ಗ್ರೇಟರ್‌ ರಷ್ಯಾದ ಕನಸಿನಲ್ಲಿರುವ ಪುಟಿನ್ ಮಹಾತ್ವಾಕಾಂಕ್ಷೆ ಉಕ್ರೇನ್‌ಗೆ ಯಾಕೆ ನಿಲ್ಲುವುದಿಲ್ಲ..?

ಉಕ್ರೇನ್‌ ಮೇಲೆ ಮಾಡುತ್ತಿರುವ ಯುದ್ಧದಿಂದಾಗಿ ರಷ್ಯಾವು ಪಶ್ಚಿಮದಿಂದ ನಿರ್ಬಂಧಗಳು ಮತ್ತು ಬೆದರಿಕೆಗಳನ್ನು ಎದುರಿಸುತ್ತಿದೆ, ಆದರೆ ವಿಶ್ವದ ಭದ್ರತೆ ಮತ್ತು ರಾಜತಾಂತ್ರಿಕತೆ ಕುರಿತಾದ ತಜ್ಞರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹಾತ್ವಾಕಾಂಕ್ಷೆ ಉಕ್ರೇನ್‌ಗೆ ನಿಲ್ಲದೆ ಮುಂದುವರಿಯಬಹುದು ಎಂದು ಹೇಳಿದ್ದಾರೆ. ಪುಟಿನ್ ಅವರ ಇತ್ತೀಚಿನ ಭಾಷಣಗಳು ಮತ್ತು ಹೇಳಿಕೆಗಳು ಉಕ್ರೇನ್ ಎಂಬುದು ರಷ್ಯಾದ ಹಿಂದಿನ ವೈಭವವನ್ನು ಪುನಃಸ್ಥಾಪಿಸುವ ಅವರ ದೊಡ್ಡ … Continued

ರಿಯಾ ಪಿಳ್ಳೈ ವಿರುದ್ಧ ಲಿಯಾಂಡರ್ ಪೇಸ್ ಕೌಟುಂಬಿಕ ದೌರ್ಜನ್ಯ ಸಾಬೀತು: ನ್ಯಾಯಾಲಯ

ಮುಂಬೈ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತನ್ನ ಮಾಜಿ ಸಂಗಾತಿ ರಿಯಾ ಪಿಳ್ಳೈ ವಿರುದ್ಧ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ವಿರುದ್ಧ ಅವರೊಂದಿಗೆ ಲಿವ್‌ ಇನ್‌ ಸಂಬಂಧದಲ್ಲಿದ್ದ ರಿಯಾ ಪಿಳ್ಳೈ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮುಂಬೈನ ಮೆಟ್ರೋಪಾಲಿಟನ್ … Continued

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಮೊದಲ ಬ್ಯಾಚ್ ರೊಮೇನಿಯಾ ಮೂಲಕ ಸ್ಥಳಾಂತರ

ನವದೆಹಲಿ: ಭಾರತೀಯ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಶುಕ್ರವಾರ ಚೆರ್ನಿವ್ಟ್ಸಿಯಿಂದ ಉಕ್ರೇನ್-ರೊಮೇನಿಯಾ ಗಡಿಗೆ ತೆರಳಿದ್ದು, ಅಲ್ಲಿಂದ ಅವರನ್ನು ದೆಹಲಿಗೆ ವಾಪಸ್ ಕರೆತರಲಾಗುವುದು ಎಂದುವರದಿಗಳು ತಿಳಿಸಿವೆ. ಹಂಗೇರಿ, ರೊಮೇನಿಯಾ ಮತ್ತು ಪೋಲೆಂಡ್‌ಗೆ ಭಾರತೀಯರ ಸಾಗಣೆಗೆ ಅನುಕೂಲವಾಗುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಯುದ್ಧ ಪೀಡಿತ ಉಕ್ರೇನ್‌ನ ಪಶ್ಚಿಮ ಭಾಗದಲ್ಲಿರುವ ಎಲ್ವಿವ್ ಮತ್ತು ಚೆರ್ನಿವ್ಟ್ಸಿ ಪಟ್ಟಣಗಳಲ್ಲಿ ಶಿಬಿರ ಕಚೇರಿಗಳನ್ನು ಸ್ಥಾಪಿಸಿದೆ. … Continued

ಐಪಿಎಲ್‌-2022 ಕ್ರಿಕಟ್‌ ಪಂದ್ಯಾವಳಿ ಮಾರ್ಚ್ 26 ರಿಂದ ಪ್ರಾರಂಭ, 2 ನಗರಗಳಲ್ಲಿ 70 ಪಂದ್ಯಗಳು

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2022 ಮಾರ್ಚ್ 26 ರಿಂದ ಆರಂಭವಾಗಲಿದೆ ಹಾಗೂ ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶುಕ್ರವಾರ ಪ್ರಕಟಿಸಿದೆ. ಐಪಿಎಲ್‌-2022 ರಲ್ಲಿ 10 ತಂಡಗಳ ಈ ಸೀಸನ್ ಮುಂಬೈ ಮತ್ತು ಪುಣೆಯ ನಾಲ್ಕು ಸ್ಥಳಗಳಲ್ಲಿ 70 ಲೀಗ್ ಹಂತದ ಪಂದ್ಯಗಳು ಸೇರಿದಂತೆ … Continued

ಉಕ್ರೇನಿನ ಪಶ್ಚಿಮ ಭಾಗದ ನೆರೆಯ ದೇಶಗಳಿಂದ ಭಾರತೀಯರನ್ನು ಕರೆತರಲು ಪ್ರಯತ್ನ: ಹೊಸ ಮಾರ್ಗ ಕಂಡುಕೊಂಡ ಭಾರತ

ನವದೆಹಲಿ: ರಷ್ಯಾ ಅತಿಕ್ರಮಣದಿಂದ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತದ ಪ್ರಜೆಗಳನ್ನು ಕರೆತರಲು ಕೇಂದ್ರ ಸರ್ಕಾರ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನು ಪಶ್ಚಿಮ ಗಡಿ ಮೂಲಕ ಅದರ ನೆರೆಯ ದೇಶಗಳಿಗೆ ಕರೆತಂದು, ಅಲ್ಲಿಂದ ವಿಮಾನಗಳಲ್ಲಿ ಭಾರತಕ್ಕೆ ಕರೆತರಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ. ಯುದ್ಧದಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ವಿಮಾನಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದರ ವೆಚ್ಚವನ್ನು ಸರ್ಕಾರವೇ … Continued

ಇದೇನು ಸೋಜಿಗ..? : ಪಶ್ಚಿಮ ಬಂಗಾಳದಲ್ಲಿ ಮಧ್ಯರಾತ್ರಿಗೆ ವಿಧಾನಸಭೆ ಅಧಿವೇಶನ ಆರಂಭ..! ಹೀಗಾದರೆ ದೇಶದ ಇತಿಹಾಸದಲ್ಲೇ ಮೊದಲು..!!

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿವೇಶನವು ಮಾರ್ಚ್ 7 ರ  ರಾತ್ರಿಯ  2 ಗಂಟೆಗೆ ಪ್ರಾರಂಭವಾಗಲಿದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಅವರು ಸಹಿ ಮಾಡಿರುವ ಟಿಪ್ಪಣಿಯಲ್ಲಿ ಸರ್ಕಾರಕ್ಕೆ ಕಳುಹಿಸಲಾಗಿದೆ..! ಫೆಬ್ರವರಿ 17ರಂದು ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯಪಾಲರಿಗೆ ಕಳುಹಿಸಿದ ಟಿಪ್ಪಣಿಯೊಂದಿಗೆ ಮಾರ್ಚ್ 7 ರಂದು ಮಧ್ಯಾಹ್ನ 2 ಗಂಟೆಗೆ ವಿಧಾನಸಭೆ ಅಧಿವೇಶನವನ್ನು ಕರೆಯುವಂತೆ ಶಿಫಾರಸು … Continued

ಹಿಜಾಬ್ ವಿವಾದ: ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ 2022ರ ಫೆಬ್ರವರಿ 5ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಮುಕ್ತಾಯಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಫೆಬ್ರವರಿ 10, 2022 ರಂದು ವಿಚಾರಣೆಯನ್ನು ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ.ಎಂ. … Continued

ಬಂಧಿತ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮುಂಬೈ ಆಸ್ಪತ್ರೆಗೆ ದಾಖಲು

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬುಧವಾರ ಬಂಧಿತರಾಗಿರುವ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ವೈದ್ಯರ ಸಲಹೆಯಂತೆ ಎನ್ ಸಿಪಿ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕೃತ ದೃಢೀಕರಣವಿಲ್ಲ. … Continued

1988ರ ರೋಡ್ ರೇಜ್ ಪ್ರಕರಣದಲ್ಲಿ ಹೆಚ್ಚಿನ ಶಿಕ್ಷೆ ನೀಡಬೇಡಿ: ಸುಪ್ರೀಂ ಕೋರ್ಟ್‌ಗೆ ನವಜೋತ್ ಸಿದ್ದು ಮನವಿ

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು 33 ವರ್ಷಗಳ ಹಿಂದಿನ ರಸ್ತೆ ರೋಷ (road rage) ಪ್ರಕರಣದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವಂತೆ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ತಮ್ಮ ವಿರುದ್ಧದ ರಸ್ತೆ ರೋಷ (road rage) ಪ್ರಕರಣದಲ್ಲಿ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ … Continued

ಭಾರತದಲ್ಲಿ ಮತ್ತಷ್ಟು ಕುಸಿದ ದೈನಂದಿನ ಕೋವಿಡ್‌ ಸೋಂಕಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರಗತಿಯಲ್ಲಿ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 13,166 ಹೊಸ ಕೋವಿಡ್ ಸೋಂಕು ಪತ್ತೆಯಾಗಿದ್ದು, 302 ಮಂದಿಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈಗ ದೇಶದಲ್ಲಿ ಒಟ್ಟು 1,34,235 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈವರೆಗೆ ಕಾಣಿಸಿಕೊಂಡಿರುವ ಒಟ್ಟು ಸೋಂಕಿತರಲ್ಲಿ ಶೇಕಡಾ 0.31ರಷ್ಟು … Continued