ಕೊಳಕುತನ…: ಭಾರತದ ಏಷ್ಯಾ ಕಪ್ ಟ್ರೋಫಿ ತೆಗೆದುಕೊಂಡು ಹೋದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ…!

ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆದರೂ ಭಾರತದ ಕ್ರಿಕೆಟ್ ತಂಡವು ಪಾಕಿಸ್ತಾನದ ಸಚಿವರೂ ಆಗಿರುವ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ACC) ಚೇರ್ಮನ್‌ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಕಾರಣರಾದವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಮುಖ್ಯಸ್ಥರೂ ಆಗಿರುವ … Continued

ಬಿಸಿಸಿಐ ನೂತನ ಅಧ್ಯಕ್ಷರಾಗಿ ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ

 ಮುಂಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರ್ಷಿಕ ಸಾಮಾನ್ಯ ಸಭೆಯ ನಂತರ ಮಿಥುನ್ ಮನ್ಹಾಸ್ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಸೌರವ್ ಗಂಗೂಲಿ ಮತ್ತು ರೋಜರ್ ಬಿನ್ನಿಯ ನಂತರ ನಿರಂತರವಾಗಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ಮೂರನೇ ಕ್ರಿಕೆಟಿಗರಾಗಿದ್ದಾರೆ. ರೋಜರ್ ಬಿನ್ನಿಯ … Continued

ಟಿ 20 ಏಷ್ಯಾ ಕಪ್‌ 2025 : ಭಾರತದ ತಂಡ ಪ್ರಕಟ

ನವದೆಹಲಿ: ಅಜಿತ ಅಗರ್ಕರ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಮಂಗಳವಾರ ಮುಂದಿನ ತಿಂಗಳು ನಡೆಯಲಿರುವ ಟಿ 20 ಏಷ್ಯಾ ಕಪ್‌ಗಾಗಿ ಭಾರತದ 15 ಜನರ ತಂಡವನ್ನು ಪ್ರಕಟಿಸಿದೆ. ಸೂರ್ಯಕುಮಾರ ಯಾದವ್ ನಾಯಕರಾಗಿದ್ದು, ಶುಭಮನ್‌ ಗಿಲ್‌ ಉಪನಾಯಕರಾಗಿದ್ದಾರೆ. ಭಾರತದ ತಂಡವು ಯುಎಇ, ಪಾಕಿಸ್ತಾನ ಮತ್ತು ಒಮಾನ್ ಜೊತೆಗೆ ಎ ಗುಂಪಿನಲ್ಲಿದೆ. ಯಶಸ್ವಿ ಜೈಸ್ವಾಲ್ ಮುಖ್ಯ ತಂಡದಲ್ಲಿ ಸ್ಥಾನ … Continued

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ ; ಶುಭಮನ್ ಗಿಲ್ ನೂತನ ನಾಯಕ

ಮುಂಬೈ : ಭಾರತದ 37ನೇ ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. ಮೇ 24 ರ ಶನಿವಾರ ಮುಂಬೈನಲ್ಲಿ ನಡೆದ ಹಿರಿಯ ಆಯ್ಕೆ ಸಮಿತಿ ಸಭೆಯಲ್ಲಿ ಬಿಸಿಸಿಐ ಈ ನಿರ್ಧಾರವನ್ನು ದೃಢಪಡಿಸಿದೆ. ಜೂನ್ 20 ರಂದು ಹೆಡಿಂಗ್ಲಿಯಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ 5-ಟೆಸ್ಟ್ ಸರಣಿಗೆ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಅಜಿತ … Continued

ಕ್ರಿಕೆಟ್‌ | ಚಾಂಪಿಯನ್ಸ್ ಟ್ರೋಫಿಗೆ ಭಾರತದ ತಂಡ ಪ್ರಕಟ

ನವದೆಹಲಿ: ಫೆಬ್ರವರಿ 19 ರಿಂದ ಪ್ರಾರಂಭವಾಗುವ 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು ಅದಕ್ಕಿಂತ ಮೊದಲಲು ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಪಂದ್ಯಗಳ (ODI) ಸರಣಿಗಾಗಿ ಭಾರತವು ತನ್ನ ತಂಡವನ್ನು ಪ್ರಕಟಿಸಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತದ ತಂಡವು ಬಾಂಗ್ಲಾದೇಶದ ವಿರುದ್ಧ ತನ್ನ ಮೊದಲ ಪಂದ್ಯದೊಂದಿಗೆ ತನ್ನ ಅಭಿಯಾನ ಪ್ರಾರಂಭಿಸಲಿದೆ. ಫೆಬ್ರವರಿ 23 ರಂದು ದುಬೈನಲ್ಲಿ … Continued

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ 15 ಜನರ ಭಾರತದ ಕ್ರಿಕೆಟ್‌ ತಂಡ ಪ್ರಕಟ; ತಂಡಕ್ಕೆ ಮರಳಿದ ಶಮಿ

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಐದು ಪಂದ್ಯಗಳ ಸರಣಿಯು ಜನವರಿ 22 ರಿಂದ ನಡೆಯಲಿದೆ. ಹಾಲಿ ವಿಶ್ವ ಟಿ20 ಚಾಂಪಿಯನ್ ಆಗಿರುವ ಭಾರತದ ತಂಡವು ಬಾರ್ಬಡೋಸ್‌ನಲ್ಲಿ ಟ್ರೋಫಿ ಗೆದ್ದ ನಂತರ ಇದುವರೆಗೆ ಯಾವುದೇ ಸರಣಿಯನ್ನು ಕಳೆದುಕೊಂಡಿಲ್ಲ. ಐದು … Continued

‘ಕ್ರಿಕೆಟ್ ಗೆಲ್ಲಬೇಕು, ಅದು ಅತ್ಯಂತ ಮುಖ್ಯ’: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುವ ಬಗ್ಗೆ ಸುಳಿವು ನೀಡಿದ ಪಿಸಿಬಿ ಮುಖ್ಯಸ್ಥ

ನವದೆಹಲಿ: ಶನಿವಾರ ನಡೆದ ಐಸಿಸಿಯ ವರ್ಚುವಲ್ ಸಭೆಯ ನಂತರ 2025 ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿರುವ ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಐಸಿಸಿ ಯಾವುದೇ ಮಾಹಿತಿ ನೀಡಿಲ್ಲ. ಇಡೀ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸುವ ನಿಲುವು ತಳೆದಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಈಗ … Continued

ಚಾಂಪಿಯನ್ಸ್ ಟ್ರೋಫಿ | “ಹೈಬ್ರಿಡ್ ಮಾದರಿ ಒಪ್ಪಿಕೊಳ್ಳಿ ಅಥವಾ…” : ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಂತಿಮ ಅವಕಾಶ ನೀಡಿದ ಐಸಿಸಿ…!

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಪಾಕಿಸ್ತಾನಕ್ಕೆ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನು ನಡೆಸಲು ಗಡುವು ನೀಡಿದೆ ಎಂದು ವರದಿಯಾಗಿದೆ. ಭಾರತದ ಆಟಗಳನ್ನು ಬೇರೆಡೆ ನಡೆಸಲಾಗುವುದು ಅಥವಾ ಇದಕ್ಕೆ ಒಪ್ಪದಿದ್ದರೆ ನೀವು ಮುಂಬರುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವಿರಿ ಎಂದು ಐಸಿಸಿ ಎಚ್ಚರಿಸಿದೆ ಎಂದು ವರದಿ ಹೇಳಿದೆ. ಭಾರತದ ತಂಡವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ … Continued

ಐಪಿಎಲ್ 2025 ಹರಾಜು : ಮಾರಾಟದಲ್ಲಿ ಅಯ್ಯರ್ 26.75 ಕೋಟಿ ರೂ. ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ರಿಷಭ ಪಂತ…! ಅತ್ಯಂತ ದುಬಾರಿ 5 ಭಾರತೀಯ ಆಟಗಾರರು

ನವದೆಹಲಿ: ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಐಪಿಎಲ್ 2025 ಹರಾಜು ಭಾನುವಾರ ಆರಂಭವಾಗಿದ್ದು, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಭಾನುವಾರ (ನವೆಂಬರ್ 24) ಈ ಇಬ್ಬರು ಆಟಗಾರರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದ್ದಾರೆ. ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ಜೋಡಿಯನ್ನು ಪ್ರಾಂಚೈಸಿಗಳಾದ ಎಲ್‌ಸಿಜಿ ಮತ್ತು ಪಂಜಾಬ್ … Continued

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಚಾಂಪಿಯನ್ಸ್ ಟ್ರೋಫಿ ಕೊಂಡೊಯ್ಯಲು ಪಾಕಿಸ್ತಾನ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ನಿರ್ಬಂಧಿಸಿದ ಐಸಿಸಿ : ವರದಿ

ಭಾರತವನ್ನು ಕೆರಳಿಸುವ ಕೆಲಸಕ್ಕೆ ಮುಂದಾಗಿದ್ದ ಪಾಕಿಸ್ತಾನಕ್ಕೆ, ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ. ಅದರಂತೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ವಿವಾದಿತ ಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯುವಂತಿಲ್ಲ ಎಂದು ಪಾಕಿಸ್ತಾನಕ್ಕೆ ಐಸಿಸಿ ನಿರ್ಬಂಧಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2025 ರ ಚಾಂಪಿಯನ್ಸ್ ʼಟ್ರೋಫಿ ಪ್ರವಾಸʼವನ್ನು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ಮೂರು ನಗರಗಳಲ್ಲಿಯೂ ಆಯೋಜಿಸುವ, … Continued