ಭೀಕರ ಅಪಘಾತ: ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

ಉಡುಪಿ: ಕಾರ್ಕಳ ತಾಲೂಕು ನೆಲ್ಲಿಕಾರು ಎಂಬಲ್ಲಿ ಇಂದು(ಶನಿವಾರ) ಬೆಳಗ್ಗೆ ಖಾಸಗಿ ಬಸ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ವರ್ಷದ ಮಗು ಸೇರಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪದ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಮೈನೇರು ಪ್ರದೇಶದಲ್ಲಿ ಘಟನೆ ನಡೆದಿದ್ದು, ಶನಿವಾರ ಬೆಳಗ್ಗೆ 7 ರ ವೇಳೆಗೆ ಘಟನೆ … Continued

ಕ್ರೂಸರ್-ಟ್ರ್ಯಾಕ್ಟರ್ ಡಿಕ್ಕಿ: ಇಬ್ಬರ ಸಾವು, 9 ಜನರಿಗೆ ಗಾಯ

ವಿಜಯಪುರ :ಅಕ್ಕಲಕೋಟೆಯ ಸ್ವಾಮಿ ಸಮರ್ಥ ಕ್ಷೇತ್ರಗೆ ತೆರಳುತ್ತಿದ್ದ ಅಥಣಿ ಮೂಲದವರಿಬ್ಬರು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಯ್ಯಾಜಿ ಶಿಂಧೆ(50)ಮತ್ತು ಸುಮಿತ್ರಾ ಶಿಂಧೆ(45)ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ  ಧೂಳಖೇಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು 9 ಜನ ಗಂಭೀರ ಗಾಯಗೊಂಡಿದ್ದಾರೆ. ಕ್ರೂಸರ್ … Continued

ಲಾರಿಗೆ ಅಪ್ಪಳಿಸಿದ ಕಾರು : ಮೂವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ರಸ್ತೆ ವಿಭಜಕಕ್ಕೆ ಬಡಿದ ಕಾರು ನಂತರ ಲಾರಿಗೆ ಅಪ್ಪಳಿಸಿ ಸಂಭವಿಸಿದ ಅಪಘಾತ ಚಿತ್ರದುರ್ಗದ ಹೊರವಲಯದಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಚಿತ್ರದುರ್ಗದ ಹೊರವಲಯದ ಸೀಬಾರ ಬಳಿ ಈ ಅಪಘಾತ ಸಂಭವಿಸಿದ್ದು, ಇನ್ನೊವಾ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಬಳಿಕ ಲಾರಿಗೆ ಅಪ್ಪಳಿಸಿ ಇಬ್ಬರು ಮಹಿಳೆಯರು ಹಾಗೂ ಪುರುಷ ಮೃತಪಟ್ಟಿದ್ದಾರೆ … Continued

ಅಂಕೋಲಾ: ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಓರ್ವ ಸಾವು

ಅಂಕೋಲಾ: ಅಂಕೋಲಾ: ಸ್ವಿಪ್ಟ್ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದ ನಂತರ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಹಾರವಾಡದ ರೈಲ್ವೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಉಳಿದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವುದಾಗಿ ಮಾಹಿತಿ ದೊರಕಿದೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಅಗ್ನಿಶಾಮಕ … Continued

ಮರಕ್ಕೆ ಸ್ವಾಮೀಜಿ ಕಾರು ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು, ಶ್ರೀಗಳಿಗೆ ಗಾಯ

ಗದಗ: ಜಿಲ್ಲೆಯ ನರಗುಂದ ಹೊರವಲಯದಲ್ಲಿ ಮರಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಮೃತಪಟ್ಟಿದ್ದು, ಕಾರಿನಲ್ಲಿದ್ದ ಸ್ವಾಮೀಜಿ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದ ಬಗ್ಗೆ ವರದಿಯಾಗಿದೆ. ಅಪಘಾತದಲ್ಲಿ ನರೇಗಲ್ ಹಿರೇಮಠ ಹಾಗೂ ಸವದತ್ತಿ ಮೂಡಿ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ನರಗುಂದ ಹೊರವಲಯದಲ್ಲಿ ಮರಕ್ಕೆ ಕಾರು ಢಿಕ್ಕಿ ಹೊಡೆದಿದೆ. ಚಾಲಕ ವೀರೇಶ … Continued

ಭೀಕರ ಅಪಘಾತ: ಇಬ್ಬರು ಪುಟಾಣಿಗಳು ಸೇರು ಮೂವರ ಸಾವು

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಢಿಕ್ಕಿಯಾದ ರಭಸಕ್ಕೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ. ರಾಣೇಬೆನ್ನೂರು ನಗರದ ನಿವಾಸಿ, ಶಿಕ್ಷಕ ಜಯಪ್ರಕಾಶ್(48) ಹಾಗೂ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಶಾಲಿನಿ(8) ಮತ್ತು ಯಶೋದಾ(8) ಮೃತರು ಎಂದು ಗುರುತಿಸಲಾಗಿದೆ. … Continued

ಅಂಕೋಲಾ: ರಸ್ತೆ ಕಾರ್ಮಿಕರ ವಾಹನ ಪಲ್ಟಿ: ಮೂವರಿಗೆ ಗಂಭೀರ ಗಾಯ

ಕಾರವಾರ: ರಸ್ತೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ವಾಹನ ಪಲ್ಟಿಯಾಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಆಚವೆ ಗ್ರಾಪಂ ವ್ಯಾಪ್ತಿಯ ವಾಡಗಾರದಲ್ಲಿನಡೆದಿದೆ. ಅಂಕೋಲಾ ತಾಲೂಕಿನ ವಾಡಗಾರ ಘಟ್ಟದ ಪ್ರದೇಶದ ಶನಿವಾರ  ಈ ಘಟನೆ ನಡೆದಿದ್ದು,   ಟಾಟಾ 407 ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯರು, ಆಸ್ಪತ್ರೆಗೆ … Continued

ಭೀಕರ ಅಪಘಾತ :ಯಲ್ಲಾಪುರದ ಮೂವರ ಸಾವು

ಹಿರೇಬಾಗೇವಾಡಿ :ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿಯ ವಿರಪನ ಕೊಪ್ಪ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮೂಲದವರು. ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಮುಂದಿದ್ದ ಲಾರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಸ್ಥಳದಲ್ಲಿಯೇ … Continued

ಅರಸಿಕೆರೆ ಜಂಕ್ಷನ್ನಿನಲ್ಲಿ ನಿಂತಿದ್ದ ರೈಲು ಬೋಗಿಗಳಲ್ಲಿ ಬೆಂಕಿ

ಹಾಸನ: ಕೊರೋನಾ ರೋಗಿಗಳ ಐಸೊಲೇಷನ್ ಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ರೈಲು ಬೋಗಿಗಳಿಗೆ ಅರಸಿಕೆರೆ ಜಂಕ್ಷನ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಮಂಗಳವಾರ ರಾತ್ರಿ ಈ ಘಟನೆ ವರದಿಯಾಗಿದ್ದು, ಸೂಕ್ತ ಸಮಯಕ್ಕೆ ಅಗ್ನಿಶಾಮಕ ಪಡೆ ಆಗಮಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಅವಘಡ ಸಂಭವಿಸುವುದಕ್ಕೂ ಮುನ್ನ ಬೆಂಕಿಯನ್ನು ನಂದಿಸಲಾಗಿದೆ. ರೈಲ್ವೆ ಪೊಲೀಸರ ಮಾಹಿತಿಯ ಪ್ರಕಾರ ಬೆಂಕಿ ಅವಘಡಕ್ಕೆ ಕಾರಣ … Continued

ಕುಮಟಾ: ಕಾರು ಪಲ್ಟಿಯಾಗಿ ಮಹಿಳೆ ಸಾವು, ಮೂವರಿಗೆ ಗಾಯ

ಕುಮಟಾ :ರಾಷ್ಟ್ರೀಯ ಹೆದ್ದಾರಿ  66ರಲ್ಲಿ ಮೋಟಾರ್ ಕಾರ ಪಲ್ಟಿ ಯಾಗಿ ಮಹಿಳೆಯೊಬ್ಬಳು ಮೃತ ಪಟ್ಟ ಘಟನೆ ಸೋಮವಾರ ನಡೆದ ಬಗ್ಗೆ ವರದಿಯಾಗಿದೆ. ಸೋಮವಾರ ಮಧ್ಯಾಹ್ನ   ವಿಪರೀತ ಸುರಿಯುತ್ತಿರುವ ಮಳೆಯಿಂದ ಕಾರ ಸ್ಕಿಡ್ಡ್ ಆಗಿದೆ ಎನ್ನಲಾಗಿದೆ. ಕಾರು ಮೂರು ಪಲ್ಟಿಯಾಗಿದ್ದರಿಂದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಕಾರಿನಲ್ಲಿ ಇದ್ದ ಮಹಿಳೆ ರಮಾ ಭಟ್ಟ ಎಂಬವರು ಮೃತಪಟ್ಟಿದ್ದು … Continued