ಕೇರಳದಲ್ಲಿ ಕೊರೊನಾ ಅಬ್ಬರ.. ಮೇ 20ರ ನಂತರ ಮೊದಲ ಬಾರಿಗೆ 30,000 ಗಡಿ ದಾಟಿದ ದೈನಂದಿನ ಪ್ರಕರಣಗಳ ಸಂಖ್ಯೆ..!

ತಿರುವನಂತಪುರಂ: ಕೇರಳದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 30,000 ಗಡಿ ದಾಟಿದೆ. ಮೇ 20 ರ ನಂತರ ಬುಧವಾರ ಮೊದಲ ಬಾರಿಗೆ ಕೇರಳದಲ್ಲಿ 30,000 ದೈನಂದಿನ ವೈರಸ್ ಪ್ರಕರಣಗಳು ವರದಿಯಾಗಿವೆ. ಮೂರು ತಿಂಗಳ ಅಂತರದ ನಂತರ, ಅದರ ಟೆಸ್ಟ್ ಪಾಸಿಟಿವಿಟಿ ದರ (TRP) ಶೇಕಡಾ 19ಕ್ಕೆ ಏರಿದೆ. ದಕ್ಷಿಣ ರಾಜ್ಯವು ಬುಧವಾರ 31,445 ಹೊಸ ಕರೋನವೈರಸ್ … Continued

ಒಡಿಶಾ: ಪತ್ನಿಯ ಚಿತೆಗೆ ಹಾರಿ ಪ್ರಾಣಬಿಟ್ಟ ಹಿರಿಯ ವ್ಯಕ್ತಿ..!

ಒಡಿಸ್ಸಾ ರಾಜ್ಯದ ಕಲಹಂಡಿ ಜಿಲ್ಲೆಯ ಗೊಲಮುಂಡಾ ಬ್ಲಾಕ್‌ನ ಸಿಯಾಲ್‌ಜೋಡಿ ಗ್ರಾಮದಲ್ಲಿ ತನ್ನ ಸಂಗಾತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ 65 ವರ್ಷದ ಬುಡಕಟ್ಟು ವ್ಯಕ್ತಿ ತನ್ನ ಪತ್ನಿಯ ಚಿತೆಯ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಸಂಭವಿಸಿದ ದುರಂತ ಘಟನೆಯು ದೂರದ ಬುಡಕಟ್ಟು ಹಳ್ಳಿಯ ನಿವಾಸಿಗಳನ್ನು ಆಘಾತಕ್ಕೊಳಗಾಗಿಸಿದೆ. ಬೆಂಕಿ ಉರಿಯುತ್ತಿರುವ ಚಿತೆಗೆ … Continued

ಕೋವಿಡ್ -19 ಲಸಿಕೆ ಡೋಸ್‌ ನೀಡಿಕೆ: ಮತ್ತೊಂದು ಮೈಲಿಗಲ್ಲು ದಾಟಿದ ಭಾರತ

ನವದೆಹಲಿ: ಭಾರತ ಇದುವರೆಗೆ 60 ಕೋಟಿ ಕೊವಿಡ್‌ ಲಸಿಕೆ ಡೋಸ್‌ಗಳನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಮಾಂಡವಿಯ ಅವರು ತಮ್ಮ ಟ್ವಿಟ್ಟರ್ ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕೋ ವಾಕ್ಸಿನ್‌ ಮುಫ್ಟ್ ಮಾಕ್ಸಿನ್‌’ ಉಪಕ್ರಮದ ಅಡಿಯಲ್ಲಿ, ಭಾರತವು 60 ಕೋಟಿ ಲಸಿಕೆಯ ಗಡಿ ದಾಟಿದೆ ಎಂದು ತಿಳಿಸಿದ್ದಾರೆ. ಭಾರತವು 10 … Continued

ಕಬ್ಬು ರೈತರಿಗೆ ಸಿಹಿ ಸುದ್ದಿಕೊಟ್ಟ ಕೇಂದ್ರ ಸರ್ಕಾರ: ಪ್ರತಿ ಕ್ವಿಂಟಲ್‌ಗೆ ಈವರೆಗಿನ ಅತ್ಯಧಿಕ ಎಫ್‌ಆರ್‌ಪಿಗೆ ಕ್ಯಾಬಿನೆಟ್‌ ಅನುಮೋದನೆ

ನವದೆಹಲಿ: ಕೇಂದ್ರವು ಬುಧವಾರ ಕಬ್ಬು ಬೆಳೆಗಾರರಿಗೆ ಪಾವತಿಸುವ ಕನಿಷ್ಠ ಬೆಲೆಯನ್ನು ಅಕ್ಟೋಬರ್ 2021 ರಿಂದ ಆರಂಭವಾಗುವ ಮುಂದಿನ ಮಾರುಕಟ್ಟೆ ವರ್ಷಕ್ಕೆ ಪ್ರತಿ ಕ್ವಿಂಟಲ್‌ಗೆ 5 ರಿಂದ 290ರೂ.ಗಳಿಗೆ ಹೆಚ್ಚಿಸಿದೆ. 2021-22 ಮಾರುಕಟ್ಟೆ ವರ್ಷಕ್ಕೆ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ಹೆಚ್ಚಿಸುವ ನಿರ್ಧಾರವನ್ನುಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಸರ್ಕಾರವು ಪ್ರಸಕ್ತ … Continued

ಕಲ್ಯಾಣ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿದ ಅಲಿಘಡ ಮುಸ್ಲಿಂ ವಿವಿ ಉಪಕುಲಪತಿ ವಿರುದ್ಧ ವಾಗ್ದಾಳಿ: ಇದು ‘ಕ್ಷಮಿಸದ ಅಪರಾಧ ಎಂದು ಕ್ಯಾಂಪಸ್‌ನಲ್ಲಿ ಪೋಸ್ಟರ್‌ಗಳು..!

ಅಲಿಗಡ: ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಉಪಕುಲಪತಿಯು ದಿವಂಗತ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈಗ ಅವರ ವಿರುದ್ಧ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ‘ಕ್ರಿಮಿನಲ್‌ಗೆ ಸಂತಾಪ ಸೂಚಿಸುವುದು ಅಪರಾಧ’ ಎಂದು ಪೋಸ್ಟರ್‌ಗಳನ್ನು ಹಾಕಲಾಗಿದೆ. ಕಲ್ಯಾಣ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿರುವ ಉಪಕುಲಪತಿ ತಾರಿಕ್ ಮನ್ಸೂರ್ ಅವರ ಕೃತ್ಯವು ‘ಕ್ಷಮಿಸದ … Continued

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ..!

ನವದೆಹಲಿ: ಎರಡು ದಿನಗಳಿಂದ 25ಸಾವಿರಕ್ಕೆ ಸೀಮಿತಗೊಂಡಿದ್ದ ಕೊರೊನಾ ಸೋಂಕಿನ ಪ್ರಮಾಣ ಕಳೆದ 24 ಗಂಟೆಯಲ್ಲಿ (ಬುಧವಾರ) ದಿಢೀರ್ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 37,593 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ದೇಶದ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 3,25, 12,366 ಕೋಟಿಗೆ ಏರಿಕೆಯಾಗಿದೆ. ಗರಿಷ್ಠ ಪ್ರಕರಣಗಳನ್ನು ವರದಿ ಮಾಡಿರುವ ಮೊದಲ ಐದು ರಾಜ್ಯಗಳಲ್ಲಿ ಕೇರಳ -24,296 ಪ್ರಕರಣಗಳು, … Continued

ಮಹಿಳೆಯೊಂದಿಗೆ ಅಸಭ್ಯ ವಿಡಿಯೋ ಚಾಟ್ ವೈರಲ್‌: ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವನ್ ರಾಜೀನಾಮೆ

ತಮಿಳುನಾಡು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಘವನ್ ಮಂಗಳವಾರ ಮಹಿಳೆಯೊಂದಿಗೆ ಅಸಭ್ಯವಾಗಿ ವಿಡಿಯೋ ಚಾಟ್ ಮಾಡುತ್ತಿರುವಂತೆ ‘ಕುಟುಕು ಕಾರ್ಯಾಚರಣೆ’ ತೋರಿಸಿದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ರಾಘವನ್‌, ಎಲ್ಲ ಆರೋಪಗಳನ್ನು ನಿರಾಕರಿಸುತ್ತಾರೆ ಮತ್ತು ನಾನು ಅದನ್ನು ಕಾನೂನುಬದ್ಧವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ. ತಮಿಳುನಾಡಿನ ಜನರು ಮತ್ತು ತಮ್ಮೊಂದಿಗೆ ನಿಕಟ … Continued

ಭಯೋತ್ಪಾದನೆ ನಡೆದರೆ ತಾಲಿಬಾನ್ ಹೊಣೆಗಾರ; ಆಗಸ್ಟ್ 31ರ ನಂತರ ಅಫ್ಘಾನಿಸ್ತಾನದಿಂದ ಹೋಗುವವರಿಗೆ ಸುರಕ್ಷಿತ ಮಾರ್ಗಕ್ಕೆ ಆದ್ಯತೆ-ಜಿ7

ನವದೆಹಲಿ: ಜಿ -7 ರಾಷ್ಟ್ರಗಳ ಗುಂಪು ಅಫ್ಘಾನಿಸ್ತಾನದ ಬಿಕ್ಕಟ್ಟಿನ ಕುರಿತು ತುರ್ತು ಮಾತುಕತೆ ನಡೆಸಿತು ಮತ್ತು ಮಾನವ ಹಕ್ಕುಗಳ ಮೇಲೆ ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ತಾಲಿಬಾನಿಗಳು ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ಒಮ್ಮತದಿಂದ ನಿರ್ಣಯಿಸಿದರು. ಆಗಸ್ಟ್ 31 ರ ನಂತರ ಕಾಬೂಲ್‌ನಿಂದ ಪಲಾಯನ ಮಾಡಲು ಬಯಸುವವರಿಗೆ ‘ಖಾತರಿ’ ಸುರಕ್ಷಿತ ಮಾರ್ಗಕ್ಕಾಗಿ ಇಸ್ಲಾಮಿಸ್ಟ್ ಗುಂಪಿಗೆ ಒತ್ತಾಯಿಸಿದರು . ಭಯೋತ್ಪಾದನೆಯನ್ನು … Continued

‘ಮಹಾ ಸಿಎಂ ಉದ್ಧವ್’ ನಿಂದನೆ ಆರೋಪದ ಮೇಲೆ ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ, ಸಚಿವ ನಾರಾಯಣ ರಾಣೆಗೆ ಜಾಮೀನು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ “ಕಪಾಳಮೋಕ್ಷದ” ಟೀಕೆಗೆ ಬಂಧಿಸಿದ ಗಂಟೆಗಳ ನಂತರ, ಕೇಂದ್ರ ಸಚಿವ ನಾರಾಯಣ ರಾಣೆಗೆ ಮಂಗಳವಾರ ತಡರಾತ್ರಿ ಮಹಾದ್ ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ. ರಾಣೆಯನ್ನು ನಾಸಿಕ್ ನಗರ ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದರು, ರತ್ನಗಿರಿಯ ಸೆಷನ್ಸ್ ನ್ಯಾಯಾಲಯವು ‘ಸ್ಲ್ಯಾಪ್’ ಟೀಕೆಗೆ ಸಂಬಂಧಿಸಿದಂತೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು … Continued

ಏಪ್ರಿಲ್-ಜೂನ್ ತ್ರೈಮಾಸಿಕ: ಭಾರತದ ಜಿಡಿಪಿ ಶೇ.18.5ರಷ್ಟು ಬೆಳವಣಿಗೆ

ನವದೆಹಲಿ: ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಜಿಡಿಪಿ ಶೇ.18.5ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಹೇಳಿದೆ. ಕೈಗಾರಿಕಾ ಚಟುವಟಿಕೆ, ಸೇವಾ ವಲಯ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ಜತೆ ಬೆಸೆದುಕೊಂಡಿರುವ 41 ಸೂಚ್ಯಂಕಗಳನ್ನು ಆಧರಿಸಿ, ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯನ್ನು ಅಂದಾಜಿಸುವ ನೌಕಾಸ್ಟಿಂಗ್ ಮಾದರಿಯನ್ನು ಎಸ್‌ಬಿಐ … Continued