ವೀಡಿಯೊ..| ಶಸ್ತ್ರಸಜ್ಜಿತರಾಗಿ ಸಲೂನ್‌ಗೆ ನುಗ್ಗಿ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಇಬ್ಬರನ್ನು ಕೊಂದು ಪರಾರಿಯಾದ ದುಷ್ಕರ್ಮಿಗಳು

ನವದೆಹಲಿ : ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಸೆಲೂನ್‌ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವಿಗೀಡಾಗಿರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇಬ್ಬರು ಬಂದೂಕುಧಾರಿಗಳು ಸಲೂನ್‌ಗೆ ಪ್ರವೇಶಿಸುವುದನ್ನು ವೀಡಿಯೊ ತೋರಿಸುತ್ತದೆ ಮತ್ತು ಅವರಲ್ಲಿ ಒಬ್ಬ ವ್ಯಕ್ತಿಯೊಬ್ಬ ತನ್ನ ಜೀವ ಉಳಿಸುವಂತೆ ಮನವಿ ಮಾಡುತ್ತಿದ್ದಾಗ. ಪಾಯಿಂಟ್-ಬ್ಲಾಂಕ್ … Continued

ಅಸಂಬದ್ಧ ಸಂದರ್ಶನ, ನನ್ನ ಪತ್ನಿಗೆ ಕಳಂಕ ಹಚ್ಚಬೇಡಿ: ತಂದೆ ವಿರುದ್ಧ ಸಿಡಿದ ಕ್ರಿಕೆಟಿಗ ರವೀಂದ್ರ ಜಡೇಜಾ

ನವದೆಹಲಿ: ಭಾರತದ ತಂಡದ ಕ್ರಿಕೆಟ್‌ ಆಟಗಾರ ರವೀಂದ್ರ ಜಡೇಜಾ ಅವರು ತಮ್ಮ ಹಾಗೂ ತಂದೆಯ ನಡುವಿನ ಹಳಸಿದ ಸಂಬಂಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸಂದರ್ಶನದಲ್ಲಿ ತಮ್ಮ ಪತ್ನಿ, ಗುಜರಾತ್‌ನ ಜಾಮ್‌ನಗರದ ಬಿಜೆಪಿ ಶಾಸಕಿ ರಿವಾಬಾ ವಿರುದ್ಧ ತಂದೆ ಅನಿರುದ್ಧ ಸಿನ್ಹಾ ಜಡೇಜಾ ಮಾಡಿರುವ ಆರೋಪಗಳ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಟಗಾರ ರವೀಂದ್ರ ಜಡೇಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ. … Continued

“ನಾನು ನಿಮ್ಮನ್ನು ಶಿಕ್ಷಿಸಲಿದ್ದೇನೆ….”: ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರೊಂದಿಗೆ ಪ್ರಧಾನಿ ಮೋದಿ ಊಟ-ತಮಾಷೆ-ಮಾತುಕತೆ

ನವದೆಹಲಿ: ಕನಿಷ್ಠ ಎಂಟು ಸಂಸದರಿಗೆ ಶುಕ್ರವಾರ ಮಧ್ಯಾಹ್ನ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ಸಂಸತ್ತಿನಲ್ಲಿ ಭೇಟಿಯಾಗಲು ಬಯಸಿದ್ದಾರೆ ಎಂದು ಹೇಳಿದ್ದು ಅವರಿಗೆ ಅಚ್ಚರಿ ಮೂಡಿಸಿದೆ. ಸಂಸದರಲ್ಲಿ ಕೇಂದ್ರ ಸಚಿವ ಎಲ್ ಮುರುಗನ್, ಬಿಜೆಡಿ ರಾಜ್ಯಸಭಾ ಸಂಸದ ಸಸ್ಮಿತ್ ಬಾತ್ರಾ, ಲೋಕಸಭೆಯ ಹಿರಿಯ ಸಂಸದ ಎನ್‌.ಕೆ. ಪ್ರೇಮ ಚಂದ್ರನ್, ಟಿಡಿಪಿ ಸಂಸದ … Continued

ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್, ಚರಣ ಸಿಂಗ್, ವಿಜ್ಞಾನಿ ಸ್ವಾಮಿನಾಥನ್ ಗೆ ಭಾರತದ ಅತ್ಯುನ್ನತ ಪುರಸ್ಕಾರ ʼಭಾರತ ರತ್ನʼ ಘೋಷಣೆ

ನವದೆಹಲಿ : ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್ ಹಾಗೂ ಚೌಧರಿ ಚರಣ್ ಸಿಂಗ್ ಮತ್ತು ಭಾರತದ ‘ಹಸಿರು ಕ್ರಾಂತಿ’ಯ ಪಿತಾಮಹ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಸರ್ಕಾರ ಶುಕ್ರವಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಈ ಹಿಂದೆ, ಬಿಜೆಪಿಯ ಹಿರಿಯ ರಾಜಕಾರಣಿ ಎಲ್‌.ಕೆ. ಅಡ್ವಾಣಿ ಮತ್ತು ಸಮಾಜವಾದಿ ಐಕಾನ್ ಮತ್ತು … Continued

ರಷ್ಯಾ-ಉಕ್ರೇನ್ ಯುದ್ಧದಿಂದ ಮನನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ರಷ್ಯಾದ ಮಹಿಳೆ: ಹೆಸರೂ ಬದಲಾಯ್ತು…!

ಎರಡು ವರ್ಷಗಳಿಂದ ತೀವ್ರವಾಗಿ ಸಾಗುತ್ತಿರುವ ಯುದ್ದದಿಂದ ಬೇಸತ್ತು ಮಾನಸಿಕ ನೆಮ್ಮದಿಯನ್ನು ಅರಸಿ ರಷ್ಯಾದ ಮಹಿಳೆಯೋರ್ವರು ಉತ್ತರ ಪ್ರದೇಶದ ವಾರಣಾಸಿಗೆ ಬಂದು ತಾಂತ್ರಿಕ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ರಷ್ಯಾ – ಉಕ್ರೇನ್ ಯುದ್ಧದಿಂದ ತುಂಬಾ ನೊಂದು ಮನಃಶಾಂತಿಯನ್ನು ಅರಸಿಕೊಂಡು ಭಾರತಕ್ಕೆ ಬಂದಿದ್ದ ನನಗೆ ದೀಕ್ಷೆ ಪಡೆದ ನಂತರ ನನ್ನ ಮನಸ್ಸು ಹಗುರವಾಗಿದೆ ಎಂದು ಇಂಗಾನಂದಮಯಿ ಹೇಳಿದ್ದಾರೆ. ರಷ್ಯಾದ ಮಾಸ್ಕೋ … Continued

ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ : ಬಿಜೆಪಿ-ಆರ್‌ಎಲ್‌ಡಿ ಮೈತ್ರಿ ಅಂತಿಮ; ಉತ್ತರ ಪ್ರದೇಶದ ೨ ಲೋಕಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿ ಸ್ಪರ್ಧೆ-ಮೂಲಗಳು

ಲಕ್ನೋ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ರಾಷ್ಟ್ರೀಯ ಲೋಕದಳ (RLD) ಹೆಜ್ಜೆ ಹಾಕಲಿದೆ ಎಂದು ವರದಿಗಳು ತಿಳಿಸಿವೆ. ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಲಿದ್ದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ಆರ್‌ಎಲ್‌ಡಿಯೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. 2+1 ಸೂತ್ರವನ್ನು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ವರದಿಗಳು ತಿಳಿಸಿವೆ. 2+1 ಸೂತ್ರ   ಉಭಯ ಪಕ್ಷಗಳು … Continued

ಉತ್ತರಾಖಂಡ : ಅಕ್ರಮ ಮದರಸಾ ತೆರವು ವೇಳೆ ಹಿಂಸಾಚಾರದಲ್ಲಿ 4 ಸಾವು, 250 ಮಂದಿಗೆ ಗಾಯ ; ಕರ್ಫ್ಯೂ ಜಾರಿ, ಶಾಲೆಗಳು ಬಂದ್

ಡೆಹ್ರಾಡೂನ್‌ : ಗುರುವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ. ಹಾಗೂ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿ “ಕಾನೂನುಬಾಹಿರವಾಗಿ ನಿರ್ಮಿಸಲಾದ” ಮದರಸಾ ಮತ್ತು ಪಕ್ಕದ ಮಸೀದಿಯನ್ನು ಕೆಡವಿದ ನಂತರ ನಿವಾಸಿಗಳು ವಾಹನಗಳು ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ ನಂತರ ಅಧಿಕಾರಿಗಳು ಕರ್ಫ್ಯೂ ವಿಧಿಸಿದರು. ಆಸ್ಪತ್ರೆಗೆ … Continued

ಮುಂದಿನ ಲೋಕಪಾಲ ಹುದ್ದೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಆಗುವ ಸಾಧ್ಯತೆ

ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರನ್ನು ಮುಂದಿನ ಲೋಕಪಾಲರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಬುಧವಾರ ನಡೆಸಿದ ಸಭೆಯ … Continued

ಅಕ್ರಮ ಮದರಸಾ ಕೆಡವಿದ ನಂತರ ಗಲಭೆ: ಉತ್ತರಾಖಂಡ ಪಟ್ಟಣದಲ್ಲಿ ಶೂಟ್-ಅಟ್-ಸೈಟ್ ಆದೇಶ, ಇಂಟರ್ನೆಟ್ ಸ್ಥಗಿತ

ಹಲ್ದ್ವಾನಿ : ಗುರುವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದರಸಾವನ್ನು ಅಧಿಕಾರಿಗಳು ನೆಲಸಮಗೊಳಿಸಿದ ನಂತರ, ಘರ್ಷಣೆಗಳು ಭುಗಿಲೆದ್ದಿವೆ. ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಲ್ವಾನಿಯ ಬಂಭುಲ್ಪುರದಲ್ಲಿ ಶೂಟ್-ಆಟ್-ಸೈಟ್ … Continued

ಫೇಸ್‌ಬುಕ್ ಲೈವ್‌ ನಡೆಯುತ್ತಿದ್ದಾಗಲೇ ಉದ್ಧವ್‌ ಠಾಕ್ರೆ ಬಣದ ಮುಖಂಡನ ಗುಂಡಿಕ್ಕಿ ಹತ್ಯೆ..

ಮುಂಬೈ: ಆಘಾತಕಾರಿ ಘಟನೆಯಲ್ಲಿ ಶಿವಸೇನೆಯ ಉದ್ಧವ ಸೇನೆ ಬಣದ ನಾಯಕ ಅಭಿಷೇಕ ಘೋಷಲ್ಕರ್ ಅವರನ್ನು ವೈಯಕ್ತಿಕ ದ್ವೇಷದ ಕಾರಣ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಾಹಿತಿ ಪ್ರಕಾರ ಮೂರ್ನಾಲ್ಕು ಸುತ್ತಿನ ಗುಂಡಿನ ಚಕಮಕಿ ನಡೆದಿದೆ. ಘಟನೆಯ ನಂತರ, ಘೋಷಲ್ಕರ್ ಅವರನ್ನು ತಕ್ಷಣವೇ ಬೊರಿವಲಿ ಪಶ್ಚಿಮದ ಕರುಣಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು … Continued