ಕೊವಿಡ್‌-೧೯ರ ಪರಿಣಾಮ: ಭಾರತದ ೧.೮ ಕೋಟಿ ಜನರಿಗೆ ಹೊಸ ಉದ್ಯೋಗ ಹುಡುಕಾಟ ಅನಿವಾರ್ಯ

ಮುಂಬೈ: ಕೋವಿಡ್-19 ಸಾಂಕ್ರಾಮಿಕವು ದೇಶದ ಉದ್ಯೋಗ ಮಾರುಕಟ್ಟೆಯ ಮೇಲೆ ಬಹುಕಾಲ ಪರಿಣಾಮ ಬೀರಲಿದೆ. ಭಾರತದ ಕಾರ್ಮಿಕರ ಪೈಕಿ 1.8 ಕೋಟಿ ಜನ 2030ರೊಳಗೆ ಹೊಸ ಉದ್ಯೋಗ ಕಂಡುಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ವರದಿಯೊಂದು ಹೇಳಿದೆ. ಚಿಲ್ಲರೆ ಮಾರಾಟ, ಆಹಾರ ಸೇವೆಗಳು, ಆತಿಥ್ಯ, ಕಚೇರಿ ನಿರ್ವಹಣೆ ಮೊದಲಾದ ವಲಯಗಳಲ್ಲಿ ಕೆಲಸ ಮಾಡುವ ಕೆಳಗಿನ ಹಂತದ ನೌಕರರ ಮೇಲೆ … Continued

ಅಭಿಷೇಕ್‌ ಬ್ಯಾನರ್ಜಿ ಮಾನಹಾನಿ ಪ್ರಕರಣ: ಅಮಿತ್‌ ಶಾಗೆ ಸಮನ್ಸ್‌

ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಹಾಕಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್‌ ಶಾಗೆ ಪಶ್ಚಿಮ ಬಂಗಾಳ ಸಂಸದರು ಹಾಗೂ ಶಾಸಕರ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದೆ. ಅಮಿತ್‌ ಶಾ ವೈಯಕ್ತಿಕವಾಗಿ ಇಲ್ಲವೇ ಪ್ರತಿನಿಧಿ ಫೆ.೨೨ರಂದು ಬೆಳಗ್ಗೆ ೧೦ ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಿಳಿಸಿದೆ. ೨೦೧೮ರ ಆಗಸ್ಟ್‌ ೨೮ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ … Continued

ಕೊರೊನಾ ರೂಪಾಂತರಿ ಸೋಂಕು: ವಿದೇಶಗಳಿಂದ ಬರುವವರಿಗೆ ಹೊಸ ನಿಯಮ

ಇಂಗ್ಲೆಂಡ್‌,  ದಕ್ಷಿಣ ಆಫ್ರಿಕಾ, ಬ್ರೆಜಿಲಿಯನ್‌ ಕೊರೊನಾ ರೂಪಾಂತರಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಆರೋಗ್ಯ ಸಚಿವಾಲಯ ದೇಶಕ್ಕೆ ಆಗಮಿಸುವ ಪ್ರವಾಸಿಗರಿಗೆ ಹೊಸ ನಿಯಮಗಳನ್ನು ರೂಪಿಸಿದೆ. ಫೆ.೨೨ರಂದು ನೂತನ ನಿಯಮ ಜಾರಿಗೆ ಬರಲಿದ್ದು, ಇದರನ್ವಯ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್‌ನಿಂದ ಬಂದ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೊಳಪಡಿಸಲಾಗುವುದು. ಕೊರೊನಾ ಸೋಂಕು ಪತ್ತೆಯಾದರೆ ಪ್ರತ್ಯೇಕಿಸಲಾಗುತ್ತದೆ. ಏಳು ದಿನಗಳವರೆಗೆ ಕ್ವಾರಂಟೈನ್‌ … Continued

ಎಸ್‌ಬಿಐನಿಂದ ಗೃಹ ಸಾಲ ಸಂಸ್ಕರಣಾ ಶುಲ್ಕ ಮನ್ನಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ. ಗೃಹ ನಿರ್ಮಾಣಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದ್ರ ಜೊತೆಗೆ ಸಾಲದ ಮೇಲಿನ ಸಂಸ್ಕರಣಾ ಶುಲ್ಕ ಕೂಡ ಮನ್ನಾ ಮಾಡುತ್ತಿದೆ. ಎಸ್‌ಬಿಐ ಗೃಹ ನಿರ್ಮಾಣದ ಸಾಲದ ಮೇಲಿನ ಸಂಸ್ಕರಣಾ ಶುಲ್ಕವನ್ನ ಮನ್ನಾ ಮಾಡುವುದಾಗಿ ಪ್ರಕಟಿಸಿದೆ. ಇದು ಸಾಲಗಾರರಿಗೆ ಸ್ವಲ್ಪ ನಿರಅಳ ನೀಡಿದಂತಾಗಿದೆ. ಆದರೆ ಗೃಹ … Continued

ಜಾಮೀನು ಅರ್ಜಿ ತಿರಸ್ಕಾರ: ಲಾಲುಗೆ ಸಿಗದ ರಿಲೀಫ್‌

ಡುಮ್ಕಾ ಖಜಾನೆ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದ್ದರಿಂದ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥರು ತಮ್ಮ ಒಟ್ಟು ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಪೂರ್ಣಗೊಳಿಸಲು ಇನ್ನೂ ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗಿರುವುದರಿಂದ, ಜಾಮೀನು ಅರ್ಜಿಯನ್ನು ಮಂಜೂರು ಮಾಡಲಾಗಿಲ್ಲ ಮತ್ತು … Continued

ಯುವಕರು “ದೇಶ ಮೊದಲುʼ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು: ಪ್ರಧಾನಿ ಮೋದಿ

ಯುವಕರು “ದೇಶ ಮೊದಲುʼ ಎಂಬ ಮನೋಭಾವ ಅಳವಡಿಸಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಪಂಚಿನಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿರುವ ಅನೇಕ ವಿದ್ಯಾವಂತರಿದ್ದಾರೆ, ಇನ್ನೊಂದೆಡೆ ಕೊರೊನಾದಂಥ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸಲು ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಜನರೂ ಇದ್ದಾರೆ. ಎಲ್ಲವೂ ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ. … Continued

ಮೊದಲು ನನ್ನ ಸೋದರಳಿಯನ ವಿರುದ್ಧ ಸೆಣಸಿ: ಅಮಿತ್‌ ಶಾಗೆ ದೀದಿ ಸವಾಲು

ಮೊದಲು ನನ್ನ ಸೋದರಳಿಯ ಅಭಿಷೇಕ ಬ್ಯಾನರ್ಜಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ನನ್ನ ವಿರುದ್ಧ ಹೋರಾಟ ನಡೆಸಿ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಸವಾಲು ಹಾಕಿದ್ದಾರೆ. ಅಭಿಷೇಕ್‌ ರಾಜ್ಯಸಭಾ ಸದಸ್ಯರಾಗಿ ಸಂಸದರಾಗಬಹುದಿತ್ತು, ಆದರೆ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನಾದೇಶ ಪಡೆದಿದ್ದಾರೆ. ಕೆಲವರು ದೀದಿ ಸಂಬಂಧಿಗಳ … Continued

ಶ್ರೀನಗರ ಉಗ್ರರ ದಾಳಿ: ಇಬ್ಬರು ಪೊಲೀಸರು ಹತ

ಶ್ರೀನಗರದ ಹೆಚ್ಚಿನ ಭದ್ರತೆಯ ವಿಮಾನ ನಿಲ್ದಾಣ ರಸ್ತೆಯ ಬಾಗಟ್‌ ಪ್ರದೇಶದಲ್ಲಿ ಉಗ್ರರು ಇಬ್ಬರು ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ಉಗ್ರರು ಸಮೀಪದಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮರಣ ಹೊಂದಿದ್ದರು. ಹತ್ಯೆಗೀಡಾದ ಪೊಲೀಸರನ್ನು ಕಾನ್‌ಸ್ಟೆಬಲ್‌ಗಳಾದ ಸೊಹೈಲ್ ಮತ್ತು ಮೊಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ದಾಳಿ ನಡೆದಾಗ ಅವರು ನಗರದ … Continued

ದಿಶಾ ರವಿಗೆ ಮೂರು ದಿನಗಳ ನ್ಯಾಯಾಂಗ ಬಂಧನ

ನವ ದೆಹಲಿ: ‘ಟೂಲ್ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು 22 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ದಿಶಾ ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಶುಕ್ರವಾರ ಕೊನೆಗೊಂಡಿತ್ತು ಮತ್ತು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಯಿತು. ದೆಹಲಿ ಪೊಲೀಸರ ಪರ ಹಾಜರಾದ … Continued

ಎಂದಿಗೂ ನನ್ನನ್ನು ಮರೆಯಬೇಡ : ಮಗನಿಗೆ ಸ್ವತಂತ್ರ ಭಾರತದ ಗಲ್ಲಿಗೇರುವ ಮೊದಲ ಮಹಿಳೆ ಸಲಹೆ

ನವ ದೆಹಲಿ : 2008ರಲ್ಲಿ ಅವರ ಕುಟುಂಬದ ಏಳು ಸದಸ್ಯರನ್ನು ನಿದ್ರಾಜನಕಗಳನ್ನು ಬೆರೆಸಿದ ಹಾಲನ್ನು ಕುಡಿಸಿ ಮತ್ತು ಭರಿಸಿ ನಂತರ ಗಂಟಲು ಕತ್ತರಿಸಿ ಕೊಲೆ ಮಾಡಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ ೩೮ ವರ್ಷದ ಶಬ್ನಮ್‌ಳನ್ನು ಮಹಿಳೆಯರನ್ನು ಗಲ್ಲಿಗೇರಿಸುವ ಏಕೈಕ ಸ್ಥಳವಾದ ಉತ್ತರ ಪ್ರದೇಶದ ಮಥುರಾ ಜಿಲ್ಲಾ ಜೈಲಿನಲ್ಲಿ ಗಲ್ಲಿಗೇರಿಸುವ ಸಿದ್ಧತೆಗಳನ್ನು … Continued