ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ ಬದಲಿಗೆ, ಜೂನ್ 21 ರಿಂದ ಜುಲೈ 5 ರ ವರೆಗೆ ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್‌ಕುಮಾರ್, ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆ, ಮನವಿಗಳನ್ನು ಪರಿಗಣಿಸಿ … Continued

ಹೈದರಾಬಾದ್‌ನಲ್ಲಿ ಕೊವಿಡ್‌ ಲಸಿಕೆ ಡೋಸ್‌ ಪಡೆದ ಶತಾಯುಷಿ..!

ಹೈದರಾಬಾದ್: ತೆಲಂಗಾಣದ ಶತಮಾನ ಕಂಡ ವಯೋವೃದ್ಧರೊಬ್ಬರು ಎಲ್ಲಾ ಆತಂಕಗಳನ್ನು ಬದಿಗೊತ್ತಿ ಹೈದರಾಬಾದ್‌ನಲ್ಲಿ ಶಾಟ್ ಕೊವಿಡ್‌ -೧೯ ಚುಚ್ಚುಮದ್ದು ತೆಗೆದುಕೊಂಡರು. ಹೈದರಾಬಾದ್ ನಿವಾಸಿ ಮತ್ತು ಮಾಜಿ ಉದ್ಯಮಿ ಜೈದೇವ್ ಚೌಧರಿ (100) ಸೋಮವಾರ ಮೆಡಿಕೋವರ್ ಆಸ್ಪತ್ರೆಗಳಲ್ಲಿ ಮೊದಲ ಶಾಟ್ ತೆಗೆದುಕೊಂಡರು. ಅಧಿಕಾರಿಗಳ ಪ್ರಕಾರ, ಅವರು ಸಂತಸದಿಂದ ಇದ್ದಾರೆ. ಮತ್ತು ಹೆಚ್ಚು ಸಾಮಾಜಿಕವಾಗಿ ಸಕ್ರಿಯ ಜೀವನವನ್ನು ಆನಂದಿಸಲು ಲಸಿಕೆ … Continued

ಅತ್ಯಾಚಾರದ ಆರೋಪಿಗೆ ಬಾಧಿತ ಹುಡುಗಿ ಮದುವೆಯಾಗುತ್ತೀಯಾ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಯುವತಿಯನ್ನು ಹಲವು ಬಾರಿ ಬಲಾತ್ಕಾರ ಮಾಡಿದ ಆರೋಪ ಎದುರಿಸುತ್ತಿರುವ ಸರಕಾರಿ ಉದ್ಯೋಗಿಯಾಗಿರುವ ಆರೋಪಿಗೆ ಸರ್ವೋಚ್ಚ ನ್ಯಾಯಾಲಯವು ಬಾಧಿತ ಹುಡುಗಿಯನ್ನು ಮದುವೆಯಾಗುತ್ತೀಯಾ? ಎಂದು ಪ್ರಶ್ನಿಸಿದೆ. ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಆರೋಪಿಗೆ “ನೀನು ಸರಕಾರಿ ಉದ್ಯೋಗಿಯಾಗಿ ಯುವತಿಯನ್ನು ಬಲತ್ಕಾರ ಮಾಡುವ ಮುಂಚೆ ವಿಚಾರ ಮಾಡಬೇಕಿತ್ತು. ಅವಳನ್ನು ಮದುವೆಯಾಗುವಂತೆ ನಾವು ನಿನಗೆ ಒತ್ತಾಯ ಮಾಡುವುದಿಲ್ಲ. ನಿನಗೆ ಅವಳನ್ನು … Continued

ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತೇನೆಯೇ ? : ವಿಮಾನ ನಿಲ್ದಾಣದಲ್ಲಿ ತನ್ನ ವಶಕ್ಕೆ ಪಡೆದ ಪೊಲೀಸರಿಗೆ ನಾಯ್ಡು ಪ್ರಶ್ನೆ

ನೀವು ನಾಟಕ ಆಡುತ್ತಿದ್ದೀರಾ? ನನ್ನನ್ನು ಯಾಕೆ ಬಂಧಿಸುತ್ತಿದ್ದೀರಿ…? ” ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ರೆನಿಗುಂಟಾದ ತಿರುಪತಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಪೊಲೀಸರು ವಶಕ್ಕೆ ಪಡೆದ ವಿಡಿಯೋ ವೈರಲ್‌ ಆಗಿದ್ದು ಆ ವಿಡಿಯೋದಲ್ಲಿ ಅವರು ಪೊಲೀಸರೊಂದಿಗೆ ಈ ರೀತಿ ವಾದ ಮಾಡಿದ್ದಾರೆ. ಅವರು ಜಗನ್ ಮೋಹನ್ ರೆಡ್ಡಿ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದ ಚುನುವಣೆ: ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ನವ ದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ. ವಕೀಲ ಎಂ.ಎಲ್. ಶರ್ಮಾ ಎಂಬವರು ಸಲ್ಲಿಸಿರುವ ಮನವಿಯಲ್ಲಿ, ರಾಜ್ಯದಲ್ಲಿ ಎಂಟು ಹಂತದ ಚುನಾವಣೆಗಳನ್ನು ನಡೆಸದಂತೆ ತಡೆಯಲು ಮತದಾನ ಸಮಿತಿಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಕೋರಲಾಗಿದೆ. ಫೆಬ್ರವರಿ 26 ರಂದು ಚುನಾವಣಾ … Continued

ತುಮಕೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಸಹಜ ಬೇಸಾಯ ಆಶ್ರಮ

ಸಹಜ ಕೃಷಿಗಾಗಿ ತುಮಕೂರಿನಲ್ಲಿ ‘ಗಾಂಧಿ ಸಹಜ ಬೇಸಾಯ ಆಶ್ರಮ’ ಎಂಬ ಹೆಸರಲ್ಲಿ ರೈತ ಆಶ್ರಮ ನಿರ್ಮಾಣವಾಗುತ್ತಿದ್ದು, ರೈತರಿಗಾಗಿಯೇ ತೆರೆದಿರುವ ದೇಶದ ಮೊದಲ ಆಶ್ರಮವೆಂಬ ಹೆಗ್ಗಳಿಕೆ ಇದಕ್ಕೆ ಸಿಗಲಿದೆ. ಮಹಾತ್ಮ ಗಾಂಧೀಜಿ ತತ್ವಗಳು, ಕಲ್ಪನೆಗಳಡಿ ತುಮಕೂರಿನ ಹೊನ್ನುಡಿಕೆ ಚೆಕ್‌ ಪೋಸ್ಟ್‌ ಬಳಿ ಈ ಕುಟೀರ ತಲೆ ಎತ್ತುತ್ತಿದೆ. ಈಗಾಗಲೇ ಸಹಜ ಬೇಸಾಯದ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿತೊಡಗಿಸಿಕೊಂಡಿರುವ … Continued

ಕೊವಿಡ್‌ ಸಂದರ್ಭದಲ್ಲಿ ಜೀವವಿಮೆ ಈಗ ಹೆಚ್ಚಿನ ಆದ್ಯತೆ ಪ್ರಾಡಕ್ಟ್‌: ಸಮೀಕ್ಷೆಯಲ್ಲಿ ಬೆಳಕಿಗೆ..!

ಆರೋಗ್ಯ ತುರ್ತು ಪರಿಸ್ಥಿತಿಗಳ ವಿರುದ್ಧ ಕುಟುಂಬ ರಕ್ಷಣೆಗೆ ವಿಮೆ ಹೆಚ್ಚು ಆದ್ಯತೆ ಹಣಕಾಸು ಉತ್ಪನ್ನವಾಗಿದೆ. ಈಗ ಕೊವಿಡ್‌-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕುಟುಂಬದ ಹಿತರಕ್ಷಣೆಗೆ ಕಾಳಜಿ ತೋರಿರುವ ಹೆಚ್ಚಿನ ಜನರು ಮುಂದಿನ ಆರು ತಿಂಗಳಲ್ಲಿ ವಿಮಾ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಒಲವು ತೋರುತ್ತಿದ್ದಾರೆ ಎಂದು ಟಾಟಾ ಎಐಎ ಲೈಫ್ ಇನ್ಶುರೆನ್ಸ್‌ನ ಸಮೀಕ್ಷೆಯೊಂದು ತಿಳಿಸಿದೆ. ಸಂಶೋಧನಾ ಸಂಸ್ಥೆ … Continued

ಮುಕೇಶ ಅಂಬಾನಿ ಮನೆ ಸಮೀಪ ಕಾರಿನಲ್ಲಿ ಸ್ಫೋಟಕ: ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ

ಮುಂಬೈ: ರಿಲಯನ್ಸ್‌ ದಿಗ್ಗಜ ಮುಖೇಶ್ ಅಂಬಾನಿಯ ನಿವಾಸದ ಸಮೀಪ ಸ್ಫೋಟಕಗಳನ್ನು ಹೊಂದಿರುವ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಉದ್ಯಮಿ ಮುಕೇಶ ಅಂಬಾನಿಯವರ ಮುಂಬೈ ನಿವಾಸದ ಬಳಿ ಸ್ಫೋಟಕಗಳನ್ನು ಇಟ್ಟಿರುವ ಬಗೆಗೆ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತಿದೆ. ಟೆಲಿಗ್ರಾಮ್ ಅಪ್ಲಿಕೇಶನ್‌ನ ಸಂದೇಶದ ಮೂಲಕ ಉಗ್ರ ಸಾಂಘಟನೆ ಸ್ಫೋಟಕಗಳನ್ನು ಇಟ್ಟಿದ್ದು ತಾವೇ ಎಂದು … Continued

ಮಾ.೧ರಿಂದ ಎರಡನೇ ಹಂತದ ಲಸಿಕೆಗೆ ಭಾರತ ಸಜ್ಜು

60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರಿಗೆ ಮಾ.೧ರಿಂದ ಕೊರೊನಾ ಲಸಿಕೆ ನೀಡಲು ಭಾರತ ಸಜ್ಜಾಗುತ್ತಿದೆ. ಸೋಮವಾರದಿಂದ ನಡೆಯಲಿರುವ ಕೊರೊನಾ ಲಸಿಕೆ ನೋಂದಣಿ ನಾಳೆ ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. https://www.cowin.gov.in/home ಲಿಂಕ್​ ಮೂಲಕ ಕೋವಿನ್​ ಪೋರ್ಟಲ್​ನ್ನು ಪ್ರವೇಶಿಸಬಹುದಾಗಿದೆ.ಇ ಪೋರ್ಟಲ್​​ ಅಥವಾ ಆರೋಗ್ಯ ಸೇತು ಮುಂತಾದ ಅಪ್ಲಿಕೇಶನ್​ಗಳ ಮೂಲಕ ಸಾರ್ವಜನಿಕರು … Continued

ಬಿಪಿಎಫ್‌ ಕಾಂಗ್ರೆಸ್‌ ತೆಕ್ಕೆಗೆ: ತಮಗೆ ಲಾಭ ಎಂದ ಕಾಂಗ್ರೆಸ್‌, ತಲೆಕೆಡಿಸಿಕೊಳ್ಳದ ಬಿಜೆಪಿ

ಪ್ರಾದೇಶಿಕ ಪಕ್ಷವಾದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಬಿಜೆಪಿಯಿಂದ ಬಿಟ್ಟು ಮತ್ತೆ ಕಾಂಗ್ರೆಸ್‌ ಜೊತೆ ಕೈಜೋಡಿಸುವ ನಿರ್ಧಾರವನ್ನು ಶನಿವಾರ ಪ್ರಕಟಿಸಿದೆ. ಇದು ಅಸ್ಸಾಂ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಮೊದಲ ಮಹತ್ವ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ಚುನಾವಣಾ ವಿಶ್ಲೇಷಕರು ಮಾತ್ರ ಇದಕ್ಕೆ ಅಷ್ಟೊಂದು ಮಹತ್ವವನ್ನು ಕೊಡುತ್ತಿಲ್ಲ ಹಾಗೂ ಬಿಜೆಪಿಯು ಈ ಬಗ್ಗೆ ಜಾಸ್ತಿ … Continued