ಜಿ20 ಶೃಂಗಸಭೆಯ ಔತಣಕೂಟಕ್ಕೆ ಮಾಜಿ ಪ್ರಧಾನಿಗಳಿಗೆ ಆಹ್ವಾನ

ನವದೆಹಲಿ: ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವದ ಪ್ರಮುಖ ಆರ್ಥಿಕತೆ ದೇಶಗಳ ಗಣ್ಯರು ದೆಹಲಿಗೆ ಆಗಮಿಸುತ್ತಿದ್ದಾರೆ. ಜಿ20 ಶೃಂಗಸಭೆ ಭೋಜನಕೂಟದಲ್ಲಿ ವಿದೇಶಿ ಪ್ರತಿನಿಧಿಗಳು, ಸಚಿವರು, ಸಂಸದರಲ್ಲದೆ ರಾಷ್ಟ್ರದ ಕೆಲವು ಮಾಜಿ, ಪ್ರಧಾನಿಗಳು, ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಹೆಚ್.ಡಿ. ದೇವೇಗೌಡರನ್ನೂ ಜಿ20 … Continued

ಸ್ಪೇನ್ ಅಧ್ಯಕ್ಷ ಪೆಡ್ರೋಗೆ ಕೊರೊನಾ ಸೋಂಕು, ಜಿ20 ಶೃಂಗಸಭೆಗೆ ಗೈರು

ನವದೆಹಲಿ: ಸ್ಪೇನ್‌ನ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಅವರು ಗುರುವಾರ ಕೋವಿಡ್‌-19 ಗೆ ಸೋಂಕಿಗೆ ಒಳಗಾಗಿದ್ದು, ನವದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಅಧ್ಯಕ್ಷ ಸ್ಯಾಂಚೆಝ್ ಅವರು “ಉತ್ತಮ” ಆರೋಗ್ಯದಲ್ಲಿರುವುದಾಗಿ ಹೇಳಿದ್ದಾರೆ. ಮೊದಲ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ ಸಾಂತಾಮಾರಿಯಾ ಮತ್ತು ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಅವರು G20 ಶೃಂಗಸಭೆಯಲ್ಲಿ ಸ್ಪೇನ್ … Continued

ಅಮೆರಿಕ ಡಾಲರ್ ವಿರುದ್ಧ ಈವರೆಗಿನ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

ನವದೆಹಲಿ : ದೃಢವಾದ ಅಮೆರಿಕನ್ ಕರೆನ್ಸಿ ಮತ್ತು ಹೆಚ್ಚಿದ ಕಚ್ಚಾ ತೈಲ ಬೆಲೆಗಳ ನಡುವೆ ಗುರುವಾರ ಅಮೆರಿಕ ಡಾಲರ್‌ಗೆ ವಿರುದ್ಧವಾಗಿ ರೂಪಾಯಿ ಮೌಲ್ಯವು ಸತತ ನಾಲ್ಕನೇ ದಿನವೂ ಕುಸಿದಿದೆ ಮತ್ತು ಅದರ ಜೀವಮಾನದ ಕನಿಷ್ಠ 83.22 (ತಾತ್ಕಾಲಿಕ) ಕ್ಕೆ ತಲುಪಿದೆ. ಡಾಲರ್‌ ವಿರುದ್ಧ ರೂಪಾಯಿಯ ಮೌಲ್ಯ 9 ಪೈಸೆ ಕಡಿಮೆಯಾಗಿದೆ. ದೇಶೀಯ ಈಕ್ವಿಟಿ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ … Continued

ಹಾಸಿಗೆಯಿಂದ ಬಿದ್ದ 160 ಕೆಜಿ ತೂಕದ ಮಹಿಳೆ ಮೇಲೆತ್ತಲು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಕುಟುಂಬದವರು…!

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಗುರುವಾರ 160 ಕೆಜಿ ತೂಕದ ಅಸ್ವಸ್ಥ ಮಹಿಳೆ ಹಾಸಿಗೆಯಿಂದ ಬಿದ್ದ ನಂತರ ಆಕೆಯ ಕುಟುಂಬಕ್ಕೆ ಆಕೆಯನ್ನು ಮೇಲೆತ್ತಿ ಮಲಗಿಸಲು ಸಾಧ್ಯವಾಗದೆ ಸಹಾಯಕ್ಕಾಗಿ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ ವಿದ್ಯಮಾನ ನಡೆದಿದೆ. 62 ವರ್ಷದ ಮಹಿಳೆಗೆ ತನ್ನ ತೂಕ ಹಾಗೂ ಅನಾರೋಗ್ಯದ ಕಾರಣ ಅವರಿಗೆ ಓಡಾಡಲು ಸಮಸ್ಯೆಯಿದೆ. ವಾಘ್ಬಿಲ್ ಪ್ರದೇಶದಲ್ಲಿನ ತಮ್ಮ … Continued

ಇಂಡಿಯಾ ಮೈತ್ರಿಕೂಟ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ: ಡಿಎಂಕೆ ಸಂಸದ ಸನಾತನ ಧರ್ಮವನ್ನು ಎಚ್‌ಐವಿಗೆ ಹೋಲಿಸಿದ ನಂತರ ಕಾಂಗ್ರೆಸ್ ಹೇಳಿಕೆ

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ-ಇಂಡಿಯಾ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಗುರುವಾರ ಹೇಳಿದ್ದಾರೆ. ಡಿಎಂಕೆಯ ಸಂಸದ ಎ.ರಾಜಾ ಅವರು, ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗಕ್ಕೆ ಹೋಲಿಸಿದ ನಂತರ ನಂತರಪವನ ಖೇರಾ ಹೇಳಿಕೆಗಳು ಬಂದಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಎರಡೂ ಹೊಸದಾಗಿ ರೂಪುಗೊಂಡ ವಿರೋಧ ಪಕ್ಷದ ಮೈತ್ರಿಕೂಟ-ಇಂಡಿಯಾದ ಭಾಗವಾಗಿದೆ. ಡಿಎಂಕೆ ನಾಯಕ … Continued

‘ಉದಯನಿಧಿ ಸ್ಟಾಲಿನ್ ಮೃದುವಾಗಿ ಹೇಳಿದ್ದಾರೆ, ಸನಾತನ ಧರ್ಮ ಎಚ್ ಐವಿ, ಕುಷ್ಠರೋಗವಿದ್ದಂತೆ’: ಡಿಎಂಕೆ ಎ. ರಾಜಾ ಹೇಳಿಕೆ

ಚೆನ್ನೈ: ಡಿಎಂಕೆ ಪಕ್ಷದ ನಾಯಕ ಮತ್ತು ಸಂಸದ ಎ ರಾಜಾ ಅವರು ‘ಸನಾತನ ಧರ್ಮ’ವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕವನ್ನು ಹೊಂದಿರುವ ರೋಗಗಳಿಗೆ ಹೋಲಿಸಬೇಕು ಎಂದು ಹೇಳಿದ್ದಾರೆ. ತಮ್ಮ ಪಕ್ಷದ ಸಹೋದ್ಯೋಗಿ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ’ದ ಬಗ್ಗೆ “ಮೃದು”ವಾಗಿ ಹೇಳಿದ್ದಾರೆ ಎಂದು ರಾಜಾ ಹೇಳಿದ್ದಾರೆ. ಸನಾತನ ಮತ್ತು … Continued

ಮತ್ತೊಂದು ಗೇಮ್ ಚೇಂಜರ್…: ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಎಟಿಎಂನಿಂದ ಹಣ ಪಡೆಯುವ ಭಾರತದ ಮೊದಲ ಯುಪಿಐ-ಎಟಿಎಂ ಅನಾವರಣ | ವೀಕ್ಷಿಸಿ

ಮೊಬೈಲ್ ಸಾಧನಗಳ ಮೂಲಕ ತಕ್ಷಣದ ಹಣ ವರ್ಗಾವಣೆಗಾಗಿ ಬಳಸಲಾಗುವ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI), ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಾವತಿ ವಿಧಾನವಾಗಿದೆ. ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಮಂಗಳವಾರ, ಕಾರ್ಡ್‌ಲೆಸ್ ನಗದು ವಿತ್‌ ಡ್ರಾ ಮಾಡುವ ಯುಪಿಐ ಎಟಿಎಂ (UPI ATM) ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ‘ಭಾರತದ ಮೊದಲ ಯುಪಿಐ ಎಟಿಎಂ (UPI … Continued

ಭಾರತದ ಸೂರ್ಯಯಾನ ಮಿಷನ್ : ಸೆಲ್ಫಿ ತೆಗೆದುಕೊಂಡ ಆದಿತ್ಯ-L1; ಭೂಮಿ, ಚಂದ್ರನ ಫೋಟೋ ಕ್ಲಿಕ್‌ ಮಾಡಿದ ಬಾಹ್ಯಾಕಾಶ ನೌಕೆ | ವೀಕ್ಷಿಸಿ

ನವದೆಹಲಿ : ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಗೆ ಹೋಗುತ್ತಿರುವಾಗ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನೌಕೆ, ಆದಿತ್ಯ-ಎಲ್ 1 ತಾನು ತೆಗೆದ ಭೂಮಿಯ ಚಿತ್ರಗಳನ್ನು ಕಳುಹಿಸಿದೆ ಮತ್ತು ಚಂದ್ರನನ್ನೂ ಕ್ಲಿಕ್ಕಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ … Continued

ಇಂಡಿಯಾ ವರ್ಸಸ್‌ ಭಾರತ ವಾಗ್ವಾದ : ದೇಶದ ಹೆಸರು ಬಳಸುವ ಪಕ್ಷಗಳನ್ನು ನಿಷೇಧಿಸಿ ಎಂದು ಮಾಯಾವತಿ ಒತ್ತಾಯ

ನವದೆಹಲಿ: ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಇಂಡಯಾ ಮತ್ತು ʼಭಾರತʼ ಹೆಸರಿನ ಮೇಲೆ ಮಾಡುತ್ತಿರುವ “ಸಂಕುಚಿತ ರಾಜಕೀಯ” ವನ್ನು ಸ್ವತಃ ಅರಿಯಬೇಕು ಮತ್ತು ದೇಶದ ಹೆಸರನ್ನು ಬಳಸುವ ಎಲ್ಲಾ ರಾಜಕೀಯ ಸಂಸ್ಥೆಗಳು, ಸಂಘಟನೆಗಳು ಮತ್ತು ಮೈತ್ರಿಕೂಟಗಳನ್ನು ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಬುಧವಾರ ಒತ್ತಾಯಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು “ಪ್ರೆಸಿಡೆಂಟ್‌ … Continued

“ಸನಾತನ ಧರ್ಮ”: ಉದಯನಿಧಿ ಹೇಳಿಕೆ ತಿರುಚಿದ ಆರೋಪ; ಬಿಜೆಪಿಯ ಅಮಿತ್ ಮಾಳವಿಯಾ ವಿರುದ್ಧ ಪ್ರಕರಣ ದಾಖಲು

ಚೆನ್ನೈ: ತಮಿಳುನಾಡು ಸಚಿವ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಪೋಸ್ಟ್‌ನಲ್ಲಿ, ಮಾಳವಿಯಾ ಅವರು ‘ಸನಾತನ ಧರ್ಮ’ ಕುರಿತು ಉದಯನಿಧಿ ಅವರ ಇತ್ತೀಚಿನ ಹೇಳಿಕೆಯು ಅದನ್ನು ಅನುಸರಿಸುವ … Continued