ಭಾರತದ ವೈದ್ಯಕೀಯ ಪದವೀಧರರು ಇನ್ಮುಂದೆ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ. ಇತರ ದೇಶಗಳಲ್ಲಿ ಪ್ರಾಕ್ಟೀಸ್‌ ಮಾಡಬಹುದು

ನವದೆಹಲಿ: ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC)ಕ್ಕೆ ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ (WFME) 10 ವರ್ಷಗಳ ಅವಧಿಯ ಮಾನ್ಯತೆಯ ಸ್ಥಾನಮಾನ ನೀಡಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದರಿಂದಾಗಿ ಇನ್ನು ಮುಂದೆ ಭಾರತೀಯ ವೈದ್ಯಕೀಯ ಪದವೀಧರರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ತರಬೇತಿ … Continued

ಕೆನಡಾದಲ್ಲಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆ ಮಾಡಿದ್ದು ತಾನೇ ಎಂದ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್

ನವದೆಹಲಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಕೆನಡಾದ ವಿನ್ನಿಪೆಗ್ ನಗರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ ಎಂದು ಆತನ ಗ್ಯಾಂಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಪೋಸ್ಟ್‌ನಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಸುಖಾ ದುನುಕೆ ಎಂದೂ ಕರೆಯಲ್ಪಡುವ ಸುಖದೂಲ್ ಸಿಂಗ್ ಗ್ಯಾಂಗ್‌ಸ್ಟರ್‌ಗಳಾದ ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. … Continued

ಕೆನಡಾದಲ್ಲಿ ಗ್ಯಾಂಗ್ ವಾರ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖಾ ದುನೆಕೆ ಹತ್ಯೆ : ಮೂಲಗಳು

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಸುಖಾ ದುನೆಕೆ ಕೆನಡಾದಲ್ಲಿ ಗ್ಯಾಂಗ್ ನಡುವಿನ ಪೈಪೋಟಿಯಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ದುನೆಕೆ ಕೆನಡಾದಲ್ಲಿ ಖಲಿಸ್ತಾನ್ ಚಳವಳಿಯ ಭಾಗವಾಗಿದ್ದ. ದುನೆಕೆ ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಎಂಬಾತನೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಜೂನ್‌ನಲ್ಲಿ ಕೆನಡಾದ ನೆಲದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ … Continued

ಕೆನಡಾದಲ್ಲಿ ದೇವಸ್ಥಾನದ ಗೋಡೆಗಳು, ದ್ವಾರಗಳ ಮೇಲೆ ಭಾರತ ವಿರೋಧಿ ಪೋಸ್ಟರ್‌ಗಳನ್ನು ಅಂಟಿಸಿದ ಖಾಲಿಸ್ತಾನಿ ಬೆಂಬಲಿಗರು.

 ಕೆನಡಾದಲ್ಲಿ ಶನಿವಾರ ರಾತ್ರಿ ಖಾಲಿಸ್ತಾನಿ ಬೆಂಬಲಿಗರು ದೇವಸ್ಥಾನದ ದ್ವಾರದ ಮೇಲೆ ಖಾಲಿಸ್ತಾನಿ ಪೋಸ್ಟರ್‌ ಗಳನ್ನು ಹಾಕಿರುವುದು ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಬ್ರಿಟಿಷ್ ಕೊಲಂಬಿಯಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಗೋಡೆಗಳು ಮತ್ತು ದ್ವಾರದ ಮೇಲೆ “ಖಾಲಿಸ್ತಾನ್ ಪರ” ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 18 ರಂದು … Continued

ವೀಡಿಯೊ : ಕೆನಡಾದಲ್ಲಿ ಖಲಿಸ್ತಾನೀ ಬೆಂಬಲಿಗರ ವಿಕೃತಿ…ಇಂದಿರಾ ಗಾಂಧಿ ಹತ್ಯೆ ಸಂಭ್ರಮಿಸುವ ಸ್ತಬ್ದಚಿತ್ರದ ಮೆರವಣಿಗೆ

ಕೆನಡಾದಲ್ಲಿ ಮತ್ತೊಂದು ಆಘಾತಕಾರಿ ವಿದ್ಯಮಾನದಲ್ಲಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದ ಟ್ಯಾಬ್ಲೋವನ್ನು ಜೂನ್ 4 ರಂದು ಬ್ರಾಂಪ್ಟನ್‌ನಲ್ಲಿ ಮೆರವಣಿಗೆ ಮಾಡಲಾಯಿತು. ಇದನ್ನು ತೋರಿಸುವ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ, ಅದರಲ್ಲಿ ಇಂದಿರಾ ಪ್ರತಿಮೆ ಇದೆ. ಇಂದಿರಾ ಗಾಂಧಿ ರಕ್ತದಲ್ಲಿ ಮುಳುಗಿರುವುದನ್ನು ಕಾಣಬಹುದು. ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರು ‘ಆಪರೇಷನ್ ಬ್ಲೂಸ್ಟಾರ್’ … Continued

ಕೆನಡಾದ ಭಗವದ್ಗೀತೆ ಉದ್ಯಾನದಲ್ಲಿ ವಿಧ್ವಂಸಕ ಕೃತ್ಯ: ಭಾರತದ ಖಂಡನೆ

ಟೊರೊಂಟೊ: ಕೆನಡಾದ ಬ್ರಾಂಪ್ಟನ್‌ನಲ್ಲಿ ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತೆ ಉದ್ಯಾನವನದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ಭಾರತ ಖಂಡಿಸಿದೆ. ಅಪರಾಧಿಗಳ ವಿರುದ್ಧ ತನಿಖೆ ನಡೆಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಭಾರತವು ಕೆನಡಾದ ಅಧಿಕಾರಿಗಳನ್ನು ಒತ್ತಾಯಿಸಿದೆ. ಈ ಹಿಂದೆ ಟ್ರಾಯರ್ಸ್ ಪಾರ್ಕ್ ಎಂದು ಕರೆಯಲ್ಪಡುತ್ತಿದ್ದ ಉದ್ಯಾನಕ್ಕೆ ಶ್ರೀ ಭಗವದ್ಗೀತಾ ಪಾರ್ಕ್ ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನು ಸೆಪ್ಟೆಂಬರ್ 28 … Continued

ರೈತರ ಪ್ರತಿಭಟನೆ: ಯು ಟರ್ನ್‌ ಹೊಡೆದ ಕೆನಡಾ ಪ್ರಧಾನಿ

ನವ ದೆಹಲಿ: ಈಗ ಯು-ಟರ್ನ್ ಹೊಡೆದಿರುವ ಕೆನಡಾ ಪ್ರಧಾನಿ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಆಂದೋಲನ ಮಾಡುತ್ತಿರುವ ರೈತರೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದಕ್ಕಾಗಿ ಭಾರತ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆಯ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿದರು. ವಿಶೇಷವೆಂದರೆ ಕೆನಡಾ … Continued

ಕೆನಡಾದ ಭಾರತೀಯರಿಗೆ ಬೆದರಿಕೆ ಕರೆ..!

ಕೆನಡಾ: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿರೋಧಿಸಿದ ಹಿನ್ನೆಲೆಯಲ್ಲಿ ಇಂಡೋ-ಕೆನಡಿಯನ್‌ ಸಮುದಾಯದ ಹಲವು ಸದಸ್ಯರ ವಿರುದ್ಧ ಲೈಂಗಿಕ ದೌರ್ಜನ್ಯದ ಬೆದರಿಕೆಗಳು ಬರುತ್ತಿವೆ ಎಂದು ಹಲವರು ಆರೋಪ ಮಾಡಿದ್ದಾರೆ. ಗ್ರೇಟರ್‌ ಟೊರೆಂಟೊ, ಮೆಟ್ರೊ ವ್ಯಾಂಕೋವರ್‌, ಕ್ಯಾಲ್ಗರಿ ಸೇರಿದಂತೆ ಕೆನಡಾದ ವಿವಿಧೆಡೆ ವಾಸವಾಗಿರುವ ಇಂಡೋ-ಕೆನಡಿಯನ್‌ ಸಮುದಾಯದ ಜನರನ್ನು ಗುರಿಯಾಗಿಸಿ ಬೆದರಿಕೆ ಕರೆಗಳು ಬರುತ್ತಿವೆ. ಕರೆಗಳು ನಿಂದನೆ, ಧಾರ್ಮಿಕ ದ್ವೇಷದಿಂದ … Continued

ಟೂಲ್‌ಕಿಟ್‌ ತನಿಖೆ: ಭಾರತದಿಂದ ಕೆನಡಾ ನೆರವು ಕೇಳುವ ಸಾಧ್ಯತೆ

ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಬೆಂಬಲಿಸುವವರಿಗೆ ಟೂಲ್‌ಕಿಟ್‌ ರೂಪಿಸಿದ ವ್ಯಕ್ತಿಗಳು ಮತ್ತು ಗುಂಪುಗಳ ತನಿಖೆಯಲ್ಲಿ ಭಾರತವು ಕೆನಡಾದ ನೆರವನ್ನು ಕೇಳುವ ಸಾಧ್ಯತೆಯಿದೆ. ನವದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಹಿಂಸಾಚಾರಕ್ಕೆ ಸಂಬಂಧಿಸಿದ ಕುರಿತು ಕೆನಡಾದಲ್ಲಿ ಕಾನೂನು ಜಾರಿ ಸಂಸ್ಥೆಗಳ ಸಹಕಾರ ನಮಗೆ ಬೇಕಾದಾಗ ನಾವು ಅದನ್ನು ಕೆನಡಾದ ಸರ್ಕಾರದಿಂದ ಪಡೆದುಕೊಳ್ಳುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೂಲ್‌ಕಿಟ್ ಅನ್ನು … Continued