ಭಾರತೀಯ ಕ್ರಿಕೆಟ್ ದಿಗ್ಗಜ ಬಿಶನ್ ಸಿಂಗ್ ಬೇಡಿ ನಿಧನ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಂತ್ರಿಕ ಎಡಗೈ ಸ್ಪಿನ್ನರ್‌ ಬಿಶೆನ್ ಸಿಂಗ್ ಬೇಡಿ (77) ಅವರು ಇಂದು, ಸೋಮವಾರ ನಿಧನರಾಗಿದ್ದಾರೆ. ಬಿಶನ್ ಸಿಂಗ್ ಬೇಡಿ 22 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದರು. ಬೇಡಿ ಅವರು 1967 ರಿಂದ 1979 ರವರೆಗೆ ಭಾರತದ ಪರವಾಗಿ ಆಡಿದ್ದರು. ಅವರು 67 ಟೆಸ್ಟ್‌ಗಳಲ್ಲಿ 266 … Continued

2 ಪಟಾಕಿ ಘಟಕಗಳಲ್ಲಿ ಸ್ಫೋಟ : 9 ಮಹಿಳೆಯರು ಸೇರಿ 11 ಮಂದಿ ಸಾವು

ಚೆನ್ನೈ: ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ಮಂಗಳವಾರ ಎರಡು ಪಟಾಕಿ ಘಟಕಗಳಲ್ಲಿ ಸಂಭವಿಸಿದ ಸ್ಫೋಟಗಳಲ್ಲಿ ಒಂಬತ್ತು ಮಹಿಳೆಯರು ಸೇರಿದಂತೆ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ವಿರುದುನಗರ ಜಿಲ್ಲೆಯ ರಂಗಪಾಳ್ಯಂ ಮತ್ತು ಕಿಚನಾಯಕನಪಟ್ಟಿ ಗ್ರಾಮದ ಪಟಾಕಿ ಘಟಕಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬೆಂಕಿ ಅವಘಡಗಳಲ್ಲಿ ಕನಿಷ್ಠ ಹನ್ನೊಂದು ಜನರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ … Continued

ಇಸ್ರೇಲಿನಲ್ಲಿ ಮಕ್ಕಳೆದುರೇ ನನ್ನ ಸಹೋದರಿ, ಆಕೆಯ ಗಂಡನನ್ನು ಹಮಾಸ್‌ ದಾಳಿಕೋರರು ಕೊಂದಿದ್ದಾರೆ ಎಂದು ಹೇಳಿಕೊಂಡ ಭಾರತದ ಟಿವಿ ನಟಿ

ಕಳೆದ ವಾರ ಹಮಾಸ್‌ನಿಂದ ‘ಆಘಾತಕಾರಿʼ ದಾಳಿಯ ನಂತರ ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲಿ ಆಕ್ರಮಣವು ತೀವ್ರಗೊಂಡಿದೆ. ಯುದ್ಧವು ನಾಲ್ಕನೇ ದಿನಕ್ಕೆ ಪ್ರವೇಶಿಸಿದ್ದು, 3,000 ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಗಡಿಯ ಎರಡೂ ಕಡೆಯ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಹಮಾಸ್‌ನಿಂದ ದಾಳಿಗಳ ಸುರಿಮಳೆ ಮತ್ತು ಗಾಜಾವನ್ನು “ಸಂಪೂರ್ಣ ಹಿಡಿತ” ತೆಗೆದುಕೊಳ್ಳಲು ಇಸ್ರೇಲ್‌ನ ಸಂಪೂರ್ಣ ಕಾರ್ಯಾಚರಣೆಯ … Continued

ವೀಡಿಯೊ..| ಔಷಧಿ ಖರೀದಿಗೆಂದು ಔಷಧದ ಅಂಗಡಿಗೆ ಬಂದಾಗಲೇ ಹೃದಯಘಾತದಿಂದ ಸಾವು

ಮೈಸೂರು: ಈ ಹೃದಯ ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕುಳಿತಲ್ಲೇ ಕುಸಿಯುವುದು, ಮಾತನಾಡುತ್ತಿರುವಾಗಲೇ ಸ್ತಬ್ದವಾಗುವುದು, ನೃತ್ಯ ಮಾಡುತ್ತಲೇ ಬೀಳುವುದು.. ಹೀಗೆ ಸಾವಿನ ಹತ್ತಾರು ಸನ್ನಿವೇಶಗಳು ಕಂಡುಬರುತ್ತಿವೆ. ಮೈಸೂರಿನಲ್ಲಿ ಔಷಧದ ಅಂಗಡಿಯೊಂದಕ್ಕೆ (Medical Stores) ಔಷಧ ತೆಗೆದುಕೊಳ್ಳಲೆಂದು ಬಂದ ವ್ಯಕ್ತಿ ಅಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆಯೊಂದು ವರದಿಯಾಗಿದೆ. ಘಟನೆಯ ದೃಶ್ಯಗಳು … Continued

ಸಿಕ್ಕಿಂನಲ್ಲಿ ಮೇಘಸ್ಫೋಟ, ಹಠಾತ್ ಪ್ರವಾಹ : 14 ಜನರು ಸಾವು, 23ಯೋಧರ ಸಹಿತ 102 ಮಂದಿ ನಾಪತ್ತೆ

ಗ್ಯಾಂಗ್ಟಕ್‌: ಸಿಕ್ಕಿಂನಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹದ ನಂತರ 14 ಜನರು ಸಾವಿಗೀಡಾಗಿದ್ದಾರೆ ಮತ್ತು 23 ಸೇನಾ ಸಿಬ್ಬಂದಿ ಸೇರಿದಂತೆ 120 ಜನರು ನಾಪತ್ತೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಲ್ಹೋನಕ್ ಸರೋವರದ ಮೇಲೆ ಸಂಭವಿಸಿದ ಮೇಘಸ್ಫೋಟವು ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಯಿತು, ಇದು ಅಂತಿಮವಾಗಿ ಮಾರಣಾಂತಿಕ ಪ್ರಹಾವಾಗಿ ಮಾರ್ಪಟ್ಟಿತು. ಸಿಕ್ಕಿಂನಲ್ಲಿ ಮಂಗಳವಾರ ತಡರಾತ್ರಿ … Continued

ಊಟಿ ಬಳಿ ಕಂದಕಕ್ಕೆ ಬಸ್‌ ಉರುಳಿ ಬಿದ್ದು 8 ಜನರು ಸಾವು

ಉದಕಮಂಡಲಂ : ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ 55 ಪ್ರವಾಸಿಗರಿದ್ದ ಬಸ್ ಕಣಿವೆಗೆ ಉರುಳಿ ಬಿದ್ದು 8 ಪ್ರವಾಸಿಗರು ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ನೀಲಗಿರಿ ಬೆಟ್ಟದ ವ್ಯಾಪ್ತಿಯಲ್ಲಿ ಬರುವ ಕೂನೂರು ಬಳಿಯ ಊಟಿ-ಮಟ್ಟುಪಾಳ್ಯಂ ರಸ್ತೆಯ ಘಾಟ್‌ನಲ್ಲಿ ಹೆಡ್‌ಪಿನ್ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು … Continued

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ 49 ನೇ ವಯಸ್ಸಿನಲ್ಲಿ ನಿಧನ

ಜಿಂಬಾಬ್ವೆಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ( 49 ವರ್ಷ) ಭಾನುವಾರ, ಸೆಪ್ಟೆಂಬರ್ 3 ರಂದು ನಿಧನರಾಗಿದ್ದಾರೆ. ಅವರು ಕೊಲೊನ್ ಮತ್ತು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಸುದ್ದಿಯನ್ನು ಹೀತ್ ಸ್ಟ್ರೀಕ್ ಪತ್ನಿ ನಡಿನ್ ಸ್ಟ್ರೀಕ್ ತಮ್ಮ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಸ್ಟ್ರೀಕ್ ನಿಧನರಾದರು ಎಂಬ ವದಂತಿಗಳು … Continued

ಕಾಡಾನೆ ದಾಳಿ : ವನ್ಯಜೀವಿ ಶಾರ್ಪ್‌ ಶೂಟರ್‌ ವೆಂಕಟೇಶ ಸಾವು

ಹಾಸನ: ಚಿಕಿತ್ಸೆ ನೀಡಲು ಬಂದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ಅರವಳಿಕೆ ತಜ್ಞ ಮೃತಪಟ್ಟ ಘಟನೆ ನಡೆದಿದೆ. ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಬಳಿ ವೈದ್ಯನ ಜೊತೆ ಹೋದ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ಭೀಮ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿ ವೆಂಕಟೇಶ, ಹಾಸನ ಆಸ್ಪತ್ರೆಯಲ್ಲಿ … Continued

ಉಪ್ಪುಂದ: ಚಾಕಲೇಟ್ ಗಂಟಲಲ್ಲಿ ಸಿಲುಕಿ 6 ವರ್ಷದ ಬಾಲಕಿ ಸಾವು

ಬೈಂದೂರು: ಚಾಕೊಲೇಟ್​ ತಿನ್ನುವಾಗ ಪ್ಲಾಸ್ಟಿಕ್‌ ಕವರ್​ ಸಮೇತ ನುಂಗಿದ 1ನೇ ತರಗತಿ ವಿದ್ಯಾರ್ಥಿನಿ ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ಸಂಭವಿಸಿದೆ. ಮೃತ ಬಾಲಕಿಯನ್ನು ಬೈಂದೂರು ತಾಲೂಕು ಬವಳಾಡಿ ಮೂಲದ ಸಮನ್ವಿ (6) ಎಂದು ಗುರುತಿಸಲಾಗಿದೆ. ಬಾಲಕಿ ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್‌ನ 1ನೇ ತರಗತಿ … Continued

ಶಿರಸಿ: ಮುರೇಗಾರ ಜಲಪಾತದಲ್ಲಿ ಮುಳುಗಿ ವ್ಯಕ್ತಿ ಸಾವು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮುರೇಗಾರ ಜಲಪಾತದಲ್ಲಿ ವ್ಯಕ್ತಿಯೊಬ್ಬ ಮುಳುಗಿ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ. ತುಮಕೂರು ಮೂಲದ ನವೀನ ಕುಮಾರ್ (35) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಕೆಲವರೊಂದಿಗೆ ಪ್ರವಾಸಕ್ಕೆ ಬಂದಿದ್ದ ನವೀನ್ ಕುಮಾರ ಈಜಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ತುಮಕೂರು ನಗರದ ಆರೆಸ್ಸೆಸ್‌ ಜವಾಬ್ದಾರಿ ಇತ್ತು ಎನ್ನಲಾಗಿದೆ. … Continued