ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಸಾವು

ಜಶ್ಪುರ: ಛತ್ತೀಸ್‌ಗಢದ ಜಶ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಆನೆ ದಾಳಿಗೆ ಈವರೆಗೆ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. ಬಾಗೀಚಾ ನಗರ ಪಂಚಾಯತ್‌ನ ಗಮ್ಹ್ರಿಯಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಅವರು … Continued

ಪೊಲೀಸರ ಎನ್‌ಕೌಂಟರ್‌ನಲ್ಲಿ ಹತರಾದ ತಲೆಯ ಮೇಲೆ 38 ಲಕ್ಷ ರೂ.ಬಹುಮಾನವಿದ್ದ 6 ನಟೋರಿಯಸ್‌ ನಕ್ಸಲರು…

ರಾಯ್ಪುರ : ಎರಡು ದಿನಗಳ ಹಿಂದೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ಆರು ನಕ್ಸಲೀಯರ ತಲೆಯ ಮೇಲೆ 38 ಲಕ್ಷ ರೂ.ಗಳ ಬಹುಮಾನ ಹೊಂದಿದ್ದರು ಎಂದು ವರದಿಯಾಗಿದೆ. ಈ ಕಾರ್ಯಾಚರಣೆಯು ನಕ್ಸಲೀಯರ ದಾಳಿಯ ಶಕ್ತಿಯ ಆಧಾರಸ್ತಂಭವೆಂದು ಪರಿಗಣಿಸಲಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಕಂಪನಿ ನಂ.6ರ ಮೇಲೆ ಭದ್ರತಾ … Continued

ಪಿಕಪ್ ವಾಹನ ಪಲ್ಟಿಯಾಗಿ 18 ಮಂದಿ ಸಾವು, ನಾಲ್ವರಿಗೆ ಗಾಯ

ಕವರ್ಧಾ : ಛತ್ತೀಸ್‌ಗಢದ ಕವರ್ಧಾ ಜಿಲ್ಲೆಯಲ್ಲಿ ಪಿಕಪ್ ವಾಹನ ಪಲ್ಟಿಯಾಗಿ 18 ಮಂದಿ ಸಾವಿಗೀಡಾಗಿ, 4 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಕವರ್ಧಾದಲ್ಲಿ ಸೋಮವಾರ ಮುಂಜಾನೆ ಅಪಘಾತ ಸಂಭವಿಸಿದ್ದು, ಮೃತರಲ್ಲಿ ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಹಲವಾರು ಪ್ರಯಾಣಿಕರು ಸೇರಿದ್ದಾರೆ. ಅತಿವೇಗದ ಚಾಲನೆಯಿಂದಾಗಿ ವಾಹನವು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. … Continued

ಎನ್‌ಕೌಂಟರ್‌ನಲ್ಲಿ 12 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ರಾಯ್ಪುರ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 12 ಮಾವೋವಾದಿಗಳು ಹತರಾಗಿದ್ದಾರೆ ಎಂದು ಮುಖ್ಯಮಂತ್ರಿ ವಿಷ್ಣು ದೇವ ಸಾಯಿ ಹೇಳಿದ್ದಾರೆ. ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದ ಬಳಿಯ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು … Continued

ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

ನವದೆಹಲಿ : ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಎನ್‌ಕೌಂಟರ್‌ನಲ್ಲಿ ಪ್ರಮುಖ ಮಾವೋವಾದಿ ನಾಯಕ ಶಂಕರ ರಾವ್ ಸೇರಿದಂತೆ 29 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಹಾಗೂ ಎಕೆ-47 ಮತ್ತು ಐಎನ್‌ಎಸ್‌ಎಎಸ್ ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಮೀಸಲು ಪಡೆ ಮತ್ತು ಗಡಿ ಭದ್ರತಾ ಪಡೆಗಳ ಜಂಟಿ ತಂಡ ದಾಳಿ … Continued

ನಕ್ಸಲರು ಮುಚ್ಚಿಸಿದ್ದ ಶ್ರೀರಾಮ ಮಂದಿರದ ಬಾಗಿಲು ಬರೋಬ್ಬರಿ 21 ವರ್ಷಗಳ ಬಳಿಕ ತೆರೆಯಿತು…

ರಾಯಪುರ (ಛತ್ತೀಸ್‌ಗಢ) :ಛತ್ತೀಸಗಢದ ಸುಕ್ಮಾ ಜಿಲ್ಲೆಯ ಕುಗ್ರಾಮವೊಂದರ ಜನತೆ ಈಗ ಸಂಭ್ರಮಿಸುತ್ತಿದ್ದಾರೆ. ಏಕೆಂದರೆ ಅಲ್ಲಿನ ಕೆರ್ಲಪೆಂಡಾ ಎಂಬ ಗ್ರಾಮದಲ್ಲಿ ಶ್ರೀರಾಮನ ದೇಗುಲಕ್ಕೆ ಬಿದ್ದಿದ್ದ ಬೀಗ ಮುದ್ರೆ 21 ವರ್ಷಗಳ ನಂತರ ಈಗ ತೆರವಾಗಿದೆ. ನಕ್ಸಲರ ಆಜ್ಞೆಯಂತೆ ಬಾಗಿಲು ಮುಚ್ಚಿದ ದೇಗುಲ 21 ವರ್ಷಗಳ ನಂತರ ಬಾಗಿಲು ತೆರೆದಿದೆ. 21 ವರ್ಷಗಳ ಹಿಂದೆ ಈ ಗ್ರಾಮದ ಮೇಲೆ … Continued

ವೀಡಿಯೊ…| ತಂದೆಯ ಕೈಯಿಂದ ಜಾರಿ ಮೂರನೇ ಮಹಡಿಯಿಂದ ಬಿದ್ದು ಮಗು ಸಾವು

ಛತ್ತೀಸ್‌ಗಢ : ಶಾಪಿಂಗ್ ಮಾಲ್‌ನ ಮೂರನೇ ಮಹಡಿಯಲ್ಲಿ ಎಸ್ಕಲೇಟರ್‌​​​​​ ಹತ್ತುವಾಗ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ 40 ಅಡಿಗಳಷ್ಟು ಕೆಳಗೆ ಬಿದ್ದ ಹೃದಯ ವಿದ್ರಾವಕ ಘಟನೆ ಮಂಗಳವಾರ ಛತ್ತೀಸ್‌ಗಢದ ರಾಜಧಾನಿ ರಾಯ್ಪುರದ ದೇವೇಂದ್ರ ನಗರದ ಮಾಲ್‌ನಲ್ಲಿ ನಡೆದಿದೆ. ಸುಮಾರು 40 ಅಡಿಗಳಷ್ಟು ಆಳಕ್ಕೆ ಮಗು ಬಿದ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿ … Continued

ವೀಡಿಯೊ…| ದಂತೇವಾಡದಲ್ಲಿ ನಕ್ಸಲರು ನಿರ್ಮಿಸಿಕೊಂಡ 130 ಮೀಟರ್ ಉದ್ದದ ಬೃಹತ್ ಸುರಂಗ ಪತ್ತೆ…!

ರಾಯ್ಪುರ: ಮಾವೋವಾದಿ ನಕ್ಸಲ್‌ ಪೀಡಿತ ಚತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭೂಗತ ಅಡಗುತಾಣವಾಗಿ ನಿರ್ಮಿಸಲಾದ 130 ಮೀಟರ್ ಉದ್ದದ ಸುರಂಗವನ್ನು ಪತ್ತೆ ಹಚ್ಚಿವೆ. ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿ ಭದ್ರತಾ ಪಡೆಗಳು ಹಿಂತಿರುಗುತ್ತಿದ್ದಾಗ ಅಡಗುತಾಣ ಪತ್ತೆಯಾಗಿದೆ. 10 ಅಡಿ ಆಳದ ಸುರಂಗವನ್ನು ಮೊದಲು ಸ್ಥಳೀಯ ಬುಡಕಟ್ಟು ಯುವಕರನ್ನು ಒಳಗೊಂಡಿರುವ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) … Continued

ಮಾವೋವಾದಿಗಳೊಂದಿಗೆ ನಡೆದ ಗುಂಡಿನ ಚಕಮಕಿ : 3 ಸಿ ಆರ್‌ ಪಿ ಎಫ್ ಯೋಧರು ಹುತಾತ್ಮ, 14 ಮಂದಿಗೆ ಗಾಯ

ರಾಯ್ಪುರ: ಛತ್ತೀಸ್‌ಗಢದ ಗಡಿಯಲ್ಲಿರುವ ಟೇಕಲ್‌ಗುಡೆಂ ಗ್ರಾಮದಲ್ಲಿ ಮಂಗಳವಾರ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಮೂವರು ಯೋಧರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಈ ಗ್ರಾಮವು ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳ ಗಡಿಯಲ್ಲಿದೆ. ನಕ್ಸಲ್ ಚಟುವಟಿಕೆಗಳ ಮೇಲೆ ನಿಗಾ ಇಡಲು ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶಿಬಿರವನ್ನು ಸ್ಥಾಪಿಸಿದ್ದು, ಸ್ಥಳೀಯರಿಗೂ ಅನುಕೂಲವಾಗಲಿದೆ. ಶಿಬಿರವನ್ನು ಸ್ಥಾಪಿಸಿದ ನಂತರ, ಸಿಆರ್‌ಪಿಎಫ್‌ನ … Continued

ದಾಂತೇವಾಡದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ಮೂವರು ನಕ್ಸಲರು ಸಾವು

ಛತ್ತೀಸ್‌ಗಢದ ದಾಂತೇವಾಡ-ಸುಕ್ಮಾ ಗಡಿಯಲ್ಲಿರುವ ತುಮಕ್‌ಪಾಲ್ ಮತ್ತು ಡಬ್ಬಾ ಕುನ್ನಾ ಗ್ರಾಮದ ನಡುವಿನ ಕಾಡಿನಲ್ಲಿ ಭಾನುವಾರ (ಡಿಸೆಂಬರ್ 24) ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ನಕ್ಸಲರು ಹತರಾಗಿದ್ದಾರೆ. ಭದ್ರತಾ ಪಡೆಗಳು ಸ್ಥಳದಿಂದ ನಕ್ಸಲ್ ಸಂಬಂಧಿತ ಸಾಮಗ್ರಿಗಳೊಂದಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಟೇಕಲ್ಯಾಣ ಪೊಲೀಸ್ … Continued