ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂ ಆಗಿ, ದೇವೇಂದ್ರ ಫಡ್ನವಿಸ್ ಡೆಪ್ಯುಟಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅಧಿಕಾರ ಸ್ವೀಕರಿಸಿದ್ದಾರೆ. ದಿಢೀರ್‌ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್​ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ಇಂದು, ಗುರುವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ಏಕನಾಥ್​ ಶಿಂಧೆ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸುವ ಮುನ್ನ ಮಾತನಾಡಿದ ಶಿಂಧೆ, ರಾಜ್ಯದ ಜನರ ಆಕಾಂಕ್ಷೆಗೆ ತಕ್ಕಂತೆ ಸರ್ಕಾರ … Continued

ಮಣಿಪುರದ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಭೂಕುಸಿತ: 7 ಮಂದಿ ಸಾವು, 45 ಮಂದಿ ನಾಪತ್ತೆ

ಇಂಫಾಲ: ಮಣಿಪುರದ ನೋನಿ ಜಿಲ್ಲೆಯಲ್ಲಿ ಗುರುವಾರ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಭಾರೀ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ. ಈಶಾನ್ಯ ಫ್ರಂಟ್‌ ರೈಲ್ವೆ ವಲಯದ ಪ್ರಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಜ್ಯ ಸರ್ಕಾರ ಮತ್ತು ರೈಲ್ವೇ ಕಾರ್ಯಕರ್ತರು ನೋನಿಯಲ್ಲಿ … Continued

ಇಂದು ಸಂಜೆ 7:30ಕ್ಕೆ ಗಂಟೆಗೆ ಮಹಾರಾಷ್ಟ್ರ ನೂತನ ಸಿಎಂ ಆಗಿ ಏಕನಾಥ ಶಿಂಧೆ ಪ್ರಮಾಣ ವಚನ: ಫಡ್ನವಿಸ್ ನಿರ್ಧಾರಕ್ಕೆ ಎಂವಿಎ ಥಂಡಾ..!

ಮುಂಬೈ: ಹೊಸ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕೊನೆಗೂ ಇತ್ಯರ್ಥಗೊಂಡಿದ್ದು, ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಇಂದು ಸಂಜೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೊದಲು ದೇವೇಂದ್ರ ಫಡ್ನವಿಸ್‌ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಮುಂದಿನ ರಾಜಕೀಯ ಲೆಕ್ಕಾಚಾರದ ಬೆಳವಣಿಗೆಯಲ್ಲಿ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ … Continued

ಮಹಾರಾಷ್ಟ್ರಕ್ಕೆ ದೇವೇಂದ್ರ ಫಡ್ನವೀಸ್ ಸಿಎಂ, ಏಕನಾಥ್ ಶಿಂಧೆ ಡೆಪ್ಯುಟಿ ಸಿಎಂ: ಮೂಲಗಳು

ಮುಂಬೈ: ಬಂಡಾಯದಲ್ಲಿ ಶಿವಸೇನೆಯಲ್ಲಿ ಹೆಚ್ಚಿನ ಶಾಸಕರನ್ನು ಕಳೆದುಕೊಂಡ ನಂತರ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮರಳಲು ಸಿದ್ಧರಾಗಿದ್ದಾರೆ. ಬಂಡಾಯದ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫಡ್ನವಿಸ್ ಮತ್ತು ಶಿಂಧೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು … Continued

2035ರಲ್ಲಿ ಭಾರತದ ನಗರಗಳ ಜನಸಂಖ್ಯೆ 67.5 ಕೋಟಿಗೆ ತಲುಪಲಿದೆ, ಚೀನಾ ನಂತರ ಎರಡನೇ ಸ್ಥಾನ: ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಭಾರತದ ನಗರಗಳ ಜನಸಂಖ್ಯೆಯು 2035 ರಲ್ಲಿ 675 ಮಿಲಿಯನ್ (67.5 ಕೋಟಿ) ತಲುಪಲಿದೆ ಎಂದು ಅಂದಾಜಿಸಲಾಗಿದೆ, ಇದು ಚೀನಾದ 100 ಕೋಟಿಗೆ ಹೋಲಿಸಿದರೆ ಎರಡನೇ ಅತಿ ಹೆಚ್ಚು ಎಂದು ವಿಶ್ವಸಂಸ್ಥೆ ವರದಿಯಲ್ಲಿ ತಿಳಿಸಿದೆ, ಕೋವಿಡ್‌-19 ಸಾಂಕ್ರಾಮಿಕದ ನಂತರ, ಜಾಗತಿಕ ನಗರ ಜನಸಂಖ್ಯೆಯನ್ನು ಗಮನಿಸಿದೆ. 2050 ರ ವೇಳೆಗೆ ಇನ್ನೂ 2.2 ಶತಕೋಟಿಗಳಷ್ಟು ಬೆಳೆಯುವ ಹಾದಿಯಲ್ಲಿದೆ. … Continued

ಉದ್ಧವ್ ಠಾಕ್ರೆ ರಾಜೀನಾಮೆಯಿಂದ ಬಹುಮತ ಪರೀಕ್ಷೆ ರದ್ದು; ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಮುಂದೂಡಿಕೆ

ಮುಂಬೈ: ರಾಜ್ಯಪಾಲರ ಆದೇಶದಂತೆ ಗುರುವಾರ ನಿಗದಿಯಾಗಿದ್ದ ವಿಶೇಷ ಅಧಿವೇಶನವನ್ನು ಈಗ ಕರೆಯುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು ರಾಜ್ಯದ ಎಲ್ಲ ಶಾಸಕರಿಗೆ ತಿಳಿಸಿದ್ದಾರೆ. ಬುಧವಾರ ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದ್ಧವ್ ಠಾಕ್ರೆ ಸಚಿವ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ವಿಶ್ವಾಸ ಮತದ ಏಕೈಕ ಅಜೆಂಡಾದೊಂದಿಗೆ ವಿಶೇಷ … Continued

2 ವರ್ಷಗಳ ನಂತರ ಅಮರನಾಥ ಯಾತ್ರೆ ಪ್ರಾರಂಭ, ಸ್ಥಳದಲ್ಲಿ ಭಾರಿ ಭದ್ರತಾ ವ್ಯವಸ್ಥೆ

ನವದೆಹಲಿ: ಎರಡು ವರ್ಷಗಳ ನಂತರ ಅಮರನಾಥ ಯಾತ್ರೆ ಇಂದು, ಗುರುವಾರದಿಂದ ಆರಂಭವಾಗಲಿದೆ. 43 ದಿನಗಳ ಯಾತ್ರೆ ಮೇಲೆ ಭೈಯೋತ್ಪಾದಕರ ದಾಳಿ ತಡೆಯಲು ಗರಿಷ್ಠ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನು ಒಳಗೊಂಡಂತೆ ಉದ್ದೇಶೀತ ಹತ್ಯೆಗಳು ಇತ್ತೀಚೆಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಕ್ರಮಗಳು … Continued

ದೇವೇಂದ್ರ ಫಡ್ನವಿಸ್ ಮತ್ತೆ ಮಹಾರಾಷ್ಟ್ರ ಸಿಎಂ ಆಗಬಹುದು, ಜುಲೈ 1ರಂದು ಪ್ರಮಾಣ ವಚನ ಸ್ವೀಕಾರ ಸಾಧ್ಯತೆ: ವರದಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯದಲ್ಲಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜುಲೈ 1 ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಸೂಚಿಸಿವೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಬಹುಮತ ಪರೀಕ್ಷೆಗೆ … Continued

ಭೀಕರವಾಗಿ ಹತ್ಯೆಗೀಡಾದ ಕನ್ಹಯ್ಯಾ ಲಾಲ್ ದೇಹಕ್ಕೆ 26 ಬಾರಿ, ಕುತ್ತಿಗೆಗೆ 7-8 ಬಾರಿ ಇರಿಯಲಾಗಿತ್ತು….!

ಉದಯಪುರ: ರಾಜಸ್ಥಾನದ ಉದಯ್‌ಪುರ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಂ ಮೂಲಭೂತವಾದಿಗಳಿಂದ ಹತ್ಯೆಗೀಡಾದ ಮೃತ ಕನ್ಹಯ್ಯಾ ಲಾಲ್‌ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ದೇಹದ ಮೇಲೆ ಕುತ್ತಿಗೆಯಿಂದ ಭುಜದವರೆಗೆ 26 ಬಾರಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹರಿತವಾದ ಆಯುಧಗಳಿಂದ ಹಲ್ಲೆಗೊಳಗಾದ ಕನ್ಹಯ್ಯಾ ಲಾಲ್ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ವರದಿಗಳ ಪ್ರಕಾರ, … Continued

ಉದಯಪುರ ಟೈಲರ್ ಹತ್ಯೆ: ನಿಷೇಧಾಜ್ಞೆ ನಡುವೆ ಕನ್ಹಯ್ಯಾ ಲಾಲ್ ಅಂತ್ಯ ಸಂಸ್ಕಾರಕ್ಕೆ ಪಾಲ್ಗೊಂಡ ಸಾವಿರಾರು ಜನ

ಉದಯಪುರ: ಟೈಲರ್‌ ಕನ್ಹಯ್ಯಾ ಲಾಲ್ ಅವರ ಕ್ರೂರ ಹತ್ಯೆಯು ಉದಯಪುರದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಿ ನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದರೂ ಸಹ ಹೆಚ್ಚಿನ ಸಂಖ್ಯೆಯ ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ನಿಷೇಧಾಜ್ಞೆಗಳ ಹೊರತಾಗಿಯೂ ನೂರಾರು ಜನರು ಲಾಲ್ ಅವರ ಅಂತ್ಯಕ್ರಿಯೆಗೆ ಜಮಾಯಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡಲು ಶವಯಾತ್ರೆಯ ವೇಳೆ ಹಲವು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು … Continued