ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆ: ಪ್ರಮುಖ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಜಯ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಭದ್ರಕೋಟೆಯಾದ ನಂದಿಗ್ರಾಮದಲ್ಲಿ ನಡೆದ ಸಹಕಾರಿ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಮತಾ ಬ್ಯಾನರ್ಜಿಗೆ ಭಾರಿ ಹೊಡೆತ ನೀಡಿದ್ದ ಈ ಕ್ಷೇತ್ರದಲ್ಲಿ, 2021 ರಲ್ಲಿ ಬಂಗಾಳದ ಮುಖ್ಯಮಂತ್ರಿಯನ್ನು ಸೋಲಿಸಿ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದರು. ಈ ಹಿಂದೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ನಡೆಸುತ್ತಿದ್ದ ಸಹಕಾರಿ ಸಂಸ್ಥೆ ಭೆಕುಟಿಯಾ … Continued

ಬ್ರಿಟನ್‌ ರಾಣಿಯ ಅಂತ್ಯಕ್ರಿಯೆಯ ಮೊದಲು ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ III ಭೇಟಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬಂಕಿಂಗ್‌ಹ್ಯಾಮ್: ಸೆಪ್ಟೆಂಬರ್ 8 ರಂದು ನಿಧನರಾದ ಬ್ರಿಟನ್‌ ರಾಣಿ ಕ್ವೀನ್ ಎಲಿಜಬೆತ್ ಅಂತ್ಯಸಂಸ್ಕಾರ ಇಂದು, ಸೋಮವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಪಂಚದ ಎಲ್ಲ ದೇಶಗಳ ಒಟ್ಟು 500ಕ್ಕೂ ಹೆಚ್ಚು ಗಣ್ಯರು ಬ್ರಿಟನ್ ತಲುಪಿದ್ದಾರೆ. ಭಾರತವನ್ನು ಪ್ರತಿನಿಧಿಸಿರುವ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಬ್ರಿಟನ್ ರಾಜ ಚಾರ್ಲ್ಸ್‌ III ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ. ಬಂಕಿಂಗ್‌ ಹ್ಯಾಮ್ … Continued

ಅಯ್ಯೋ ದೇವ್ರೆ…. ನಾಯಿಯನ್ನು ಸರಪಳಿಯಿಂದ ಕಾರಿಗೆ ಕಟ್ಟಿ ನಗರದ ಸುತ್ತಲೂ ಎಳೆದೊಯ್ದ ವೈದ್ಯ: ಪ್ರಕರಣ ದಾಖಲು | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಕಾರಿಗೆ ಸರಪಳಿಯಿಂದ ಕಟ್ಟಿದ ನಾಯಿಯನ್ನು ಚಾಲಕ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಬಳಕೆದಾರರು ಇದನ್ನು ಭಾನುವಾರ ರಾಜಸ್ಥಾನದ ಜೋಧ್‌ಪುರದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಕಾರು ಚಾಲನೆ ಮಾಡುತ್ತಿರುವವರು ವೈದ್ಯರಾಗಿದ್ದಾರೆ ಎಂದು ಹೇಳಿದ್ದಾರೆ. ವ್ಯಕ್ತಿ ಕಾರನ್ನು ಓಡಿಸುತ್ತಿರುವುದನ್ನು ಮತ್ತು ನಾಯಿಯನ್ನು ಹೆಣಗಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪ್ರಾಣಿ … Continued

ಚಂಡೀಗಡ ವಿಶ್ವವಿದ್ಯಾನಿಲಯದ ವೀಡಿಯೊ ವಿವಾದ : ಇಬ್ಬರ ಬಂಧನ, ಮುಂದುವರಿದ ಪ್ರತಿಭಟನೆಗಳು, ಕ್ಷಮೆಯಾಚಿಸುವಂತೆ ವಿದ್ಯಾರ್ಥಿಗಳು ಒತ್ತಾಯ

ಚಂಡೀಗಡ: ಚಂಡೀಗಡ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಿಂದ ಆಕ್ಷೇಪಾರ್ಹ ವೀಡಿಯೊಗಳ ‘ಸೋರಿಕೆ’ ವಿವಾದ ಭುಗಿಲೆದ್ದಿದ್ದು, ಪಂಜಾಬ್ ಪೊಲೀಸರು ಭಾನುವಾರ ಶಿಮ್ಲಾ ನಿವಾಸಿಯಾದ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ. ಹಲವಾರು ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯರ ‘ಖಾಸಗಿ’ ಮತ್ತು ‘ಆಕ್ಷೇಪಾರ್ಹ’ ವೀಡಿಯೊಗಳನ್ನು ಅಂತರ್ಜಾಲದಲ್ಲಿ ಸೋರಿಕೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿ ಶನಿವಾರ  ವಿವಿ ಆವರಣದಲ್ಲಿ  ಬೃಹತ್ ಪ್ರತಿಭಟನೆಗಳನ್ನು ನಡೆಸಿದರು. ಇತ್ತೀಚಿನ … Continued

ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷರಾಗುವಂತೆ ಕಾಂಗ್ರೆಸ್‌ನಲ್ಲಿ ಜೋರಾದ ಧ್ವನಿ

ನವದೆಹಲಿ: ಪುನಃ ಕಾಂಗ್ರೆಸ್‌ ಅಧ್ಯಕ್ಷರಾಗುವಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರಿಗೆ ಒತ್ತಡ ಹೇರಲು ಆರಂಭಿಸಿದ್ದಾರೆ. ರಾಜಸ್ಥಾನ, ಛತ್ತೀಸ್‌ಗಢ, ಅಸ್ಸಾಂ, ಒಡಿಶಾ ಮತ್ತು ಗುಜರಾತ್‌ನ ಪಕ್ಷದ ರಾಜ್ಯ ಘಟಕಗಳು ರಾಹುಲ್‌ ಗಾಂಧಿ ಅವರನ್ನು ಮತ್ತೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ನಿರ್ಣಯಗಳನ್ನು ಅಂಗೀಕರಿಸಿವೆ. ಇತರ ರಾಜ್ಯ ಘಟಕಗಳು ಇದೇ ರೀತಿಯ ನಿರ್ಣಯಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. … Continued

200 ಕೋಟಿ ರೂ. ಸುಕೇಶ್‌ ಸುಲಿಗೆ ಹಗರಣ: ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ನಾಳೆ ಮತ್ತೊಮ್ಮೆ ಹಾಜರಾಗಲು ಸಮನ್ಸ್ ನೀಡಿದ ದೆಹಲಿ ಪೊಲೀಸರು

ನವದೆಹಲಿ: ಸುಕೇಶ ಚಂದ್ರಶೇಖರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ಪೊಲೀಸರು ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ್ದಾರೆ. ನಾಳೆ, ಸೋಮವಾರ (ಸೆಪ್ಟೆಂಬರ್‌ 19) ಬೆಳಗ್ಗೆ 11 ಗಂಟೆಗೆ ಆರ್ಥಿಕ ಅಪರಾಧ ವಿಭಾಗದ ಮುಂದೆ ಹಾಜರಾಗುವಂತೆ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸೂಚಿಸಲಾಗಿದೆ. ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಮೂರನೇ … Continued

ಓಣಂ ಬಂಪರ್ ಲಾಟರಿಯಲ್ಲಿ ಆಟೋರಿಕ್ಷಾ ಚಾಲಕನಿಗೆ ಒಲಿದುಬಂತು 25 ಕೋಟಿ ರೂ.ಗಳ ಮೊದಲ ಬಹುಮಾನ…!

ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂನ ಶ್ರೀವರಹಂ ನಿವಾಸಿ ಅನೂಪ್ ಅವರು ರಾಜ್ಯ ಲಾಟರಿ ಇಲಾಖೆಯ ತಿರುವೋಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ.ಗಳನ್ನು ಗೆದ್ದಿದ್ದಾರೆ. ಭಾನುವಾರ ಮಧ್ಯಾಹ್ನ ನಡೆದ ಡ್ರಾದ ಸಮಯದಲ್ಲಿ ಅವರು ಖರೀಸಿದ ಟಿಕೆಟ್ — ಸಂಖ್ಯೆ TJ-750605ಕ್ಕೆ 25 ಕೋಟಿ ರೂ.ಗಳ ಬಂಪರ್‌ ಬಹುಮಾನ ಸಿಕ್ಕಿದೆ. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಅನೂಪ್ ಅವರು … Continued

ಕಾಶ್ಮೀರದಲ್ಲಿ 35 ವರ್ಷಗಳ ಬಳಿಕ ಸಿನಿಮಾ ಥಿಯೇಟರ್‌ಗಳು ಆರಂಭ, ಪುಲ್ವಾಮಾ-ಶೋಪಿಯಾನ್‌ದಲ್ಲಿ ಚಾಲನೆ..! ಶ್ರೀನಗರದಲ್ಲಿ ರಾಜ್ಯದ ಮೊದಲ ಮಲ್ಟಿಪ್ಲೆಕ್ಸ್ ಮಂಗಳವಾರ ಉದ್ಘಾಟನೆ

ಶ್ರೀನಗರ : ಕಾಶ್ಮೀರ ಕಣಿವೆಯ ಮೊದಲ ಮಲ್ಟಿಪ್ಲೆಕ್ಸ್ ಸೆಪ್ಟೆಂಬರ್ 20 ರಂದು ಈ ರಾಜಧಾನಿಯ ಹೆಚ್ಚಿನ ಭದ್ರತಾ ವಲಯದ ಸೋನ್ವಾರ್ ಪ್ರದೇಶದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ INOX ವಿನ್ಯಾಸಗೊಳಿಸಿದ ಮಲ್ಟಿಪ್ಲೆಕ್ಸ್ ಅನ್ನು ಉದ್ಘಾಟಿಸಲಿದ್ದಾರೆ. ಪ್ರಮುಖ ಕಾಶ್ಮೀರಿ ಉದ್ಯಮಿ ಮತ್ತು ಯೋಜನೆಯ ಹಿಂದಿನ … Continued

29 ವರ್ಷದ ತಮಿಳು ನಟಿ ದೀಪಾ ಅಪಾರ್ಟ್‌ಮೆಂಟ್‌ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಚೆನ್ನೈ: ಮತ್ತೊಬ್ಬ ಯುವ ನಟಿ ಸಾವು ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ, ಈ ಬಾರಿ ತಮಿಳು ಚಿತ್ರರಂಗದಲ್ಲಿ ಇದು ಸಂಭವಿಸಿದೆ. ಆರಂಭಿಕ ಪೋಲೀಸ್ ವರದಿಯ ಪ್ರಕಾರ ದೀಪಾ ಎಂಬ ಹೆಸರಿನಿಂದ ಕರೆಯಲ್ಡುವ ತಮಿಳು ಯುವ ನಟಿ ಪಾಲಿನ್ ಜೆಸ್ಸಿಕಾ ಅವರು ತಮ್ಮ ಅಪಾರ್ಟ್ಮೆಂಟಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಶವ ಆಕೆಯ ಮನೆಯ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. … Continued

ಸಂಸತ್ತಿನಲ್ಲಿ ಮಹಿಳಾ ಕೋಟಾ: “ಉತ್ತರ ಭಾರತದ ಮನಸ್ಥಿತಿ” ಇನ್ನೂ ಅನುಕೂಲಕರವಾಗಿಲ್ಲ ಎಂದ ಶರದ್ ಪವಾರ್

ಪುಣೆ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಉತ್ತರ ಭಾರತ ಮತ್ತು ಸಂಸತ್ತಿನ “ಮನಸ್ಸು” ಇನ್ನೂ ಅನುಕೂಲಕರವಾಗಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಪುಣೆಯ ವೈದ್ಯರ ಸಂಘವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮತ್ತು ಅವರ ಪುತ್ರಿ, ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಅವರನ್ನು ಸಂದರ್ಶನ ಮಾಡಿದ … Continued