ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸುವಂತೆ ಆಗ್ರಹಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸರ್ಕಾರಿ ನೌಕರರ ಬೃಹತ್‌ ಸಮಾವೇಶ

ನವದೆಹಲಿ: ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಭಾನುವಾರ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ನ್ಯಾಷನಲ್ ಮೂವ್‌ಮೆಂಟ್ ಫಾರ್ ಓಲ್ಡ್ ಪೆನ್ಶನ್ ಸ್ಕೀಮ್ (ಎನ್‌ಎಂಒಪಿಎಸ್) ಅಕ್ಟೋಬರ್ 1 ರಂದು ಆಯೋಜಿಸಿದ್ದ ‘ಪಿಂಚಣಿ ಶಂಖನಾದ ರ್ಯಾಲಿ’ಗೆ ಪ್ರತಿಭಟನಾಕಾರರ ಸಾಗರವೇ ನೆರೆದಿತ್ತು. ಎನ್‌ಎಂಒಪಿಎಸ್ ನಾಯಕ ವಿಜಯ್ ಕುಮಾರ್ ಬಂಧು ಅವರು , “ಕೇಂದ್ರ ಸರ್ಕಾರ ಒಪಿಎಸ್ … Continued

350 ವರ್ಷಗಳ ನಂತರ ಛತ್ರಪತಿ ಶಿವಾಜಿಯ ‘ವಾಘ್‌ ನಖ್‌ (ಹುಲಿ ಉಗುರು)’ ಆಯುಧ ೩ ವರ್ಷಗಳ ಮಟ್ಟಿಗೆ ಭಾರತಕ್ಕೆ ಮರಳುತ್ತಿದೆ..ಏನಿದರ ವಿಶೇಷತೆ..?

ಮುಂಬೈ: ಮರಾಠಾ ಸಾಮ್ರಾಜ್ಯದ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ವಾಘ್ ನಖ್, 1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ನನ್ನು ಸೋಲಿಸಲು ಶಿವಾಜಿ ಮಹಾರಾಜರು ಬಳಸಿದ ‘ಹುಲಿ ಉಗುರು’ ಆಯುಧವು ಶತಮಾನಗಳ ನಂತರ ಇದೇ ಮೊದಲ ಬಾರಿಗೆ ನವೆಂಬರ್‌ನಲ್ಲಿ ಲಂಡನ್‌ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ. ಈಸ್ಟ್ ಇಂಡಿಯಾ ಕಂಪನಿಯು 1820 ರ ದಶಕದಲ್ಲಿ ಭಾರತೀಯ … Continued

ಬಲೂಚಿಸ್ತಾನ್‌ ಅವಳಿ ಬಾಂಬ್ ಸ್ಫೋಟದಲ್ಲಿ ಭಾರತದ ಕೈವಾಡ: ಪಾಕಿಸ್ತಾನ ಆರೋಪ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶುಕ್ರವಾರ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಸಮೀಪ ಶುಕ್ರವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟದ ಘಟನೆಯಲ್ಲಿ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟವರ ಸಂಖ್ಯೆ 65ಕ್ಕೆ ಏರಿದೆ. ಇದರ ಬೆನ್ನಿಗೇ ಈ ದಾಳಿಗಳ ಹಿಂದೆ ಭಾರತದ ಬೇಹುಗಾರಿಕಾ ಸಂಸ್ಥೆ ರಾ ಕೈವಾಡ ಇದೆ ಎಂದು ಪಾಕಿಸ್ತಾನ ಒಳಾಡಳಿತ ಸಚಿವರು ಆರೋಪಿಸಿದ್ದಾರೆ. .ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯಲ್ಲಿ ಪ್ರವಾದಿ ಮಹಮದ್ … Continued

‘ರಾಮ್ ರಾಮ್ ಸರಿಯಾ ನೆ’ ಖ್ಯಾತಿ ಅಂಕಿತ್ ಬೈಯನ್ ಪುರಿಯಾ ಅವರೊಂದಿಗೆ ಸ್ವಚ್ಛತಾ ಅಭಿಯಾನ ಪಾಲ್ಗೊಂಡ ಪ್ರಧಾನಿ ಮೋದಿ | ವೀಕ್ಷಿಸಿ

ನವದೆಹಲಿ: ಕುಸ್ತಿಪಟುವಾಗಿ ಮಾರ್ಪಟ್ಟಿರುವ ಸಾಮಾಜಿಕ ಮಾಧ್ಯಮದ ಪ್ರಭಾವಿ, ‘ರಾಮ್ ರಾಮ್ ಸರಿಯಾ ನೆ’ ಖ್ಯಾತಿಯ ಅಂಕಿತ್ ಬೈಯನ್ ಪುರಿಯಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಅವರು ಹಂಚಿಕೊಂಡ ವೀಡಿಯೊದಲ್ಲಿ, ಅವರು ಅಂಕಿತ್ ಅವರೊಂದಿಗೆ ಪೊರಕೆ ತೆಗೆದುಕೊಂಡು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಇಂದು, ರಾಷ್ಟ್ರವು ಸ್ವಚ್ಛತೆಯತ್ತ ಗಮನಹರಿಸುತ್ತಿರುವಾಗ, … Continued

ದಂಪತಿಗೆ ಕನ್ನಡ ನಟ ನಾಗಭೂಷಣ ಕಾರು ಡಿಕ್ಕಿ : ಮಹಿಳೆ ಸಾವು, ಪತಿಗೆ ಗಂಭೀರ ಗಾಯ

ಬೆಂಗಳೂರು : ಕನ್ನಡ ನಟ ನಾಗಭೂಷಣ ಅವರ ಕಾರು ಬೆಂಗಳೂರಿನಲ್ಲಿ ಪಾದಚಾರಿ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವಿಗೀಡಾಗಿದ್ದಾರೆ ಹಾಗೂ ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೆಪ್ಟೆಂಬರ್ 30ರಂದು ಕೋಣನಕುಂಟೆ ಕ್ರಾಸ್ ಬಳಿ ನಟ ನಾಗಭೂಷಣ ಅವರ ಕಾರ್ ಫುಟ್‌ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪ್ರೇಮಾ ಹಾಗೂ ಕೃಷ್ಣ ದಂಪತಿಗೆ ಡಿಕ್ಕಿ ಹೊಡೆದಿದೆ. … Continued

ಗ್ಲಾಸ್ಗೋ ಗುರುದ್ವಾರಕ್ಕೆ ಭಾರತೀಯ ರಾಯಭಾರಿ ಪ್ರವೇಶ ತಡೆದ ಕೃತ್ಯ: ಖಲಿಸ್ತಾನಿ ಬೆಂಬಲಿಗನ ಕೃತ್ಯಕ್ಕೆ ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾ ಖಂಡನೆ

ನವದೆಹಲಿ: ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಂ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿರುವ ಗುರುದ್ವಾರಕ್ಕೆ ಪ್ರವೇಶಿಸದಂತೆ ಶುಕ್ರವಾರ ಖಲಿಸ್ತಾನಿ ಬೆಂಬಲಿಗರು ತಡೆದಿರುವ ಕೃತ್ಯವನ್ನು ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾ ಖಂಡಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾವು, “ಸಿಖ್ ಆರಾಧನಾ ಸ್ಥಳದ ಶಾಂತಿಯುತ ಪ್ರಕ್ರಿಯೆಗೆ ಅಡ್ಡಿಪಡಿಸುವ … Continued

ಊಟಿ ಬಳಿ ಕಂದಕಕ್ಕೆ ಬಸ್‌ ಉರುಳಿ ಬಿದ್ದು 8 ಜನರು ಸಾವು

ಉದಕಮಂಡಲಂ : ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ 55 ಪ್ರವಾಸಿಗರಿದ್ದ ಬಸ್ ಕಣಿವೆಗೆ ಉರುಳಿ ಬಿದ್ದು 8 ಪ್ರವಾಸಿಗರು ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ನೀಲಗಿರಿ ಬೆಟ್ಟದ ವ್ಯಾಪ್ತಿಯಲ್ಲಿ ಬರುವ ಕೂನೂರು ಬಳಿಯ ಊಟಿ-ಮಟ್ಟುಪಾಳ್ಯಂ ರಸ್ತೆಯ ಘಾಟ್‌ನಲ್ಲಿ ಹೆಡ್‌ಪಿನ್ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು … Continued

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ…

ನವದೆಹಲಿ: ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಭಾನುವಾರ 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 209 ರೂ.ಗಳನ್ನು ಹೆಚ್ಚಿಸಿವೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 158 ರೂ ಕಡಿತಗೊಳಿಸಿದ ಸುಮಾರು ಒಂದು ತಿಂಗಳ ನಂತರ ಬೆಲೆಯಲ್ಲಿ ಈ ಹೆಚ್ಚಳವಾಗಿದೆ. … Continued

ರಾಜಸ್ಥಾನ ವಿಧಾನಸಭೆ ಚುನಾವಣೆ : ಇಟಿಜಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ತೀವ್ರ ಹಣಾಹಣಿಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಸ್ವಲ್ಪ ಮುಂದೆ

ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಪ್ರಸ್ತುತ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ನೇತೃತ್ವದ ಸರ್ಕಾರವು ಹಿನ್ನಡೆ ಎದುರಿಸಬಹುದು, ಇದೇ ವೇಳೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಇಟಿಜಿ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಸರಳ … Continued

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ 2023 : ಇಟಿಜಿ ಚುನಾವಣಾ ಪೂರ್ವ ಸಮೀಕ್ಷೆ ; ತೀವ್ರ ಹಣಾಹಣಿಯಲ್ಲಿ ಆಡಳಿತಾರೂಢ ಬಿಜೆಪಿಗಿಂತ ಕಾಂಗ್ರೆಸ್‌ ಸ್ವಲ್ಪ ಮುಂದೆ…

ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ 2023 ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಪೂರ್ಣ ಬಹುಮತಕ್ಕಿಂತ ಸ್ವಲ್ಪ ಕಡಿಮೆ ಸ್ಥಾನ ಗಳಿಸುವ ಸಾಧ್ಯತೆಯಿದೆ, ಎದುರಾಳಿ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ದಾಟಬಹುದು ಎಂದು ಇಟಿಜಿ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಕನಿಷ್ಠ 116 ಸ್ಥಾನಗಳನ್ನು ಪಡೆಯಬೇಕು. ಸಮೀಕ್ಷೆಯ ಪ್ರಕಾರ, ಬಿಜೆಪಿ 102-110 … Continued