ಮಹತ್ವದ ಸುದ್ದಿ… ಕೋವಿಡ್ ನಿರ್ವಹಣೆಗಾಗಿ ರಾಜ್ಯ ಸರ್ಕಾರಿ ನೌಕರರ ‘1 ತಿಂಗಳ ವೇತನ’ ಕಡಿತಕ್ಕೆ ಕ್ಯಾಬಿನೆಟ್‌ನಲ್ಲಿ ನಿರ್ಧಾರ..!?

ಬೆಂಗಳೂರು : ಕೊರೊನಾ ಸೋಂಕಿನ 2ನೇ ಅಲೆಯ ಅಬ್ಬರ ರಾಜ್ಯದಲ್ಲಿ ಅಬ್ಬರಿಸಿದೆ. ಈ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ನಾಳೆಯಿಂದ 14 ದಿನ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಇದರ ಬೆನ್ನಿಗೇ ಆರೋಗ್ಯ ತುರ್ತು ಕ್ರಮಗಳಿಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಆದರೆ ಅಧಿಕೃತ ಆದೇಶ … Continued

ಜಿಪಂ, ತಾಪಂ, ಕಸಾಪ ಸೇರಿದಂತೆ ಎಲ್ಲ ಚುನಾವಣೆ ಮುಂದೂಡಲು ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಚಿ ಸಂಪುಟದ ಸಭೆಯಲ್ಲಿ ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳನ್ನು ಮುಂದೂಡುವಂತೆ ಶಿಫರಾಸು ಮಾಡಲು ತೀರ್ಮಾ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರು ತಿಂಗಳುಗಳ ಕಾಲ ಎಲ್ಲ ಚುನಾವಣೆಯನ್ನು ಮುಂದೂಡಿಕೆ ಮಾಡಲು ನಿರ್ಧರಿಸಲಾಗಿದ್ದು, … Continued

18ರಿಂದ 45 ವರ್ಷದವರಿಗೆ ಕೊರೋನಾ ಲಸಿಕೆ ಉಚಿತ; ಸಿಎಂ ಬಿಎಸ್​ವೈ ಘೋಷಣೆ

ಬೆಂಗಳೂರು: ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತ ಕೋವಿಡ್‌ ಲಸಿಕೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಸೋಮವಾರ ನಡೆದ ರಾಜ್ಯ ಸಂಪುಟ ಸಭೆ ನಡೆದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆಯಿಂದ ಹದಿನಾಲ್ಕು ದಿನಗಳ ಕಠಿಣ ಕರ್ಫ್ಯೂ ಜಾರಿ ವಿಷಯವನ್ನು ಪ್ರಕಟಿಸಿದ ಬೆನ್ನಲ್ಲೇ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ ಕೂಡ ನೀಡಲು ಸರ್ಕಾರ ನಿರ್ಧರಿಸಿದೆ ಎಂದು … Continued

ಕರ್ನಾಟಕದಲ್ಲಿ 14 ದಿನಗಳ ಜನತಾ ಕರ್ಫ್ಯೂ ಜಾರಿ, ಸಾರಿಗೆ ಬಂದ್‌, 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ

ಬೆಂಗಳೂರು : ನಾಳೆ ರಾತ್ರಿಯಿಂದ 14 ದಿನಗಳ ವರೆಗೆ ಕರ್ನಾಟಕದಲ್ಲಿ  ಜನತಾ ಕರ್ಫ್ಯೂ  ಜಾರಿ ಮಾಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ದೊಡ್ಡ … Continued

ಕೊರೊನಾ ಸೋಂಕಿನ ಲಕ್ಷಣಗಳಿದ್ದರೂ ಕೆಲವರಿಗೆ ಆರ್‌ಟಿ ಪಿಸಿಆರ್‌ ವರದಿ ನೆಗೆಟಿವ್..ಕಾರಣವೇನು.?

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದು ಸಹ ವೈದ್ಯರಿಗೆ ಈಗ ದೊಡ್ಡ ಸವಾಲಾಗಿದೆ. ಈ ನಡುವೆ ಕೆಲವರಿಗೆ ಆರ್‌ಟಿ ಪಿಸಿಆರ್‌ ವರದಿ ನೆಗೆಟಿವ್‌ ಇದ್ದರೂ ಕೊರೊನಾದ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಕೆಲವರಿಗೆ ವರದಿಯಲ್ಲಿ ನೆಗೆಟಿವ್‌ ಆದರೆ ಕೊರೊನಾ ಲಕ್ಷಣಗಳಿವೆ ಎಂದು ವರದಿಯಾಗಿದೆ. ಕೊರೊನಾ ಎರಡನೇ ಅಲೆ … Continued

ಭಾರತದಲ್ಲಿ ಸತತ ಐದನೇ ದಿನವೂ 3 ಲಕ್ಷ ದಾಟಿದ ಕೊರೊನಾ ಹೊಸ ಸೋಂಕು..ಇಳಿಯದ ಸಾವಿನ ಸಂಖ್ಯೆ

ನವ ದೆಹಲಿ: ಸೋಮವಾರ ಬೆಳಿಗ್ಗೆ 8 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ಭಾರತವು 3.52 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟು ಸೋಂಕುಗಳನ್ನು 1.73 ಕೋಟಿಗೆ ತಲುಪಿದೆ. ಈ ಪೈಕಿ ಪ್ರಸ್ತುತ 28 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿದ್ದರೆ, 1.43 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,812 ಹೊಸ … Continued

ಭಾರತದಲ್ಲಿ ಕೋವಿಶೀಲ್ಡ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳು ತುರ್ತಾಗಿ ರವಾನೆ: ಅಮೆರಿಕ ಹೇಳಿಕೆ

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಭಾನುವಾರ ಭಾರತದ ವಿದೇಶಾಂಗ ಸಚಿವ ಅಜಿತ್ ದೋವಲ್ ಅವರೊಂದಿಗೆ ಮಾತನಾಡಿ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಹೆಚ್ಚಿನ ಸರಬರಾಜು, ಸಂಪನ್ಮೂಲಗಳು, ಕಚ್ಚಾ ವಸ್ತುಗಳನ್ನು ನಿಯೋಜಿಸಲು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ … Continued

ಕೊರೊನಾ ಸೋಂಕಿನಿಂದ ಹಿಂದುಸ್ತಾನೀ ಸಂಗೀತದ ಮೇರು ಗಾಯಕ ಪಂ. ರಾಜನ್‌ ಮಿಶ್ರಾ ನಿಧನ

ನವ ದೆಹಲಿ: ಕೊರೊನಾ ಸೋಂಕಿಗೆ ಒಳಗಾಗಿದ್ದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ ರಾಜನ್ ಮಿಶ್ರಾ ಅವರು ಭಾನುವಾರ ಸಂಜೆ ಇಲ್ಲಿನ ಆಸ್ಪತ್ರೆಯಲ್ಲಿ ‌ -19 ಮೃತಪಟ್ಟಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ತನ್ನ ಸಹೋದರ ಸಜನ್ ಮಿಶ್ರಾ ಅವರೊಂದಿಗೆ ಹಿಂದುಸ್ತಾನೀ ಖಯಾಲ್ ಗಾಯಕಿಯ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರಾದ ಮಿಶ್ರಾ ಅವರಿಗೆ ಮಧ್ಯಾಹ್ನ ಹೃದಯಾಘಾತ ಮತ್ತು … Continued

 ಕೊರೊನಾ ಉಲ್ಬಣ: ಕರ್ನಾಟಕದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧ ಜಾರಿ, ನಾಳಿನ ಕ್ಯಾಬಿನೆಟ್‌ ಸಭೆಯಲ್ಲಿ ನಿರ್ಧಾರ..?

ರಘುಪತಿ ಯಾಜಿ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಾಖಲೆಯ ಮಟ್ಟ ತಲುಪುತ್ತಿರುವುದರಿಂದ, ಕರ್ನಾಟಕ ಸರ್ಕಾರ  ವೈರಸ್ ಹರಡುವುದನ್ನು ತಡೆಗಟ್ಟಲು ವಾರ ಪೂರ್ತಿ “ಲಾಕ್ ಡೌನ್ ತರಹದ” ನಿರ್ಬಂಧಗಳನ್ನು ನಿರ್ಧರಿಸಬಹುದು.  ರಾಜ್ಯ ಸಚಿವ ಸಂಪುಟ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಭೆ ಸೇರಲಿದ್ದು, ಹೀಗಾಗಿ ಈಗ ಎಲ್ಲರ ಚಿತ್ತ ರಾಜ್ಯ ಸಚಿವ ಸಂಪುಟದ ಸಭೆಯ … Continued

ಕರ್ನಾಟಕದಲ್ಲಿ 35 ಸಾವಿರದ ಸಮೀಪ ದೈನಂದಿನ ಪ್ರಕರಣ ದಾಖಲು… ಬೆಂಗಳೂರಲ್ಲೇ 20 ಸಾವಿರ ದಾಟಿದ ಸೋಂಕು..!

ಬೆಂಗಳೂರು:ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 34,804 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಭಾನುವಾರ 143 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 77 ಸೋಂಕಿತರು ಸೇರಿದಂತೆ, ರಾಜ್ಯಾದ್ಯಂತ 143 ಸೋಂಕಿತರು ಚಿಕಿತ್ಸೆ ಮೃತಪಟ್ಟಿದ್ದಾರೆ. ಮೃತಪಟ್ಟವರ ಸಂಖ್ಯೆ 14,426 ಕ್ಕೆ ಏರಿಕೆಯಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಕುರಿತಂತೆ … Continued