ಚನ್ನಗಿರಿ | ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ನೀರು ಪಾಲು

ದಾವಣಗೆರೆ:  ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ ಮೃತರನ್ನು ದೀಪಾ(28), ದಿವ್ಯಾ (26) ಹಾಗೂ ಚಂದನಾ(19) ಎಂದು ಹೇಳಲಾಗಿದೆ. ಲಕ್ಷ್ಮೀ ಸಾಗರ ಗ್ರಾಮದ ಹೊಸ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಅವಘಡ ಸಂಭವಿಸಿದೆ. ಚನ್ನಗಿರಿ … Continued

ಇಸ್ರೇಲಿ ಪ್ರವಾಸಿ, ಹೋಂ ಸ್ಟೇ ಮಾಲೀಕಳ ಮೇಲೆ ಅತ್ಯಾಚಾರ ; ನಾಲೆಗೆ ತಳ್ಳಿದ್ದ ಒಡಿಶಾದ ಪ್ರವಾಸಿಗನ ಮೃತದೇಹ ಪತ್ತೆ

ಕೊಪ್ಪಳ: ಗುರುವಾರ ರಾತ್ರಿ ಕರ್ನಾಟಕದ ಹಂಪಿ ಬಳಿ 27 ವರ್ಷದ ಇಸ್ರೇಲಿ ಪ್ರವಾಸಿ ಮತ್ತು 29 ವರ್ಷದ ಹೋಂಸ್ಟೇ ಮಾಲೀಕರು ಸೇರಿದಂತೆ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮಹಿಳೆಯರೊಂದಿಗೆ ಇದ್ದ ಮೂವರು ಪುರುಷ ಸಹಚರರ ಮೇಲೂ ದಾಳಿಕೋರರು ಹಲ್ಲೆ ನಡೆಸಿ ನಂತರ ಅವರನ್ನು ಕಾಲುವೆಗೆ ಎಸೆದಿದ್ದಾರೆ. ಇಂದು, ಶನಿವಾರ ಬೆಳಗ್ಗೆ ಕಾಲುವೆ ನೀರಿನಲ್ಲಿ ಒಬ್ಬರ … Continued

ಶಿಗ್ಗಾವಿ | ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

ಹಾವೇರಿ: ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕರನ್ನು ಪ್ರಜ್ವಲ್ ದೇವರಮನಿ (15) ಮತ್ತು ಸನತ್ ಭೂಸರೆಡ್ಡಿ (14) ಎಂದು ಗುರುತಿಸಲಾಗಿದೆ. ಸೈಕಲ್ ತೆಗೆದುಕೊಂಡು ಕೆರೆಗೆ ಈಜಲು ಹೋಗಿದ್ದ ಬಾಲಕರು ಸೈಕಲ್ ಅನ್ನು ಕೆರೆಯ ದಡದಲ್ಲಿ ಬಿಟ್ಟು … Continued

ಮಂಗಳೂರು: ಸುರತ್ಕಲ್‌ ಬಳಿ ಸಮುದ್ರದ ಅಲೆಗೆ ಕೊಚ್ಚಿಹೋದ ಮೂವರು ವಿದ್ಯಾರ್ಥಿಗಳು

ಮಂಗಳೂರು: ಹೊಸಬೆಟ್ಟು ಬೀಚ್ ಬಳಿ ಸಮುದ್ರದಲೆಗೆ ಕೊಚ್ಚಿಹೋದ ಮೂವರು ವೈದ್ಯಕೀಯ ವಿದ್ಯಾರ್ಥಿಗಳು! ಮಂಗಳೂರು : ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲಾದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನ ಕುಳಾಯಿ ಜೆಟ್ಟಿ ಬಳಿಯ ಹೊಸಬೆಟ್ಟು ಸಮುದ್ರ ತೀರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಬೆಂಗಳೂರಿನ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಮಂಜುನಾಥ, ಶಿವಕುಮಾರ ಹಾಗೂ ಸತ್ಯವೇಲು ಎಂದು … Continued

ಕೃಷಿ ಹೊಂಡಕ್ಕೆ ಬಿದ್ದು ತಾಯಿ- ಇಬ್ಬರು ಮಕ್ಕಳು ಸಾವು

ವಿಜಯಪುರ: ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ತಾಯಿ ಮತ್ತು ಗಂಡು ಮಕ್ಕಳಿಬ್ಬರು ಸಾವಿಗೀಡಾದ ಘಟನೆ ವಿಜಯಪುರ (vijayapura ) ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಗೀತಾ ಬಡಗಿ (28), ಮಕ್ಕಳಾದ ಶ್ರವಣ (6) ಮತ್ತು ಶರಣ (4) ಎಂದು ಗುರುತಿಸಲಾಗಿದೆ. ಗೀತಾ ತಂದೆ ರಾಮಪ್ಪ ನಾಯ್ಕೋಡಿಗೆ ಸೇರಿದ ಜಮೀನಿನಲ್ಲಿ … Continued

ಮುರುಡೇಶ್ವರ ಬೀಚ್‌ ದುರಂತ; ಕೋಲಾರ ಶಾಲೆಯ ಪ್ರಿನ್ಸಿಪಾಲ್, ಅತಿಥಿ ಶಿಕ್ಷಕರು ಅಮಾನತು

ಕೋಲಾರ: ಮುರುಡೇಶ್ವರ ಬೀಚ್‌ನಲ್ಲಿ ನಾಲ್ವರು ಬಾಲಕಿಯರು ಜಲಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ, ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಮುಳಬಾಗಲು ತಾಲೂಕಿನ ಕೊತ್ತೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಐವರು ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೋಲಾರ ಮುಳಬಾಗಿಲಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ … Continued

ಮುರುಡೇಶ್ವರ ; ಸಮುದ್ರ ಪಾಲಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಸಮುದ್ರ ಪಾಲಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾಗಿವೆ. ಕರಾವಳಿ ಕಾವಲುಪಡೆ ತಂಡ ಮೃತದೇಹಗಳನ್ನು ಹುಡುಕಿ ತಂದಿವೆ. ಮೃತ ವಿದ್ಯಾರ್ಥಿನಿಯರನ್ನು ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ಎಂದು ಗುರುತಿಸಲಾಗಿದೆ. ಮುರುಡೇಶ್ವರದ ನವೀನ ಬೀಚ್ ರೆಸಾರ್ಟ್ ಬಳಿಯ ಸಮುದ್ರದಲ್ಲಿ ಎರಡು ಮೃತದೇಹ ಹಾಗೂ ಸಮುದ್ರದ ಅಳಿವೆಯಲ್ಲಿ … Continued

ಮುರುಡೇಶ್ವರ : ಸಮುದ್ರಕ್ಕೆ ಇಳಿದಿದ್ದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ

ಕಾರವಾರ : ಸಮುದ್ರದಲ್ಲಿ ಈಜಲು ಇಳಿದಿದ್ದ ಓರ್ವ ವಿದ್ಯಾರ್ಥಿನಿ ಮೃತಪಟ್ಟು ಮೂವರು ಪ್ರವಾಸಿ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದುಘಟನೆ ಮಂಗಳವಾರ ಮುರುಡೇಶ್ವರ ಕಡಲ ತೀರದಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಮಂಗಳವಾರ (ಡಿಸೆಂಬರ್ 10) ಸಂಜೆ ಮುರುಡೇಶ್ವರ ಕಡಲ ತೀರದಲ್ಲಿ ಸಮುದ್ರ ದಂಡೆಯ ಸಮೀಪದ ನೀರಿನಲ್ಲಿ ಆಟವಾಡುತ್ತಿದ್ದ 54 ವಿದ್ಯಾರ್ಥಿಗಳ ಪೈಕಿ ನಾಲ್ವರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಲ್ಲಿ … Continued

ಕೆರೆಗೆ ಬಿದ್ದ ಮಗನ ರಕ್ಷಿಸಲು ಹೋಗಿ ತಾಯಿಯೂ ನೀರುಪಾಲು

ರಾಯಚೂರು: ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದ ವೇಳೆ ತಾಯಿ-ಮಗ ನೀರು ಪಾಲಾದ ಘಟನೆ ರಾಯಚೂರಿನ ಮಲಿಯಾಬಾದ್‌ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕಾಲು ಜಾರಿ ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ಮಗನ ಜೊತೆಗೆ ತಾಯಿಯೂ ನೀರುಪಾಲಾಗಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ರಾಧಮ್ಮ (32) ಹಾಗೂ ಮಗ ಸಂಜು (5) ಎಂದು ಗುರುತಿಸಲಾಗಿದೆ. ರಾಧಮ್ಮ ಬಟ್ಟೆ … Continued

ಹುಕ್ಕೇರಿ | ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕು ಬೆನಕನಹೊಳಿ ಬಳಿಯ ಘಟಪ್ರಭಾ ನದಿ ಹಿನ್ನೀರಿನ ಪ್ರದೇಶದಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲಾಗಿದ್ದು, ಸೋಮವಾರ ಬೆಳಿಗ್ಗೆಯಿಂದ ಅವರಿಗಾಗಿ ಹುಡುಕಾಟ ನಡೆದಿದೆ ಎಂದು ವರದಿಯಾಗಿದೆ. ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಲಕ್ಷ್ಮಣ ರಾಮ ಅಂಬಲಿ (49)ಮತ್ತು ಅವರ ಮಕ್ಕಳಾದ ರಮೇಶ (14), ಯಲ್ಲಪ್ಪ (12) … Continued