಹ್ಲಿ ಮಗಳಿಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ ಹೈದರಾಬಾದ್ ಮೂಲದ ಟೆಕ್ಕಿ ಬಂಧನ

ಮುಂಬೈ: ಭಾರತದ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಾವರ ಒಂಭತ್ತು ತಿಂಗಳ ಪುತ್ರಿ ವಮಿಕಾಗೆ ಅತ್ಯಾಚಾರ ಬೆದರಿಕೆ ಹಾಕಿದ್ದಕ್ಕಾಗಿ ಹೈದರಾಬಾದ್‌ನ 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಆರಂಭಿಕ ಮುಖಾಮುಖಿಯಲ್ಲಿ ಸೋತ ನಂತರ ಧರ್ಮ ಆಧಾರಿತ ಆನ್‌ಲೈನ್ ದಾಳಿ ಮೊಹಮ್ಮದ್‌ ಶಮಿ ವಿರುದ್ಧ … Continued

ಬಸ್‌-ಟ್ಯಾಂಕರ್‌ ಡಿಕ್ಕಿ, ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದ ಬಸ್‌ : 12 ಪ್ರಯಾಣಿಕರು ಸಜೀವ ದಹನ

ಜೈಪುರ್ : ಟ್ಯಾಂಕರ್‌ ಹಾಗೂ ಖಾಸಗಿ ಬಸ್‌ ನಡುವೆ ನಡೆದ ಅಪಘಾತದಲ್ಲಿ ಖಾಸಗಿ ಬಸ್‌ ರಸ್ತೆ ಮಧ್ಯದಲ್ಲಿಯೇ ಹೊತ್ತಿ ಉರಿದು ಬಸ್ಸಿನಲ್ಲಿದ್ದ 12 ಜನ ಪ್ರಯಾಣಿಕರು ಸಜೀವವಾಗಿ ದಹನವಾದ ಘಟನೆ ರಾಜಸ್ಥಾನದ ಬಾರ್ಮರ್‌ – ಜೋಧ್‌ಪುರ ಹೆದ್ದಾರಿಯಲ್ಲಿ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದು ಈ ಪೈಕಿ 10 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಬಾರ್ಮರ್‌ … Continued

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಮರುಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ನಿರ್ಧಾರ

ನವದೆಹಲಿ: ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರದ್ದು ಮಾಡಲಾಗಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಪುನಃಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ 2021-22 ರ ಆರ್ಥಿಕ … Continued

ಟ್ವಿಟರ್‌ನಲ್ಲಿ ಜಾಗತಿಕ 50 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿಗೆ 2ನೇ ಸ್ಥಾನ, ತೆಂಡೂಲ್ಕರಗೆ 35ನೇ ಸ್ಥಾನ: ಪಟ್ಟಿ ಇಲ್ಲಿದೆ..

ನವದೆಹಲಿ: ಗ್ರಾಹಕ ಗುಪ್ತಚರ ಸಂಸ್ಥೆ ಬ್ರಾಂಡ್‌ವಾಚ್ (consumer intelligence company Brandwatch) ನಡೆಸಿದ ವಾರ್ಷಿಕ ಅಧ್ಯಯನದ ಪ್ರಕಾರ ಈ ವರ್ಷ ಟ್ವಿಟರ್‌ನಲ್ಲಿ ಅತ್ಯಂತ ಪ್ರಭಾವಶಾಲಿ 50 ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮಂಗಳವಾರ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ಶೇ.70ರಷ್ಟು ಜನಮನ್ನಣೆಯೊಂದಿಗೆ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ನಾಯಕ … Continued

ಕರ್ನಾಟಕದ ನಕ್ಸಲ್‌ ನಾಯಕರಾದ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಬಂಧಿಸಿದ ಕೇರಳ ಭಯೋತ್ಪಾದನಾ ನಿಗ್ರಹ ಪಡೆ

ಬೆಂಗಳೂರು: ಕೇರಳ ಭಯೋತ್ಪಾದನಾ ನಿಗ್ರಹ ಪಡೆ ಕಾರ್ಯಾಚರಣೆಯಲ್ಲಿ ಕರ್ನಾಟಕ ಮೂಲದ ಇಬ್ಬರು ಕುಖ್ಯಾತ ನಕ್ಸಲ್ ನಾಯಕರನ್ನು ಮಂಗಳವಾರ ಬಂಧಿಸಲಾಗಿದೆ. ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧಿತರು. ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಎಂಬಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ನಕ್ಸಲ್ ಸೆಂಟ್ರಲ್ ಕಮಿಟಿಯ ಪಶ್ಚಿಮ ಘಟ್ಟದ ಕಾರ್ಯದರ್ಶಿಯಾಗಿ ಬಿ.ಜಿ. ಕೃಷ್ಣಮೂರ್ತಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ … Continued

ಯುಮುನಾ ನದಿಯಲ್ಲಿ ವಿಷಯುಕ್ತ ನೊರೆ; ಬೋಟ್​​ಗಳನ್ನು ನಿಯೋಜಿಸಿ ಸ್ಛಗೊಳಿಸಲು ಮುಂದಾದ ದೆಹಲಿ ಸರ್ಕಾರ

ನವದೆಹಲಿ: ಬಿಹಾರ, ಉತ್ತರಪ್ರದೇಶ, ಜಾರ್ಖಂಡ ಸೇರಿ ಹಲವು ರಾಜ್ಯಗಳಲ್ಲಿ ಛಠ್​ ಜೋರಾಗಿ ನಡೆಯುತ್ತಿದೆ. ಹೀಗಾಗಿ ಜನರು ಯಮುನಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಆದರೆ ಯಮುನಾ ನದಿ ವಿಷಪೂರಿತ ನೊರೆಯಿಂದ ತುಂಬಿ ಹೋಗಿದೆ. ವಿಷಯುಕ್ತ ನದಿಯಲ್ಲಿಯೇ ಜನ ಮುಳುಗೇಳುತ್ತಿದ್ದಾರೆ. ಬುರುಗು ನೊರೆಯ ಮಧ್ಯೆಯೇ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋಗಳು ವೈರಲ್​ ಆದ ಬೆನ್ನಲ್ಲೇ ತೀವ್ರ … Continued

ಭಾರತದಲ್ಲಿ 11,466 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ನಿನ್ನೆಗಿಂತ 13.2% ಹೆಚ್ಚಳ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 11,466 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆ ದಾಖಲಾಗಿದ್ದಕ್ಕಿಂತ 13.2% ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ. ಈ ಹೊಸ ಪ್ರಕರಣಗಳು ಒಟ್ಟು ಸೋಂಕಿನ ಸಂಖ್ಯೆಯನ್ನು 3,43,88,579 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 460 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ … Continued