ಸಂಗೀತ ಕಾರ್ಯಕ್ರಮದಲ್ಲೇ ಸೋನು ನಿಗಮ್ ಗೆ ತೊಂದರೆ : ಆಸ್ಪತ್ರೆಗೆ ದಾಖಲು

ಮುಂಬೈ : ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಪುಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ವೇಳೆ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಆರೋಗ್ಯದ ಬಗ್ಗೆ ಫ್ಯಾನ್ಸ್‌ಗೆ ಗಾಯಕ ಸೋಶಿಯಲ್ ಮೀಡಿಯಾದಲ್ಲಿ ವಿವರಿಸಿ ಪೋಸ್ಟ್ ಹಾಕಿದ್ದಾರೆ. ಲೈವ್ ಕಾನ್ಸರ್ಟ್ ವೇಳೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. … Continued

A++ ಗ್ರೇಡ್‌ ನೀಡಲು ಲಂಚದ ಆರೋಪ : ನ್ಯಾಕ್‌ ಪರಿಶೀಲನಾ ಸಮಿತಿ ಅಧ್ಯಕ್ಷ, ದಾವಣಗೆರೆ ವಿವಿ ಪ್ರಾಧ್ಯಾಪಕಿ ಸೇರಿ 10 ಮಂದಿ ಬಂಧನ

ನವದೆಹಲಿ : A++ ಮಾನ್ಯತೆ ಪಡೆಯಲು ನ್ಯಾಷನಲ್ ಅಸೆಸ್ಮೆಂಟ್ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್ (NAAC) ಒಳಗೊಂಡ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಕ್‌ ಪರಿಶೀಲನಾ ಸಮಿತಿಯ ಅಧ್ಯಕ್ಷರು, ದಾವಣೆಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಜೆಎನ್‌ಯು ಪ್ರಾಧ್ಯಾಪಕ ಸೇರಿದಂತೆ 10 ವ್ಯಕ್ತಿಗಳನ್ನು ಬಂಧಿಸಿದೆ. ಬಂಧಿತ ವ್ಯಕ್ತಿಗಳಲ್ಲಿ ನ್ಯಾಕ್ ಪರಿಶೀಲನಾ ಸಮಿತಿಯ ಅಧ್ಯಕ್ಷರು ಮತ್ತು ಆರು … Continued

ಯಾಣಕ್ಕೆ ಭೇಟಿ ನೀಡಿದ ನಟ ಶಿವರಾಜಕುಮಾರ ; 29 ವರ್ಷಗಳ ಹಿಂದೆ ನಡೆದ ʼನಮ್ಮೂರ ಮಂದಾರ ಹೂವೆʼ ಸಿನೆಮಾ ಚಿತ್ರೀಕರಣದ ಮೆಲುಕು

ಕಾರವಾರ: ಖ್ಯಾತ ಚಲನಚಿತ್ರ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ( Shiva Rajkumar) ಇತ್ತೀಚೆಗೆ ಅನಾರೋಗ್ಯದಿಂದ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಅವರು ಈಗ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿತಾಣವಾಗಿರುವ ಯಾಣ (Yana)ಕ್ಕೆ ಭೇಟಿ ನೀಡಿದ್ದಾರೆ. ಈ ಮೊದಲು ಅವರು 29 ವರ್ಷದ ಹಿಂದೆ ಯಾಣದಲ್ಲಿ ಚಿತ್ರೀಕರಣವಾಗಿದ್ದ ನಮ್ಮೂರ ಮಂದಾರಹೂವೆ ಸಿನಿಮಾ … Continued

ಪತ್ನಿಯ ಬಲವಂತಕ್ಕೆ 10 ಲಕ್ಷ ರೂ.ಗಳಿಗೆ ತನ್ನ ಕಿಡ್ನಿ ಮಾರಾಟ ಮಾಡಿದ ಗಂಡ ; ಹಣದೊಂದಿಗೆ ಫೇಸ್`ಬುಕ್ ಲವರ್‌ ಜೊತೆ ಪರಾರಿಯಾದ ಹೆಂಡತಿ…!

ಕೋಲ್ಕತಾ: ಆಘಾತಕಾರಿ ವಿದ್ಯಮಾನದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುತ್ತಿಲ್ಲ, ಹೀಗಾಗಿ ನಿನ್ನ ಕಿಡ್ನಿ ಮಾರಾಟ ಮಾಡು ಎಂದು ಒತ್ತಾಯಿಸುತ್ತಿದ್ದ ಪಶ್ಚಿಮ ಬಂಗಾಳದ ಮಹಿಳೆಯೊಬ್ಬಳು ತನ್ನ ಪತಿಗೆ ಮೂತ್ರಪಿಂಡವನ್ನು ಮಾರಾಟ ಮಾಡುವಂತೆ ಒತ್ತಾಯಿಸಿ, ಮಾರಾಟ ಮಾಡಿದ ನಂತರ ಹಣ ತೆಗೆದುಕೊಂಡು ತನ್ನ ಫೇಸ್‌ಬುಕ್‌ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ನಡೆದಿರುವುದು ವರದಿಯಾಗಿದೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಈ … Continued

ರಾಷ್ಟ್ರಪತಿ ಮುರ್ಮು ಬಗ್ಗೆ ಹೇಳಿಕೆ; ಸೋನಿಯಾ ಗಾಂಧಿಗೆ ಎದುರಾಯ್ತು ಸಂಕಷ್ಟ

ಪಾಟ್ನಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ‘ಪೂವರ್ ಲೇಡಿ’ (Poor lady) ಎಂದು ಕರೆದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ವಿರುದ್ಧ ಬಿಹಾರದ ಮುಜಫರ್‌ಪುರದಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ಸುಧೀರ ಓಜಾ ಎಂಬವರು ಸಿಜಿಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಫೆ. 10ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಗೌರವಾನ್ವಿತ ರಾಷ್ಟ್ರಪತಿ ಅವರ … Continued

ಚೋಲಿ ಕೆ ಪೀಚೆ.. ಸಿನೆಮಾ ಹಾಡಿಗೆ ಡ್ಯಾನ್ಸ್‌ ಮಾಡಿದ ಮದುಮಗ ; ಮದುವೆಯನ್ನೇ ರದ್ದುಗೊಳಿಸಿದ ಮದುಮಗಳ ಅಪ್ಪ…!

ನವದೆಹಲಿ: ದೆಹಲಿಯ ಮದುಮಗ ತನ್ನ ಮದುವೆಯಲ್ಲಿ ಬಾಲಿವುಡ್ ಜನಪ್ರಿಯ ಹಾಡಿಗೆ ನೃತ್ಯ ಮಾಡಿದ ನಂತರ ಮದುವೆಯೇ ರದ್ದುಗೊಂಡ ವಿದ್ಯಮಾನ ನಡೆದಿದೆ. ಮದುಮಗ ಚೋಲಿ ಕೆ ಪೀಚೆ ಕ್ಯಾ ಹೈ ಎಂಮ ಹಾಡಿಗೆ ವರ ನೃತ್ಯ ಮಾಡಿದ್ದು ವಧುವಿನ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಅವರು ಮದುವೆಯನ್ನೇ ರದ್ದುಗೊಳಿಸಿದ್ದಾರೆ…! ಮದುಮಗ ಮೆರವಣಿಗೆಯಲ್ಲಿ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ … Continued

ಅಮೃತ ಮಹೋತ್ಸವ ಸಂಭ್ರಮದಲ್ಲಿ ಹುಬ್ಬಳ್ಳಿಯ ಜೆಜಿ ಕಾಮರ್ಸ್‌ ಕಾಲೇಜ್‌ ಹಳೆಯ ವಿದ್ಯಾರ್ಥಿಗಳ ಸಂಘ

(ಇಂದು ಮಹಾವಿದ್ಯಾಲಯದಲ್ಲಿ ೧೦ ಗಂಟೆಯಿಂದ ಹಳೆಯ ವಿದ್ಯಾರ್ಥಿಗಳ ಪುನರಮಿಲನ್ ಕಾರ್ಯಕ್ರಮ ನಡೆಯುತ್ತಿದ್ದು, ಈ ನಿಮಿತ್ತ ಲೇಖನ) ಬೆಳಗಾವಿಯ ಕೆಎಲ್‌ಇ ಸಂಸ್ಥೆಯು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಣಿಜ್ಯಶಾಸ್ತ್ರ ಬೋಧಿಸುವ ಉತ್ಕೃಷ್ಟ ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸುವ ಸದುದ್ದೇಶವನ್ನು ಹೊಂದಿ ತನ್ನ ಇಚ್ಛೆಯನ್ನು ಸಮಾಜಮುಖಿ ಸದಸ್ಯರೊಂದಿಗೆ ಹಂಚಿಕೊಂಡರು. ಹುಬ್ಬಳ್ಳಿಯ ಪೂಜ್ಯ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ … Continued

ಪ್ರಕಾಶ ರೈ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ನಕಲಿ ಫೋಟೊ ವೈರಲ್‌; ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ ನಟ

ಮೈಸೂರು: ಮಹಾ ಕುಂಭಮೇಳದಲ್ಲಿ ಪ್ರಕಾಶ ರೈ ಅವರು ಪವಿತ್ರ ಸ್ನಾನ ಮಾಡುವ ರೀತಿಯಲ್ಲಿ ತಂತ್ರಜ್ಞಾನ ಬಳಸಿ ನಕಲಿ ಫೋಟೋ ರಚಿಸಿ ವೈರಲ್‌ ಮಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ವಿರುದ್ಧ ಬಹುಭಾಷಾ ನಟ ಪ್ರಕಾಶ ರೈ ನಗರದ ಲಕ್ಷ್ಮೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಶಾಂತ್ ಸಂಬರಗಿ ಅವರು ನನ್ನ ಖ್ಯಾತಿಗೆ ಧಕ್ಕೆ ತರುವ … Continued

ಕೇಂದ್ರ ಬಜೆಟ್ 2025 | 50 ಲಕ್ಷ ಕೋಟಿ ರೂ. ಮೀರಿದ ಬಜೆಟ್‌ ಗಾತ್ರ ; ಮಧ್ಯಮ ವರ್ಗದವರಿಗೆ ‘ಡಿ-ಟ್ಯಾಕ್ಸ್ ಥೆರಪಿ’

ನವದೆಹಲಿ: ಕೇಂದ್ರ ವಿತ್ರ ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitaraman) ಅವರು ಎಂಟನೇ ಬಾರಿ ಕೇಂದ್ರ ಬಜೆಟ್‌(Union Budget 2025) ಮಂಡಿಸಿದ್ದಾರೆ. ಶನಿವಾರ ಮಂಡನೆಯಾಗಿರುವ ಬಜೆಟ್‌ ಗಾತ್ರ(Union Budget Size) ಬರೋಬ್ಬರಿ 50 ಲಕ್ಷ ಕೋಟಿಗೂ ಮೀರಿದೆ. ನಿರ್ಮಲಾ ಸೀತಾರಾಮನ್‌ ಇಂದು ಮಂಡಿಸಿರುವ ಬಜೆಟ್‌ ಗಾತ್ರ ಒಟ್ಟು 50,65,345 ಕೋಟಿ ರೂ.ಗಳಾಗಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ ಈ … Continued

ಕೇಂದ್ರ ಬಜೆಟ್‌ 2025 ; ಆಯವ್ಯಯದ ಪ್ರಮುಖ ಘೋಷಣೆಗಳು

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ 2025 ರ ಭಾಷಣವು ಲೋಕಸಭೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ಇದು ಸಂಸತ್ತಿನಲ್ಲಿ ಅವರ ಸತತ ಎಂಟನೇ ಬಜೆಟ್ ಮಂಡನೆಯಾಗಿದೆ. ಮೋದಿ 3.0.ಕೇಂದ್ರ ಸರ್ಕಾರವು `ಬಡವರು, ಯುವಕರು, ರೈತರು ಮತ್ತು ಸ್ತ್ರೀಯರ (ಗರೀಬ್, ಯೂಥ್, ಅನ್ನದಾತ, ನಾರಿ) ಅಭ್ಯುದಯಕ್ಕಾಗಿ 10 ವಿಸ್ತೃತ ವಲಯಗಳಲ್ಲಿ … Continued