ಲೋಕಸಭೆ ಚುನಾವಣೆ :ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ; ಉತ್ತರ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಟಿಕೆಟ್ ಘೋಷಿಸಿದ ಸಮಾಜವಾದಿ ಪಕ್ಷ…!

ಲಕ್ನೋ : ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರಸ್ಸಿಗೆ ಶಾಕ್‌ ನೀಡಿದೆ. ಕಾಂಗ್ರೆಸ್ ಗಮನಕ್ಕೂ ತರದೆ ಸಮಾಜವಾದಿ ಪಕ್ಷವು ಲೋಕಸಭೆ ಚುನಾವಣೆಗಾಗಿ ಏಕಾಏಕಿ ತನ್ನ 16 ಅಭ್ಯರ್ಥಿಗಳ ಪಟ್ಟಿಯನ್ನು . ಬಿಡುಗಡೆ ಮಾಡಿದೆ. ಇದು ಅನಿರೀಕ್ಷಿತವಲ್ಲವಾದರೂ ಇದರಿಂದ ಕಾಂಗ್ರೆಸ್ಸಿಗೆ ಹೊಡೆತವನ್ನಂತೂ ನೀಡಿದೆ. … Continued

ಚಂಡೀಗಢ ಮೇಯರ್ ಚುನಾವಣೆ : ಇಂಡಿಯಾ ಮೈತ್ರಿಕೂಟದ ವಿರುದ್ಧ ಬಿಜೆಪಿಗೆ ಜಯ, 8 ಮತಗಳು ಅಸಿಂಧು, ಎಎಪಿ-ಕಾಂಗ್ರೆಸ್ ಕೋರ್ಟ್‌ ಮೊರೆ

ಚಂಡೀಗಢ : ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿಯ ಮೊದಲ ನೇರ ಹಣಾಹಣಿಯಲ್ಲಿ ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜಕುಮಾರ ಸೋಂಕರ್ ಅವರು ಗೆಲುವು ಸಾಧಿಸಿದ್ದಾರೆ. 8 ಮತಗಳು ಅಸಿಂಧುವಾದ ನಂತರ ಅವರು ಎಎಪಿ-ಕಾಂಗ್ರೆಸ್ ಜಂಟಿ ಅಭ್ಯರ್ಥಿ ಕುಲದೀಪ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ಪದನಿಮಿತ್ತ ಸದಸ್ಯ ಹಾಗೂ ಸಂಸದೆ ಕಿರಣ್ ಖೇರ್ … Continued

ಕೆರೆಗೋಡು ಹನುಮ ಧ್ವಜ ಪ್ರಕರಣ: ಪಿಡಿಒ ತಲೆದಂಡ

ಮಂಡ್ಯ : ಮಂಡ್ಯದ ಕೆರಗೋಡು (Keragodu) ಗ್ರಾಮದ ಧ್ವಜ ವಿವಾದ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕೆರಗೋಡು ಗ್ರಾಮ ಪಂಚಾಯತ ಪಿಡಿಒ ಜೀವನ್‌.ಬಿ.ಎಂ ಅವರನ್ನು ಸರ್ಕಾರ ಅಮಾನತು ಮಾಗಿದೆ. ಐದು ಕಾರಣಗಳನ್ನು ನೀಡಿ ಪಿಡಿಒ ಅವರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ತನ್ವೀರ್ ಆಸೀಫ್ ಸೇಠ್ ಆದೇಶ … Continued

ಕೆರೆಗೋಡು ಹನುಮ ಧ್ವಜ ಪ್ರಕರಣ: ಪಿಡಿಒ ತಲೆದಂಡ

ಮಂಡ್ಯ : ಮಂಡ್ಯದ ಕೆರಗೋಡು (Keragodu) ಗ್ರಾಮದ ಧ್ವಜ ವಿವಾದ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕೆರಗೋಡು ಗ್ರಾಮ ಪಂಚಾಯತ ಪಿಡಿಒ ಜೀವನ್‌.ಬಿ.ಎಂ ಅವರನ್ನು ಸರ್ಕಾರ ಅಮಾನತು ಮಾಗಿದೆ. ಐದು ಕಾರಣಗಳನ್ನು ನೀಡಿ ಪಿಡಿಒ ಅವರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ತನ್ವೀರ್ ಆಸೀಫ್ ಸೇಠ್ ಆದೇಶ … Continued

‘2029ರ ಚುನಾವಣೆಗೆ ಸಿದ್ಧತೆ’: ಭಾರತ ಜೋಡೋ ನ್ಯಾಯ ಯಾತ್ರೆ ಬಗ್ಗೆ ಸ್ವಪಕ್ಷವನ್ನೇ ಟೀಕಿಸಿದ ಕಾಂಗ್ರೆಸ್ ಮುಖಂಡ

ನವದೆಹಲಿ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ ಕೃಷ್ಣಂ ಅವರು ಸೋಮವಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು “ರಾಜಕೀಯ ಪ್ರವಾಸೋದ್ಯಮ” ಎಂದು ಕರೆದಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಇತರ ಪಕ್ಷಗಳು ತಯಾರಿ ನಡೆಸುತ್ತಿರುವಾಗ ತಮ್ಮ ಪಕ್ಷವು “ಪ್ರಯಾಣ” ಮಾಡುತ್ತಿದೆ ಎಂದು ಅವರು ಸ್ವಪಕ್ಷವನ್ನೇ ಟೀಕಿಸಿದ್ದಾರೆ. “ಕಾಂಗ್ರೆಸ್ ಪಕ್ಷವು ಕೆಲವು ಶ್ರೇಷ್ಠ … Continued

ನಿಗಮ-ಮಂಡಳಿ ಅಧಿಕಾರ 2 ವರ್ಷಕ್ಕೆ ನಿಗದಿ : ಡಿ.ಕೆ.ಶಿವಕುಮಾರ ಕೊಟ್ಟ ಕಾರಣ ಹೀಗಿದೆ..

ಬೆಂಗಳೂರು: ರಾಜ್ಯದ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ 34 ಶಾಸಕರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಎರಡು ವರ್ಷ ಮಾತ್ರ ಅಧಿಕಾರದ ಅವಧಿ ನೀಡಲಾಗಿದೆ. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ (DK Shivakumar) ಅವರು “ಪಕ್ಷಕ್ಕಾಗಿ ದುಡಿದ ಎಲ್ಲ ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ಸಿಗಲಿ ಎಂಬ … Continued

ನಿತೀಶ ಸಂಪುಟದಲ್ಲಿ ಬಿಜೆಪಿಯ ಸಾಮ್ರಾಟ ಚೌಧರಿ, ವಿಜಯ ಸಿನ್ಹಾ ಬಿಹಾರದ ನೂತನ ಉಪಮುಖ್ಯಮಂತ್ರಿಗಳು…!

ಪಾಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಭಾನುವಾರ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರಿಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಜೊತೆಗೆ ಸೇರಿಕೊಂಡು ನೂತನ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಸಚಿವ ಸಂಪುಟವು ಈಗ ಬಿಜೆಪಿಯಿಂದ ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದ್ದು, ಬಿಹಾರ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ ಮತ್ತು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ … Continued

ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ

ಶಿವಮೊಗ್ಗ: ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಬೆಕ್ಕಿನಕಲ್ಮಠದಲ್ಲಿ ಜಗದ್ಗುರು ಶ್ರೀ ಗುರುಬಸವ ಸ್ವಾಮೀಜಿಗಳ 112ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಭಾವೈಕ್ಯ ಸಮ್ಮೇಳನ ಹಾಗೂ ಗುರು ಬಸವಶ್ರೀ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಘವೇಂದ್ರ … Continued

ಭಾರತ ಜೋಡೋ ನ್ಯಾಯ ಯಾತ್ರೆ : ಪಶ್ಚಿಮ ಬಂಗಾಳದಲ್ಲಿ ರ್ಯಾಲಿಗಳಿಗೆ ಅನುಮತಿ ನಿರಾಕರಣೆ-ಕಾಂಗ್ರೆಸ್ ಆರೋಪ

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಭಾರತ ಜೋಡೊ ನ್ಯಾಯಯಾತ್ರೆಯ ಭಾಗವಾಗಿ ಕೆಲವು ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಅನುಮತಿ ಕೋರಿದ್ದ ಕಾಂಗ್ರೆಸ್‌ಗೆ ಈಗ ಾನುಮತಿ ಪಡೆಯಲು ಸಮಸ್ಯೆಗಳು ಎದುರಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್‌ ಚೌಧರಿ ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಕ್ಷವು ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಬಯಸಿದೆ, … Continued

ಬಿಜೆಪಿ ನಾವೇ ಕಟ್ಟಿ ಬೆಳೆಸಿದ ಮನೆ…ಈ ಮನೆಗೆ ಸಂತೋಷದಿಂದಲೇ ವಾಪಸ್‌ ಬಂದಿದ್ದೇನೆ :ಶೆಟ್ಟರ

ಬೆಂಗಳೂರು: ದೇಶಕ್ಕೆ ಸುರಕ್ಷತೆ ದೃಷ್ಟಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಆಶಿಸಿ ಬಿಜೆಪಿಗೆ ಮರಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಹೇಳಿದ್ದಾರೆ. ಇಲ್ಲಿನ ವಿಮಾನನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಮ್ಮ ಮನೆ, ನಾವೇ ಕಟ್ಟಿ ಬೆಳೆಸಿದ ಮನೆ. ಆ ಮನೆಗೆ ಸಂತೋಷದಿಂದ ವಾಪಸಾಗಿದ್ದೇನೆ. ರಾಷ್ಟ್ರದ -ರಾಜ್ಯದ ನಾಯಕರು … Continued