ಅತ್ಯಾಚಾರವೆಸಗಿದ ಬಾಲಕಿಯನ್ನು ಕೋರ್ಟ್ ಆವರಣದಲ್ಲೇ ವಿವಾಹವಾದ ಆರೋಪಿ..!

  ಪಾಟ್ನಾ: ಇಲ್ಲೊಂದು ವಿಕ್ಷಿಪ್ತ ವಿವಾಹ ನಡೆದಿದ್ದು, ಈ ವಿವಾಹಕ್ಕೆ ಕೊರ್ಟ್‌ ಆವರಣವೇ ಸಾಕ್ಷಿಯಾಗಿದೆ..! ವ್ಯಕ್ತಿಯೊಬ್ಬ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಾನು ಅತ್ಯಾಚಾರ ಮಾಡಿದ್ದ ಬಾಲಕಿಯನ್ನು ಕೋರ್ಟ್‌ ಆವರಣದಲ್ಲಿಯೇ ವಿವಾಹವಾಗಿದ್ದಾನೆ..!! ಈ ಘಟನೆ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿದೆ.ಇದು ಈಗ ಚರ್ಚೆಗೆ ಗ್ರಾಸವಾಗಿದೆ. ಆರೋಪಿ ಮೊಹಮ್ಮದ್ ರಾಜಾ ಎಂದು ಹೇಲಲಾಗಿದ್ದು, ರಹೀಂಪುರ ರುದೌಲಿ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ … Continued

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬ್ಯಾಂಕ್‌ ಮುಚ್ತಾರೆ:ಮಮತಾ ವಾಗ್ದಾಳಿ

ಕೊಲ್ಕತ್ತಾ : ಬಿಜೆಪಿ ಬಂದರೆ ಅದು ಜನರ ಹಕ್ಕುಗಳು ಕೊನೆಯಾಗಲಿದೆ, ರಾಜ್ಯದಲ್ಲಿರುವ ಎಲ್ಲ ಬ್ಯಾಂಕ್‌ಗಲೂ ಮುಚ್ಚಲಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮಂಗಳವಾರ ಬಂಗೂರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಒಂದು ವೇಳೆ ಬಿಜೆಪಿ ಆಯ್ಕೆಯಾದರೆ, ರಾಜ್ಯದ ಎಲ್ಲ ಬ್ಯಾಂಕ್ ಗಳನ್ನು ಮುಚ್ಚಲಾಗುವುದು, ನಿಮ್ಮ … Continued

ಅಮರಾವತಿ ಭೂ ಹಗರಣ: ಚಂದ್ರಬಾಬು ನಾಯ್ಡು ವಿರುದ್ಧ ಪ್ರಕರಣ ದಾಖಲು, ಸಿಐಡಿಯಿಂದ ನೋಟಿಸ್ ಜಾರಿ

ಆಂಧ್ರ ಪ್ರದೇಶದ ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆಯು (ಸಿಐಡಿ) ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು ವಿರುದ್ಧ ಎಫ್ಐಆರ್ ದಾಖಲಿಸಿದೆ. ಮಂಗಳಗಿರಿ ವೈಎಸ್‌ಆರ್‌ಸಿಪಿ ಶಾಸಕ ಅಲ್ಲಾ ರಾಮ ಕೃಷ್ಣ ರೆಡ್ಡಿ (ನಾನಿ) ಅವರ ದೂರಿನ ಆಧಾರದ ಮೇಲೆ ಟಿಡಿಪಿಯ ಮಾಜಿ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ … Continued

ತೃತೀಯ ಲಿಂಗಿಗೂ ಎನ್‌ಸಿಸಿ ಸೇರ್ಪಡೆ ಹಕ್ಕಿದೆ: ಕೇರಳ ಹೈಕೋರ್ಟ್

ತಿರುವನಂತಪುರಂ : ತೃತೀಯ ಲಿಂಗಿಗೂ ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್ ಸೇರಲು ಹಕ್ಕಿದೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಿರುವನಂತಪುರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹೀನಾ ಹನೀಫಾ ಅಲಿಯಾಸ್ ಮುಹಮ್ಮದ್‌ ಆಸಿಫ್‌ ಅವರು ತೃತೀಯ ಲಿಂಗಿಗಳ ಹಕ್ಕು ಬಾಧ್ಯತೆ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮವೇನು ಎಂದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ … Continued

ಏಪ್ರಿಲ್ ತಿಂಗಳಾಂತ್ಯಕ್ಕೆ ಬ್ರಿಟನ್‌ ಪ್ರಧಾನಿ ಭಾರತಕ್ಕೆ ಭೇಟಿ

ಲಂಡನ್: ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಏಪ್ರಿಲ್ ತಿಂಗಳಾಂತ್ಯಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದ ನಂತರ ಇದು ಅಲ್ಲಿನ ಪ್ರಧಾನಿಯ ಪ್ರಮುಖ ಅಂತಾರಾಷ್ಟ್ರೀಯ ಪ್ರವಾಸವಾಗಿದೆ. ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಈ ವರ್ಷ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕಿತ್ತು. ಆದರೆ ಇಂಗ್ಲೆಂಡಿನಲ್ಲಿ ಕೋವಿಡ್- ಪ್ರಕರಣಗಳು ಹೆಚ್ಚಾಗಿದ್ದರಿಂದ ಕೊನೆ ಕ್ಷಣದಲ್ಲಿ ಪ್ರವಾಸ ರದ್ದುಪಡಿಸಿ … Continued

ಭಾರತದಲ್ಲಿ 24,492 ದೈನಂದಿನ ಕೊರೊನಾ ಪ್ರಕರಣಗಳು

ನವ ದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ದೈನಂದಿನ 24,492 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 131 ಜನ ಇದರಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,56,014ಕ್ಕೆ ಏರಿಕೆಯಾಗಿದೆ.ಸೋಮವಾರ ಒಂದೇ ದಿನ 20,191 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,10,27,543 … Continued

ಭಾರತದಲ್ಲಿ ಪ್ರತಿ ದಿನ 146 ಟನ್ ಜೈವಿಕ ವೈದ್ಯಕೀಯ ಕೊವಿಡ್‌ ತ್ಯಾಜ್ಯ ಉತ್ಪಾದನೆ…!

ನವ ದೆಹಲಿ: ದೇಶದಲ್ಲಿ ಕೊವಿಡ್‌ -19 ರಿಂದಾಗಿ ಪ್ರತಿದಿನ 146 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎಂದು ಪರಿಸರ ಸಚಿವಾಲಯ ಸಂಸತ್ತಿಗೆ ಸೋಮವಾರ ಮಾಹಿತಿ ನೀಡಿದೆ. ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ … Continued

ನಟ ಕಮಲ್ ಹಾಸನ್ 176 ಕೋಟಿ ರೂ. ಆಸ್ತಿ ಒಡೆಯ

ನಟ ಮತ್ತು ಮಕ್ಕಲ್ ನೀಧಿ ಮಾಯಂ ಮುಖ್ಯಸ್ಥ ಕಮಲ್ ಹಾಸನ್ ತಮಿಳುನಾಡಿನಲ್ಲಿ ಏಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೊಯಮತ್ತೂರು ದಕ್ಷಿಣದಿಂದ ನಾಮಪತ್ರ ಸಲ್ಲಿಸಿದ್ದಾರೆ. ಕಮಲ್ ಹಾಸನ್ 45 ಕೋಟಿ ರೂ.ಗಳಿಗಿಂತ ಹೆಚ್ಚು ಚರಾಸ್ತಿ ಮತ್ತು 131 ಕೋಟಿ ರೂ.ಗಿಂತಲೂ ಹೆಚ್ಚು ಸ್ಥಿರಾಸ್ತಿ ಘೋಷಿಸಿದ್ದಾರೆ. ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ 2019-20ನೇ ಸಾಲಿನ ತೆರಿಗೆ ರಿಟರ್ನ್ಸ್ … Continued

ಏಕತಾ ಪ್ರತಿಮೆಗೆ ೫೦ ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ

ಅಹಮದಾಬಾದ್: ಗುಜರಾತ್‍ನ ನರ್ಮದಾ ಜಿಲ್ಲಾಯ ಕೆವಾಡಿಯಾದಲ್ಲಿ ಇರುವ ಏಕತಾ ಪ್ರತಿಮೆ ಉದ್ಘಾಟನೆಯ ನಂತರ ಈವರೆಗೆ 50 ಲಕ್ಷ ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪ್ರತಿಮೆ ಅಂತರರಾಷ್ಟ್ರೀಯ ಪ್ರವಾಸಿಗರನ್ನೂಸೆಳೆಯುತ್ತಿದ್ದು, ಎಲ್ಲಾ ವಯಸ್ಸಿನವರಿಗೆ ಆಕರ್ಷಣೆ ಕೇಂದ್ರಬಿಂದುವಾಗಿದೆ ಎಂದು ಗುಜರಾತ್‍ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ ಮತ್ತು ಪರಿಸರ) ರಾಜೀವ್ ಗುಪ್ತಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ವಿಶ್ವದ … Continued

ನೋಟಾಕ್ಕೆ ಹೆಚ್ಚು ಮತ ಬಿದ್ರೆ ಮರುಚುನಾವಣೆ: ಕೇಂದ್ರದ ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್

ನವ ದೆಹಲಿ: ಚುನಾವಣೆಯಲ್ಲಿ ನೋಟಾಕ್ಕೆ ಹೆಚ್ಚುಮತಗಳು ಬಂದಿದ್ದರೆ ಆ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ  ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಚುನಾವಣೆ ಆಯೋಗಕ್ಕೆ ನೋಟಿಸ್‌ ನೀಡಿದ್ದು, ಈ ಕುರಿತು ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ. ಸೋಮವಾರ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ … Continued