ಭೋಪಾಲ್ : ಪತ್ನಿಯನ್ನು ಕಳೆದುಕೊಂಡ ಬಳಿಕ ನಾಲ್ವರು ಮಕ್ಕಳನ್ನು ಏಕಾಂಗಿಯಾಗಿ ಸಾಕಿ-ಸಲಹಿ ಬೆಳೆಸಿದ ತಂದೆ. ಮಕ್ಕಳ ಬದುಕು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ವಯಸ್ಸಾದ ಬಳಿಕ ಕುಟುಂಬದವರ ಸಹಾಯ-ಸಹಕಾರ ದೊರೆಯದೆ ವೃದ್ಧಾಶ್ರಮದ ಆಶ್ರಯ ಪಡೆಯಬೇಕಾಯಿತು. ಕೊನೆಗೆ 70ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಾಗ, ಅವರ ಪಕ್ಕದಲ್ಲಿ ಒಬ್ಬ ಮಗನಾಗಲಿ, ಮಗಳಾಗಲಿ ಇರಲಿಲ್ಲ. ಸಾವಿನ ಬಳಿಕವೂ ಮೃತದೇಹ ಪಡೆಯಲು ಕುಟುಂಬದ ಯಾರೊಬ್ಬರೂ ಬರಲಿಲ್ಲ. ಅಂತಿಮವಾಗಿ ವೃದ್ಧಾಶ್ರಮದ ಸಿಬ್ಬಂದಿಯೇ ಪೊಲೀಸರ ನೆರವಿನಿಂದ ಅವರ ಅಂತ್ಯಕ್ರಿಯೆ ನೆರವೇರಿಸಿದ ಮನನೋಯಿಸುವ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಇಂದೋರ್ ಮೂಲದ ಘನಶ್ಯಾಮ (70) ಅವರು ಆಗಸ್ಟ್ 4ರಂದು ಭೋಪಾಲದ ‘ಅಪ್ನಾ ಘರ್’ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದರು. ಕಳೆದ ಸುಮಾರು ನಾಲ್ಕು ವರ್ಷಗಳಿಂದ ಇದೇ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಜೀವನದ ಕೊನೆಯ ದಿನಗಳನ್ನು ಅಲ್ಲಿಯೇ ಕಳೆದಿದ್ದರು.
ಪತ್ನಿಯ ಸಾವಿನ ಬಳಿಕ ನಾಲ್ವರು ಮಕ್ಕಳನ್ನು ಒಬ್ಬರೇ ಬೆಳೆಸಿದ್ದರು
ಘನಶ್ಯಾಮ ಅವರ ಪತ್ನಿ, ಮಕ್ಕಳು ಚಿಕ್ಕವರಿದ್ದಾಗಲೇ ಮೃತಪಟ್ಟಿದ್ದರು. ಪತ್ನಿಯ ನಿಧನದ ಬಳಿಕ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅವರು ಒಬ್ಬರೇ ಸಾಕಿ-ಸಲಹಿ ಬೆಳೆಸಿದ್ದರು. ಕುಟುಂಬದ ಜೀವನ ನಿರ್ವಹಣೆಗಾಗಿ ಅವರು ಸೈಕಲ್ಗಳ ಟೈರ್ ಮತ್ತು ಟ್ಯೂಬ್ಗಳನ್ನು ಮಾರಾಟ ಮಾಡುತ್ತಿದ್ದರು. ಪತ್ನಿ ಮೃತಪಟ್ಟ ಸಂದರ್ಭದಲ್ಲಿ ಘನಶ್ಯಾಮ ಅವರ ಕಿರಿಯ ಮಗಳಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಮಕ್ಕಳನ್ನು ಬೆಳೆಸಲು ಅವರು ಹಲವು ಕಷ್ಟಗಳನ್ನು ಎದುರಿಸಿದ್ದರು. ಆದರೆ, ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿಸಿದ ಅದೇ ತಂದೆಯ ಜೀವನದ ಕೊನೆಯ ದಿನಗಳು ಮಾತ್ರ ಏಕಾಂಗಿಯಾಗಿ ಕಳೆಯಬೇಕಾಯಿತು.
ಅನಾರೋಗ್ಯದ ನಡುವೆ ವೃದ್ಧಾಶ್ರಮವೇ ಮನೆಯಾಯಿತು
ಜೀವನದ ಕೊನೆಯ ವರ್ಷಗಳಲ್ಲಿ ಘನಶ್ಯಾಮ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದು, ನಡೆಯಲು ಹಾಗೂ ಮಾತನಾಡಲು ತೀವ್ರವಾಗಿ ಕಷ್ಟಪಡುತ್ತಿದ್ದರು.
ಒಂದು ಸಂದರ್ಭದಲ್ಲಿ ಇಂದೋರ್ನಿಂದ ಭೋಪಾಲ್ಗೆ ಬಂದಿದ್ದ ಘನಶ್ಯಾಮ ಅವರು ಭೋಪಾಲ್ನ ಐಎಸ್ಬಿಟಿ (ISBT) ಬಳಿ ಇದ್ದರು. ಅಲ್ಲಿ ಅವರನ್ನು ಕೆಲ ಸಾಮಾಜಿಕ ಕಾರ್ಯಕರ್ತರು ಗಮನಿಸಿ ‘ಅಪ್ನಾ ಘರ್’ ವೃದ್ಧಾಶ್ರಮಕ್ಕೆ ಕರೆತಂದಿದ್ದರು. ಆ ಬಳಿಕ ಇದೇ ವೃದ್ಧಾಶ್ರಮವೇ ಅವರ ಪಾಲಿಗೆ ಮನೆಯಂತಾಯಿತು.
ಸುಮಾರು ನಾಲ್ಕು ವರ್ಷಗಳ ಕಾಲ ಆಶ್ರಮದ ಸಿಬ್ಬಂದಿ ಅವರನ್ನು ಆರೈಕೆ ಮಾಡಿದರು. ಆರೋಗ್ಯ ಹದಗೆಟ್ಟಾಗಲೆಲ್ಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಇದೇ ವೇಳೆ ಅವರ ಕುಟುಂಬದವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದ್ದರೂ, ಅವರನ್ನು ಕರೆದುಕೊಂಡು ಹೋಗಲು ಅಥವಾ ಅವರ ಜವಾಬ್ದಾರಿ ವಹಿಸಿಕೊಳ್ಳಲು ಯಾರೂ ಮುಂದೆ ಬರಲಿಲ್ಲ ಎಂದು ವೃದ್ಧಾಶ್ರಮದ ವ್ಯವಸ್ಥಾಪಕಿ ಮಾಧುರಿ ಮಿಶ್ರಾ ತಿಳಿಸಿದ್ದಾರೆ.
ಆಸ್ತಿ ಮಾರಾಟ….!
ಘನಶ್ಯಾಮ ಅವರ ಇಂದೋರ್ನಲ್ಲಿದ್ದ ಮನೆ-ಆಸ್ತಿಯನ್ನು ಮಾರಾಟ ಮಾಡಲಾಗಿದ್ದು, ಅದರಿಂದ ಬಂದ ಹಣವನ್ನು ಮಕ್ಕಳ ನಡುವೆ ಹಂಚಲಾಗಿದೆ ಎಂದು ತಿಳಿದುಬಂದಿದೆ. ಆದರೆ ಆಸ್ತಿ ಮತ್ತು ಮಕ್ಕಳಿಗೆ ಹಂಚಿಕೆಯಾದ ಹಣದ ವಿಚಾರದಲ್ಲಿ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು ಎಂದು ಮಾಧುರಿ ಮಿಶ್ರಾ ಹೇಳಿದ್ದಾರೆ.
ಘನಶ್ಯಾಮ ಅವರು ಹಿಂದೆ ನೀಡಿದ್ದ ತುರ್ತು ಸಂಪರ್ಕ ಸಂಖ್ಯೆಗೆ ವೃದ್ಧಾಶ್ರಮದ ಸಿಬ್ಬಂದಿ ಕರೆ ಮಾಡಿದ್ದರು. ಆದರೆ, ಕುಟುಂಬದವರಿಂದ ತಮಗೆ ಬಂದ ಪ್ರತಿಕ್ರಿಯೆ ನಿರಾಸೆ ಮೂಡಿಸಿತು ಎಂದು ಮಿಶ್ರಾ ತಿಳಿಸಿದ್ದಾರೆ. “ನಾವು ಆ ಸಂಖ್ಯೆಗೆ ಕರೆ ಮಾಡಿದಾಗ, ‘ನನಗೆ ಅವರು ಯಾರೆಂಬುದೇ ಗೊತ್ತಿಲ್ಲ. ನಾನು ಅವರನ್ನು ತ್ಯಜಿಸಿದ್ದೇನೆ. ಅವರಿಗೂ ನನಗೂ ಇನ್ನು ಯಾವುದೇ ಸಂಬಂಧವಿಲ್ಲ’ ಎಂದು ನಮಗೆ ತಿಳಿಸಲಾಯಿತು” ಎಂದು ಮಾಧುರಿ ಮಿಶ್ರಾ ಎನ್ಡಿಟಿವಿಗೆ ತಿಳಿಸಿದ್ದಾರೆ.
ಸಾವಿನ ಬಳಿಕವೂ ಕುಟುಂಬದವರು ಬರಲಿಲ್ಲ
ಆಗಸ್ಟ್ 4ರಂದು ಘನಶ್ಯಾಮ ಮೃತಪಟ್ಟ ಬಳಿಕವೂ ‘ಅಪ್ನಾ ಘರ್’ ಸಿಬ್ಬಂದಿ ಅವರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಕುಟುಂಬದ ಯಾವುದೇ ಸದಸ್ಯರು ವೃದ್ಧಾಶ್ರಮಕ್ಕೆ ಆಗಮಿಸಲಿಲ್ಲ. ಮೃತದೇಹ ಪಡೆಯಲು ಯಾರೂ ಮುಂದೆ ಬರಲಿಲ್ಲ. ಅಂತ್ಯಕ್ರಿಯೆಯಲ್ಲೂ ಕುಟುಂಬದ ಯಾರೊಬ್ಬರೂ ಭಾಗವಹಿಸಲಿಲ್ಲ.
ಎರಡು ದಿನಗಳ ಕಾಲ ಕುಟುಂಬದವರಿಗಾಗಿ ಕಾಯ್ದ ಬಳಿಕ, ಕೊನೆಗೆ ‘ಅಪ್ನಾ ಘರ್’ ವೃದ್ಧಾಶ್ರಮದ ಸಿಬ್ಬಂದಿಯೇ ಪೊಲೀಸರ ನೆರವಿನಿಂದ ಘನಶ್ಯಾಮ ಅವರ ಅಂತ್ಯಕ್ರಿಯೆ ನೆರವೇರಿಸಿದರು.
ಈಗ ಮಕ್ಕಳಿಗೆ ಬೇಕಾಗಿದೆಯಂತೆ ಅಪ್ಪನ ಡೆತ್ ಸರ್ಟಿಫಿಕೇಟ್…!
ಘನಶ್ಯಾಮ ಅವರ ಅಂತ್ಯಕ್ರಿಯೆ ಮುಗಿದ ಬಳಿಕ ಅವರ ಕುಟುಂಬದವರು ವೃದ್ಧಾಶ್ರಮವನ್ನು ಸಂಪರ್ಕಿಸಿ ಡೆತ್ ಸರ್ಟೀಫಿಕೆಟ್ ನೀಡುವಂತೆ ಕೇಳಿದ್ದಾರೆ ಎಂದು ‘ಅಪ್ನಾ ಘರ್’ ತಿಳಿಸಿದೆ.
ವೃದ್ಧಾಶ್ರಮದವರ ಪ್ರಕಾರ, ಘನಶ್ಯಾಮ ಮೃತಪಟ್ಟಿರುವ ವಿಷಯವನ್ನು ಕುಟುಂಬದವರಿಗೆ ತಿಳಿಸಿ, ಭೋಪಾಲ್ಗೆ ಬಂದು ಮೃತದೇಹ ಪಡೆಯುವಂತೆ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಭೋಪಾಲ್ಗೆ ಬರಲು ಸಾಧ್ಯವಾಗದಿರುವುದಕ್ಕೆ ಕುಟುಂಬದವರು ವಿವಿಧ ಕಾರಣಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಕೊನೆಗೆ, ಘನಶ್ಯಾಮ ಅವರ ಅಂತ್ಯಕ್ರಿಯೆಯನ್ನು ವೃದ್ಧಾಶ್ರಮದ ಸಿಬ್ಬಂದಿಯೇ ನೆರವೇರಿಸಿದ ಬಳಿಕ, ಅವರ ಮರಣ ಪ್ರಮಾಣಪತ್ರವನ್ನು ತಮಗೆ ಕಳುಹಿಸುವಂತೆ ಕುಟುಂಬದವರು ಕೇಳಿದ್ದಾರೆ ಎಂದು ವೃದ್ಧಾಶ್ರಮ ತಿಳಿಸಿದೆ.
ಘನಶ್ಯಾಮ ಅವರ ಕೊನೆಯ ದಿನಗಳಲ್ಲಿ ಅವರ ಜವಾಬ್ದಾರಿ ವಹಿಸಿಕೊಳ್ಳಲು ಕುಟುಂಬದವರು ಮುಂದೆ ಬರಲಿಲ್ಲ. ಸಾವಿನ ಬಳಿಕವೂ ಮೃತದೇಹ ಪಡೆಯಲು ಅಥವಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಯಾರೂ ಬರಲಿಲ್ಲ. ಆದರೆ ಇದೀಗ ಮರಣ ಪ್ರಮಾಣಪತ್ರಕ್ಕಾಗಿ ಮಾತ್ರ ಕುಟುಂಬದವರು ಸಂಪರ್ಕಿಸಿರುವುದು ಏಕೆ ಎಂಬ ಪ್ರಶ್ನೆಯನ್ನು ಮಾಧುರಿ ಮಿಶ್ರಾ ಎತ್ತಿದ್ದಾರೆ.
ನಾಲ್ವರು ಮಕ್ಕಳನ್ನು ಬೆಳೆಸಲು ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ ತಂದೆಯ ಅಂತ್ಯಯಾತ್ರೆಯಲ್ಲಿ ಕೊನೆಗೆ ಅವರ ಮಕ್ಕಳೇ ಇರಲಿಲ್ಲ. ಬದುಕಿದ್ದಾಗ ಆಸರೆಯಾಗಬೇಕಿದ್ದ ಕುಟುಂಬ ದೂರ ಉಳಿದರೆ, ಪರಿಚಯವೇ ಇಲ್ಲದ ವೃದ್ಧಾಶ್ರಮದ ಸಿಬ್ಬಂದಿ ಅವರ ಕೊನೆಯ ಕ್ಷಣಗಳಲ್ಲಿ ಜೊತೆಯಾಗಿ ನಿಂತರು.
ಮಕ್ಕಳನ್ನು ಬೆಳೆಸಿದ ತಂದೆಗೆ ಕೊನೆಯ ಕ್ಷಣದಲ್ಲಿ ಮಕ್ಕಳ ನೆರವು ಸಿಗದ ಈ ಘಟನೆ, ಕುಟುಂಬವೆಂದರೆ ಕೇವಲ ರಕ್ತಸಂಬಂಧವಲ್ಲ; ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವ ಮಾನವೀಯತೆಯೂ ಹೌದು ಎಂಬ ಗಂಭೀರ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ.
ಭೋಪಾಲ್ : ಪತ್ನಿಯನ್ನು ಕಳೆದುಕೊಂಡ ಬಳಿಕ ನಾಲ್ವರು ಮಕ್ಕಳನ್ನು ಏಕಾಂಗಿಯಾಗಿ ಸಾಕಿ-ಸಲಹಿ ಬೆಳೆಸಿದ ತಂದೆ. ಮಕ್ಕಳ ಬದುಕು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ವಯಸ್ಸಾದ ಬಳಿಕ ಮಾತ್ರ ಕುಟುಂಬದವರು ಸಹಾಯ-ಸಹಕಾರ ದೊರೆಯದೆ ವೃದ್ಧಾಶ್ರಮದ ಆಶ್ರಯ ಪಡೆಯಬೇಕಾಯಿತು. ಕೊನೆಗೆ 70ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಾಗ, ಅವರ ಪಕ್ಕದಲ್ಲಿ ಒಬ್ಬ ಮಗನಾಗಲಿ, ಮಗಳಾಗಲಿ ಇರಲಿಲ್ಲ. ಸಾವಿನ ಬಳಿಕವೂ ಮೃತದೇಹ ಪಡೆಯಲು ಕುಟುಂಬದ ಯಾರೊಬ್ಬರೂ ಬರಲಿಲ್ಲ. ಅಂತಿಮವಾಗಿ, ವೃದ್ಧಾಶ್ರಮದ ಸಿಬ್ಬಂದಿಯೇ ಪೊಲೀಸರ ನೆರವಿನಿಂದ ಅವರ ಅಂತ್ಯಕ್ರಿಯೆ ನೆರವೇರಿಸಿದ ಮನನೋಯಿಸುವ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಇಂದೋರ್ ಮೂಲದ ಘನಶ್ಯಾಮ (70) ಅವರು ಆಗಸ್ಟ್ 4ರಂದು ಭೋಪಾಲದ ʼಅಪ್ನಾ ಘರ್ʼ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದರು. ಸುಮಾರು ನಾಲ್ಕು ವರ್ಷಗಳಿಂದ ಇದೇ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿಯೇ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದರು.
ಘನಶ್ಯಾಮ ಅವರ ಪತ್ನಿ ಮಕ್ಕಳು ಚಿಕ್ಕವರಿದ್ದಾಗಲೇ ಮೃತಪಟ್ಟಿದ್ದರು. ಪತ್ನಿಯ ನಿಧನದ ಬಳಿಕ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ತಾವೊಬ್ಬರೇ ಸಾಕಿ-ಸಲಹಿ ಬೆಳೆಸಿದ್ದರು. ಕುಟುಂಬವನ್ನು ಸಾಕಿ ಸಲಹಲು ಅವರು ಸೈಕಲ್ಗಳ ಟೈರ್ ಮತ್ತು ಟ್ಯೂಬ್ಗಳನ್ನು ಮಾರಾಟ ಮಾಡುತ್ತಿದ್ದರು. ಪತ್ನಿ ಮೃತಪಟ್ಟ ಸಂದರ್ಭದಲ್ಲಿ ಘನಶ್ಯಾಮ ಅವರ ಕಿರಿಯ ಮಗಳು ಕೇವಲ ಎರಡು ವರ್ಷದವಳಾಗಿದ್ದಳು ಎನ್ನಲಾಗಿದೆ.
ಆದರೆ ಜೀವನದ ಕೊನೆಯ ಕಾಲದಲ್ಲಿ ಘನಶ್ಯಾಮ ಅವರ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಅವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿ, ನಡೆಯಲು ಹಾಗೂ ಮಾತನಾಡಲು ತೀವ್ರವಾಗಿ ಕಷ್ಟಪಡುತ್ತಿದ್ದರು. ಒಂದು ಸಂದರ್ಭದಲ್ಲಿ ಇಂದೋರಿನಿಂದ ಭೋಪಾಲಕ್ಕೆ ಬಂದಿದ್ದ ಘನಶ್ಯಾಮ ಅವರು ಭೋಪಾಲದ ಐಎಸ್ಬಿಟಿ (ISBT) ಬಳಿ ಇದ್ದರು. ಅಲ್ಲಿ ಅವರನ್ನು ಕೆಲ ಸಾಮಾಜಿಕ ಕಾರ್ಯಕರ್ತರು ಗಮನಿಸಿ ಅವರನ್ನು ʼಅಪ್ನಾ ಘರ್ʼ ವೃದ್ಧಾಶ್ರಮಕ್ಕೆ ಕರೆತಂದಿದ್ದರು. ಆ ಬಳಿಕ ಅಪ್ನಾ ಘರ್ ಅವರ ಪಾಲಿಗೆ ಮನೆಯಂತೆಯೇ ಆಗಿತ್ತು.
ಸುಮಾರು ನಾಲ್ಕು ವರ್ಷಗಳ ಕಾಲ ವೃದ್ಧಾಶ್ರಮದ ಸಿಬ್ಬಂದಿ ಘನಶ್ಯಾಮ ಅವರನ್ನು ಆರೈಕೆ ಮಾಡಿದ್ದರು. ಆರೋಗ್ಯ ಹದಗೆಟ್ಟಾಗಲೆಲ್ಲ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಇದೇ ವೇಳೆ ಅವರ ಕುಟುಂಬದವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದ್ದರೂ, ಯಾರೊಬ್ಬರೂ ಅವರನ್ನು ಕರೆದುಕೊಂಡು ಹೋಗಲು ಅಥವಾ ಅವರ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬರಲಿಲ್ಲ ಎಂದು ವೃದ್ಧಾಶ್ರಮದ ವ್ಯವಸ್ಥಾಪಕಿ ಮಾಧುರಿ ಮಿಶ್ರಾ ತಿಳಿಸಿದ್ದಾರೆ.
ಆಸ್ತಿಯ ಮಾರಾಟ, ಮಕ್ಕಳಿಗೆ ಹಣ ಹಂಚಿಕೆ
ಘನಶ್ಯಾಮ ಅವರ ಇಂದೋರ್ನಲ್ಲಿದ್ದ ಮನೆ-ಆಸ್ತಿಯನ್ನು ಮಾರಾಟ ಮಾಡಲಾಗಿದ್ದು, ಬಂದ ಹಣವನ್ನು ಅವರ ಮಕ್ಕಳ ನಡುವೆ ಹಂಚಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಆಸ್ತಿ ಹಾಗೂ ಪ್ರತಿಯೊಬ್ಬ ಮಕ್ಕಳಿಗೆ ದೊರೆತ ಹಣದ ವಿಚಾರದಲ್ಲಿ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು ಎಂದು ಮಾಧುರಿ ಮಿಶ್ರಾ ಹೇಳಿದ್ದಾರೆ.
ಮಿಶ್ರಾ ಅವರು, ಘನಶ್ಯಾಮ ಅವರು ಹಿಂದೆ ನೀಡಿದ್ದ ತುರ್ತು ಸಂಪರ್ಕ ಸಂಖ್ಯೆಗೆ ವೃದ್ಧಾಶ್ರಮದವರು ಕರೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. “ನಾವು ಆ ಸಂಖ್ಯೆಗೆ ಕರೆ ಮಾಡಿದಾಗ, ‘ನನಗೆ ಅವರು ಯಾರೆಂಬುದೇ ಗೊತ್ತಿಲ್ಲ. ನಾನು ಅವರನ್ನು ತ್ಯಜಿಸಿದ್ದೇವೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ನಮಗೆ ತಿಳಿಸಲಾಯಿತು ಎಂದು ಮಾಧುರಿ ಮಿಶ್ರಾ ಎನ್ಡಿಟಿವಿಗೆ ತಿಳಿಸಿದ್ದಾರೆ.
ಸಾವಿನ ಬಳಿಕವೂ ಕುಟುಂಬದವರು ಬರಲಿಲ್ಲ
ಆಗಸ್ಟ್ 4ರಂದು ಘನಶ್ಯಾಮ ಮೃತಪಟ್ಟ ಬಳಿಕವೂ ಅಪ್ನಾ ಘರ್ ಸಿಬ್ಬಂದಿ ಅವರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಕುಟುಂಬದ ಯಾವುದೇ ಸದಸ್ಯರು ವೃದ್ಧಾಶ್ರಮಕ್ಕೆ ಆಗಮಿಸಲಿಲ್ಲ. ಮೃತದೇಹವನ್ನು ಪಡೆಯಲು ಯಾರೂ ಮುಂದೆ ಬರಲಿಲ್ಲ. ಅಂತ್ಯಕ್ರಿಯೆಗೂ ಯಾರೊಬ್ಬರೂ ಹಾಜರಾಗಲಿಲ್ಲ. ಎರಡು ದಿನಗಳ ಕಾಲ ಕುಟುಂಬದವರಿಗಾಗಿ ಕಾಯ್ದ ಬಳಿಕ, ಕೊನೆಗೆ ಅಪ್ನಾ ಘರ್ ವೃದ್ಧಾಶ್ರಮದ ಸಿಬ್ಬಂದಿಯೇ ಪೊಲೀಸರ ನೆರವಿನಿಂದ ಘನಶ್ಯಾಮ್ ಅವರ ಅಂತ್ಯಸಂಸ್ಕಾರ ನೆರವೇರಿಸಿದರು.
ಈಗ ಅವರಿಗೆ ಬೇಕಾಗಿರುವುದು ಮರಣ ಪ್ರಮಾಣಪತ್ರ ಮಾತ್ರ !
ಘನಶ್ಯಾಮ ಅವರ ಅಂತ್ಯಕ್ರಿಯೆ ನಂತರ ಅವರ ಕುಟುಂಬದವರು ತಮಗೆ ಮರಣ ಪ್ರಮಾಣಪತ್ರ ನೀಡುವಂತೆ ಕೇಳಿದ್ದಾರೆ ಎಂದು ಅಪ್ನಾ ಘರ್ ತಿಳಿಸಿದೆ.
ವೃದ್ಧಾಶ್ರಮದವರು ನೀಡಿದ ಮಾಹಿತಿಯ ಪ್ರಕಾರ, ವೃದ್ಧಾಶ್ರಮವು ಘನಶ್ಯಾಮ ಮರಣದ ಬಗ್ಗೆ ಕುಟುಂಬದವರಿಗೆ ತಿಳಿಸಿ, ಭೋಪಾಲ್ಗೆ ಬಂದು ಮೃತದೇಹವನ್ನು ಪಡೆಯುವಂತೆ ಅಥವಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪದೇಪದೇ ಮನವೊಲಿಸಲು ಪ್ರಯತ್ನಿಸಿತು. ಕುಟುಂಬದವರು ಭೋಪಾಲಕ್ಕೆ ಬರಲಾಗದೇ ಇರುವುದಕ್ಕೆ ವಿವಿಧ ಕಾರಣಗಳನ್ನು ನೀಡಿದ್ದಾರೆ. ಕೊನೆಗೆ, ಘನಶ್ಯಾಮ್ ಅವರ ಅಂತ್ಯಕ್ರಿಯೆಯನ್ನು ವೃದ್ಧಾಶ್ರಮದವರಿಗೆ ನೆರವೇರಿಸಲು ಹೇಳಿ, ಮರಣ ಪ್ರಮಾಣಪತ್ರವನ್ನು ತಮಗೆ ಕಳುಹಿಸುವಂತೆ ಕುಟುಂಬದವರು ತಿಳಿಸಿದ್ದಾರೆ ಎನ್ನಲಾಗಿದೆ.
ಇದೇ ವಿಚಾರ ಇದೀಗ ಹಲವು ಪ್ರಶ್ನೆಗಳನ್ನು ಎತ್ತಿದೆ. ಘನಶ್ಯಾಮ ಅವರ ಕೊನೆಯ ದಿನಗಳಲ್ಲಿ ಅವರ ಜವಾಬ್ದಾರಿ ವಹಿಸಿಕೊಳ್ಳಲು ಕುಟುಂಬದವರು ಮುಂದೆ ಬರಲಿಲ್ಲ. ಸಾವಿನ ಬಳಿಕವೂ ಮೃತದೇಹ ಪಡೆಯಲು ಅಥವಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಯಾರೂ ಬರಲಿಲ್ಲ. ಆದರೆ ಇದೀಗ ಮರಣ ಪ್ರಮಾಣಪತ್ರಕ್ಕಾಗಿ ಮಾತ್ರ ಕುಟುಂಬದವರು ತಮ್ಮನ್ನು ಸಂಪರ್ಕಿಸಿರುವುದು ಏಕೆ ಎಂದು ಮಾಧುರಿ ಮಿಶ್ರಾ ಪ್ರಶ್ನಿಸಿದ್ದಾರೆ.
ಮಕ್ಕಳನ್ನು ಬೆಳೆಸಿದ ತಂದೆಗೆ ಕೊನೆಯ ಕ್ಷಣದಲ್ಲಿ ಮಕ್ಕಳ ನೆರವು ಸಿಗದ ಈ ಘಟನೆ ಇದನ್ನೊಂದು ಮರೆಯಲಾಗದಷ್ಟು ನೋವಿನ ಕಥೆಯನ್ನಾಗಿ ಮಾಡಿದೆ. ಕುಟುಂಬ ಎಂದರೆ ಕೇವಲ ರಕ್ತಸಂಬಂಧವಲ್ಲ; ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವ ಮಾನವೀಯತೆಯೂ ಹೌದು ಎಂಬ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ