ಭಾರತದಲ್ಲಿ 16,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 20% ರಷ್ಟು ಹೆಚ್ಚಳ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 16,156 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಭಾರತವು ನಿನ್ನೆಗಿಂತ ಶೇಕಡಾ 20 ರಷ್ಟು ಏರಿಕೆ ಕಂಡಿದೆ. ದೇಶದ ಒಟ್ಟು ಪ್ರಕರಣ ಈಗ 3,42,31,809 ಆಗಿದೆ. ದೇಶವು 733 ಹೊಸ ಸಾವುಗಳನ್ನು ವರದಿ ಮಾಡಿದೆ, ಒಟ್ಟು ವರದಿಯಾದ ಸಾವಿನ ಸಂಖ್ಯೆಯನ್ನು 4,56,386 ಕ್ಕೆ ತರುತ್ತದೆ. ಕಳೆದ 24 ಗಂಟೆಗಳಲ್ಲಿ ಒಟ್ಟು … Continued

ಏರ್ ಇಂಡಿಯಾದ ಎಲ್ಲ ಬಾಕಿ ಚುಕ್ತಾ ಮಾಡುವಂತೆ ಹಣಕಾಸು ಸಚಿವಾಲಯದಿಂದ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸೂಚನೆ

ನವದೆಹಲಿ: ಏರ್​ ಇಂಡಿಯಾದ ಎಲ್ಲ ಬಾಕಿಯನ್ನೂ ತಕ್ಷಣ ಚುಕ್ತಾ ಮಾಡಬೇಕು ಎಂದು ಕೇಂದ್ರ ಹಣಕಾಸು ಇಲಾಖೆಯು ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಬುಧವಾರ ಸೂಚಿಸಿದೆ. ಮುಂದಿನ ಆದೇಶದವರೆಗೆ ಕೇಂದ್ರ ಸರ್ಕಾರದ ಎಲ್ಲ ಅಧಿಕಾರಿಗಳೂ ಏರ್​ ಇಂಡಿಯಾದ ಟಿಕೆಟ್​ಗಳನ್ನು ಹಣ ತೆತ್ತು ಖರೀದಿಸಬೇಕು ಎಂದು ಸೂಚನೆ ನೀಡಿದೆ. ಏರ್​ ಇಂಡಿಯಾ ಟಾಟಾ ಸನ್ಸ್​ಗೆ ಮಾರಾಟವಾದ ನಂತರ ಕೇಂದ್ರ … Continued

ಸಚಿವ ನವಾಬ್‌ ಮಲಿಕ್‌ ಟೀಕೆಗಳು ಎನ್‌ಸಿಬಿ-ವಾಂಖೇಡೆ ಸ್ಥೈರ್ಯಗೆಡಿಸುವ ಸಾಧ್ಯತೆ ಎಂದು ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್

ಮುಂಬೈ: ಮಾದಕವಸ್ತು ನಿಯಂತ್ರಣ ದಳ ಮತ್ತು ಅದರ ವಲಯ ನಿರ್ದೇಶಕ ಸಮೀರ್‌ ವಾಂಖೇಡೆ ಹಾಗೂ ಅವರ ಕುಟುಂಬಸ್ಥರ ಸ್ಥೈರ್ಯಗೆಡಿಸುವಂತಹ ಯಾವುದೇ ಹೇಳಿಕೆಗಳನ್ನು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ನವಾಬ್ ಮಲಿಕ್ ಅವರು ನೀಡದಂತೆ ನಿರ್ಬಂಧಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು ಬಾಂಬೆ ಹೈಕೋರ್ಟ್‌ನಲ್ಲಿ ದಾಖಲಾಗಿದೆ. ಉದ್ಯಮಿ ಹಾಗೂ ಮೌಲಾನಾ ಆಗಿರುವ ಮುಂಬೈ ನಿವಾಸಿಯೊಬ್ಬರು ಈ … Continued

ಭಾರತದಿಂದ 5000-ಕಿಮೀ ವ್ಯಾಪ್ತಿ ಪರಮಾಣು ಸಾಮರ್ಥ್ಯದ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ನವದೆಹಲಿ: ಭಾರತ ಬುಧವಾರ ಒಡಿಶಾ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ರಾತ್ರಿ 7.50ಕ್ಕೆ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಮೂರು-ಹಂತದ ಘನ-ಇಂಧನ ಎಂಜಿನ್ ಅನ್ನು ಬಳಸುವ ಕ್ಷಿಪಣಿಯು 5,000-ಕಿಮೀ ವ್ಯಾಪ್ತಿಯವರೆಗಿನ ಗುರಿಗಳನ್ನು ಅತ್ಯಂತ ಹೆಚ್ಚಿನ ನಿಖರತೆಯೊಂದಿಗೆ ತಲುಪಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ … Continued

ನಾಳೆ ಕೃಷಿ ತಜ್ಞರ ಜೊತೆ ಅಮಿತ್ ಶಾ ಭೇಟಿಯಾಗಲಿರುವ ಅಮರಿಂದರ್ ಸಿಂಗ್

ಚಂಡೀಗಢ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಚಳವಳಿಗೆ ಸಂಭವನೀಯ ಪರಿಹಾರಗಳ ಕುರಿತು ಚರ್ಚಿಸಲು ನಾಳೆ (ಗುರುವಾರ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ತಾವು ಕೆಲವು ಕೃಷಿ ತಜ್ಞರೊಂದಿಗೆ ನಾಳೆ ಬೆಳಗ್ಗೆ ಅಮಿತ್ ಶಾ ಅವರನ್ನು ಭೇಟಿ ಮಾಡುವುದಾಗಿ … Continued

ಎನ್‌ಸಿಬಿಯಿಂದ ಮೂರು ಸಮೀರ್ ವಾಂಖೇಡೆ ವಿಚಾರಣೆ; ಅವರೇ ಕ್ರೂಸ್ ಡ್ರಗ್ಸ್‌ ಪ್ರಕರಣದ ತನಿಖೆ ಮುಂದುವರೆಸುತ್ತಾರೆ’ ಎಂದ ಎನ್​ಸಿಬಿ

ನವದೆಹಲಿ: ಮುಂಬೈ ಕ್ರೂಸ್ ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ತನಿಖಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಆರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಡೆಪ್ಯೂಟಿ ಡಿಜಿ ಜ್ಞಾನೇಶ್ವರ್ ಸಿಂಗ್ ಬುಧವಾರ ಹೇಳಿದ್ದಾರೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ. ವಾಂಖೇಟೆ ಅವರು ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಗಮನಾರ್ಹ … Continued

ನೀರಜ್ ಚೋಪ್ರಾ, ಮಿಥಾಲಿ ರಾಜ್‌ ಸೇರಿ ಖೇಲ್ ರತ್ನ ಪ್ರಶಸ್ತಿಗೆ 11 ಸಾಧಕರು, ಅರ್ಜುನ ಪ್ರಶಸ್ತಿಗೆ 35 ಹೆಸರು ಶಿಫಾರಸು

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ,ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ ಮತ್ತು ಮಹಿಳಾ ಕ್ರಿಕೆಟ್‍ನಲ್ಲಿ ಸಾಧನೆ ಮಾಡಿದ ಮಿಥಾಲಿ ರಾಜ್ ಸೇರಿದಂತೆ 11 ಕ್ರೀಡಾಪಟುಗಳ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇಂದು ಪ್ರಕಟಗೊಂಡ ಪ್ರಶಸ್ತಿ ಶಿಫಾರಸು ಪಟ್ಟಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ … Continued

ಕ್ರೂಸ್‌ ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಬಾಂಬೆ ಹೈಕೋರ್ಟ್

ಮುಂಬೈ: ಕ್ರೂಸ್‌ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಇಂದು (ಬುಧವಾರ) ಆರ್ಯನ್​ ಖಾನ್​, ಅರ್ಬಾಜ್ ಮರ್ಚೆಂಟ್, ಮುನ್‌ಮುನ್ ಧಮೇಚಾ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದ್ದು, ವಿಚಾರಣೆ ನಂತರ ವಿಚಾರಣೆಯನ್ನು ಗುರುವಾರಕ್ಕೆ (ಅಕ್ಟೋಬರ್​ 28) ಮುಂದೂಡಲಾಗಿದೆ. ಆರ್ಯನ್ ಪರ ವಕೀಲ ಮುಕುಲ್‌ ರೋಹ್ಟಗಿ ವಾದ ಮಾಡಿದ್ದಾರೆ. ಆರ್ಯನ್ ಖಾನ್ ಚಿಕ್ಕ ವಯಸ್ಸಿನ ಹುಡುಗನಾಗಿದ್ದಾನೆ. … Continued

ಸ್ವಲ್ಪ ತಡವಾಗಿದ್ರೂ ತಾಯಿ-ಮಗು ಭೋರ್ಗರೆವ ಜಲಪಾತದಲ್ಲಿ ಕೊಚ್ಚಿ ಹೋಗ್ತಿದ್ರು ; ಬಚಾವ್‌ ಮಾಡಿದ ಮೈನವಿರೇಳಿಸುವ ದೃಶ್ಯ ವಿಡಿಯೊದಲ್ಲಿ ಸೆರೆಯಾಯ್ತು..!

ಚೆನ್ನೈ: ಜಲಪಾತದಲ್ಲಿ ನೀರಿನ ರಭಸದ ಮಧ್ಯೆ ಸಿಲುಕಿಕೊಂಡಿದ್ದ ತಾಯಿ ಮತ್ತು ಮಗುವನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತಮಿಳುನಾಡಿನ ಅರಣ್ಯಾಧಿಕಾರಿಗಳು ಜಲಪಾತದಿಂದ ಹಗ್ಗದ ಸಹಾಯದಿಂದ ತಾಯಿ ಮತ್ತು ಮಗುವನ್ನು ರಕ್ಷಿಸುತ್ತಿರುವ ಈ ವಿಡಿಯೊವನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು ಈ ಸಾಹಸಕ್ಕೆ ಕೊಂಡಾಡಿದ್ದಾರೆ. … Continued

:ಪಂಜಾಬ್ : ಹೊಸ ಪಕ್ಷದ ಸ್ಥಾಪನೆ ಘೋಷಿಸಿದ ಕ್ಯಾಪ್ಟನ್‌ ಅಮರಿಂದರ್ ಸಿಂಗ್

ಚಂಡೀಗಢ:ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ತಿಂಗಳ ನಂತರ ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ವಿನಂತಿ ಕಳುಹಿಸಲಾಗಿದೆ ಮತ್ತು ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದರು. ಹೌದು ನಾನು ಪಕ್ಷವನ್ನು ಸ್ಥಾಪಿಸುತ್ತಿದ್ದೇನೆ, ಆದರೆ ನಮ್ಮ … Continued