ಉದ್ವಿಗ್ನತೆ ಮಧ್ಯೆಯೇ ಕಾಶಿ ವಿಶ್ವನಾಥ -ಜ್ಞಾನವಪಿ ಮಸೀದಿ ಸಂಕೀರ್ಣದಲ್ಲಿ ವೀಡಿಯೋಗ್ರಾಫಿ ಸರ್ವೆ ಆರಂಭ

ನವದೆಹಲಿ: ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಾ ಶೃಂಗಾರ ಗೌರಿ ಸ್ಥಳದ ವಿಡಿಯೋಗ್ರಫಿ ಸಮೀಕ್ಷೆ ಮತ್ತು ಪರಿಶೀಲನೆ ಶುಕ್ರವಾರ ಆರಂಭವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲವರು ಘೋಷಣೆಗಳನ್ನು ಕೂಗಲಾರಂಭಿಸಿದರು. ಇಷ್ಟು ಮಾತ್ರವಲ್ಲದೆ ಕಮಿಷನರ್ ಹಾಗೂ ನ್ಯಾಯಾಲಯದ ನಿಯೋಜಿತ ತಂಡ ಸ್ಥಳಕ್ಕೆ ಆಗಮಿಸಿದಾಗ ರಸ್ತೆಯಲ್ಲಿ ನೂಕುನುಗ್ಗಲು ಉಂಟಾಯಿತು. ಒಂದು ಕಡೆಯಿಂದ ಘೋಷಣೆ ಕೂಗಿದ ನಂತರ ಇನ್ನೊಂದು ಕಡೆಯಿಂದಲೂ ಘೋಷಣೆಗಳು … Continued

ಬಿಜೆಪಿ ನಾಯಕ ಬಗ್ಗಾ ಬಂಧನಕ್ಕೆ ಸಿನಿಮೀಯ ತಿರುವು: ದೆಹಲಿಯಲ್ಲಿ ಪಂಜಾಬ್‌ ಪೊಲೀಸರಿಂದ ಬಂಧನ, ಹರ್ಯಾಣದಲ್ಲಿ ಪಂಜಾಬ್‌ ಪೊಲೀಸರಿಗೆ ತಡೆ. ಮತ್ತೆ ದೆಹಲಿಗೆ ವಾಪಸ್‌…!

ನವದೆಹಲಿ: ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಅವರ ನಿವಾಸದಲ್ಲಿಯೇ ಪಂಜಾಬ್‌ ಪೊಲೀಸರು ಬಂಧಿಸಿದ ನಂತರ ಪ್ರಕರಣವು ಸಿನಿಮೀಯ ರೀತಿಯಲ್ಲಿ ತಿರುವು ಪಡೆದುಕೊಂಡಿದೆ. ದೆಹಲಿಯಲ್ಲಿನ ಬಗ್ಗಾ ಅವರ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ಅವರನ್ನು ಬಂಧಿಸಿ ಕರೆದೊಯ್ದಿದ್ದ ಪಂಜಾಬ್ ಪೊಲೀಸರನ್ನು ತಡೆದ ಹರ್ಯಾಣ ಪೊಲೀಸರು, ಬಗ್ಗಾ ಅವರನ್ನು ಬಿಡಿಸಿಕೊಂಡು ಮರಳಿ ದೆಹಲಿಗೆ ಕಳುಹಿಸಿದ್ದಾರೆ. ದೆಹಲಿಯಲ್ಲಿ … Continued

ಬದುಕಿದರೂ ನಿನ್ನ ಜೊತೆ, ಸಾಯುವುದಿದ್ದರೂ ನಿನ್ನ ಜೊತೆ ಎಂದು ನನ್ನ ಗಂಡ ಹೇಳಿದ್ದ; ನನ್ನ ಅಣ್ಣ ನನ್ನ ಎರಡು ಬಾರಿ ಕೊಲ್ಲಲು ಯತ್ನಿಸಿದ್ದ: ಕೊಲೆಯಾದ ನಾಗರಾಜ ಪತ್ನಿ ಆಶ್ರಿನ್ ಸುಲ್ತಾನಾ

ನಾಗರಾಜು ಮತ್ತು ಸೈಯದ್ ಆಶ್ರಿನ್ ಸುಲ್ತಾನಾ ತಮ್ಮ ಪ್ರೀತಿಯು ತಮ್ಮ ಸುರಕ್ಷತೆಗೆ ಅಪಾಯ ಉಂಟುಮಾಡುತ್ತದೆ ಎಂದು ಚೆನ್ನಾಗಿ ತಿಳಿದಿದ್ದರು. ಅವರು ಮದುವೆಯಾಗುವ ಮುಂಚೆಯೇ, ಅವರಿಬ್ಬರಿಗೆ ಬೆದರಿಕೆಗಳು ಮತ್ತು ಕೊಲ್ಲುವ ಪ್ರಯತ್ನಗಳು ಹೊಸದಾಗಿರಲಿಲ್ಲ. ಮುಸ್ಲಿಮರಾದ ಸುಲ್ತಾನಾ ಕುಟುಂಬವು ಹಿಂದೂ ದಲಿತ ನಾಗರಾಜು ಅವರೊಂದಿಗಿನ ಮದುವೆಯನ್ನು ವಿರೋಧಿಸಿತ್ತು. ಮದುವೆ ಬಗ್ಗೆ ಅವರಿಗೆ ಎಷ್ಟು ಸಿಟ್ಟಿತ್ತೆಂದರೆ ಆಕೆಯ ಸಹೋದರ ಅವಳನ್ನು … Continued

2,500 ಕೋಟಿ ಕೊಡಿ ನಿಮ್ಮನ್ನ ಸಿಎಂ ಮಾಡ್ತೀವಿ ಎಂದು ದೆಹಲಿಯಿಂದ ಬಂದ ಕೆಲವರು ಹೇಳಿದ್ರು: ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ ಯತ್ನಾಳ್

ಬೆಳಗಾವಿ: ದೆಹಲಿಯಿಂದ ಕೆಲವರು ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ 2500 ಕೋಟಿ ರೂ. ಕೊಡಿ ಎಂದು ಹೇಳುತ್ತ ಬಂದಿದ್ದರು ಎಂಬ ಸ್ಫೋಟಕ ಹೇಳಿಕೆ ನೀಡಿರುವ ಬಿಜೆಪಿ ಶಾಶಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಮದುರ್ಗದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಕೆಲವರು ಹಣ ಮಾಡಲು ಹೀಗೆಲ್ಲ ಮಾಡುತ್ತಾರೆ. ದೆಹಲಿಗೆ ಕರೆದುಕೊಂಡು ಹೋಗಿ ಸೋನಿಯಾಗಾಂಧಿ, ಜೆ.ಪಿ ನಡ್ಡಾ … Continued

“ಮಸೀದಿಯಲ್ಲಿ ಧ್ವನಿವರ್ಧಕ ಬಳಸುವುದು ಮೂಲಭೂತ ಹಕ್ಕಲ್ಲ”: ಧ್ವನಿವರ್ಧಕಗಳಲ್ಲಿ ಅಜಾನ್ ಕೂಗಲು ಅನುಮತಿ ಕೋರಿದ್ದ ಮನವಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ‘ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಮೂಲಭೂತ ಹಕ್ಕಲ್ಲ’ ಎಂದು ಹೈಕೋರ್ಟ್‌ ಹೇಳಿದೆ. ನ್ಯಾಯಮೂರ್ತಿ ವಿವೇಕಕುಮಾರ್ ಬಿರ್ಲಾ ಮತ್ತು ನ್ಯಾಯಮೂರ್ತಿ ವಿಕಾಸ್ ಅವರಿದ್ದ ವಿಭಾಗೀಯ ಪೀಠವು ಬುಧವಾರ ಈ ಆದೇಶ ನೀಡಿದ್ದು, ‘‘ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಸಾಂವಿಧಾನಿಕ ಹಕ್ಕಲ್ಲ ಎಂದು ಹೇಳಿದೆ. ಡಿಸೆಂಬರ್ 3, 2021 … Continued

8,000 ಮೀಟರ್‌ಗಳಿಗಿಂತ ಹೆಚ್ಚು ಎತ್ತರದ ಐದು ಪರ್ವತ ಶಿಖರಗಳನ್ನು ಏರಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡ ಪ್ರಿಯಾಂಕಾ ಮೋಹಿತೆ…!

ಮುಂಬೈ: ಪಶ್ಚಿಮ ಮಹಾರಾಷ್ಟ್ರದ ಸತಾರಾ ಮೂಲದ ಪ್ರಿಯಾಂಕಾ ಮೋಹಿತೆ ಅವರು ಗುರುವಾರ ಕಾಂಚನಜುಂಗಾ ಪರ್ವತವನ್ನು ಏರಿದ ನಂತರ 8,000 ಮೀಟರ್‌ಗಿಂತ ಹೆಚ್ಚಿನ ಎತ್ತರದ ಐದು ಶಿಖರಗಳನ್ನು ಏರಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. 2020ರ ತೇನ್ಸಿಂಗ್ ನೊರ್ಗೆ ಸಾಹಸ ಪ್ರಶಸ್ತಿ ಪುರಸ್ಕೃತೆ ಪ್ರಿಯಾಂಕಾ ಮೋಹಿತೆ (30) ಅವರು ಭೂಮಿಯ ಮೂರನೇ ಅತಿ ಎತ್ತರದ ಪರ್ವತವಾದ ಕಾಂಚನಜುಂಗಾ … Continued

ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವರನ ಕೈಗೇ ಕೋಳ ತೊಡಿಸಿ, ಜೈಲಿಗೆ ಕಳುಹಿಸಿದ ಮಹಿಳಾ ಸಬ್ ಇನ್ಸ್ ಪೆಕ್ಟರ್….!

ಗುವಾಹತಿ: ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವರನ ಕೈಗೇ ಆ ಡಬಲ್ ಸ್ಟಾರ್ ಮಹಿಳಾ ಸಬ್ ಇನ್ಸ್ ಪೆಕ್ಟರ್ ಕೋಳ ತೊಡಿಸಿ, ಜೈಲಿಗೆ ಕಳುಹಿಸಿದ್ದಾರೆ.ಅಸ್ಸಾಂನ ಡೇರ್‌ಡೆವಿಲ್ ಮಹಿಳಾ ಪೋಲೀಸ್ ಅಧಿಕಾರಿ, ಕೆಲವು ತಿಂಗಳ ಹಿಂದೆ ಶಾಸಕರೊಬ್ಬರನ್ನು ಎದರಿಸುವ ಮೂಲಕ ಮಾಧ್ಯಮಗಳ ಗಮನ ಸೆಳೆದಿದ್ದರು, ಈಗ ವಂಚನೆ ಆರೋಪದ ಮೇಲೆ ತಾನು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವರನನ್ನೇ ಬಂಧಿಸಿದ್ದಾರೆ…! ತನ್ನ … Continued

ಏಲಿಯನ್‌ಗಳನ್ನು ಆಕರ್ಷಿಸಲು ಮಾನವರ ಬೆತ್ತಲೆ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸಿದ ನಾಸಾ…!

ಅನ್ಯಗ್ರಹ ಜೀವಿಗಳ ಗಮನವನ್ನು ಸೆಳೆಯಬೇಕೆಂಬ ಉದ್ದೇಶದಿಂದ ನಾಸಾ ವಿಜ್ಞಾನಿಗಳು ಮಾನವರ ಬೆತ್ತಲೆ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸುತ್ತಿದ್ದಾರೆ. ಬೆತ್ತಲೆ ಮಹಿಳೆ ಹಾಗೂ ಪುರುಷ “ಹಲೋ” ಎಂದು ಕೈಬೀಸುವ ಪಿಕ್ಸೆಲೇಟೆಡ್ ಚಿತ್ರಣವನ್ನು ಕಳುಹಿಸುವ ಮೂಲಕ 150 ವರ್ಷಗಳಿಂದ ಪ್ರಯತ್ನಿಸಿದ ಮತ್ತು ವಿಫಲವಾದ ಮತ್ತೊಂದು ಜೀವ ರೂಪದೊಂದಿಗೆ ಸರಿಯಾದ ಸಂಪರ್ಕವನ್ನು ಸ್ಥಾಪಿಸಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ. ಈ ಕ್ರಮವು … Continued

ಜಮ್ಮು-ಕಾಶ್ಮೀರ ಡಿಲಿಮಿಟೇಶನ್ ಆಯೋಗದ ಅಂತಿಮ ವರದಿ ಪ್ರಕಟ, ವಿಧಾನಸಭೆಯಲ್ಲಿ ಮೊದಲ ಬಾರಿಗೆ 9 ಸ್ಥಾನ ಎಸ್‌ಟಿಗೆ ಮೀಸಲು, ಕಾಶ್ಮೀರಿ ಪಂಡಿತರಿಗೆ 2 ಸ್ಥಾನ ಕಾಯ್ದಿರಿಸಲು ಶಿಫಾರಸು

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಡಿಲಿಮಿಟೇಶನ್  ಆಯೋಗ ಗುರುವಾರ ತನ್ನ ಅಂತಿಮ ಕರಡು ಪ್ರತಿಯನ್ನು ಬಹಿರಂಗಗೊಳಿಸಿದೆ ಮರುವಿನ್ಯಾಸಗೊಂಡ ಕ್ಷೇತ್ರಗಳು, ಏಳು ಹೆಚ್ಚುವರಿ ವಿಭಾಗಗಳು ಮತ್ತು ಕ್ಷೇತ್ರಗಳ ಹೆಸರುಗಳು, 2019 ರಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯ ಕೇಂದ್ರಾಡಳಿತ ಪ್ರದೇಶ (UT) ಆದ ನಂತರದ ಬಹು ನಿರೀಕ್ಷಿತ ಮೊದಲ ವಿಧಾನಸಭೆ ಚುನಾವಣೆಗೆ ದಾರಿ ಮಾಡಿಕೊಟ್ಟಿತು. ಜಮ್ಮು … Continued

ಹರಿಯಾಣ: ಸ್ಫೋಟಕಗಳೊಂದಿಗೆ ಸಿಕ್ಕಿಬಿದ್ದ ಪಾಕ್ ನಂಟು ಹೊಂದಿದ 4 ಶಂಕಿತ ಭಯೋತ್ಪಾದಕರು, ಇವರಿಗೆ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳ ಪೂರೈಕೆ…!

ಚಂಡೀಗಡ: ನಾಲ್ವರು ಶಂಕಿತ ‘ಖಲಿಸ್ತಾನಿ’ ಭಯೋತ್ಪಾದಕರನ್ನು ಹರಿಯಾಣದ ಕರ್ನಾಲ್ ನಲ್ಲಿ ಬಂಧಿಸಲಾಗಿದೆ. ಡ್ರೋನ್‌ಗಳ ಮೂಲಕ ಅವರಿಗೆ ಶಸ್ತ್ರಾಸ್ತ್ರ ರವಾನೆ ಮಾಡಲಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಇವರು ಮಹಾರಾಷ್ಟ್ರದ ನಾಂದೇಡ್ ಮತ್ತು ತೆಲಂಗಾಣದ ಆದಿಲಾಬಾದ್‌ಗೆ ಸ್ಫೋಟಕಗಳನ್ನು ತಲುಪಿಸಲು ಹೋಗುತ್ತಿದ್ದರು. ಪ್ರಮುಖ ಆರೋಪಿ ಗುರ್‌ಪ್ರೀತ್ ಈ ಹಿಂದೆ ಜೈಲಿನಲ್ಲಿದ್ದು, ಅಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ರಾಜಬೀರ್‌ನನ್ನು ಭೇಟಿಯಾಗಿದ್ದಾನೆ … Continued