ಈಜಲು ತೆರಳಿದ್ದ ನಾಲ್ವರು ಬಾಲಕರು ನೀರುಪಾಲು

ಹಾಸನ: ಹೊಳೆಗೆ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲಾದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಮೃತ ಬಾಲಕರನ್ನು ಜೀವನ್(13), ಸಾತ್ವಿಕ್(11), ವಿಶ್ವ(12), ಪೃಥ್ವಿ(12) ಎಂದು ಗುರುತಿಸಲಾಗಿದೆ. ಐವರು ಗೆಳೆಯರು ಹೊಳೆಗೆ ಈಜಲು ಹೋಗಿದ್ದರು. ಹೊಳೆಗೆ ಇಳಿದಾಗ ನೀರಿನಿಂದ ಹೊರಬರಲಾಗದೆ ನಾಲ್ವರು ಮುಳುಗಿದ್ದಾರೆ. ಮತ್ತೊಬ್ಬ ಬಾಲಕ … Continued

ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

ಮಂಗಳೂರು : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಹಾಗೂ ಇಲಿಯಾಸ್ ಅವರ ಪುತ್ರಿ ಮರಿಯಂ ನಾಶಿಯಾ(14 )ಮೃತ ಬಾಲಕಿಯರು ಎಂದು ಗುರುತಿಸಲಾಗಿದೆ. ಮೂಲತಃ ನಾವೂರ … Continued

ಮೇಕೆದಾಟು : ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಸಾವು

ರಾಮನಗರ : ಸೋಮವಾರ ರಾಮನಗರ ಜಿಲ್ಲೆಯ ಮೇಕೆದಾಟು ಬಳಿಯ ಕಾವೇರಿ ನದಿಯ ಸಂಗಮದಲ್ಲಿ ಮೂವರು ಯುವತಿಯರು ಸೇರಿದಂತೆ ಐವರು ವಿದ್ಯಾರ್ಥಿಗಳು ಮುಳುಗಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮೃತ ವಿದ್ಯಾರ್ಥಿಗಳನ್ನು ಹರ್ಷಿತಾ (20), ಅಭಿಷೇಕ (20), ತೇಜಸ್ (21), ವರ್ಷ (20) ಮತ್ತು ಸ್ನೇಹಾ (19) ಎಂದು ಗುರುತಿಸಲಾಗಿದೆ. ಈಜುತ್ತಿದ್ದ ವೇಳೆ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾರೆ. … Continued

ದಾಂಡೇಲಿ : ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಸಾವು

ಕಾರವಾರ : ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಪ್ರವಾಸಿಗರು ಮೃತಪಟ್ಟ ದುರಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ. ಒಟ್ಟು 8 ಜನರು ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಕಾಳಿ ನದಿಯಲ್ಲಿ ನೀರಿಗಿಳಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಒಬ್ಬರನ್ನು … Continued

ಚಾಮರಾಜನಗರ : ಗುಂಡಲ್ ಜಲಾಶಯದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

ಚಾಮರಾಜನಗರ : ಬಟ್ಟೆ ತೊಳೆಯಲು ಹೋಗಿದ್ದ ವೇಳೆ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಗುಂಡಲ್ ಜಲಾಶಯದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗೋಪಿನಾಥಂ ಗ್ರಾಮ ಪಂಚಾಯತ ವ್ಯಾಪ್ತಿಯ ಪುದೂರು ಗ್ರಾಮದ ನಿವಾಸಿ ಮೀನಾ … Continued

ಈಜು ಕಲಿಯಲು ಹೋದಾಗ ದುರ್ಘಟನೆ : ಕೃಷಿ ಹೊಂಡದಲ್ಲಿ ಮುಳುಗಿ ತಂದೆ-ಇಬ್ಬರು ಮಕ್ಕಳ ಸಾವು

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕಲ್ಲಪ್ಪ ಬಸಪ್ಪ ಗಾಣಿಗೇರ (36) ಮತ್ತು ಮಕ್ಕಳಾದ ಮನೋಜ ಗಾಣಿಗೇರ (11) ಮತ್ತು ಮದನ ಗಾಣಿಗೇರ (9) ಎಂದು ಗುರುತಿಸಲಾಗಿದೆ. ಬೇರೆಯವರ ಜಮೀನಿನಲ್ಲಿದ್ದ ಕೃಷಿ … Continued

ಪಣಂಬೂರು : ಬೀಚ್‌ನಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಮೂವರು ಯುವಕರು

ಮಂಗಳೂರು : ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ. ಬೀಚ್‌ನ ಲೈಫ್ ಗಾರ್ಡ್ ಗಳ ಎಚ್ಚರಿಕೆ ಹೊರತಾಗಿಯೂ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಮೂವರು ಯುವಕರು ನಾಪತ್ತೆಯಾಗಿದ್ದು, ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಯುವಕರನ್ನು ಮಿಲನ್(20), ಲಿಖಿತ್(18) ಹಾಗೂ … Continued

ನಂಜನಗೂಡು : ಕಪಿಲ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರುಪಾಲು

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹೆಜ್ಜೆಗೆ ಬಳಿ ಕಪಿಲ ನದಿಯಲ್ಲಿ ಶುಕ್ರವಾರ ಸ್ನಾನಕ್ಕೆಂದು ಇಳಿದಿದ್ದ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲಾಗಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ತುಮಕೂರು ಮೂಲದ ಗವಿರಂಗ (19), ರಾಕೇಶ (19) ಹಾಗೂ ಅಪ್ಪು(16) ಎಂದು ಗುರುತಿಸಲಾಗಿದೆ. ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಐವರು ಗುರುವಾರ ತಡರಾತ್ರಿ ಇಲ್ಲಿನ ನಂಜುಂಡೇಶ್ವರನ ದರ್ಶನಕ್ಕೆ ಬಂದಿದ್ದರು. … Continued

ಕೊಡಗು: ನದಿಗೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು

ಕೊಡಗು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದ ಬರಪೊಳೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ರಷಿಕ್ ಕುಶಾಲಪ್ಪ(20), ಆಕಾಶ ಬಿದ್ದಪ್ಪ (20), ಸುದೀಶ ಅಯ್ಯಪ್ಪ(20) ಎಂದು ಹೇಳಲಾಗಿದೆ. ಮೂವರು ಕೊಡಗಿನ ಪೊನ್ನಂಪೇಟೆ ಸಿಇಟಿ ಕಾಲೇಜಿನಲ್ಲಿ 2ನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದರು ಎನ್ನಲಾಗಿದೆ. ಐವರು ಸ್ನೇಹಿತರು ಪೊನ್ನಂಪೇಟೆ ಸಮೀಪದ … Continued

ಶಿರೂರು : ಸಮುದ್ರದಲ್ಲಿ ಮಗುಚಿದ ದೋಣಿ, ಇಬ್ಬರು ಮೀನುಗಾರರು ಸಾವು

ಉಡುಪಿ: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಬೈಂಂದೂರು ತಾಲೂಕು ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ. ಮೃತರನ್ನು ಶಿರೂರಿನ ಹಡವಿನಕೋಣೆಯ ನನ್ನು ಅಬ್ಸುಲ್ ಸತ್ತರ್ (45 ) ಹಾಗೂ ಕುದ್ವಾಯಿ ರೋಡ್‌ ಭಟ್ಕಳದ ಮಿಸ್ಬಾ ಯೂಸುಫ್ (48) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 10 ಗಂಟೆಗೆ ಶಿರೂರು … Continued