ಚುನಾವಣಾ ಆಯೋಗದ ಸೂಚನೆ : ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು : ತಮಿಳುನಾಡಿನಿಂದ ಬಂದು ಬೆಂಗಳೂರಲ್ಲಿ ಬಾಂಬ್ ಇಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ಬೆಂಗಳೂರಿನಲ್ಲಿ ಪ್ರತಿಭಟನೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದ ಆರೋಪದ ಮೇಲೆ ಶೋಭಾ ವಿರುದ್ಧ ಡಿಎಂಕೆ ಪಕ್ಷವು ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ … Continued

ಬಿಜೆಪಿ ಮೂರನೇ ಪಟ್ಟಿ ಪ್ರಕಟ; ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಅಣ್ಣಾಮಲೈ ಸೇರಿದಂತೆ ಪ್ರಮುಖರಿಗೆ ಟಿಕೆಟ್

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಲೋಕಸಭೆ ಅಭ್ಯರ್ಥಿಗಳ ತನ್ನ ಮೂರನೇ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ತೆಲಂಗಾಣ ಮಾಜಿ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಟಿಕೆಟ್‌ ನೀಡಲಾಗಿದೆ. ಆದರೆ ಮೂರನೇ ಪಟ್ಟಿಯಲ್ಲಿ ಕರ್ನಾಟಕದ ಯಾವ ಅಭ್ಯರ್ಥಿಯನ್ನೂ ಪ್ರಕಟಿಸಲಾಗಿಲ್ಲ. ತಮಿಳಿಸೈ ಸೌಂದರರಾಜನ್ ಚೆನ್ನೈ ದಕ್ಷಿಣದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕೊಯಮತ್ತೂರಿನಿಂದ ತಮಿಳುನಾಡು … Continued

ಬಿಜೆಪಿಗೆ ರಾಜೀನಾಮೆ ನೀಡಿದ ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್‌. ಬಚ್ಚೇಗೌಡ (BN Bachegowda) ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಬರೆದಿರುವ ಪತ್ರದಲ್ಲಿ, ʻʻನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಈ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ತಿಳಿಸಿದ್ದಾರೆ. 2008ರಲ್ಲಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು, ಶಾಸಕನಾಗಿ … Continued

ನೀತಿ ಸಂಹಿತೆ ಉಲ್ಲಂಘನೆ ಆರೋಪ ; ಕರಂದ್ಲಾಜೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಎಂಕೆ ಪತ್ರ : ತಕ್ಷಣವೇ ಸೂಕ್ತ ಕ್ರಮಕ್ಕೆ ಚುನಾವಣಾ ಆಯೋಗ ಸೂಚನೆ

ನವದೆಹಲಿ/ ಚೆನ್ನೈ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಡಿಎಂಕೆ ನೀಡಿರುವ ದೂರು ಆಧರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ಕೇಂದ್ರ ಚುನಾವಣಾ ಆಯೋಗವು ಬುಧವಾರ ನಿರ್ದೇಶನ ನೀಡಿದೆ. “ಮಾರ್ಚ್ 1 ರಂದು ನಡೆದ ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ತಮಿಳುನಾಡಿನ … Continued

ಲೋಕಸಭೆ ಚುನಾವಣೆ: ತಮಿಳುನಾಡಿನಲ್ಲಿ ಎನ್‌ಡಿಎ ಸೀಟು ಹಂಚಿಕೆ ಅಂತಿಮ ; ಪಿಎಂಕೆಗೆ 10 ಸ್ಥಾನಗಳು

ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಜೊತೆ ಬಿಜೆಪಿ ಮಂಗಳವಾರ ತನ್ನ ಚುನಾವಣಾ ಪೂರ್ವ ಮೈತ್ರಿಯನ್ನು ಅಂತಿಮಗೊಳಿಸಿದೆ. ಮೈತ್ರಿಯ ಸೀಟು ಹಂಚಿಕೆಯ ಸೂತ್ರದ ಪ್ರಕಾರ, ಪಿಎಂಕೆಗೆ ತಮಿಳುನಾಡಿನಲ್ಲಿ 10 ಲೋಕಸಭಾ ಸ್ಥಾನಗಳನ್ನು ನೀಡಲಾಗಿದೆ.. ಪಿಎಂಕೆ ಪಕ್ಷವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ)ಕ್ಕೆ ಸೇರ್ಪಡೆಗೊಳ್ಳುವ ಮತ್ತು ರಾಜ್ಯದಲ್ಲಿ ಸಂಸತ್ತಿನ … Continued

ಲೋಕಸಭೆ ಚುನಾವಣೆ : ಬಿಹಾರದಲ್ಲಿ ಎನ್‌ ಡಿ ಎ ಸೀಟು ಹಂಚಿಕೆ ಅಂತಿಮ ; ಈ ಬಾರಿ ಬಿಜೆಪಿಯೇ ದೊಡ್ಡಣ್ಣ…ಆ ಸ್ಥಾನ ಬಿಟ್ಟುಕೊಟ್ಟ ಜೆಡಿಯು…!

ನವದೆಹಲಿ: ಎನ್‌ಡಿಎ ಸೋಮವಾರ ಸಂಜೆ ಬಿಹಾರದಲ್ಲಿ ತನ್ನ ಸೀಟು ಹಂಚಿಕೆ ಸೂತ್ರವನ್ನು ಔಪಚಾರಿಕವಾಗಿ ಪ್ರಕಟಿಸಿದ್ದು, ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಅದನ್ನು ‘ದೊಡ್ಡಣ್ಣ’ನ ಸ್ಥಾನದಲ್ಲಿ ಇರಿಸಿದೆ. ಬಿಹಾರದಲ್ಲಿ ಈ ಹಿಂದೆ ಮೈತ್ರಿಕೂಟದಲ್ಲಿ ದೊಡ್ಡಣ್ಣನ ಸ್ಥಾನ ಪಡೆದಿದ್ದ ಮುಖ್ಯಮಂತ್ರಿ ನಿತೀಶಕುಮಾರ ಅವರ ಜೆಡಿಯು ಪಕ್ಷವು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚಿರಾಗ ಪಾಸ್ವಾನ್ ಅವರ ಲೋಕ ಜನಶಕ್ತಿ … Continued

ಚುನಾವಣಾ ಬಾಂಡ್ ಮೂಲಕ ಅತಿಹೆಚ್ಚು ಹಣ ಸ್ವೀಕರಿಸಿದ ಪಕ್ಷ ಬಿಜೆಪಿ ; ಅತಿಹೆಚ್ಚು ದಾನ ನೀಡಿದ ಫ್ಯೂಚರ್ ಗೇಮಿಂಗ್ ನಿಂದ ಡಿಎಂಕೆಗೆ ಸಿಂಹಪಾಲು : ಎಷ್ಟು ಗೊತ್ತೆ..?

ನವದೆಹಲಿ : ಚುನಾವಣಾ ಬಾಂಡ್‌ಗಳನ್ನು 2018 ರಲ್ಲಿ ಪರಿಚಯಿಸಿದಾಗಿನಿಂದ ಈ ಬಾಂಡ್‌ಗಳ ಮೂಲಕ ಗರಿಷ್ಠ ಹಣ 6,986.5 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ. ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್-1,397 ಕೋಟಿ ರೂ., ಕಾಂಗ್ರೆಸ್ -1,334 ಕೋಟಿ ರೂ. ಮತ್ತು ಬಿಆರ್‌ಎಸ್ 1,322 ಕೋಟಿ ರೂ. ಹಣ ಸ್ವೀಕರಿಸಿದೆ. ಚುನಾವಣಾ ಬಾಂಡ್‌ಗಳ ಅಗ್ರ ಖರೀದಿದಾರರಾದ ಫ್ಯೂಚರ್ … Continued

ಲೋಕಸಭೆ ಚುನಾವಣೆ : ಎನ್‌ ಡಿಎ ಮೈತ್ರಿಕೂಟ 400 ಸ್ಥಾನಗಳ ಗಡಿ ದಾಟಲಿದೆ ಎಂದು ಭವಿಷ್ಯ ನುಡಿದ ನ್ಯೂಸ್‌ 18 ಒಪಿನಿಯನ್‌ ಪೋಲ್‌

ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಮುಂಬರುವ ಲೋಕಸಭೆ ಚುನಾವಣೆಯಲ್ಲಿ “400 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ ಎಂದು ನೆಟ್‌ವರ್ಕ್ 18ರ ಮೆಗಾ ಒಪಿನಿಯನ್ ಪೋಲ್ ತಿಳಿಸಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 411 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜಿಸಿದ್ದು, ಬಿಜೆಪಿ ಏಕಾಂಗಿಯಾಗಿ 350 ಸ್ಥಾನಗಳನ್ನು ಗೆಲ್ಲಬಹುದು … Continued

ಲೋಕಸಭಾ ಚುನಾವಣೆ ಘೋಷಣೆ : 7 ಹಂತಗಳಲ್ಲಿ ಮತದಾನ ; ಜೂನ್‌ 4ಕ್ಕೆ ಫಲಿತಾಂಶ

ನವದೆಹಲಿ: ಲೋಕಸಭೆಗೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್‌ 19ರಿಂದ ಜೂನ್‌ 1ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದೆ. ಚುನಾವಣಾ ಮಾದರಿ ನೀತಿ ಸಂಹಿತೆ (Model Code of Conduct) ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ. ದೇಶದಲ್ಲಿ … Continued

ಪೊಲೀಸರು ಅನುಮತಿ ನಿರಾಕರಿಸಿದ ನಂತರ ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿ

ಚೆನ್ನೈ: ಮಾರ್ಚ್ 18 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕು ಕಿಮೀ ರೋಡ್ ಶೋ ನಡೆಸಲು ಮದ್ರಾಸ್ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್ ಆನಂದ ವೆಂಕಟೇಶ ಅವರು ರೋಡ್ ಶೋಗೆ ವ್ಯವಸ್ಥೆ ಮಾಡುವಂತೆ ಕೊಯಮತ್ತೂರು ಪೊಲೀಸರಿಗೆ ಆದೇಶಿಸಿದರು. ರೋಡ್ ಶೋ ನಡೆಸಲು ಅನುಮತಿ ನಿರಾಕರಿಸಿದ ಪೊಲೀಸರ … Continued