ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಆಮ್‌ ಆದಮಿ ಪಕ್ಷಕ್ಕೆ ಆಘಾತದಲ್ಲಿ ಪಂಜಾಬಿನ ಆಮ್ ಆದ್ಮಿ ಪಕ್ಷದ ಏಕೈಕ ಲೋಕಸಭಾ ಸದಸ್ಯ ಸುಶೀಲಕುಮಾರ ರಿಂಕು ಅವರು ಪಕ್ಷದ ಶಾಸಕ ಶೀತಲ ಅಂಗುರಲ್ ಅವರೊಂದಿಗೆ ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಂಗುರಲ್ ಅವರು ಜಲಂಧರ್ ಪಶ್ಚಿಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಜಲಂಧರ ಸಂಸದ ಸುಶೀಲಕುಮಾರ ರಿಂಕು ಅವರೊಂದಿಗೆ ಶಾಸಕರು ಕೇಂದ್ರ … Continued

ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಬಿಜೆಪಿಗೆ ಶಾಕ್‌ ; ಪರಿಷತ್‌ ಸ್ಥಾನಕ್ಕೆ ತೇಜಸ್ವಿನಿ ಗೌಡ ದಿಢೀರ್‌ ರಾಜೀನಾಮೆ..!

ಬೆಂಗಳೂರು : ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಅವರು ತಮ್ಮ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ..! ಅವಧಿಗೆ ಮುಂಚೆಯೇ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಲೋಕಸಭಾ ಚುನಾವಣೆ (Lok Sabha Election 2024) ವೇಳೆ ಈ ಬೆಳವಣಿಗೆ ನಡೆದಿರುವುದರಿಂದ ಮಹತ್ವ ಪಡೆದಿದ್ದು, ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆ … Continued

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿಗೆ ಆಘಾತ: ಲೂಧಿಯಾನದ ಕಾಂಗ್ರೆಸ್ ಸಂಸದ ಬಿಜೆಪಿ ಸೇರ್ಪಡೆ

ನವದೆಹಲಿ : ಲೋಕಸಭೆ ಚುನಾವಣೆಗೂ ಮುನ್ನ ಪಂಜಾಬಿನ ಲೂಧಿಯಾನದ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ. “ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞನಾಗಿದ್ದೇನೆ…ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಂಜಾಬ್‌ನ ಬಗ್ಗೆ ಬಹಳಷ್ಟು ಪ್ರೀತಿಯನ್ನು … Continued

ವಿವಾದಕ್ಕೆ ಕಾರಣವಾದ ಕಂಗನಾ ರಣಾವತ್ ಕುರಿತ ಕಾಂಗ್ರೆಸ್ ನಾಯಕಿ ಇನ್ಸ್ಟಾಗ್ರಾಮ್ ಪೋಸ್ಟ್

ನವದೆಹಲಿ: ನಟಿ ಕಂಗನಾ ರಣಾವತ್ ಅವರ ಚುನಾವಣಾ ಪ್ರಚಾರದ ಕುರಿತು ಕಾಂಗ್ರೆಸ್ ನಾಯಕರೊಬ್ಬರು ಅವಹೇಳನಕಾರಿ ಪೋಸ್ಟ್ ಮಾಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ರಾಜಕಾರಣಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನಾಟೆ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಕಂಗನಾ ರಣಾವತ್ ಅವರ ಫೋಟೋದೊಂದಿಗೆ ಪೋಸ್ಟ್ ರಾಷ್ಟ್ರೀಯ ಚುನಾವಣೆಗೆ ವಾರಗಳ ಮೊದಲು ಬಂದಿದೆ. … Continued

ಮೋದಿ..ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದ ಸಚಿವ ತಂಗಡಗಿ : ಚುನಾವಣೆ ಆಯೋಗಕ್ಕೆ ದೂರು ನೀಡಿದ ಬಿಜೆಪಿ

ಬೆಂಗಳೂರು: ಮೋದಿ ಮೋದಿ ಎಂದು ಕೂಗಿದವರ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ನಾಯಕರು ದೂರು ನೀಡಿದ್ದಾರೆ. ಅವರನ್ನು ಚುನಾವಣ ಪ್ರಕ್ರಿಯೆ ಮತ್ತು ಕಾಂಗ್ರೆಸ್‌ ಪರ ಪ್ರಚಾರದಿಂದ ನಿರ್ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜಕುಮಾರ ಮೀನಾ ಅವರನ್ನು … Continued

ಮತ್ತೆ ಬಿಜೆಪಿಗೆ ಸೇರ್ಪಡೆಯಾದ ಜನಾರ್ದನ ರೆಡ್ಡಿ

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಇಂದು, ಸೋಮವಾರ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಮ್ಮುಖದಲ್ಲಿ ತಮ್ಮ ಪಕ್ಷ ಕೆಆರ್‌ಪಿಪಿಯನ್ನು ಬಿಜೆಪಿ ಜೊತೆ ವಿಲೀನ … Continued

ಲೋಕಸಭೆ ಚುನಾವಣೆ : ಕೈತಪ್ಪಿದ ಬಿಜೆಪಿ ಟಿಕೆಟ್ ; ಭಾವನಾತ್ಮಕ ಪತ್ರ ಬರೆದ ಸಂಸದ ಅನಂತಕುಮಾರ ಹೆಗಡೆ

ಶಿರಸಿ : ಲೋಕಸಭೆ ಚುನಾವಣೆಗೆ 111 ಅಭ್ಯರ್ಥಿಗಳ ಬಿಜೆಪಿಯ ಐದನೇ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್‌ ತಪ್ಪಿದೆ. ಅವರ ಬದಲಿಗೆ ವಿಧಾನಸಭೆ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದರ ಬೆನ್ನಲ್ಲೇ ಅನಂತಕುಮಾರ ಹೆಗಡೆ ಅವರು ಭಾವುಕ ಪತ್ರ ಬರೆದಿದ್ದು, ಸೇವೆ … Continued

ಲೋಕಸಭೆ ಚುನಾವಣೆ : 111 ಅಭ್ಯರ್ಥಿಗಳ ಬಿಜೆಪಿಯ 5ನೇ ಪಟ್ಟಿ ಬಿಡುಗಡೆ, ಕಂಗನಾ ರಣಾವತ್‌, ಅರುಣ ಗೋವಿಲಗೆ ಟಿಕೆಟ್‌, ವರುಣ ಗಾಂಧಿಗೆ ನಿರಾಕರಣೆ ; ಸಂಪೂರ್ಣ ಪಟ್ಟಿ…

ನವದೆಹಲಿ: ಬಿಜೆಪಿ ಭಾನುವಾರ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸಚಿವರಾದ ಅಶ್ವಿನಿಕುಮಾರ ಚೌಬೆ ಮತ್ತು ಜನರಲ್‌ ವಿ ಕೆ ಸಿಂಗ್ ಹಾಗೂ ಸಂಸದ ವರುಣ ಗಾಂಧಿ ಅವರನ್ನು ಕೈಬಿಡಲಾಗಿದೆ. ಉತ್ತರ ಪ್ರದೇಶದ ಒಂಬತ್ತು, ಗುಜರಾತ್‌ನಲ್ಲಿ ಐದು, ಒಡಿಶಾದಲ್ಲಿ 4 ಮತ್ತು ಬಿಹಾರ, ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ತಲಾ ಮೂವರು ಸೇರಿದಂತೆ ಇತ್ತೀಚಿನ … Continued

ಲೋಕಸಭೆ ಚುನಾವಣೆ: ಬಿಜೆಪಿಯ 5ನೇ ಪಟ್ಟಿ ಬಿಡುಗಡೆ, ಕರ್ನಾಟಕದ 4 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ, ಅನಂತಕುಮಾರ ಹೆಗಡೆಗೆ ತಪ್ಪಿದ ಟಿಕೆಟ್‌

ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್‌ ನೀಡಲಾಗಿದೆ. … Continued

ನೀತಿ ಸಂಹಿತೆ ಉಲ್ಲಂಘನೆ : ಬಿ.ವೈ.ರಾಘವೇಂದ್ರ ವಿರುದ್ಧ ದೂರು ದಾಖಲು

ಚಿತ್ರದುರ್ಗ: ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧಾರ್ಮಿಕ ಸ್ಥಳವಾದ ಭೋವಿ ಗುರುಪೀಠವನ್ನು ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ ಹಾಗೂ ಅನುಮತಿ ಪಡೆಯದೆ ಸಭೆ ನಡೆಸಿ ಬಿಜೆಪಿ ಪರ ಪ್ರಚಾರ ಮಾಡುವ ಮೂಲಕ ಸಂಸದ ಬಿ.ವೈ.ರಾಘವೇಂದ್ರ ಅವರು … Continued