ಶಾಲೆಗೆ ಬಾಂಬ್‌ ಬೆದರಿಕೆ | ಶಾಲೆಗೆ ಹೋಗಲು ಇಷ್ಟವಿಲ್ಲದ ಕಾರಣ ಬಾಂಬ್‌ ಬೆದರಿಕೆ ಇ-ಮೇಲ್ ಕಳುಹಿಸಿದ 14 ವರ್ಷದ ವಿದ್ಯಾರ್ಥಿ..!

 ನವದೆಹಲಿ: ದಕ್ಷಿಣ ದೆಹಲಿಯ ಕೈಲಾಶ ಕಾಲೋನಿಯಲ್ಲಿರುವ ಸಮ್ಮರ್ ಫೀಲ್ಡ್ ಶಾಲೆಗೆ ಶುಕ್ರವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆದರೆ, ತನಿಖೆಯ ನಂತರ ಅದು ಸುಳ್ಳು ಎಂಬುದು ಎಂದು ಕಂಡುಬಂದಿದೆ. ಈ ಪ್ರಕರಣದಲ್ಲಿ 14 ವರ್ಷದ ವಿದ್ಯಾರ್ಥಿಯನ್ನು ಶಂಕಿತ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, 14 ವರ್ಷದ ಬಾಲಕ ಶಾಲೆಗೆ ಹೋಗಲು … Continued

ಕಲಬುರಗಿ ವಿಮಾನ ನಿಲ್ದಾಣಕ್ಕೆ‌ ಬಾಂಬ್ ಬೆದರಿಕೆ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣ (Kalaburagi Airport) ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬಾಂಬ್​ ಬೆದರಿಕೆಯ ಇ-ಮೇಲ್ ಬಂದಿದೆ. ​ಏರ್ ಪೋರ್ಟ್ ನ ಟರ್ಮಿನಲ್ ಕಟ್ಟಡದಲ್ಲಿ ಬಾಂಬ್ ಇರಿಸಿರುವ ಬಗ್ಗೆ ಇ ಮೇಲ್ ಸಂದೇಶ ಕಳುಹಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಬಾಂಬ್ ನಿಷ್ಕ್ರಿಯ ದಳ ವ್ಯಾಪಕ ಶೋಧನಾ ಕಾರ್ಯ ನಡೆಸುತ್ತಿದೆ. ಭದ್ರತಾ ಪಡೆಯವರೂ ತಪಾಸಣೆ ನಡೆಸಿದ್ದಾರೆ. ಬೆಂಗಳೂರಿನಿಂದ … Continued

ಬೆಂಗಳೂರಿನ ಮೂರು ಪ್ರತಿಷ್ಠಿತ ಹೋಟೆಲ್​ಗಳಿಗೆ ಬಾಂಬ್​ ಬೆದರಿಕೆ

ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಒಟೆರಾ ಹೋಟೆಲ್ ಸೇರಿದಂತೆ ಮೂರು ಪ್ರತಿಷ್ಠಿತ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಲಾಗಿದ್ದು, ಅಧಿಕಾರಿಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಆಗ್ನೇಯ ಬೆಂಗಳೂರು ಡಿಸಿಪಿ ಪ್ರಕಾರ, ಪೊಲೀಸರು, ಬಾಂಬ್ ಸ್ಕ್ವಾಡ್ ಮತ್ತು ಸ್ನಿಫರ್ ಡಾಗ್‌ಗಳನ್ನು ಹೊಟೇಲ್‌ಗಳಿಗೆ ಕಳುಹಿಸಲಾಗಿದೆ. ಮಧ್ಯರಾತ್ರಿ 2 ಗಂಟೆಗೆ ಬಾಂಬ್​ ಸ್ಫೋಟಿಸುವುದಾಗಿ ಹೇಳಲಾಗಿದೆ. ಗುರುವಾರ ಬೆಳಗ್ಗೆ ಹೋಟೆಲ್ … Continued

50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

ನವದೆಹಲಿ: ದೆಹಲಿ ಮತ್ತು ನೋಯ್ಡಾದ 50 ಕ್ಕೂ ಹೆಚ್ಚು ಶಾಲೆಗಳಿಗೆ ಬುಧವಾರ ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿ ಮನೆಗೆ ಕಳುಹಿಸಲಾಗಿದೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಲವು ಶಾಲೆಗಳಿಗೆ ಮೇಲ್ ಕಳುಹಿಸಲಾಗಿದೆ. ಚಾಣಕ್ಯಪುರಿಯಲ್ಲಿರುವ … Continued

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬೆನ್ನಲ್ಲೇ ಸಿಎಂ, ಡಿಸಿಎಂಗೆ ಬಾಂಬ್​ ಸ್ಫೋಟಿಸುವ ಬೆದರಿಕೆಯ ಇ-ಮೇಲ್

ಬೆಂಗಳೂರು : ರಾಮೇಶ್ವರಂ ಕೆಫೆ ಮಾದರಿಯಲ್ಲೇ ಮತ್ತೊಮ್ಮೆ ಬಾಂಬ್ ಸ್ಫೋಟ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಬೆಂಗಳೂರು ಪೊಲೀಸ್‌ ಕಮಿಷನರ್‌ ಅವರಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಗೃಹ ಸಚಿವರಿಗೆ ಮೇಲ್ ಮಾಡಿರುವ ದುಷ್ಕರ್ಮಿಗಳು, ಕಳೆದ ಮಾರ್ಚ್‌ 2ರ ಶನಿವಾರ ಮಧ್ಯಾಹ್ನ ಬೆದರಿಕೆ ಇ-ಮೇಲ್‌ ಕಳುಹಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ … Continued

ಆರ್‌ಬಿಐಗೆ 11 ಕಡೆ ಬಾಂಬ್ ಸ್ಫೋಟಿಸುವ ಬೆದರಿಕೆ ಮೇಲ್ : ನಿರ್ಮಲಾ ಸೀತಾರಾಮನ್, ಶಕ್ತಿಕಾಂತ ದಾಸ್‌ ರಾಜೀನಾಮೆಗೆ ಒತ್ತಾಯ

ಮುಂಬೈ: ಮಂಗಳವಾರ ಮುಂಬೈನಲ್ಲಿ 11 ಬಾಂಬ್ ಸ್ಫೋಟಿಸುವ ಕುರಿತು ಇಲ್ಲಿನ ರಿಸರ್ವ್ ಬ್ಯಾಂಕ್‌ಗೆ ಬೆದರಿಕೆ ಮೇಲ್ ಕಳುಹಿಸಿದ್ದು, ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ಆದರೆ ಆರ್‌ಬಿಐ ಕೇಂದ್ರ ಕಚೇರಿ ಕಟ್ಟಡ ಮತ್ತು ಇತರ ಎರಡು ಬ್ಯಾಂಕ್‌ಗಳು ಸೇರಿದಂತೆ ಈ ಸ್ಥಳಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಆರ್‌ಬಿಐ ಗವರ್ನರ್‌ರ ಇಮೇಲ್ ಐಡಿಯಲ್ಲಿ [email protected] ಎಂಬ ಐಡಿಯಿಂದ ಆರ್‌ಬಿಐ ಹೊಸ … Continued

ಬೆಂಗಳೂರಿನ 44 ಶಾಲೆಗಳಿಗೆ ಬಾಂಬ್ ಬೆದರಿಕೆ….!

ಬೆಂಗಳೂರು :ಬೆಂಗಳೂರಿನ 44 ಶಾಲೆಗಳಿಗೆ ಬಾಂಬ್‌ ಬೆದರಿಕೆ (Bomb Threat to Schools) ಹಾಕಲಾಗಿದೆ. ಈ ಮೇಲ್‌ ಮೂಲಕ ಈ ಬಾಂಬ್‌ ಬೆದರಿಕೆ ಬಂದಿದ್ದು, ಬೆಳಗ್ಗೆ ಮೇಲ್‌ ಚೆಕ್‌ ಮಾಡುವಾಗ ಇದು ಗೊತ್ತಾಗಿದೆ. ಪೊಲೀಸರು ಶಾಲೆಗಳಿಗೆ ದೌಡಾಯಿಸಿದ್ದು, ಬಾಂಬ್‌ ತಪಾಸಣೆ ದಳಗಳೂ ಆಗಮಿಸಿವೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನ 44 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ … Continued

ಡಿಕೆಶಿ ಒಡೆತನದ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದು ವಿದ್ಯಾರ್ಥಿ..!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಒಡೆತನದ ಆರ್‌ಆರ್ ನಗರದಲ್ಲಿರುವ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಸೋಮವಾರ ಹುಚ್ಚಾ ವೆಂಕಟ್ ಹೆಸರಿನ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಅದೇ ಶಾಲೆಯ ವಿದ್ಯಾರ್ಥಿ ಎಂದು ಹೇಳಲಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಡಿ.ಕೆ ಶಿವಕುಮಾರ್ ಒಡೆತನದ ಹಿಲ್ಸ್ ವ್ಯೂವ್ ಪಬ್ಲಿಕ್ ಶಾಲೆಗೆ ನಿನ್ನೆ ಹುಚ್ಚ ವೆಂಕಟ್ … Continued

ಬೆಂಗಳೂರಿನ ಡಿ.ಕೆ. ಶಿವಕುಮಾರ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಆರ್.ಆರ್.ನಗರದಲ್ಲಿರುವ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಇ-ಮೇಲ್ ಮುಖಾಂತರ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಪೊಲೀಸರು, ಬಾಂಬ್ ಸ್ಕ್ವಾಡ್, ಶ್ವಾನ ತಂಡ​ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಶಾಲೆಯಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ನೀಡಲಾಗಿದೆ. ಅವರನ್ನೆಲ್ಲಾ ಬೇರೆಡೆಗೆ ಸ್ಥಳಾಂತರ ಮಾಡುವ ಕಾರ್ಯ … Continued