ಅತ್ಯಾಚಾರದ ಆರೋಪಿಗೆ ಬಾಧಿತ ಹುಡುಗಿ ಮದುವೆಯಾಗುತ್ತೀಯಾ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಯುವತಿಯನ್ನು ಹಲವು ಬಾರಿ ಬಲಾತ್ಕಾರ ಮಾಡಿದ ಆರೋಪ ಎದುರಿಸುತ್ತಿರುವ ಸರಕಾರಿ ಉದ್ಯೋಗಿಯಾಗಿರುವ ಆರೋಪಿಗೆ ಸರ್ವೋಚ್ಚ ನ್ಯಾಯಾಲಯವು ಬಾಧಿತ ಹುಡುಗಿಯನ್ನು ಮದುವೆಯಾಗುತ್ತೀಯಾ? ಎಂದು ಪ್ರಶ್ನಿಸಿದೆ. ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಆರೋಪಿಗೆ “ನೀನು ಸರಕಾರಿ ಉದ್ಯೋಗಿಯಾಗಿ ಯುವತಿಯನ್ನು ಬಲತ್ಕಾರ ಮಾಡುವ ಮುಂಚೆ ವಿಚಾರ ಮಾಡಬೇಕಿತ್ತು. ಅವಳನ್ನು ಮದುವೆಯಾಗುವಂತೆ ನಾವು ನಿನಗೆ ಒತ್ತಾಯ ಮಾಡುವುದಿಲ್ಲ. ನಿನಗೆ ಅವಳನ್ನು … Continued

ಕಿಲಿಮಾಂಜಿರೋ ಪರ್ವತವೇರಿದ ಆಂಧ್ರದ ೯ ವರ್ಷದ ಬಾಲಕಿ

ಆಂಧ್ರ ಪ್ರದೇಶದ ಗ್ರಾಮೀಣ ಭಾಗದ ಬಾಲಕಿಯೋರ್ವಳು ಕಿಲಿಮಾಂಜಿರೋ ಪರ್ವತವನ್ನು ಯಶಸ್ವಿಯಾಗಿ ಆರೋಹಣ ಮಾಡಿದ್ದಾಳೆ. ಅನಂತಪುರದ ರಿತ್ವಿಕಾಶ್ರೀ ಪರ್ವತವನ್ನೇರಿದ ವಿಶ್ವದ ೨ನೇ ಕಿರಿಯ ವಯಸ್ಸಿನ ಹುಡುಗಿಯಾಗಿದ್ದಾಳೆ. ಏಷ್ಯಾದ ಮೊದಲ ಕಿರಿಯ ಹುಡುಗಿ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದಾಳೆ. ತಾಂಜಾನಿಯಾದಲ್ಲಿರುವ ಪರ್ವತ ಆಫ್ರಿಕಾ ಖಂಡದ ಅತೀ ದೊಡ್ಡ ಪರ್ವತ ಶ್ರೇಣಿಯಾಗಿದೆ. ರಿತ್ವಿಕಾಶ್ರೀ ತನ್ನ ತಂದೆಯೊಂದಿಗೆ ಪರ್ವತ ಏರಿದ್ದಾಳೆ. ಸಮುದ್ರ ಮಟ್ಟದಿಂದ … Continued

ಪಂಜಾಬ್‌ ಸಿಎಂ ರಾಜಕೀಯ ವಿಶ್ಲೇಷಕರಾಗಿ ಪ್ರಶಾಂತ ಕಿಶೋರ್‌ ನೇಮಕ

ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ರಾಜಕೀಯ ವಿಶ್ಲೇಷಕರಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಇದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು “ಪ್ರಶಾಂತ್ ಕಿಶೋರ್ ನನ್ನ ಪ್ರಧಾನ ಸಲಹೆಗಾರರಾಗಿ ನನ್ನೊಂದಿಗೆ ಸೇರಿಕೊಂಡಿದ್ದಾರೆ. ಪಂಜಾಬ್ ಜನರ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತೇನೆ” ಎಂದು ಬರೆದಿದ್ದಾರೆ. ತಂತ್ರಜ್ಞನನ್ನು 2017 … Continued

ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತೇನೆಯೇ ? : ವಿಮಾನ ನಿಲ್ದಾಣದಲ್ಲಿ ತನ್ನ ವಶಕ್ಕೆ ಪಡೆದ ಪೊಲೀಸರಿಗೆ ನಾಯ್ಡು ಪ್ರಶ್ನೆ

ನೀವು ನಾಟಕ ಆಡುತ್ತಿದ್ದೀರಾ? ನನ್ನನ್ನು ಯಾಕೆ ಬಂಧಿಸುತ್ತಿದ್ದೀರಿ…? ” ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ರೆನಿಗುಂಟಾದ ತಿರುಪತಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಪೊಲೀಸರು ವಶಕ್ಕೆ ಪಡೆದ ವಿಡಿಯೋ ವೈರಲ್‌ ಆಗಿದ್ದು ಆ ವಿಡಿಯೋದಲ್ಲಿ ಅವರು ಪೊಲೀಸರೊಂದಿಗೆ ಈ ರೀತಿ ವಾದ ಮಾಡಿದ್ದಾರೆ. ಅವರು ಜಗನ್ ಮೋಹನ್ ರೆಡ್ಡಿ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದ ಚುನುವಣೆ: ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ನವ ದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ. ವಕೀಲ ಎಂ.ಎಲ್. ಶರ್ಮಾ ಎಂಬವರು ಸಲ್ಲಿಸಿರುವ ಮನವಿಯಲ್ಲಿ, ರಾಜ್ಯದಲ್ಲಿ ಎಂಟು ಹಂತದ ಚುನಾವಣೆಗಳನ್ನು ನಡೆಸದಂತೆ ತಡೆಯಲು ಮತದಾನ ಸಮಿತಿಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಕೋರಲಾಗಿದೆ. ಫೆಬ್ರವರಿ 26 ರಂದು ಚುನಾವಣಾ … Continued

ತಮಿಳು ಸಂಸ್ಕೃತಿ ನಾಶಕ್ಕೆ ಪ್ರಧಾನಿ ಮೋದಿ ಹುನ್ನಾರ: ರಾಹುಲ್‌ ಆರೋಪ

ಕನ್ಯಾಕುಮಾರಿ: ತಮಿಳು ಸಂಸ್ಕೃತಿಯನ್ನು ಗೌರವಿಸದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತಮಿಳುನಾಡಿನ ಪ್ರತ್ಯೇಕ ಸಾಂಸ್ಕೃತಿಕ ಗುರುತನ್ನು ನಾಶ ಮಾಡುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. .ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮಿಳು ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ಹೊರಬೇಕಿದ್ದ ಮುಖ್ಯಮಂತ್ರಿ ಇ.ಕೆ. … Continued

ತುಮಕೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಸಹಜ ಬೇಸಾಯ ಆಶ್ರಮ

ಸಹಜ ಕೃಷಿಗಾಗಿ ತುಮಕೂರಿನಲ್ಲಿ ‘ಗಾಂಧಿ ಸಹಜ ಬೇಸಾಯ ಆಶ್ರಮ’ ಎಂಬ ಹೆಸರಲ್ಲಿ ರೈತ ಆಶ್ರಮ ನಿರ್ಮಾಣವಾಗುತ್ತಿದ್ದು, ರೈತರಿಗಾಗಿಯೇ ತೆರೆದಿರುವ ದೇಶದ ಮೊದಲ ಆಶ್ರಮವೆಂಬ ಹೆಗ್ಗಳಿಕೆ ಇದಕ್ಕೆ ಸಿಗಲಿದೆ. ಮಹಾತ್ಮ ಗಾಂಧೀಜಿ ತತ್ವಗಳು, ಕಲ್ಪನೆಗಳಡಿ ತುಮಕೂರಿನ ಹೊನ್ನುಡಿಕೆ ಚೆಕ್‌ ಪೋಸ್ಟ್‌ ಬಳಿ ಈ ಕುಟೀರ ತಲೆ ಎತ್ತುತ್ತಿದೆ. ಈಗಾಗಲೇ ಸಹಜ ಬೇಸಾಯದ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿತೊಡಗಿಸಿಕೊಂಡಿರುವ … Continued

ಕೊವಿಡ್‌ ೨ನೇ ಲಸಿಕೆ ಪಡೆದರೂ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌ !

ಮಹಾರಾಷ್ಟ್ರದ ಸಿಯಾನ್‌ ಆಸ್ಪತ್ರೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ಕೊರೊನಾ ೨ನೇ ಲಸಿಕೆ ಪಡೆದರೂ ಕೊರೊನಾ ಪಾಸಿಟಿವ್‌ ಆಗಿರುವುದು ಆತಂಕ ಮೂಡಿಸಿದೆ. ೨೧ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಕೋವಿಶೀಲ್ಡ್‌ ೨ ಲಸಿಕೆ ಪಡೆದಿದ್ದರು. ಆದರೂ ಅವರನ್ನು ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕೆಲವು ದಿನಗಳು ಬೇಕಾಗುತ್ತವೆ. ಆದ್ದರಿಂದ ಆತಂಕ ಪಡುವ … Continued

ಇಂದು ಎಐಎಡಿಎಂಕೆ ಮಿತ್ರ ಪಕ್ಷಗಳ ಸೀಟುಗಳ ಹಂಚಿಕೆ ಅಂತಿಮ..?

ಎಐಎಡಿಎಂಕೆ ಸೋಮವಾರ ಸಂಜೆ ಬಿಜೆಪಿ ಸೇರಿದಂತೆ ತನ್ನ ಮಿತ್ರ ಪಕ್ಷಗಳ ಜೊತೆ ಸೀಟು ಹಂಚಿಕೆ ಅಂತಿಮಗೊಳಿಸುವ ನಿರೀಕ್ಷೆಯಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 25-30 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲು ಪ್ರಯತ್ನಿಸಿವೆ ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರ್‌ಸೆಲ್ವಂ ನಡುವೆ ಭಾನುವಾರ ತಡರಾತ್ರಿ ನಡೆದ … Continued

ಹೆಚ್ಚುತ್ತಿರುವ ಇಂಧನ ಬೆಲೆ: ಆತಂಕದಲ್ಲಿ ಸಣ್ಣ ಪ್ರಮಾಣದ ಸಾರಿಗೆ ಸಂಸ್ಥೆಗಳು

ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಸಣ್ಣ ಪ್ರಮಾಣದ ಸಾರಿಗೆ ಸಂಸ್ಥೆಗಳು ದೊಡ್ಡ ಆತಂಕಕ್ಕೆ ಸಿಲುಕಿವೆ. ಇಂಧನ ಬೆಲೆಗಳು ಹಣದುಬ್ಬರವನ್ನು ಹೆಚ್ಚಿಸುವ ಸಾಧ್ಯತೆ ದಟ್ಟವಾಗುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳದಿಂದಾಗಿ ಸಾರಿಗೆ ಕ್ಷೇತ್ರ, ಸರಕು ಸಾಗಣೆ, ಜನರೇಟರ್‌ ಬಳಸುವ ಕ್ಷೇತ್ರಗಳ ಮೇಲೆ ವ್ಯಾಪಕ ಪರಿಣಾಮವಾಗಿದೆ. ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ ೧೦೦ರೂ. ನತ್ತ ಧಾವಿಸುತ್ತಿದ್ದರೆ, ಡೀಸೆಲ್‌ ಪ್ರತಿ ಲೀಟರ್‌ಗೆ … Continued