“ಪ್ರಧಾನಿ ಮೋದಿ ದೇಶಪ್ರೇಮಿ… ಭವಿಷ್ಯವು ಭಾರತಕ್ಕೆ ಸೇರಿದ್ದು”: ಭಾರತವನ್ನು ಹೊಗಳಿದ ರಷ್ಯಾ ಅಧ್ಯಕ್ಷ ಪುತಿನ್

ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಸ್ವತಂತ್ರ ವಿದೇಶಾಂಗ ನೀತಿ ಹಾಗೂ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಶ್ಲಾಘಿಸಿದ್ದಾರೆ ಮತ್ತು ಮೋದಿ ಅವರನ್ನು ‘ನಿಜವಾದ ದೇಶಭಕ್ತ’ ಎಂದು ಕರೆದಿದ್ದಾರೆ. ವಾಲ್ಡೈ ಚರ್ಚಾ ಕ್ಲಬ್‌ಗೆ ವಾರ್ಷಿಕ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆರ್ಥಿಕವಾಗಿ ಮತ್ತು … Continued

ಚಹಾ ಪುಡಿ ಎಂದು ಗ್ರಹಿಸಿ ಕೀಟನಾಶಕದಿಂದ ತಯಾರಿಸಿದ ಚಹಾ ಸೇವಿಸಿದ ನಂತರ ಇಬ್ಬರು ಮಕ್ಕಳು ಸೇರಿ ಐವರ ಸಾವು

ಮೈನ್‌ಪುರಿ (ಯುಪಿ): ಕುಟುಂಬದ ಸದಸ್ಯರು ತಯಾರಿಸಿದ ವಿಷಪೂರಿತ ಚಹಾ ಕುಡಿದು ಇಬ್ಬರು ಮಕ್ಕಳು ಮತ್ತು ಅವರ ತಂದೆ ಸೇರಿದಂತೆ ಒಂದೇ ಕುಟುಂಬದ ಐವರು ಗುರುವಾರ ಇಲ್ಲಿನ ಗ್ರಾಮವೊಂದರಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6) ಮತ್ತು ದಿವ್ಯಾಂಶ್ (5), ಅವರ ಮಾವ ರವೀಂದ್ರ ಸಿಂಗ್ (55), ಮತ್ತು ನೆರೆಹೊರೆಯವರಾದ ಸೊಬ್ರಾನ್ (42) … Continued

ರಿಷಿ ಸುನಕ್‌ಗೆ ಅಭಿನಂದಿಸಿದ ಪ್ರಧಾನಿ ಮೋದಿ: ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ

ನವದೆಹಲಿ: ಭಾರತೀಯ ಮೂಲದ ರಿಷಿ ಸುನಕ್ ಅವರು ಯುನೈಟೆಡ್ ಕಿಂಗ್ ಡಂನ ಪ್ರಧಾನಿಯಾದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿ ಅವರ ಜೊತೆ ಮಾತನಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವೇಳೆ ಎರಡೂ ರಾಷ್ಟ್ರಗಳು ಸಮತೋಲಿತ ವ್ಯಾಪಾರ ಒಪ್ಪಂದವನ್ನು ಮುಂದುವರಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಮಂಗಳವಾರವಷ್ಟೇ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಅಧಿಕಾರ … Continued

ವಾಟ್ಸಾಪ್ ನಂತರ ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವರಿಗೆ ಇನ್ಸ್ಟಾಗ್ರಾಮ್ ಡೌನ್

ನವದೆಹಲಿ: ಇಂದು ಭಾರತ ಸೇರಿದಂತೆ ಜಾಗತಿಕವಾಗಿ ಇನ್ಸ್ಟಾಗ್ರಾಮ್ ಡೌನ್ ಆಗಿರುವುದಾಗಿ ತಿಳಿದು ಬಂದಿದೆ. ಹಲವು ಬಳಕೆದಾರರು ಈ ಬಗ್ಗೆ ಸಾಮಾಜಿಕ ಮಾದ್ಯಮಗಳಲ್ಲಿ ವರದಿ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ವಾಟ್ಸಾಪ್ ಸರ್ವರ್ ಡೌನ್ ಆಗಿತ್ತು. ಈ ಬೆನ್ನಲ್ಲೇ ಮತ್ತೊಂದು ಪ್ರಸಿದ್ಧ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಹಲವರಿಗೆ ಡೌನ್ ಆಗಿದೆ ಎಂದು ಹಲವಾರು ಮಾಧ್ಯಮಗಳು ತಿಳಿಸಿವೆ. ಇಂದು … Continued

15 ಭಾವಚಿತ್ರಗಳನ್ನು ಏಕಕಾಲದಲ್ಲಿ ಪೇಂಟ್‌ ಮಾಡಿದ ಈ ಕಲಾವಿದೆ, ಇದು ಪವಾಡ, ಅವಳಿಗೆ ಸ್ಕಾಲರ್‌ಶಿಪ್ ನೀಡುತ್ತೇನೆ ಎಂದ ಆನಂದ್ ಮಹೀಂದ್ರ, ಅದು ಹೇಗೆ ? ವೀಕ್ಷಿಸಿ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಗಿನ್ನಿಸ್ ವಿಶ್ವ ದಾಖಲೆ ಹೊಂದಿರುವ ಯುವತಿಯ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಹುಡುಗಿ ಒಂದೇ ಬಾರಿಗೆ 15 ಭಾವಚಿತ್ರಗಳನ್ನು ಬಿಡಿಸಿದ ದಾಖಲೆ ಹೊಂದಿದ್ದಾಳೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಗಿನ್ನಿಸ್ ವಿಶ್ವ ದಾಖಲೆ ಹೊಂದಿರುವ ಹುಡುಗಿಯ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ‘ಪವಾಡ’ ಕಲಾವಿದೆಗೆ … Continued

ಭದ್ರತೆ ನೀಡದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಈ ಹಿಂದೆ ಭರವಸೆ ನೀಡಿದ್ದರೂ, ಸರ್ಕಾರವು ಮಂಜೂರು ಮಾಡಿದ ಬಂಗಲೆಯನ್ನು ತೆರವುಗೊಳಿಸಿದ ನಂತರ ತಾವು ವಾಸಿಸುವ ನಿವಾಸದಲ್ಲಿ ಕೇಂದ್ರವು ಯಾವುದೇ ಭದ್ರತಾ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿದ್ದಾರೆ. ಗುರುವಾರ, ಅವರ ವಕೀಲರು ತಮ್ಮ ಖಾಸಗಿ ನಿವಾಸಕ್ಕೆ ಸೂಕ್ತ ಭದ್ರತೆ … Continued

ವಿರಾಟ್‌ ಕೊಹ್ಲಿ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರು ಯಾರು..? : ಇಬ್ಬರು ಆಟಗಾರರನ್ನು ಹೆಸರಿಸಿದ ಭಾರತದ ಮಾಜಿ ನಾಯಕ

ನವದೆಹಲಿ: ಇತ್ತೀಚೆಗೆ 2022 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮ್ಯಾನ್ ಆಫ್ ದಿ ಮ್ಯಾಚ್ ಪ್ರದರ್ಶನವನ್ನು ನೀಡಿದ ವಿರಾಟ್ ಕೊಹ್ಲಿ ಚರ್ಚೆಯಲ್ಲಿ ಸೇರಲು ಮತ್ತು ಸಾರ್ವಕಾಲಿಕ ತಮ್ಮ ಶ್ರೇಷ್ಠ ಕ್ರಿಕೆಟಿಗರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ … Continued

ಕನ್ನಡ ರಾಜ್ಯೋತ್ಸವಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿ ಪ್ರಕಟ: 4 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೊಣೆ

ಬೆಂಗಳೂರು: ನವೆಂಬರ್ 1, 2022ರಂದು ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ (Flag Hosting) ಸಚಿವರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಂತೆ ನಾಲ್ಕು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ … Continued

ಟಾಟಾಸ್- ಏರ್‌ಬಸ್‌ನೊಂದಿಗೆ ಗುಜರಾತ್ ಒಪ್ಪಂದ: ಮಿಲಿಟರಿಗಾಗಿ ಸಾರಿಗೆ ವಿಮಾನ ತಯಾರಿಕೆಗೆ ₹ 22,000-ಕೋಟಿ ಯೋಜನೆ

ನವದೆಹಲಿ: ಗುಜರಾತ್ ಬೃಹತ್‌ ಒಪ್ಪಂದ ಮಾಡಿಕೊಂಡಿದ್ದು, ಟಾಟಾ ಮತ್ತು ಏರ್‌ಬಸ್‌ಗಳು ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಮಿಲಿಟರಿಗಾಗಿ ಸಾರಿಗೆ ವಿಮಾನಗಳನ್ನು ತಯಾರಿಸಲಿವೆ. ಯೋಜನೆಯ ವೆಚ್ಚ ₹ 22,000 ಕೋಟಿ ಅಥವಾ 2.66 ಬಿಲಿಯನ್ ಡಾಲರ್‌ಗಳಾಗಿವೆ. ಭಾರತದಲ್ಲಿ ಖಾಸಗಿ ಕಂಪನಿಯೊಂದು ಮಿಲಿಟರಿ ವಿಮಾನವನ್ನು ತಯಾರಿಸುವ ಈ ರೀತಿಯ ಮೊದಲ ಯೋಜನೆಯಾಗಿದೆ. ಯೋಜನೆಯ ಒಟ್ಟು ವೆಚ್ಚ ₹ … Continued

ದ್ವೇಷ ಭಾಷಣ ಪ್ರಕರಣದಲ್ಲಿ ಎಸ್‌ಪಿಯ ಆಜಂ ಖಾನ್‌ಗೆ 3 ವರ್ಷ ಶಿಕ್ಷೆ: ಶಾಸಕ ಸ್ಥಾನ ಕಳೆದುಕೊಳ್ಳಬಹುದು

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧದ ದ್ವೇಷ ಭಾಷಣ ಪ್ರಕರಣದಲ್ಲಿ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರನ್ನು ಅಕ್ಟೋಬರ್ 27, ಗುರುವಾರದಂದು ಉತ್ತರ ಪ್ರದೇಶದ ಜನಪ್ರತಿನಿಧೀಗಳ ವಿಶೇಷ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 2000 ರೂ.ಗಳ ದಂಡ ವಿಧಿಸಿದೆ. ಶಿಕ್ಷೆಗೊಳಗಾದ ನಂತರ ಜಾಮೀನು … Continued