ವಿರಾಟ್ ಕೊಹ್ಲಿ ಸಾಕಷ್ಟು ಜಗಳವಾಡುತ್ತಾರೆ..! : ಕೊಹ್ಲಿ ವರ್ತನೆ ಬಗ್ಗೆ ಮೌನ ಮುರಿದ ಗಂಗೂಲಿ

ಮುಂಬೈ : ಏಕದಿನ ನಾಯಕತ್ವದಿಂದ ವಿರಾಟ್‌ ಕೊಹ್ಲಿ ಅವರನ್ನು ಕೆಳಗಿಸಿದ ಬೆನ್ನಲ್ಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಕೊನೆಗೂ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ ಗಂಗೂಲಿ ಮೌನ ಮುರಿದಿದ್ದಾರೆ. ಗುರ್‌ಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಂಗೂಲಿ ಅವರು ತಮ್ಮ ಪ್ರಕಾರ ಯಾವ ಆಟಗಾರ ಉತ್ತಮ ಮನೋಭಾವವನ್ನು ಹೊಂದಿದ್ದಾರೆ ಎಂಬುದಕ್ಕೆ ಉತ್ತರಿಸಿದರು. “ನಾನು ವಿರಾಟ್ … Continued

ಎಸ್​ಡಿಪಿಐ ನಾಯಕನ ಕೊಲೆ ನಡೆದ ಬೆನ್ನಲ್ಲೇ ಕೇರಳದ ಬಿಜೆಪಿ ನಾಯಕನ ಕತ್ತು ಕೊಯ್ದು ಬರ್ಬರ ಹತ್ಯೆ

ಅಲಪ್ಪುಳ: ಇಂ̧ದು ಭಾನುವಾರ ಮುಂಜಾನೆ ಕೇರಳದ ಅಲಪ್ಪುಳದಲ್ಲಿ ಬಿಜೆಪಿ ಮುಖಂಡರೊಬ್ಬರ ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಕೇರಳದ ಬಿಜೆಪಿಯ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ (40 ವರ್ಷದ) ಅವರನ್ನು ಮನೆಯಲ್ಲೇ ಹತ್ಯೆ ಮಾಡಲಾಗಿದೆ. ಇಂದು, ಭಾನುವಾರ ಬೆಳಿಗ್ಗೆ ಮನೆಗೆ ನುಗ್ಗಿದ ಗುಂಪೊಂದು ಬಾಗಿಲು ಬೆಲ್ … Continued

ಯುವ ಕುಸ್ತಿಪಟುವಿಗೆ ವೇದಿಕೆ ಮೇಲೆಯೇ ಕಪಾಳ ಮೋಕ್ಷ ಮಾಡಿದ ಸಂಸದ-ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ..! ವೀಕ್ಷಿಸಿ

ರಾಂಚಿ: ರಾಂಚಿಯಲ್ಲಿ ನಡೆದ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಯುವ ಕುಸ್ತಿಪಟುವಿನ ವಿರುದ್ಧ ಆಘಾತಕಾರಿ ವರ್ತನೆಯಿಂದ ಶನಿವಾರ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೊದಲ್ಲಿ, ಕುಸ್ತಿ ಫೆಡರೇಶನ್ ಆಫ್ … Continued

ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವುದರಿಂದ ಫೆಬ್ರವರಿಯಲ್ಲಿ ಕೊರೊನಾ ಮೂರನೇ ಅಲೆ ಭಾರತಕ್ಕೆ ಅಪ್ಪಳಿಸುವ ನಿರೀಕ್ಷೆ: ಕೋವಿಡ್ ಪ್ಯಾನಲ್ ಮುಖ್ಯಸ್ಥರು

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ, ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿ ಶನಿವಾರ ಕೊರೊನಾದ ಮೂರನೇ ಅಲೆ ಭಾರತವನ್ನು ಫೆಬ್ರವರಿಯಲ್ಲಿ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದೆ. ಈ ಬಗ್ಗೆ ವಿವರಗಳನ್ನು ನೀಡುತ್ತಾ, ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥರಾದ ವಿದ್ಯಾಸಾಗರ ಅವರು, ಭಾರತವು ಓಮಿಕ್ರಾನ್‌ನ ಮೂರನೇ ಅಲೆಯನ್ನು ಹೊಂದಿರುತ್ತದೆ ಆದರೆ … Continued

ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಹೊಡೆದು ಸಾಯಿಸಿದರು..

ಅಮೃತಸರ: ಅಮೃತಸರದ ಸ್ವರ್ಣಮಂದಿರದಲ್ಲಿ ಅಪವಿತ್ರಗೊಳಿಸಲು ಯತ್ನಿಸಿದ ಆರೋಪಿ ಅಮನ್ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಗುರು ಗ್ರಂಥ ಸಾಹಿಬ್ ಇರುವ ಮೀಸಲು ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿದ ನಂತರ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಅಮೃತಸರದ ದರ್ಬಾರ್ ಸಾಹಿಬ್‌ನಲ್ಲಿ ಬಂಧಿತ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪಂಜಾಬ್ ಗೃಹ ಸಚಿವ ಸುಖಜಿಂದರ್ … Continued

ದಕ್ಷಿಣ ಕನ್ನಡದಲ್ಲಿ ಒಂದೇ ದಿನ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ದೃಢ, ಇವರಿಗೆ ದೂರದ ಪ್ರವಾಸದ ಇತಿಹಾಸವಿಲ್ಲ..!

ಮಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರ ಹೊಸ ತಳಿ ಓಮಿಕ್ರಾನ್‌ ಮತ್ತಷ್ಟು ಹೆಚ್ಚಳವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಓಮಿಕ್ರಾನ್‌ ಸ್ಪೋಟ ಸಂಭವಿಸಿದ್ದು, ಎರಡು ಕಾಲೇಜುಗಳ ಬರೋಬ್ಬರಿ ಐದು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಾಲೇಜುಗಳಲ್ಲಿನ ಐವರು ವಿದ್ಯಾರ್ಥಿಗಳಲ್ಲಿ ಓಮಿಕ್ರಾನ್‌ … Continued

ಮಂಗಗಳ ಇದೆಂಥ ಸೇಡು… 250ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು…!!

ಮಹಾರಾಷ್ಟ್ರದಿಂದ ವರದಿಯಾಗಿರುವ ವಿಲಕ್ಷಣ ಘಟನೆಯಲ್ಲಿ, ಕೋಪಗೊಂಡ ಕೋತಿಗಳ ಗುಂಪು “ಸೇಡು” ತೀರಿಸಿಕೊಳ್ಳಲು ಸುಮಾರು 250 ನಾಯಿಗಳನ್ನು ಕೊಂದಿವೆ ಎಂದು ಹೇಳಲಾಗಿದೆ. ಈ ಘಟನೆಯು ರಾಜ್ಯದ ಬೀಡ್ ಜಿಲ್ಲೆಯ ಮಜಲಗಾಂವ್‌ನಿಂದ ವರದಿಯಾಗಿದೆ. ಕಳೆದೊಂದು ತಿಂಗಳಿನಿಂದ ಮಂಗಗಳು ನಾಯಿ ಮರಿಗಳನ್ನು ಕೊಂದು ಹಾಕುವ ಮೂಲಕ ಅಟ್ಟಹಾಸ ಮೆರೆದಿವೆ. ಮಂಗಗಳ ಗುಂಪು ನಾಐಇ ಮರಿಗಳನ್ನು ಕಟ್ಟಡಗಳು ಮತ್ತು ಮರಗಳ ಮೇಲಕ್ಕೆ … Continued

ಸ್ಥಳೀಯ ಪ್ರಸರಣವಿರುವ ಪ್ರದೇಶಗಳಲ್ಲಿ ಓಮಿಕ್ರಾನ್ ಪ್ರಕರಣಗಳು 3 ದಿನಗಳಲ್ಲಿ ದ್ವಿಗುಣ: ಡಬ್ಲ್ಯುಎಚ್‌ಒ

ಜಿನೇವಾ: ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಪ್ರಕರಣವು ಸಮುದಾಯ ಪ್ರಸರಣವಿರುವ ಪ್ರದೇಶಗಳಲ್ಲಿ 1.5 ರಿಂದ 3 ದಿನಗಳಲ್ಲಿ ದ್ವಿಗುಣಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶನಿವಾರ ತಿಳಿಸಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಕೊರೊನಾವೈರಸ್‌ನ ಹೊಸ ರೂಪಾಂತರದ ಪ್ರಕರಣಗಳು ಇಲ್ಲಿಯವರೆಗೆ ಕನಿಷ್ಠ 89 ದೇಶಗಳಲ್ಲಿ ವರದಿಯಾಗಿದೆ. “ಓಮಿಕ್ರಾನ್ ಹೆಚ್ಚಿನ ಮಟ್ಟದ ಜನರು ರೋಗನಿರೋಧಕ ಶಕ್ತಿ … Continued

ರೋಹಿಣಿ ಕೋರ್ಟ್​​ ಸ್ಫೋಟ ಪ್ರಕರಣ: ನೆರೆಯವನ ಕೊಲ್ಲಲು ಸ್ಫೋಟಕ ಇಟ್ಟಿದ್ದ ಡಿಆರ್ ಡಿಒ ವಿಜ್ಞಾನಿಯ ಬಂಧನ…!

ನವದೆಹಲಿ: ಡಿಸೆಂಬರ್ 9 ರಂದು ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ 47 ವರ್ಷದ ಡಿಆರ್‌ಡಿಒ ವಿಜ್ಞಾನಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬಂಧಿತ ವಿಜ್ಞಾನಿ ವಿಚಾರಣೆ ವೇಳೆ ತಪ್ಪೊಪ್ಪಿಕೊಡಿದ್ದು, ಕೋರ್ಟ್ ಗೆ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರನ್ನು ಕೊಲ್ಲುವ ಉದ್ದೇಶಕ್ಕೆ ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ … Continued

ಬೆಳಗಾವಿ ಗಲಭೆ:27 ಜನರಿಗೆ ನ್ಯಾಯಾಂಗ ಬಂಧನ 

ಬೆಳಗಾವಿ : ನಗರದಲ್ಲಿ ಶುಕ್ರವಾರ ರಾತ್ರಿ ನಡೆಸಿದ ಗಲಭೆಗೆ ಸಂಬಂಧಿಸಿ ನ್ಯಾಯಾಲಯವು 27 ಜನರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅವರನ್ನು ಹಿಂಡಲಗಾ ಜೈಲಿಗೆ ಕಳಿಸಲಾಗಿದೆ. ಬೆಂಗಳೂರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನಕ್ಕೆ ಆಗಮಿಸಿದ್ದ ವಿವಿಧ ಸರ್ಕಾರಿ ವಾಹನಗಳು ಮತ್ತು ಪೊಲೀಸ್‌ … Continued