ಆಂಟಿಲಿಯಾ ಬಳಿ ಎಸ್‌ಯುವಿಯಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಪೊಲೀಸ್‌ ಅಧಿಕಾರಿ ಸಚಿನ್ ವಾಝೆ ಮಾ.25ರ ವರೆಗೆ ಎನ್‌ಐಎ ಕಸ್ಟಡಿಗೆ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ನ್ಯಾಯಾಲಯ ಮಾರ್ಚ್ 25ರವರೆಗೂ ರಾಷ್ಟ್ರೀಯ ತನಿಖಾ ದಳದ (ಎನ್ವ‌ಐಎ)ಶಕ್ಕೆ ನೀಡಿದೆ. ಶನಿವಾರ ಮಧ್ಯರಾತ್ರಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. … Continued

ಗಾಲಿ ಕುರ್ಚಿಯಲ್ಲೇ ಇಂದು ಮಮತಾ ರೋಡ್‌ ಶೋ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರದ ಸಮಯದಲ್ಲಿ ಗಾಯಗೊಂಡ ಕೆಲವು ದಿನಗಳ ನಂತರ ಗಾಲಿಕುರ್ಚಿಯಲ್ಲಿ ಭಾನುವಾರ ರೋಡ್ ಶೋ ನಡೆಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲಗಳು ತಿಳಿಸಿವೆ. ಅವರು ಶನಿವಾರ ಮಧ್ಯಾಹ್ನ ಹಜ್ರಾದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವಾರದ ಆರಂಭದಲ್ಲಿ ಚುನಾವಣೆ ಪ್ರಚಾರದ ವೇಳೆ ಗಾಯಗೊಂಡ … Continued

ಒಂದೇ ದಿನದಲ್ಲಿ 20.54 ಲಕ್ಷ ಜನರಿಗೆ ಕೊರೊನಾ ಲಸಿಕೆ: ಭಾರತದ ಹೊಸ ದಾಖಲೆ

ನವದೆಹಲಿ: ಒಂದೇ ದಿನದಲ್ಲಿ 20 ಲಕ್ಷಕ್ಕೂ ಮೇಲ್ಪಟ್ಟು ಜನರಿಗೆ ಕೊರೊನಾ ನಿಯಂತ್ರಣ ಲಸಿಕೆ ಹಾಕುವ ಮೂಲಕ ಭಾರತ ದಾಖಲೆ ನಿರ್ಮಿಸಿದೆ. ಏಳು ರಾಜ್ಯಗಳ 20.54 ಲಕ್ಷ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಇದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, 3.3 ಲಕ್ಷ ಜನರಿಗೆ ಲಸಿಕೆ ಹಾಕಿದೆ. ಉಳಿದಂತೆ ಮಹಾರಾಷ್ಟ್ರ , ಕೇರಳ, ಪಂಜಾಬ್, ಕರ್ನಾಟಕ , … Continued

ನಂದಿಗ್ರಾಮ: ಬಿಜೆಪಿಗೆ ಮತ ನೀಡದಂತೆ ಟಿಕಾಯತ್‌ ಮನವಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಕೇಂದ್ರ ಬಿಂದುವಾಗಿರುವ ನಂದಿಗ್ರಾಮಕ್ಕೆ ಸಂಯುಕ್ತಾ ಕಿಸಾನ್ ಮೋರ್ಚಾ(ಎಸ್‌ಕೆಎಂ) ಮುಖಂಡ ರಾಕೇಶ್ ಟಿಕಾಯತ್‌ ಶನಿವಾರ ಭೇಟಿ ನೀಡಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ. ಶನಿವಾರ ಕೊಲ್ಕತ್ತಾಕ್ಕೆ ಆಗಸಿಮಿಸಿದ ಅವರನ್ನು ಟಿಎಂಸಿ ನಾಯಕ ಡೋಲಾ ಸೇನ್ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು, ಅಲ್ಲಿಂದ ಪೂರ್ವ … Continued

ಆನ್‌ಲೈನ್ ದಿನಸಿ ಕಂಪನಿ ಬಿಗ್‌ಬಾಸ್ಕೆಟ್ ಖರೀದಿಸಲಿರುವ ಟಾಟಾ ಗ್ರುಪ್ಸ್‌

ಟಾಟಾ ಸಮೂಹವು ಆನ್‌ಲೈನ್ ದಿನಸಿ ಬಿಗ್‌ಬಾಸ್ಕೆಟ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಟಾಟಾ ಸನ್ಸ್‌ನ ಅಂಗಸಂಸ್ಥೆಯಾದ ಟಾಟಾ ಡಿಜಿಟಲ್ (ಟಿಡಿಎಲ್) ಬಿಗ್‌ಬಾಸ್ಕೆಟ್‌ನಲ್ಲಿ ಶೇ 64.3 ರಷ್ಟು ಪಾಲನ್ನು ಪಡೆಯಲು ಭಾರತದ ಸ್ಪರ್ಧಾ ಆಯೋಗಕ್ಕೆ (ಸಿಸಿಐ) ಅರ್ಜಿ ಸಲ್ಲಿಸಿದೆ. ಗುರುತಿನ ಮತ್ತು ಪ್ರವೇಶ ನಿರ್ವಹಣೆ, ಕೊಡುಗೆಗಳು ಮತ್ತು ಪಾವತಿಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ವ್ಯವಹಾರದಲ್ಲಿ ಟಿಡಿಎಲ್ ತೊಡಗಿಸಿಕೊಂಡಿದೆ ಎಂದು … Continued

2022ರ ಏಪ್ರಿಲ್ 1ರ ನಂತರ ಹಳೆ ವಾಹನಗಳ ನೋಂದಣಿ ಮಾಡುವಂತಿಲ್ಲ

ರಾಜ್ಯ ಸಾರಿಗೆ ಸಂಸ್ಥೆ ಒಡೆತನದ ಬಸ್ʼಗಳು ಸೇರಿದಂತೆ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳನ್ನ 2022ರ ಏಪ್ರಿಲ್ 1ರ ನಂತರ ನೋಂದಾಣಿ ಮಾಡುವಂತಿಲ್ಲ ಎಂದು ಕರಡು ಅಧಿಸೂಚನೆಗೆ ಕೇಂದ್ರ  ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಹೊಸ ನಿಯಮಗಳನ್ನ ಪರಾಮರ್ಶಿಸಿ ತಿದ್ದುಪಡಿಗಳನ್ನ ಮಾಡಲು ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಸಚಿವಾಲಯ ಹುಡುಕುತ್ತಿದ್ದು, ಈ ಸಂಬಂಧ ಸಾರಿಗೆ … Continued

ಕೊವಿಡ್‌ನಲ್ಲಿ ಎ‌ಲ್ಲರೂ ಹಣ್ಣಾಗಿರುವಾಗ ಅದಾನಿ ಸಂಪತ್ತು ಶೇ.50 ವೃದ್ಧಿ ಹೇಗೆ; ರಾಹುಲ್ ಗಾಂಧಿ ಪ್ರಶ್ನೆ

ನವ ದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಅತ್ಯಂತ ಕಠಿಣ ಸಮಯದಲ್ಲಿ ಎಲ್ಲರೂ ಹೆಣಗಾಡಿ ಹಣ್ಣಾಗಿರುವಾಗ ಉದ್ಯಮಿ ಗೌತಮ್ ಅದಾನಿ ಸಂಪತ್ತನ್ನು ಹೇಗೆ ನಿರೀಕ್ಷೆಗೂ ಮೀರಿ ಹೆಚ್ಚಿಸಿಕೊಂಡರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಬ್ಲೂಮ್‌ಬರ್ಗ್ ವರದಿ ಉಲ್ಲೇಖಿಸಿ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, 2021ರ ಸಂಪತ್ತು ಗಳಿಕೆಯಲ್ಲಿ ಇಡೀ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಅದಾನಿ 12 … Continued

ಬಿಜೆಪಿ ವಿರುದ್ಧ ಬಂಗಾಳದಲ್ಲಿ ಬಿಕೆಯು ನಾಯಕ ಟಿಕಾಯತ್‌ ಪ್ರಚಾರ

ನವ ದೆಹಲಿ: ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಟಿಎಂಸಿಗೆ ಬೆಂಬಲ ಸೂಚಿಸಿದ್ದು, ಚುನಾವಣಾ ಪ್ರಚಾರಕ್ಕೆ ದುಮುಖಿದ್ದಾರೆ. ಶನಿವಾರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಬಂಗಾಳ ರಾಜ್ಯದ ರೈತರ ಸಂಕಷ್ಟಗಳನ್ನ ಅರ್ಥಮಾಡಿಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಿದ ರೈತ ನಾಯಕ, ನಂದಿಗ್ರಾಮ ಮತ್ತು ಕೊಲ್ಕತಾದಲ್ಲಿ ಬೃಹತ್ ‘ಮಹಾ ಪಂಚಾಯತ್’ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಈ … Continued

ಪತ್ರಕರ್ತರ ಮೇಲೆ ಹಲ್ಲೆ ಆರೋಪ: ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಎಫ್ಐಆರ್

  ಲಕ್ನೋ: ಪತ್ರಕರ್ತರ ದೂರಿನ ಮೇರೆಗೆ ಮೊರಾದಾಬಾದ್ ಪೊಲೀಸರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮೇಲೆ ದೂರು ದಾಖಲಿಸಿದ್ದಾರೆ. ಮಾರ್ಚ್ 11 ರಂದು ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ ಸಿಂಗ್‌ ಯಾದ ಹಾಗೂ 20 ಅಪರಿಚಿತ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ … Continued

ವಿಮಾನ ಪ್ರಯಾಣಿಕರಿಗೆ ಹೊಸ ಕೊವಿಡ್‌ ಮಾ‌ರ್ಗಸೂಚಿ ಪ್ರಕಟ

ನವ ದೆಹಲಿ: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಶನಿವಾರ (ಮಾ.೧೩) ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯಂತೆ, ಪ್ರಯಾಣಿಕರು ಮಾಸ್ಕ್ ಧರಿಸದಿದ್ದರೆ ಅಥವಾ ಸೂಕ್ತ ಕೋವಿಡ್ ಸೂಚನೆ ಅನುಸರಿಸದಿದ್ದರೆ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಕಳುಸಲಾಗುವುದು ಎಂದು ಖಡಕ್‌ ಸೂಚನೆ ನೀಡಿದೆ. ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿ ಪ್ರಯಾಣಿಕರು ಕೋವಿಡ್-19 … Continued