ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿ : 3ನೇ ಸುತ್ತಿನ ಮತ ಎಣಿಕೆಯಲ್ಲೇ ಗೆಲುವಿನ ನಂಬರ್‌ ದಾಟಿದ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಮತಗಳ ಎಣಿಕೆ ನಡೆಯುತ್ತಿದ್ದು ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ( (64) ಮೂರನೇ ಸುತ್ತಿನ ನಂತರ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಅವರು ಮೂರನೇ ಸುತ್ತು ಮುಕ್ತಾಯ ವೇಳೆಗೆ ಅವರು 5,77,777 ಮತಗಳನ್ನು ಪಡೆದಿದ್ದಾರೆ. ಗೆಲ್ಲಲು 5.2 ಲಕ್ಷ ಮತಗಳ ಅಗತ್ಯವಿತ್ತು. ಈಗಾಗಲೇ ಅವರು ನಿಗದಿತ ಸಂಖ್ಯೆಯನ್ನು ದಾಟಿದ್ದು, … Continued

ಕಾಂಗ್ರೆಸ್‌ ದೊಡ್ಡ ಶಾಕ್‌ ನೀಡಿದ ಮಮತಾ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯಲು ಟಿಎಂಸಿ ನಿರ್ಧಾರ…!

ಕೋಲ್ಕತ್ತಾ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ತೃಣಮೂಲ್‌ ಕಾಂಗ್ರೆಸ್‌ ಮತದಾನದಿಂದ ದೂರ ಉಳಿಯಲು ನಿರ್ಧರಿಸುವ ಮೂಲಕ ಕಾಂಗ್ರೆಸ್‌ಗೆ ಅಚ್ಚರಿಯ ಶಾಕ್‌ ನೀಡಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಯಾಗಿ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಕಣದಲ್ಲಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿ ಸಂಸದರೊಂದಿಗೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಮತಾ ಬ್ಯಾನರ್ಜಿ … Continued

ಜ್ಞಾನವಾಪಿ ಮಸೀದಿ ಅರ್ಜಿ: ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವರೆಗೆ ಕಾಯುವುದಾಗಿ ತಿಳಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ, ದಾವೆಯ ನಿರ್ವಹಣೆಯ ಕುರಿತು ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕಾಗಿ ಕಾಯುವುದಾಗಿ ಹೇಳಿದೆ. ಹಾಗೂ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ ಮೊದಲ ವಾರಕ್ಕೆ ಮುಂದೂಡಿದೆ. ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಶೃಂಗಾರ್ ಗೌರಿ … Continued

ರಾಷ್ಟ್ರಪತಿ ಚುನಾವಣೆ: 2ನೇ ಸುತ್ತಿನ ಎಣಿಕೆ ನಂತರ ಭರ್ಜರಿ ಗೆಲುವಿನತ್ತ ದ್ರೌಪದಿ ಮುರ್ಮು ದಾಪುಗಾಲು

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಮತಗಳ ಎಣಿಕೆ ನಡೆಯುತ್ತಿದ್ದು ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪ್ರತಿಪಕ್ಷದ ಯಶವಂತ್ ಸಿನ್ಹಾ ಅವರಿಗಿಂತ ಭಾರೀ ಅಂತರದ ಮುನ್ನಡೆ ಸಾಧಿಸಿದ್ದಾರೆ. . ಟ್ರೆಂಡ್‌ ನೀಡಿದರೆ ಅವರು ಭರ್ಜರಿ ಗೆಲುವು ಸಾಧಿಸುವ ಲಕ್ಷಣಗಳು ಕಾಣುತ್ತಿದ್ದು, ಆಯ್ಕೆಯಾದರೆ ಅವರು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷರಾಗಲಿದ್ದಾರೆ. ಮೊದಲು ಸಂಸದರ ಮತ ಎಣಿಕೆಯಾದಾಗ ಎನ್‌ಡಿಎಯ ದ್ರೌಪದಿ … Continued

ಉತ್ತರ ಪ್ರದೇಶ ಸರ್ಕಾರಕ್ಕೆ 600 ಕೋಟಿ ರೂಪಾಯಿ ಮೌಲ್ಯದ ಆಸ್ತಿ ದಾನ ಮಾಡಿದ ಮೊರಾದಾಬಾದ್ ವೈದ್ಯರು…!

ಲಕ್ನೋ: ಉತ್ತರ ಪ್ರದೇಶದ ಮೊರಾದಾಬಾದ್‌ನ ವೈದ್ಯರಾದ ಅರವಿಂದಕುಮಾರ್‌ ಗೋಯಲ್ ಅವರು ಬಡವರ ಸಹಾಯಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನು ದಾನ ಮಾಡಿದ್ದಾರೆ…! ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 600 ಕೋಟಿ ರೂ.ಗಳಾಗಿವೆ. ಅವರು ಕಳೆದ 50 ವರ್ಷಗಳಿಂದ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಆಸ್ತಿಯನ್ನು ದಾನ ಮಾಡಿದ ನಂತರ ಅವರು, ಸುಮಾರು 25 … Continued

ನ್ಯಾಶನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ಸೋನಿಯಾ ಗಾಂಧಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಧ್ಯಾಹ್ನದ ನಂತರ ಜಾರಿ ನಿರ್ದೇಶನಾಲಯದ ಕಚೇರಿಗೆ ಸೋನಿಯಾ ಗಾಂಧಿ ಅವರು ತಮ್ಮ ಮಕ್ಕಳೊಂದಿಗೆ ಆಗಮಿಸಿದರು. ಸೋನಿಯಾ ಗಾಂಧಿಯವರು ತಮ್ಮ Z+ ವರ್ಗದ CRPF ಭದ್ರತೆಯೊಂದಿಗೆ ಆಗಮಿಸಿದರು. ಇತ್ತೀಚೆಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಸೋನಿಯಾ ಗಾಂಧಿ ಅವರು ಮಾಸ್ಕ್ ಧರಿಸಿ ಆಗಮಿಸಿದ್ದರು ಮತ್ತು … Continued

ಬಿಲ್ ಗೇಟ್ಸ್ ಹಿಂದಿಕ್ಕಿದ ಗೌತಮ್ ಅದಾನಿ ಈಗ ವಿಶ್ವದ 4ನೇ ಶ್ರೀಮಂತ ವ್ಯಕ್ತಿ…!

ನವದೆಹಲಿ: ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿ ಮಾಡಿದೆ. 60 ವರ್ಷ ವಯಸ್ಸಿನ ಗೌತಮ್‌ ಅದಾನಿ ನಿವ್ವಳ ಮೌಲ್ಯವು ಗುರುವಾರ $ 115.5 ಶತಕೋಟಿಯನ್ನು ತಲುಪಿತು. ಬಿಲ್‌ ಗೇಟ್‌ ಅವರ ಸಂಪತ್ತು $ … Continued

ಕೇರಳದಲ್ಲಿ ನೀಟ್ ಪರೀಕ್ಷೆ ವೇಳೆ ಒಳಉಡುಪು ತೆಗೆಸಿದ ವಿವಾದ: ಮತ್ತಿಬ್ಬರು ಶಿಕ್ಷಕರ ಬಂಧನ

ಕೊಲ್ಲಂ (ಕೇರಳ) : ಕೇರಳದ ನೀಟ್ (NEET) ಪರೀಕ್ಷೆಯ ಕಿರುಕುಳದ ವಿವಾದದಲ್ಲಿ ಜುಲೈ 21, ಗುರುವಾರದಂದು ಪರೀಕ್ಷೆ ನಡೆಸುವ ಉಸ್ತುವಾರಿ ಹೊತ್ತಿರುವ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಬಂಧಿತರಾಗಿರುವ ಒಟ್ಟು ಶಂಕಿತರ ಸಂಖ್ಯೆ ಏಳಕ್ಕೆ ಏರಿದೆ. ಪೊಲೀಸರ ಪ್ರಕಾರ, ಪ್ರೊ. ಪ್ರಿಜಿ ಕುರಿಯನ್ ಮತ್ತು ಡಾ.ಶ್ಮನಾದ್ ಅವರು ಬಂಧಿತರು. ವಿವಾದಾತ್ಮಕ ತಪಾಸಣೆಗಾಗಿ ಕಾಲೇಜಿನ ಅಧಿಕಾರಿಗಳು/ಸಿಬ್ಬಂದಿಗೆ ಅವರು … Continued

ತಕ್ಷಣವೇ ಜಾರಿಗೆ ಬರುವಂತೆ ಎನ್‌ಸಿಪಿಯ ಎಲ್ಲ ಘಟಕಗಳನ್ನು ವಿಸರ್ಜಿಸಿದ ಶರದ್‌ ಪವಾರ್‌

ಮುಂಬೈ: ಶಿವಸೇನೆ ಪಕ್ಷದಲ್ಲಿ ನಡೆದ ಬಂಡಾಯದ ನಂತರ ಶರದ್ ಪವಾರ್ ತಮ್ಮ ಎನ್‌ಸಿಪಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ್ದಾರೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ತಮ್ಮ ರಾಜಕೀಯ ಪಕ್ಷದ ಎಲ್ಲಾ ವಿಭಾಗಗಳು ಮತ್ತು ಕೋಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ ಎಂದು ಎನ್‌ಸಿಪಿಯ ಹಿರಿಯ ನಾಯಕರೊಬ್ಬರು ಬುಧವಾರ ಹೇಳಿದ್ದಾರೆ. ಎನ್‌ಸಿಪಿ ರಾಷ್ಟ್ರೀಯ … Continued

ಇಡಿ ಮುಂದೆ ವಿಚಾರಣೆಗೆ ಸೋನಿಯಾ ಗಾಂಧಿ ಇಂದು ಹಾಜರು, ಕಾಂಗ್ರೆಸ್‌ನಿಂದ ಪ್ರತಿಭಟನೆ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು, (ಜುಲೈ ೨೧) ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಲಿದ್ದಾರೆ. ಸೋನಿಯಾ ಗಾಂಧಿ ಅವರು ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಸಮನ್ಸ್ ಮುಂದೂಡುವಂತೆ ಕೋರಿ ಮಾಡಿದ ಲಿಖಿತ ಮನವಿಯನ್ನು ಇಡಿ ಈ ಹಿಂದೆ ಸ್ವೀಕರಿಸಿತ್ತು. ಇಂದು, ಗುರುವಾರ ಬೆಳಗ್ಗೆ 11 … Continued