2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ: ಪ್ರಿಯಾಂಕಾ ಗಾಂಧಿ ಘೋಷಣೆ

ನವದೆಹಲಿ: ಸದ್ಯಕ್ಕೆ ಎಸ್‌ಪಿ ಅಥವಾ ಬಿಎಸ್‌ಪಿಯೊಂದಿಗೆ ಯಾವುದೇ ಚುನಾವಣಾ ಪೂರ್ವ ಮೈತ್ರಿಯನ್ನು ತಳ್ಳಿಹಾಕಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಎಲ್ಲಾ 403 ಸ್ಥಾನಗಳಲ್ಲಿ ತನ್ನದೇ ಆದ ಕಾರ್ಯಕರ್ತರನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ. ಭಾನುವಾರ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಕಾಂಗ್ರೆಸ್ ಪಕ್ಷದ ‘ಪ್ರತಿಜ್ಞಾ ಸಮ್ಮೇಳನ-ಲಕ್ಷ್ಯ 2022’ … Continued

ಸೇನೆಗೆ ಮತ್ತಷ್ಟು ಬಲ..ರಷ್ಯಾದಿಂದ ಭಾರತಕ್ಕೆ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಪೂರೈಕೆ ಆರಂಭ: ಎಸ್​-400 ಸಾಮರ್ಥ್ಯದ ಮಾಹಿತಿ ಇಲ್ಲಿದೆ

ನವದೆಹಲಿ: ಶತ್ರುದೇಶಗಳಿಂದ ಬರುವ ಯುದ್ಧವಿಮಾನಗಳು ಮತ್ತು ಕ್ರೂಸ್​ ಕ್ಷಿಪಣಿಗಳನ್ನು ಮುಂಚಿತವಾಗಿಯೇ ಗುರುತಿಸಿ ಹೊಡೆದುರುಳಿಸಬಲ್ಲ ಭೂಮಿಯಿಂದ ಆಗಸಕ್ಕೆ ಹಾರುವ ಎಸ್​-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಈ ಮೊದಲಿನ ಒಪ್ಪಂದದಂತೆಯೇ ಭಾರತಕ್ಕೆ ರಷ್ಯಾ ಪೂರೈಸುತ್ತಿದೆ. ಮೊದಲ ಹಂತದ ಉಪಕರಣಗಳು ಭಾರತ ತಲುಪಿವೆ ಎಂದು ಮಿಲಿಟರಿ ಟೆಕ್ನಿಕಲ್ ಕೊಆಪರೇಷನ್ ಸಂಸ್ಥೆಯ ನಿರ್ದೇಶಕ ಡ್ಮಿತ್ರಿ ಶುಗೇವ್ ದುಬೈ ಏರ್​ಶೋನಲ್ಲಿ ಹೇಳಿದ್ದಾರೆ. ಶತ್ರುದೇಶಗಳಿಂದ … Continued

ಗಡ್ಚಿರೋಲಿ ಎನ್‌ಕೌಂಟರ್‌ನಲ್ಲಿ 26 ನಕ್ಸಲರ ಜೊತೆ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಕೂಡ ಹತ

ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ 26 ನಕ್ಸಲರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯೂ ಆಗಿರುವ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಕೂಡ ಸೇರಿದ್ದಾರೆ ಎಂದು ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಭಾನುವಾರ ಖಚಿತಪಡಿಸಿದ್ದಾರೆ. ನಿನ್ನೆ ಗಡ್‌ಚಿರೋಲಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 26 ನಕ್ಸಲರು ಮೃತಪಟ್ಟಿದ್ದಾರೆ – ಇದರಲ್ಲಿ 20 … Continued

ಎಮ್ಮೆ ಹಾಲು ಕೊಡ್ತಿಲ್ಲ, ಯಾರೋ ಮಾಟ ಮಾಡಿದ್ದಾರೆಂದು ಠಾಣೆಗೆ ಬಂದು ದೂರು ನೀಡಿದ ರೈತ…!

ನವದೆಹಲಿ: ಒಂದು ವಿಲಕ್ಷಣ ಘಟನೆಯಲ್ಲಿ ಮಧ್ಯಪ್ರದೇಶದ ಭಿಂದ್‌ನ ರೈತ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲವೆಂದು ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿದ್ದಾನೆ…! ತನ್ನ ಅಸಾಮಾನ್ಯ ದೂರಿನಲ್ಲಿ ಈ ರೈತ ಯಾರೋ ವಾಮಾಚಾರ ಮಾಡಿದ್ದರಿಂದ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ತಿಳಿಸಿದ್ದಾನೆ..!! ಶನಿವಾರ ನಯಗಾಂವ್ ಗ್ರಾಮದಲ್ಲಿ ರೈತ ಪೊಲೀಸರಿಂದ ನೆರವು ಕೋರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continued

ಸಿಬಿಐ, ಇಡಿ ಮುಖ್ಯಸ್ಥರ ಅಧಿಕಾರಾವಧಿ 2ರಿಂದ 5 ವರ್ಷಗಳ ವರೆಗೆ ವಿಸ್ತರಿಸಿ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳ ವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿದೆ. ಎರಡೂ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಪ್ರಸ್ತುತ ಅಧಿಕಾರಾವಧಿ ಎರಡು ವರ್ಷಗಳು. ಅವರ ಅಧಿಕಾರಾವಧಿ ಮುಗಿಯುವ ಮೊದಲು ಅವರನ್ನು ತೆಗೆದುಹಾಕಲಾಗದಿದ್ದರೂ, ಸರ್ಕಾರವು ವಿಸ್ತರಣೆಯನ್ನು ನೀಡಬಹುದು. ತಿದ್ದುಪಡಿಯ ಪ್ರಕಾರ, ಸಿಬಿಐ ಅಥವಾ … Continued

ಎನ್‌ಸಿಎ: ರಾಹುಲ್ ದ್ರಾವಿಡ್ ಜಾಗಕ್ಕೆ ವಿವಿಎಸ್ ಲಕ್ಷ್ಮಣ್ ಆಯ್ಕೆ ಖಚಿತಪಡಿಸಿದ ಗಂಗೂಲಿ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ ಭಾನುವಾರ ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಲಕ್ಷ್ಮಣ್ ಅವರು ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಸುದ್ದಿ ಸಂಸ್ಥೆಯೊಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು … Continued

ಅದೇನ್‌ ಭಯ-ಭಕ್ತಿ..: ದೇವರ ಪಾದಮುಟ್ಟಿ ನಮಸ್ಕರಿಸಿ ಅದೇ ದೇವರ ಹುಂಡಿ ಕದ್ದ ಕಳ್ಳ…! ಈ ವಿಡಿಯೊ ವೀಕ್ಷಿಸಿ

ಥಾಣೆ: ದೇವಸ್ಥಾನದಲ್ಲಿ ಹುಂಡಿ ಕದಿಯಲು ಬಂದಿದ್ದ ಕಳ್ಳನೊಬ್ಬ ಕಳ್ಳತನಕ್ಕೂ ಮುನ್ನ ಆತ ಮಾಡಿದ ಕೆಲಸಕ್ಕೆ ಅಚ್ಚರಿಪಡಲೇಬೇಕು.. ಕಳ್ಳನಿಗೂ ಭಯ-ಭಕ್ತಿ ಇದೆಯಾ ಎಂದು ಕೇಳಬೇಡಿ. ಯಾಕೆಂದರೆ ಈ ಕಳ್ಳ ಹುಂಡಿ ಕದಿಯುವಾಗ ದೇವರ ಪಾದ ಮುಟ್ಟಿ ನಮಸ್ಕರಿಸಿ ನಂತರ ಅದೇ ದೇವರ ಹುಂಡಿ ಕದ್ದಿದ್ದಾನೆ..! ಈ ದೃಶ್ಯ ದೇಗುಲದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ. … Continued

ಪಂಜಾಬ್ ಚುನಾವಣೆಯಲ್ಲಿ ನಟ ಸೋನು ಸೂದ್ ಸೋದರಿ ಸ್ಪರ್ಧೆ: ಆದ್ರೆ ಪಕ್ಷ ಯಾವುದೆಂದು ಸಸ್ಪೆನ್ಸ್

ಚಂಡೀಗಡ:: ಬಾಲಿವುಡ್ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮೊಗಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಟ ಸೂದ್‌ ಈ ಕುರಿತು ಘೋಷಣೆ ಮಾಡಿದ್ದು, ಆದರೆ ಅವರು ಯಾವ ಪಕ್ಷ ಸೇರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. “ಮಾಳವಿಕಾ ರೆಡಿ. ಜನರ ಸೇವೆಗೆ ಅವರ ಬದ್ಧತೆ … Continued

1.5 ಕೋಟಿ ರೂ. ಮೋಸ ಮಾಡಿದ ಆರೋಪ: ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ, ಇತರರ ವಿರುದ್ಧ ದೂರು​ ದಾಖಲು

1.5 ಕೋಟಿ ರೂ. ಮೋಸ ಮಾಡಿದ ಆರೋಪ:ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ವಿರುದ್ಧ ದೂರು​ ದಾಖಲು ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದಲ್ಲಿ ಅವರ ಪತಿ ರಾಜ್​ ಕುಂದ್ರಾ (Raj Kundra) ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದ ಬೆನ್ನಿಗೇ ಈಗ … Continued

ಭಾರತದ ಮೊದಲ ಓಪನ್ ಏರ್ ರೂಫ್‌ಟಾಪ್ ಜಿಯೋ ಡ್ರೈವ್-ಇನ್ ಥಿಯೇಟರ್ ಆರಂಭ..ಕಾರಲ್ಲೇ ಕುಳಿತು ಸಿನೆಮಾ ನೋಡ್ಬಹುದು…!

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ಭಾರತದಲ್ಲಿ ಮೊಟ್ಟ ಮೊದಲ ತೆರೆದ ಛಾವಣಿಯ ಡ್ರೈವ್-ಇನ್ ಚಲನಚಿತ್ರ ಮಂದಿರವನ್ನು ಉದ್ಘಾಟಿಸಲಾಗಿದೆ. ಇದು ದೇಶದ ಮೊದಲ ಓಪನ್ ಥಿಯೇಟರ್ ಆಗಿದ್ದು, ಜಿಯೋ ವರ್ಲ್ಡ್ ಡ್ರೈವ್ ಇನ್ ಮಾಲ್‍ನಲ್ಲಿರುವ ಜಿಯೋ ಡ್ರೈವ್ ಇನ್ ಥಿಯೇಟರ್ ಭಾರತದ ದೊಡ್ಡ ಪರದೆ ಹೊಂದಿದ ಥಿಯೇಟರ್‌‌ಗಳಲ್ಲಿ ಒಂದಾಗಿದೆ. ಕೊರೊನಾ … Continued