26/11 ಮುಂಬೈ ಭಯೋತ್ಪಾದಕ ದಾಳಿ ಆರೋಪಿ ಸಾಜಿದ್ ಮಿರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪ ತಡೆದ ಚೀನಾ

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕ ಮಾಡಿದ ಪ್ರಸ್ತಾಪವನ್ನು ಚೀನಾ ಮಂಗಳವಾರ ತಡೆಹಿಡಿದಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267ರ ಅಲ್ ಖೈದಾ ನಿರ್ಬಂಧಗಳ ಸಮಿತಿಯಡಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಮಿರ್‌ನನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು … Continued

470 ವಿಮಾನಗಳ ಖರೀದಿಗೆ ಏರ್‌ಬಸ್, ಬೋಯಿಂಗ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ಮಂಗಳವಾರ ಏರ್‌ಬಸ್ ಮತ್ತು ಬೋಯಿಂಗ್‌ನೊಂದಿಗೆ 470 ವಿಮಾನಗಳನ್ನು ಖರೀದಿಗೆ ಅಂದಾಜು $70 ಬಿಲಿಯನ್‌ ಒಪ್ಪಂದಗಳಿಗೆ ಸಹಿ ಹಾಕಿದೆ. ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಈ ವರ್ಷದ ಫೆಬ್ರವರಿಯಲ್ಲಿ ಬೃಹತ್‌ ವಿಮಾನಗಳು ಸೇರಿದಂತೆ 470 ವಿಮಾನಗಳನ್ನು ಖರೀದಿಸುವುದಾಗಿ ಘೋಷಿಸಿತ್ತು. ಸಂಸ್ಥೆಯ ಆರ್ಡರ್‌ಗಳಲ್ಲಿ 34 A350-1000, 6 A350-900, 20 ಬೋಯಿಂಗ್ 787 ಡ್ರೀಮ್‌ಲೈನರ್‌ಗಳು … Continued

ಅಪರಿಚಿತ ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಪಡೆಯಲು ಹೊಸ ಫೀಚರ್‌ ಪರಿಚಯಿಸಿದ ವಾಟ್ಸಾಪ್

ಅಪರಿಚಿತರ ಅನಾಮಿಕ ಸ್ಪ್ಯಾಮ್‌ ಕರೆಗಳಿಂದ ರಕ್ಷಣೆ ಪಡೆಯಲು ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದ ವಾಟ್ಸಾಪ್‌ ಬಳಕೆದಾರರು ಒಳಬರುವ ಅಪರಿಚಿತ ಕರೆಗಳು ಬಾರದಂತೆ ತಡೆಯಬಹುದಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮಂಗಳವಾರ ಇದನ್ನು ಘೋಷಿಸಿದ್ದಾರೆ. ಸೆಟ್ಟಿಂಗ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಆನ್ ಮಾಡುವ ಮೂಲಕ WhatsApp ಬಳಕೆದಾರರು ಈಗ ಅಪರಿಚಿತ ಕರೆಗಳು ಅಥವಾ ಸ್ಪ್ಯಾಮ್ ಕರೆಗಳನ್ನು ತಡೆಯಲು … Continued

ಆಶ್ರಮದಲ್ಲಿ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಆಂಧ್ರಪ್ರದೇಶದ ಸ್ವಾಮೀಜಿ ಬಂಧನ

ವಿಶಾಖಪಟ್ಟಣಂ : ತಾನು ನಡೆಸುತ್ತಿದ್ದ ಆಶ್ರಮದಲ್ಲಿ ಹಲವು ತಿಂಗಳುಗಳಿಂದ 15 ವರ್ಷದ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಂಧ್ರಪ್ರದೇಶದ ಸ್ವಾಮೀಜಿಯೊಬ್ಬರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ವಿಜಯವಾಡದಲ್ಲಿ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ವಿಶಾಖಪಟ್ಟಣಂನ ವೆಂಕೋಜಿಯಲ್ಲಿರುವ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಪೂರ್ಣಾನಂದ ಸರಸ್ವತಿ ಅವರನ್ನು ಬಂಧಿಸಲಾಗಿದೆ. ಪೋಲೀಸರ ಪ್ರಕಾರ, ಪೂರ್ಣಾನಂದ ಸರಸ್ವತಿ … Continued

ಮಲಗಿದ್ದ ಹಸುವಿನ ಮೇಲೆ ಹೊಂಚು ಹಾಕಿ ದಾಳಿ ಮಾಡಿದ ಹುಲಿ: ಹುಲಿಯನ್ನೇ ಹೆದರಿಸಿ ಓಡಿಸಿದ ದನಗಳ ಹಿಂಡು | ವೀಕ್ಷಿಸಿ

ವನ್ಯಜೀವಿಗಳು ಆಗಾಗ ಜನವಸತಿ ಪ್ರದೇಶಗಳಿಗೆ ಆಗಮಿಸುತ್ತವೆ ಹಾಗೂ ಅದರಲ್ಲಿಯೂ ಪರಭಕ್ಷಕಗಳು ಪ್ರಾಣಿಗಳು ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತವೆ. ಕೆಲವೊಂದು ಬಾರಿ ಸಾಕು ಪ್ರಾಣಿಗಳು ಹುಲಿ, ಚಿರತೆಗೆ ಚಳ್ಳೆಹಣ್ಣು ತಿನ್ನಿಸುತ್ತವೆ. ಇದೇ ತರಹ ಘಟನೆಯ ವೀಡಿಯೊ ವೈರಲ್‌ ಆಗಿದೆ. ವೀಡಿಯೊದಲ್ಲಿ ಹಸುಗಳ ಹಿಂಡೊಂದು ಹುಲಿಯೊಂದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿರುವುದು ಕಂಡುಬರುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನು ಈ ಹಸುಗಳು … Continued

ಪಶ್ಚಿಮ ಬಂಗಾಳ ಪಂಚಾಯತ ಚುನಾವಣೆ : ಕೇಂದ್ರ ಪಡೆಗಳ ನಿಯೋಜನೆ ತಡೆಗೆ ಸುಪ್ರೀಂ ಕೋರ್ಟ್ ನಕಾರ; ಮಮತಾ ಸರ್ಕಾರಕ್ಕೆ ಹಿನ್ನಡೆ

ನವದೆಹಲಿ : ಜುಲೈ 8ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೇಂದ್ರ ಪಡೆಗಳನ್ನು ನಿಯೋಜಿಸಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಹಾಗೂ ಚುನಾವಣೆಯು ಹಿಂಸಾಚಾರಕ್ಕೆ ಪರವಾನಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿದೆ. “ನೀವು ಮೇಲಿನ ಹಂತದಿಂದ ಕೆಳಗಿನ ಹಂತದ ವರೆಗೂ ಚುನಾವಣೆಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿದ್ದೀರಿ ಎಂದು … Continued

ಐಐಟಿ ಬಾಂಬೆಗೆ ₹ 315 ಕೋಟಿ ದೇಣಿಗೆ ನೀಡಿದ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ ನಿಲೇಕಣಿ

ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ ನಿಲೇಕಣಿ ಅವರು ತಾವು ಕಲಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಗೆ ₹ 315 ಕೋಟಿ ದೇಣಿಗೆ ನೀಡಿದ್ದಾರೆ. ನಿಲೇಕಣಿ ಅವರು 1973 ರಲ್ಲಿ ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ ಓದಿದ್ದರು. ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಉತ್ತೇಜಿಸಲು, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಮತ್ತು … Continued

ಪಾದರಕ್ಷೆ ತಯಾರಿಕೆಗೂ ʼಗುಣಮಟ್ಟದ ಮಾನದಂಡʼ ಅನುಸರಿಸುವುದು ಕಡ್ಡಾಯ : ಜುಲೈ 1ರಿಂದ ನಿಯಮ ಜಾರಿಗೆ

ನವದೆಹಲಿ : ದೊಡ್ಡ ಮತ್ತು ಮಧ್ಯಮ ಪ್ರಮಾಣದ ಪಾದರಕ್ಷೆ ತಯಾರಕರು ಮತ್ತು ಎಲ್ಲಾ ಆಮದುದಾರರು 24 ಪಾದರಕ್ಷೆಗಳು ಮತ್ತು ಸಂಬಂಧಿತ ಉತ್ಪನ್ನಗಳಿಗೆ ಜುಲೈ 1 ರಿಂದ ಕಡ್ಡಾಯ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಇದು ಕಳಪೆ ಪಟ್ಟದ ಪಾದರಕ್ಷೆಗಳ ಆಮದುಗಳನ್ನು ತಡೆಯುವ ಉದ್ದೇಶ ಹೊಂದಿದೆ. ಸಣ್ಣ ಪ್ರಮಾಣದ ಪಾದರಕ್ಷೆ ತಯಾರಕರಿಗೆ ಗಡುವು ಜನವರಿ 1, 2024 ಆಗಿದೆ, … Continued

ಪ್ರಮುಖ ವಿಪಕ್ಷಗಳ ಒಗ್ಗಟ್ಟಿನ ಸಭೆಗೆ ಮೊದಲು ಕಾಂಗ್ರೆಸ್ ಜೊತೆ ಮೈತ್ರಿಗೆ ಕೆಲ ಪ್ರಾದೇಶಿಕ ಪಕ್ಷಗಳ ಭಿನ್ನಾಭಿಪ್ರಾಯ

ನವದೆಹಲಿ: ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರು ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಒಗ್ಗೂಡಿಸುವಿಕೆಯ ಸಭೆ ಕರೆದ ಕೆಲವೇ ದಿನಗಳ ಮೊದಲು, ಅನೇಕ ಪ್ರಾದೇಶಿಕ ಸಂಘಟನೆಗಳು ಕಾಂಗ್ರೆಸ್ ಅನ್ನು ಒಳಗೊಂಡಿರುವ ಮೈತ್ರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಇದು 2024 ರ ಲೋಕಸಭೆ ಚುನಾವಣೆಗಳು ಮುಂಚಿತವಾಗಿ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಗಳಿಗೆ ಅಡ್ಡಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯೇತರ … Continued

ಐತಿಹಾಸಿಕ ಭೇಟಿಗಾಗಿ ಅಮೆರಿಕಕ್ಕೆ ಪ್ರಯಾಣಿಸಿದ ಪ್ರಧಾನಿ ಮೋದಿ : ಲ್ಯಾಂಡ್‌ಮಾರ್ಕ್ ಭೇಟಿಯಲ್ಲಿ ರಕ್ಷಣೆ, ವ್ಯಾಪಾರಕ್ಕೆ ಒತ್ತು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಭೇಟಿಗಾಗಿ ಇಂದು, ಮಂಗಳವಾರ ಅಮೆರಿಕಕ್ಕೆ ತೆರಳಿದ್ದಾರೆ. ಅವರಿಗೆ ಅತ್ಯಂತ ನಿಕಟ ಮಿತ್ರರಾಷ್ಟ್ರಗಳಿಗೆ ಮೀಸಲಾದ ಅತ್ಯುನ್ನತ ರಾಜತಾಂತ್ರಿಕ ಸ್ವಾಗತವನ್ನು ಅಮೆರಿಕ ನೀಡಲಿದೆ. ಭೇಟಿಯ ಸಮಯದಲ್ಲಿ ಜೆಟ್ ಎಂಜಿನ್ ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಅಭೂತಪೂರ್ವ ಒಪ್ಪಂದ ಆಗನಹುದು ಎಂದು ನಿರೀಕ್ಷಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ಪ್ರಧಾನಿ ಮೋದಿಯವರ … Continued