‘ಸಂಘಕಾರ್ಯ’ವನ್ನು ‘ಜೀವನಕಾರ್ಯ’ವನ್ನಾಗಿ ಸ್ವೀಕರಿಸಿದ್ದ ಸಿದ್ದಣ್ಣಗೌಡ ಗಡಿಗುಡಾಳರು

ಕರ್ನಾಟಕ ಉತ್ತರ ಪ್ರಾಂತದ ಹಿಂದಿನ ಪ್ರಾಂತ ಸಂಘಚಾಲಕರಾಗಿದ್ದ ಸಿದ್ದಣ್ಣಗೌಡ ಗಡಿಗುಡಾಳರು ಏಪ್ರಿಲ್‌ ೧ರಂದು ಗುರುವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ೨ಕ್ಕೆ ಬಳ್ಳಾರಿ ಜಿಲ್ಲೆಯ ಅವರ ಸ್ವಗ್ರಾಮ ಗಡಿಗುಡಾಳದಲ್ಲಿ ನಡೆಯಿತು. ಮಾ.ಶ್ರೀ ಸಿದ್ದಣ್ಣಗೌಡ ಗಡಿಗುಡಾಳ್ ರವರು ಇಂದು(1.4.2021) ಬೆಳಗ್ಗೆ 6.15 ಕ್ಕೆ ಗಡಿಗುಡಾಳದ ತಮ್ಮ ಸ್ವಗೃಹದಲ್ಲಿ ದೈವಾಧೀನರಾದ ಸುದ್ದಿ ತಲುಪಿತು. ಸಹಜವಾಗಿ ಮನಸ್ಸಿನಲ್ಲಿ … Continued

ನೀನಾಸಂ ಕೆ.ವಿ.ಸುಬ್ಬಣ್ಣ ಪತ್ನಿ ಶೈಲಜಾ ನಿಧನ

ಸಾಗರ: ಸಾಗರ ತಾಲೂಕಿನ ಹೆಗ್ಗೋಡು ನೀನಾಸಂ ಸಂಸ್ಥೆಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಪತ್ನಿ ಶೈಲಜಾ (೮೫) ಭಾನುವಾರ ಮುಂಡಿಗೇಸರ ಗ್ರಾಮದ ನಿವಾಸದಲ್ಲಿ ನಿಧನರಾದರು. ಮೃತರು ಪುತ್ರ ಕೆ.ವಿ. ಅಕ್ಷರ ಹಾಗೂ ಕುಟುಂಬದ ಸದಸ್ಯರನ್ನು ಅಗಲಿದ್ದಾರೆ. ಕೆ.ವಿ.ಸುಬ್ಬಣ್ಣ ನೀನಾಸಂ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾಗ ಮನೆ ಹಾಗೂ ತೋಟದ ಜವಾಬ್ದಾರಿಯನ್ನು ಶೈಲಜಾ ಅವರೇ ನೋಡಿಕೊಳ್ಳುತ್ತಿದ್ದರು. ಅಲ್ಲದೇ ನೀನಾಸಂ ಸಂಸ್ಥೆಯ ಬೆಳವಣಿಗೆಯಲ್ಲಿ … Continued

ಮೋದಿ ಭೇಟಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಾಲ್ವರು ಸಾವು

ನವ ದೆಹಲಿ: ಇಸ್ಲಾಮಿಕ್ ಮೂಲಭೂತವಾದಿ ಗುಂಪಿನ ಹೆಫಜತ್-ಎ-ಇಸ್ಲಾಂನ ಕಾರ್ಯಕರ್ತರು ಮತ್ತು ಎಡ ಪಕ್ಷಗಳ ಸಂಯೋಜಿತ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿ ವಿರೊಧಿಸಿ ನಡೆದ ಪ್ರತಿಭಟನೆ ಪೊಲೀಸರೊಂದಿಗೆ ಘರ್ಷಣೆಗೆ ತಿರುಗಿದಾಗ ಚಿತ್ತಗಾಂಗ್‌ನಲ್ಲಿ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದಾರೆ. ಮೋದಿಯವರ ನಿಗದಿತ ಭೇಟಿಯ ವಿರುದ್ಧ ಈಗಾಗಲೇ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು, ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ … Continued

ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ನಿಗೂಢ ಸಾವು: ಪೊಲೀಸರಿಂದ ಆತ್ಮಹತ್ಯೆ ಶಂಕೆ

ನವ ದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ದೆಹಲಿಯ ತಮ್ಮ ನಿವಾಸದಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ದೆಹಲಿಯ ನಾರ್ತ್ ಅವೆನ್ಯೂ ನಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಮೃತಪಟಿದ್ದಾರೆ. ರಾಮ್ ಸ್ವರೂಪ್ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅವರ ಮರಣದ ಹಿನ್ನೆಲೆಯಲ್ಲಿ … Continued

ಜಯಲಲಿತಾ ಸಾವಿಗೆ ಡಿಎಂಕೆ ಮುಖಂಡರೇ ಕಾರಣ: ಸಿಎಂ ಪಳನಿಸ್ವಾಮಿ ನೇರ ಆರೋಪ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಡಿಎಂಕೆ ಮುಖಂಡರಾದ ಎಂ. ಕರುಣಾನಿಧಿ ಹಾಗೂ ಸ್ಟಾಲಿನ್‌ ಕಾರಣಕರ್ತರು ಎಂದು ಆರೋಪಿಸಿದ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ, ಡಿಎಂಕೆ ಮುಖಂಡರಿಗೆ ಜಯಲಲಿತಾ ಅವರ ಆತ್ಮ ತಕ್ಕ ಶಿಕ್ಷೆ ನೀಡುತ್ತದೆ ಎಂದು ಹೇಳಿದ್ದಾರೆ. ಜಯಲಲಿತಾ ೨೦೧೫ರಲ್ಲಿ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದರೂ ಡಿಎಂಕೆ ಮುಖಂಡರು ಮೇಲ್ಮನವಿ ಸಲ್ಲಿಸಿದ್ದರಿಂದ ಜಯಲಲಿತಾ ಖಿನ್ನತೆಗೊಳಗಾದರು. ಜಯಲಲಿತಾ ಸಾವಿಗೆ ಕಾರಣರಾದ … Continued

ಹುಲಿ ದಾಳಿಗೆ ಬಾಲಕ ಸಾವು, ಅಜ್ಜನಿಗೆ ಗಂಭೀರ ಗಾಯ

ಮಡಿಕೇರಿ: ಕಾಡುಗಳು ನಶವಾಗುತ್ತಿರುವಂತೆಯೇ ಕಾಡುಪ್ರಾಣಿಗಳಿಗೂ ಮಾನವರಿಗೂ ಸಂಘರ್ಷ ಮುಂದುವರಿದೆ. ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಬಾಲಕನೊಬ್ಬ ಸಾವಿಗೀಡಾಗಿದ್ದು ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಏಕಾಏಕೀ ದಾಳಿ ನಡಸಿದ ಹುಲಿಯು ಎಂಟು ವರ್ಷದ ಬಾಲಕ ರಂಗಸ್ವಾಮಿ ಕೊಂದು ಹಾಕಿದೆ ಮತ್ತು ಜೊತೆಯಲ್ಲಿದ್ದ ಆತನ ಅಜ್ಜ ಕೆಂಚ‌ (52) … Continued

ಕಾಣೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ

ರಾಯಚೂರು : ಭಾನುವಾರ ಆಟವಾಡುತ್ತಿದ್ದಂತ ಸಂದರ್ಭದಲ್ಲಿ ನಾಪತ್ತೆಯಾಗಿದ್ದಂತ ಮಾಜಿ ಶಾಸಕರ ಮೊಮ್ಮಕ್ಕಳಿಬ್ಬರು, ಸೋಮವಾರ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಮೊಮ್ಮಕ್ಕಳ್ಳಾದ ವರುಣ್(9) ಹಾಗೂ ಸಣ್ಣಯ್ಯ(5) ಭಾನುವಾರ ಮಧ್ಯಾಹ್ನ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದರು. ಸಿರವಾರ ಪೊಲೀಸ್ ಠಾಣೆಯಲ್ಲಿ … Continued

ಲಾಕ್‌ಡೌನ್‌ ಹೊರತಾಗಿಯೂ ಕಲ್ಮಷ ಗಾಳಿಯಿಂದ ೨೦೨೦ರಲ್ಲಿ ೫೪,೦೦೦ ಜನರ ಸಾವು

ನವದೆಹಲಿ: ಕೋವಿಡ್‌-೧೯ ಲಾಕ್‌ಡೌನ್‌ಗಳ ಹೊರತಾಗಿಯೂ ದೆಹಲಿಯಲ್ಲಿ ೨೦೨೦ರಲ್ಲಿ ದೆಹಲಿಯಲ್ಲಿ ೫೪,೦೦೦ ಜನರು ಕಳಪೆ ಗುಣಮಟ್ಟದ ವಾಯುವಿನ ಕಾರಣದಿಂದ ಮೃತಪಟ್ಟಿದ್ದಾರೆಂದು ಅಧ್ಯಯನವೊಂದು ತಿಳಿಸಿದೆ. ಕೊರೊನಾ ಲಾಕ್‌ಡೌನ್‌ ಪರಿಣಾಮವಾಗಿ ಕೆಲವು ನಗರಗಳು ಗಾಳಿಯ ಗುಣಮಟ್ಟದಲ್ಲಿ ಅಲ್ಪ ಸುಧಾರಣೆಗಳನ್ನು ಕಂಡರೆ, ದೆಹಲಿಯಲ್ಲಿನ ವಾಯುಮಾಲಿನ್ಯದ ವಿನಾಶಕಾರಿ ಪರಿಣಾಮ ಸ್ಪಷ್ಟವಾಗಿ ಗೋಚರವಗುತ್ತದೆ ಎಂದು ಗ್ರೀನ್‌ಪೀಸ್‌ ಆಗ್ನೇಯ ಏಷ್ಯಾ ಜರ್ನಲ್‌ ಪ್ರಕಟಿಸಿದೆ. ಲೈವ್ ಕಾಸ್ಟ್ … Continued

ಕೊರೋನಾ: ೪೩೦ ಜನರಿಗೆ ಸೋಂಕು, ೭ ಸಾವು

ಬೆಂಗಳೂರು: ರಾಜ್ಯದಲ್ಲಿ ಕಳೆದ ೨೪ ತಾಸಿನಲ್ಲಿ 430 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,251ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 340 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 228 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,01,323ಕ್ಕೆ … Continued