ಮುಂಬೈ ಕರಾವಳಿಯಲ್ಲಿ ಕ್ರೂಸ್‌ನಲ್ಲಿ ರೇವ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ; ಸೂಪರ್‌ ಸ್ಟಾರ್‌ ನಟನ ಪುತ್ರ ಸೇರಿ 10 ಜನರ ಬಂಧನ

ಮುಂಬೈ: ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ ಸಿಬಿ)ದವರು ಮುಂಬೈ ಕರಾವಳಿಯಲ್ಲಿ ಕ್ರೂಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ ಸೂಪರ್‌ ಸ್ಟಾರ್ ನಟನ ಪುತ್ರ ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಖಚಿತ ಸುಳಿವು ಪಡೆದ ನಂತರ, ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರ ಎನ್‌ಸಿಬಿ ಅಧಿಕಾರಿಗಳು … Continued

ಉತ್ತರಾಖಂಡದ ಹಿಮಪಾತ: ಕಾಣೆಯಾದ ಐವರಲ್ಲಿ ನಾಲ್ವರು ನೌಕಾಪಡೆ ಪರ್ವತಾರೋಹಿಗಳ ಮೃತದೇಹ ಪತ್ತೆ

ನವದೆಹಲಿ: ಉತ್ತರಾಖಂಡದ ಪರ್ವತದ ಮೇಲೆ ಶುಕ್ರವಾರ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳಲ್ಲಿ ನಾಲ್ವರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಲೆಫ್ಟಿನೆಂಟ್ ಸಿಡಿಆರ್ ರಜನಿಕಾಂತ್ ಯಾದವ್, ಲೆಫ್ಟಿನೆಂಟ್ ಸಿಡಿಆರ್ ಯೋಗೀಶ್ ತಿವಾರಿ, ಲೆಫ್ಟಿನೆಂಟ್ ಸಿಡಿಆರ್ ಅನಂತ್ ಕುಕ್ರೆಟಿ ಮತ್ತು ಹರಿ ಓಂ ಅವರ ಶವಗಳನ್ನು ಚಮೋಲಿಯಿಂದ ಶನಿವಾರ ಪತ್ತೆಹಚ್ಚಲಾಗಿದೆ ಎಂದು ಭಾರತೀಯ ನೌಕಾಪಡೆ ಟ್ವೀಟ್ … Continued

ಲಡಾಕಿನ ಲೇಹದಲ್ಲಿ ಜಗತ್ತಿನ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜದ ಅನಾವರಣ

ನವದೆಹಲಿ: ಖಾದಿ ಬಟ್ಟೆಯಲ್ಲಿ ರಚಿಸಲಾದ ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಮಹಾತ್ಮ ಗಾಂಧೀಜಿಯವರ 152ನೇ ಜನ್ಮದಿನವಾದ ಅಕ್ಟೋಬರ್‌ 2ರಂದು ಲಡಾಕಿನ ಲೇಹದಲ್ಲಿ ಅನಾವರಣಗೊಳಿಸಲಾಯಿತು. ಲಡಾಕ್ ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ. ಮಾಥುರ್ ನೂತನ ರಾಷ್ಟಧ್ವಜವನ್ನು ಅರಳಿಸಿದರು. 225 ಅಡಿ ಉದ್ದ ಹಾಗೂ 150 ಅಡಿ ಅಗಲದ ಈ ತ್ರಿವರ್ಣ ಧ್ವಜವು 1 ಸಾವಿರ ಕೆ.ಜಿ. ಭಾರವಿದೆ. … Continued

ದೆಹಲಿ ವಿಮಾನ ನಿಲ್ದಾಣದಲ್ಲಿ ವಿಐಪಿ ಲಾಂಜ್‌ನಲ್ಲಿ ಜ್ಯೂಸ್ ಕುಡಿದು ಆಹಾರ ತಿಂದು ಎಂಜಾಯ್‌ ಮಾಡಿದ ಮಂಗಣ್ಣ..ವೀಕ್ಷಿಸಿ

ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಲಾಂಜ್ ನಲ್ಲಿ ಮಂಗವೊಂದರ ವಿಡಿಯೋ ಆನ್ ಲೈನ್ ನಲ್ಲಿ ಹರಿದಾಡಿದೆ. ವಿಮಾನ ನಿಲ್ದಾಣದಲ್ಲಿ ಜ್ಯೂಸ್ ಮಂಗ ಹೊರಡುವ ಮುನ್ನ ಕೌಂಟರ್ ನಿಂದ ಆಹಾರ ಸಹ ಸೇವನೆ ಮಾಡಿದೆ. ವಿಡಿಯೊದಲ್ಲಿ, ಕೋತಿಯು ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿರುವ ಬಾರ್ ಕೌಂಟರ್‌ನಲ್ಲಿ ಹಣ್ಣಿನ ರಸವನ್ನು ಕುಡಿಯುತ್ತಿರುವುದು ಕಂಡುಬಂದಿದೆ. ಸ್ವಲ್ಪ ಆಹಾರ … Continued

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ: ಅಕ್ಟೋಬರ್‌ 3ರಿಂದಲೇ ಭತ್ತ ಖರೀದಿಗೆ ಗ್ರೀನ್ ಸಿಗ್ನಲ್..

ನವದೆಹಲಿ : ಪಂಜಾಬ್​, ಹರಿಯಾಣ ರೈತರ ಪ್ರತಿಭಟನೆಗೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ನಾಳೆಯಿಂದಲೇ ಭತ್ತ (Paddy) ಖರೀದಿಗೆ ಗ್ರೀನ್​ ಸಿಗ್ನಲ್ ನೀಡಿದೆ. ಭತ್ತ ಹಾಗೂ ರಾಗಿ ಖರೀದಿಗೆ ಅಕ್ಟೋಬರ್​ 11ರಿಂದ ಚಾಲನೆ ನೀಡಲಾಗುತ್ತದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ, ಪಂಜಾಬ್​ ಹಾಗೂ ಹರಿಯಾಣದಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆಗೆ … Continued

ಆಗಸ್ಟ್‌ ತಿಂಗಳಲ್ಲೇ ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ನಿಷೇಧಿಸಿದ ವಾಟ್ಸಾಪ್‌..!

ನವದೆಹಲಿ: ‌ಹೊಸ ಐಟಿ ನಿಯಮ ಜಾರಿಯಾದ ಬೆನ್ನಲ್ಲೇ ಭಾರತೀಯರ 20 ಲಕ್ಷ ಫೋನ್ ನಂಬರ್ ಗಳನ್ನು ವಾಟ್ಸಾಪ್‌ ನಿಷೇಧಿಸಿದೆ. ಸುಳ್ಳು ಸುದ್ದಿ, ನಕಲಿ ವಿಡಿಯೋ ಗಳನ್ನು ಹರಿಬಿಟ್ಟಿ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಮೇ 26 ರಂದು ಹೊಸ ಐಟಿ ನಿಯಮಗಳು ಜಾರಿಗೊಳಿಸಲಾಗಿದೆ. ಆ ಬಳಿಕ ದೇಶದಲ್ಲಿರುವ 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು … Continued

ಸಂಬಂಧ ಸಾಬೀತಿಗೆ ಇತರೆ ಸಾಕ್ಷ್ಯಗಳಿದ್ದರೆ ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಆದೇಶಿಸುವಂತಿಲ್ಲ: ಸುಪ್ರೀಂಕೋರ್ಟ್

ನವದೆಹಲಿ: ನ್ಯಾಯಾಲಯಗಳು ಯಾವುದೇ ವ್ಯಕ್ತಿಯನ್ನು ಡಿಎನ್‌ಎ ಪರೀಕ್ಷೆಗೆ ಯಾಂತ್ರಿಕವಾಗಿ ಆದೇಶಿಸಬಾರದು. ಮಹತ್ವವಿರುವ ಅರ್ಹ ಪ್ರಕರಣಗಳಲ್ಲಿ ಮಾತ್ರವೇ ಡಿಎನ್‌ಎ ಪರೀಕ್ಷೆಗೆ ಅದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ. ಉಭಯ ಪಕ್ಷಕಾರರ ಹಿತಾಸಕ್ತಿಯಲ್ಲಿ ಸಮತೋಲನ ಸಾಧಿಸಿದ ನಂತರವಷ್ಟೇ ನ್ಯಾಯಾಲಯಗಳು ಈ ನಿಟ್ಟಿನಲ್ಲಿ ತಮ್ಮ ವಿವೇಚನೆಯನ್ನು ಬಳಸಬೇಕು ಹಾಗೂ ನ್ಯಾಯಯುತ ನಿರ್ಧಾರಕ್ಕಾಗಿ ಡಿಎನ್‌ಎ ಪರೀಕ್ಷೆಯ ಅಗತ್ಯವಿದೆಯೇ ಎಂದು … Continued

ಉಪಚುನಾವಣೆಗೆ ಮೊದಲು ಲೋಕ ಜನಶಕ್ತಿ ಪಕ್ಷದ ಚಿಹ್ನೆ ಸ್ಥಗಿತಗೊಳಿಸಿದ ಚುನಾವಣಾ ಆಯೋಗ

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಲೋಕಜನ ಶಕ್ತಿ ಪಕ್ಷದ ಸಂಸ್ಥಾಪಕ ರಾಮವಿಲಾಸ ಪಾಸ್ವಾನ್‌ ಪುತ್ರ ಚಿರಾಗ್ ಪಾಸ್ವಾನ್ ಹಾಗೂ ಅವರ ಚಿಕ್ಕಪ್ಪ, ಕೇಂದ್ರ ಸಚಿವ ಪಶುಪತಿ ಪರಾಸ್ ನಡುವಿನ ರಾಜಕೀಯ ದ್ವೇಷದಿಂದಾಗಿ ಈ ತಿಂಗಳ ಕೊನೆಯಲ್ಲಿ ಬಿಹಾರದ ಎರಡು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಮೊದಲು ಚುನಾವಣಾ ಆಯೋಗವು ಲೋಕ ಜನಶಕ್ತಿ ಪಕ್ಷದ ಹೆಸರು ಮತ್ತು … Continued

ಗೋಡ್ಸೆ ಜಿಂದಾಬಾದ್ ಎಂದು ಟ್ವೀಟ್ ಮಾಡುವವರಿಂದ ಭಾರತಕ್ಕೆ ಅವಮಾನ : ಬಿಜೆಪಿ ಸಂಸದ ವರುಣ್ ಗಾಂಧಿ

ನವದೆಹಲಿ: ರಾಷ್ಟ್ರಪಿತನ ಜನ್ಮ ದಿನಾಚರಣೆಯಂದು ಸಾಮಾಜಿಕ ಮಾಧ್ಯಮದಲ್ಲಿ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿದವರ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥವರು ಬೇಜವಾಬ್ದಾರಿಯಿಂದ ಇಡೀ ದೇಶ ನಾಚಿಕೆಪಡುವಂತೆ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತವು ಯಾವಾಗಲೂ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ. ಆದರೆ ಮಹಾತ್ಮ ಗಾಂಧಿ ತಮ್ಮ ಅಸ್ತಿತ್ವದ ಮೂಲಕ … Continued

ಮದುವೆಯಾದ 4 ವರ್ಷಗಳ ವಿಚ್ಛೇದನ ಘೋಷಿಸಿದ ಟಾಲಿವುಡ್ ಸ್ಟಾರ್​ ಜೋಡಿ ಸಮಂತಾ-ನಾಗ ಚೈತನ್ಯ ಅಕ್ಕಿನೇನಿ…!

ಸಾಕಷ್ಟು ಊಹಾಪೋಹಗಳ ನಂತರ ಟಾಲಿವುಡ್​ನ ಸ್ಟಾರ್​ ದಂಪತಿ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ನಾಲ್ಕು ವರ್ಷದ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರು ವಿಚ್ಛೇದನ ಪಡೆದು ಬೇರೆಯಾಗಲು ನಿರ್ಧರಿಸಿದ್ದಾರೆ. ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಇವರಿಬ್ಬರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬವದಂತಿಗಳು ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ … Continued