ವೀಡಿಯೊ..| ಕುಮಟಾ : ಮನೆ ಬಾಗಿಲಿಗೇ ಬಂದು ನಾಯಿ ಹೊತ್ತೊಯ್ದ ಚಿರತೆ…!

ಕುಮಟಾ : ಮನೆಯಂಗಳಕ್ಕೇ ಬಂದ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ನಡೆದಿದೆ. ಕುಮಟಾ ತಾಲೂಕಿನ ಹೊಲನಗದ್ದೆಯ ಬೆಳ್ಳಕ್ಕಿ ಎಂಬಲ್ಲಿ ದತ್ತಾತ್ರೇಯ ಭಟ್ಟ ಎಂಬವರ ಮನೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರು ಭಯಬೀತರಾಗಿದ್ದಾರೆ. ರಾತ್ರಿ ಮನೆಯ ಅಂಗಳಕ್ಕೇ ಬಂದ ಚಿರತೆ ನಾಯಿ … Continued

ನಾಯಿಗಳ ಸ್ಪರ್ಧೆಯಲ್ಲಿ ಅದ್ಭುತ ಕೌಶಲ್ಯ ಪ್ರದರ್ಶಿಸಿ ಬಹುಮಾನ ಗೆದ್ದ ಈ ನಾಯಿ : ವೀಡಿಯೊ ನೋಡಿದ್ರೆ ನೀವು ಬೆರಗಾಗಲೇ ಬೇಕು | ವೀಕ್ಷಿಸಿ

ನಾಯಿಗಳು ದೀರ್ಘಕಾಲದಿಂದಲೂ ನಮ್ಮ ಸಹಚರರಾಗಿದ್ದಾರೆ ಮತ್ತು ಮಾನವರು ಈ ನಂಬಿಕೆಯ ಪ್ರಾಣಿಗಳನ್ನು ಸಾಕಿದಾಗಿನಿಂದ ಇದು ಶತಮಾನಗಳಿಂದಲೂ ನಡೆಯುತ್ತಿದೆ. ಕಾಲಾನಂತರದಲ್ಲಿ, ಈ ಸಂಬಂಧವು ಗಾಢವಾಗುತ್ತಲೇ ಸಾಗಿದೆ. ತಾಂತ್ರಿಕವಾಗಿ ನಾಯಿಗಳು ಸಾಕುಪ್ರಾಣಿಗಳು ಆದರೆ ತಮ್ಮ ಮಾಲೀಕರೊಂದಿಗೆ ಬಹಳ ಬಲವಾದ ಬಂಧವನ್ನು ಹೊಂದಿರುತ್ತವೆ. ನಾಯಿಗಳ ಮಾಲೀಕರು ನಡಿಗೆ, ಓಟ ಮತ್ತು ತರಬೇತಿಯ ಮೂಲಕ ತಮ್ಮ ಸಾಕುಪ್ರಾಣಿಗಳನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹ … Continued

ಇದು ರಿಯಲ್‌ ‘ಚಾರ್ಲಿ 777’..: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಡತಿಗಾಗಿ ನರ್ಸಿಂಗ್ ಹೋಂ ವಾರ್ಡ್‌ ಮುಂದೆ ಕಾದು ಕುಳಿತ ನಾಯಿ..!

ನಾಯಿಗಳು (Dog) ತಮ್ಮ ಮಾಲೀಕನನ್ನು ಪ್ರೀತಿಸುವಷ್ಟು ಇನ್ಯಾವ ಪ್ರಾಣಿಗಳೂ ಪ್ರೀತಿಸುವುದಿಲ್ಲ ಎಂದರೆ ತಪ್ಪಾಗಲಾರದು. ಅದೇ ರೀತಿ ಇಲ್ಲಿಯೂ ಒಂದು ಅಪರೂಪದ ಘಟನೆ ನಡೆದಿದೆ. ತೀರ್ಥಹಳ್ಳಿಯಲ್ಲಿ ನಾಯಿ ತನ್ನ ಮಾಲಕಿಗಾಗಿ ಆಸ್ಪತ್ರೆ ಬಾಗಿಲಲ್ಲಿ ಕಾದು ಕುಳಿತ ದೃಶ್ಯ ಕಂಡುಬಂದಿದೆ. ಇತ್ತೀಚೆಗೆ ಬಿಡುಗಡೆಯಾದ ‘ಚಾರ್ಲಿ 777’ ಸಿನಿಮಾದ ದೃಶ್ಯವನ್ನು ನೆನಪಿಸುವಂತೆ ಈ ಘಟನೆಯೂ ನಡೆದಿದೆ. ಆಸ್ಪತ್ರೆಯಲ್ಲಿ ಇರುವ ಇತರರಿಗೆ … Continued

ಪುಟ್ಟ ಹುಡುಗಿಯೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುವ ಈ ನಾಯಿ | ವೀಕ್ಷಿಸಿ

ಪುಟ್ಟ ಬಾಲಕಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಿಯು ಆ ಬಾಲಕಿ ನೀಡಿದ ನಿರ್ದೇಶನಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಬೆರಗುಗೊಳಿಸುತ್ತದೆ. ಕಣ್ಣು ಮುಚ್ಚಾಲು ಆಟದಲ್ಲಿ ಪುಟ್ಟ ಹುಡುಗಿ ಅಡಗಿಕೊಳ್ಳುವ ವರೆಗೂ ನಾಯಿ ತನ್ನ ಕಣ್ಣುಗಳನ್ನು ಮುಚ್ಚಿಯೇ ಇರುತ್ತದೆ ಮತ್ತು ನಂತರ ಅವಳನ್ನು ಹುಡುಕಲು ಕೋಣೆಗೆ ಹೋಗುತ್ತದೆ. ಈ … Continued

ನನ್ನ ನಾಯಿಮರಿಗೂ ಕರೆದುಕೊಂಡು ಬರಲು ಅವಕಾಶ ಕೊಡಿ.. ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಪರಿಪರಿಯ ಮನವಿ

ನನ್ನ ಮಲಿಬುವನ್ನು ಬಿಟ್ಟು ನಾನು ಎಲ್ಲೂ ಬರುವುದಿಲ್ಲ, ದಯವಿಟ್ಟು ನನ್ನೊಂದಿಗೆ ಅವನನ್ನೂ ಕರೆದುಕೊಂಡು ಬರಲು ಅವಕಾಶ ಕೊಡಿ…’ ಉಕ್ರೇನ್‌ನ ಬಂಕರ್‌ನಲ್ಲಿ ಭಾರತೀಯ ವಿದ್ಯಾರ್ಥಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಖಾರ್ಕಿವ್‌ನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ಹೆಸರು ರಿಷಬ್‌ ಕೌಶಿಕ್‌. ಈ ವಿದ್ಯಾರ್ಥಿ ತನ್ನ ಸಹಪಾಠಿಗಳೆಲ್ಲ ಏರ್‌ಇಂಡಿಯಾ ವಿಮಾನಗಳನ್ನು ಹತ್ತಿ ಭಾರತಕ್ಕೆ ಮರಳುತ್ತಿದ್ದರೆ, ತಾನು ಮಾತ್ರ ಬಂಕರ್‌ನಲ್ಲಿ … Continued

ನಾಯಿ ಬೇಟೆಗೆ ಬಂದ ಚಿರತೆ ಮನೆಯಲ್ಲಿ ಬಂಧಿ

ಉಡುಪಿ: ನಾಯಿ ಹಿಡಿಯಲು ಬಂದ ಚಿರತೆಯೊಂದು ಮನೆಯೊಳಗೆ ಪ್ರವೇಶಿಸಿ ತಾನೇ ಬಧಿಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡದಿದೆ. ಬ್ರಹ್ಮಾವರ ಬಳಿಯ ನೈಲಾಡಿಯಲ್ಲಿ ಈ ಘಟನೆ ನಡೆದಿದೆ. ಚಿರತೆ ಕುಟುಂಬದ ಸಾಕು ನಾಯಿ ಹಿಡಿಯಲು ಹೊರಟಿತ್ತು, ಆದರೆ ಅದು ತಪ್ಪಿಸಿಕೊಂಡು ಮನೆಯೊಳಗೆ ಓಡಿ ಹೋಯಿತು.ಚಿರತೆಯೂ ನಾಯಿಯನ್ನು ಹಿಂಬಾಲಿಸಿತು.ಶಬ್ದದಿಂದಾಗಿ ಎಚ್ಚರಗೊಂಡ ಮನೆಯ ಮಾಲೀಕರು ನೋಡಿದರೆ ಮನೆಯೊಳಗೆ ಚಿರತೆ ನುಗ್ಗಿದೆ. … Continued