56C-295 ಮಿಲಿಟರಿ ಸಾರಿಗೆ ವಿಮಾನ ಖರೀದಿಸಲು ಏರ್‌ಬಸ್‌ನೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಭಾರತ: ದಿಟ್ಟ ಹೆಜ್ಜೆ ಎಂದ ರತನ್ ಟಾಟಾ

ನವದೆಹಲಿ: ಭಾರತೀಯ ವಾಯುಪಡೆಯ ವಯಸ್ಸಾದ ಅವ್ರೊ -748 ವಿಮಾನಗಳನ್ನು ಬದಲಿಸುವ 56 ‘C-295’ ಮಧ್ಯಮ ಸಾರಿಗೆ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಇಂದು (ಶುಕ್ರವಾರ) ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಆಫ್ ಸ್ಪೇನ್‌ನೊಂದಿಗೆ ಸುಮಾರು ₹ 20,000 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಮಿಲಿಟರಿ ವಿಮಾನಗಳನ್ನು ಭಾರತದಲ್ಲಿ ಖಾಸಗಿ ಕಂಪನಿಯು ತಯಾರಿಸುವ ಮೊದಲ ಯೋಜನೆ … Continued

ದೆಹಲಿ ನ್ಯಾಯಾಲಯದ ಆವರಣದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿ, ಇತರ 3 ಮಂದಿ ಸಾವು

ನವದೆಹಲಿ: ದೆಹಲಿಯ ಮೋಸ್ಟ್ ವಾಂಟೆಡ್ ದರೋಡೆಕೋರರಲ್ಲಿ ಒಬ್ಬರಾದ ಜಿತೇಂದರ್ ಗೋಗಿ ಶುಕ್ರವಾರ ದೆಹಲಿಯ ರೋಹಿಣಿ ನ್ಯಾಯಾಲಯದೊಳಗೆ ನಡೆದ ಶೂಟೌಟ್‌ನಲ್ಲಿ ಹತನಾಗಿದ್ದಾನೆ. ಆರಂಭಿಕ ವರದಿಗಳ ಪ್ರಕಾರ, ದರೋಡೆಕೋರನನ್ನು ಕೊಲ್ಲಲು ಬಂದ ಮೂವರು ಶೂಟರ್‌ಗಳು ಕೂಡ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಗೋಗಿಯನ್ನು ಕರೆತರುತ್ತಿದ್ದ ನ್ಯಾಯಾಲಯದ ಆವರಣದಲ್ಲಿ ಶೂಟರ್‌ಗಳು ಮೊದಲೇ ಶಸ್ತ್ರಾಸ್ತ್ರಗಳೊಂದಿಗೆ ಹಾಜರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ರೋಹಿಣಿ … Continued

‌ಬಲ್ಲಿರೇನಯ್ಯಾ..ನಾವು ತಾಲಿಬಾನಿಗಳು..: ಪಿಎಚ್‌ಡಿ ಪಡೆದವರನ್ನು ವಜಾ ಮಾಡಿ ಬಿಎ ಆದ ವ್ಯಕ್ತಿಯನ್ನು ಕಾಬೂಲ್ ವಿಶ್ವವಿದ್ಯಾಲಯ ವಿಸಿ ಆಗಿ ನೇಮಕ ಮಾಡಿದ ತಾಲಿಬಾನ್…!

ತಾಲಿಬಾನ್ ಅಧಿಕಾರಿಗಳು ಪಿಎಚ್‌ಡಿ ಪದವಿ ಪಡೆದ ಮುಹಮ್ಮದ್ ಒಸ್ಮಾನ್ ಬಾಬುರಿಯನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿರುವ ಮುಹಮ್ಮದ್ ಅಶ್ರಫ್ ಘೈರತ್ ಅವರನ್ನು ಅಫ್ಘಾನಿಸ್ತಾನದ ಅತಿದೊಡ್ಡ ಮತ್ತು ಪ್ರತಿಷ್ಠಿತ ಕಾಬೂಲ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಲಾಗಿದೆ. ಸೆಪ್ಟೆಂಬರ್ 22 ರಂದು ಮುಹಮ್ಮದ್ ಅಶ್ರಫ್ ಘೈರತ್ ಅವರನ್ನು ನೇಮಿಸಿದ ನಂತರ, ಸುಮಾರು 70 ಶಿಕ್ಷಕರು … Continued

ಪ್ರಧಾನಿ ಮೋದಿ ಭೇಟಿ ವೇಳೆ ಭಯೋತ್ಪಾದನೆಯಲ್ಲಿ ಪಾಕಿಸ್ಥಾನ ಪಾತ್ರ ಉಲ್ಲೇಖಿಸಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌..!

ವಾಷಿಂಗ್ಟನ್‌: ಶುಕ್ರವಾರ (ಐಎಸ್‌ಟಿ) ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಚೊಚ್ಚಲ ಸಭೆಯಲ್ಲಿ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸ್ವಯಂಪ್ರೇರಿತವಾಗಿಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಉಲ್ಲೇಖಿಸಿದ್ದಾರೆ ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, “ಭಯೋತ್ಪಾದನೆಯ ವಿಷಯ ಬಂದಾಗ, ಉಪರಾಷ್ಟ್ರಪತಿ ಆ ವಿಷಯದಲ್ಲಿ ಪಾಕಿಸ್ತಾನದ ಪಾತ್ರವನ್ನು ಉಲ್ಲೇಖಿಸಿದರು … Continued

ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಅಮೆರಿಕದ ಐದು ಪ್ರಮುಖ ಕಂಪನಿಗಳ ಸಿಇಒ ಜೊತೆ ಪ್ರಧಾನಿ ಮೋದಿ ಮಾತುಕತೆ

ವಾಷಿಂಗ್ಟನ್‌: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಮೊದಲ ದಿನ ಐದು ಪ್ರಮುಖ ಜಾಗತಿಕ ಕಂಪನಿಗಳ ಸಿಇಒಗಳ ಜೊತೆ ವೈಯಕ್ತಿಕ ಸಭೆಗಳನ್ನು ನಡೆಸಿದರು. ಕಂಪನಿಗಳು ಡ್ರೋನ್‌ಗಳಿಂದ ಹಿಡಿದು 5 ಜಿ, ಸೆಮಿಕಂಡಕ್ಟರ್‌ಗಳು ಮತ್ತು ಸೋಲಾರ್‌ ವರೆಗಿನ ವಿವಿಧ ವಲಯಗಳಿಂದ ಬಂದವು. ಭಾರತದಲ್ಲಿ ವಿಶಾಲವಾದ ಅವಕಾಶಗಳನ್ನು ಎತ್ತಿ ತೋರಿಸುವ ಮೂಲಕ, … Continued

ಹಿಂದುಳಿದ ವರ್ಗಗಳ ಜಾತಿ ಗಣತಿ ಆಡಳಿತಾತ್ಮಕವಾಗಿ ಕಷ್ಟ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ನವದೆಹಲಿ: ಜಾತಿಗಳ ಕುರಿತಾದ ವಿವರಗಳನ್ನು ಸಂಗ್ರಹಿಸಲು ಜನಗಣತಿಯು ಮಾದರಿ ವಿಧಾನವಲ್ಲವೆಂದು ಕೇಂದ್ರ ಸರಕಾರವು ಗುರುವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ. ನೂತನ ಜನಗಣತಿ ಪ್ರಕ್ರಿಯೆಯ ಮೂಲಕ ಜಾತಿ ಆಧಾರಿತ ಗಣತಿಯನ್ನು ನಡೆಸುವ ಸಾಧ್ಯತೆಯನ್ನು ಅದು ತಳ್ಳಿಹಾಕಿದೆ. 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ ಸಮೀಕ್ಷೆಯ ಭಾಗವಾಗಿ ನಡೆಸಲಾದ ಜಾತಿಗಣತಿಯು ಲೋಪದಿಂದ ಕೂಡಿತ್ತೆಂದು ಅದು ಹೇಳಿದೆ. ಮುಂಬರುವ ಜನಗಣತಿಯಲ್ಲಿ ಹಿಂದುಳಿದ … Continued

ಪ್ರಧಾನಿ ಮೋದಿ ಅಮರಿಕ ಭೇಟಿ-ಪರಿಹರಿಸಬೇಕಿರುವ ತಾಲಿಬಾನ್‌-ಪಾಕಿಸ್ತಾನ-ತಾಲಿಬಾನಿಗಳಿಂದ ಭಾರತಕ್ಕಿರುವ ಸವಾಲುಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಪ್ರವಾಸಕ್ಕಾಗಿ ಅಮೆರಿಕದಲ್ಲಿದ್ದಾರೆ. ಅವರು ಸೆಪ್ಟೆಂಬರ್ 25 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ ಜಿಎ) 76 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರ ಅಮೆರಿಕ ಭೇಟಿಯು ಹಲವಾರು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳಿಂದ ಕೂಡಿದೆ. ಪ್ರಧಾನಿ ಮೋದಿಯವರು ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಸರ್ಕಾರದ ಮುಖ್ಯಸ್ಥರೊಂದಿಗೆ ಕ್ವಾಡ್‌ನಲ್ಲಿ … Continued

ಬೆಂಗಳೂರಿನಲ್ಲಿ ಮತ್ತೊಂದು ದುರಂತ : ಸಿಲಿಂಡರ್ ಸ್ಫೋಟಕ್ಕೆ ಮೂವರು ಸಾವು, ಹಲವರಿಗೆ ಗಾಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮತ್ತೊಂದು ದುರಂತ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಹತ್ತಾರು ಬೈಕ್ ಗಳು ಸುಟ್ಟು ಕರಕಲಾಗಿವೆ. ಈ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ನ್ಯೂ ತಗರುಪೇಟೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಸ್ಫೋಟಕ್ಕೆ ಹಲವರಿಗೆ ಗಾಯಗಳಾಗಿದ್ದು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ … Continued

ಏಷ್ಯಾದ ಮೊದಲ ಹಾರುವ ಕಾರು ಪರಿಕಲ್ಪನೆ ಮಾದರಿ ಅನಾವರಣಗೊಳಿಸಿದ ಚೆನ್ನೈ ಸ್ಟಾರ್ಟಪ್…!

ಚೆನ್ನೈ: ಚೆನ್ನೈ ಮೂಲದ ಸ್ಟಾರ್ಟಪ್ ಹೈಬ್ರಿಡ್ ಫ್ಲೈಯಿಂಗ್ ಕಾರಿನ ಪರಿಕಲ್ಪನಾ ಮಾದರಿಯನ್ನು ಪರಿಚಯಿಸಿದೆ. ಹಾರುವ ಕಾರಿನ ಮಾದರಿಯನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಪರಿಶೀಲಿಸಿದ್ದಾರೆ. “ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್” ಎನಿಸಿಕೊಳ್ಳುವ ಪರಿಕಲ್ಪನೆಯ ಮಾದರಿಯನ್ನು ಪರಿಚಯಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಇದು ಆರಂಭವಾದ ನಂತರ, … Continued

ಮಹಂತ ನರೇಂದ್ರ ಗಿರಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ

ಲಕ್ನೋ: ಅಖಿಲ ಭಾರತೀಯ ಅಖಾರ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಶಿಫಾರಸು ಮಾಡಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಮಧ್ಯರಾತ್ರಿ ಈ ಶಿಫಾರಸು ಮಾಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಗಳ ಮೇರೆಗೆ, ಅಖಾರ ಪರಿಷತ್ ಅಧ್ಯಕ್ಷ … Continued