ಮಾರ್ಗಸೂಚಿಯಲ್ಲಿ ಬದಲಾವಣೆ.. ಅಗತ್ಯವಸ್ತು ಖರೀದಿಗೆ ಮಾತ್ರ ವಾಹನ ಬಳಸಬಹುದು-ಡಿಜಿಪಿ ಟ್ವೀಟ್‌

ಬೆಂಗಳೂರು:ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ದಿನಸಿ, ತರಕಾರಿ ಸೇರಿದಂತೆ ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೋಮವಾರ ಸಂಜೆ ಈ ಕುರಿತು ಟ್ವೀಟ್ ಮಾಡಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಟ್ವೀಟ್ ಮಾಡಿದ್ದು, , ತರಕಾರಿ, ದಿನಸಿ ತರಲು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ,ನಿಮ್ಮ … Continued

ಮಹತ್ವದ ಸಭೆ.. ಕೊರೊನಾ ಮೂರನೇ ಅಲೆ ಎದುರಿಸಲು ಟಾಸ್ಕ್ ಫೋರ್ಸ್ ಸಮಿತಿ ರಚನೆಗೆ ಸಿಎಂ ಸೂಚನೆ

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದಲ್ಲಿ ಕೋವಿಡ್ 19 ನಿಯಂತ್ರಣದ ಕುರಿತು ಸೋಮವಾರ ನಡೆದ ಮಹತ್ವದ ಸಭೆಯಲ್ಲಿ ಮೂರನೇ ಅಲೆ ಎದುರಿಸಲು ಈಗಲೇ ಸಿದ್ಧರಾಗಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಟ್ಟಪ್ಪಣೆ ಮಾಡಿದರಲ್ಲದೆ ಅದಕ್ಕಾಗಿ ಟಾಸ್ಕ್‌ಪೋರ್ಸ್‌ ರಚನೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಸಚಿವರುಗಳಿಗೆ ಹಾಗೂ ಹಿರಿಯ ಅಧಕಾರಿಗಳಿಗೆ ಈ ಸಂಬಂಧ ಕೆಲವು ಜವಾಬ್ದಾರಿಗಳನ್ನು … Continued

ದೆಹಲಿ ಭೇಟಿಯಲ್ಲಿ ಕೋವಿಡ್‌ ಚರ್ಚೆ, ನಾಯಕತ್ವ ಬದಲಾವಣೆ ಹಸಿ ಸುಳ್ಳು: ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು ತಮ್ಮ ಹಾಗೂ ಬಿ. ವೈ.  ವಿಜಯೇಂದ್ರ ನವದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ನಾಯಕತ್ವ ಬದಲಾವಣೆ ಎಂಬುದು ಹಸಿ ಸುಳ್ಳು. ಅದು  ಸತ್ಯಕ್ಕೆ ಬಹಳ ದೂರವಾದ ಸಂಗತಿ ಎಂದು ಗೃಹ ಖಾತೆ ಸಚಿವರಾದ ಬಸವರಾಜಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ … Continued

ಕರ್ನಾಟಕದಲ್ಲಿ ಸೋಮವಾರ 40 ಸಾವಿರ ದಾಟದ ಕೊರೊನಾ ದೈನಂದಿನ ಸೋಂಕು.. ಆದರೆ ಸಾವು ಹೆಚ್ಚಳ

ಬೆಂಗಳೂರು : ಕರ್ನಾಟಕದಲ್ಲಿ ಕಳೆದ 24 ತಾಸಿನಲ್ಲಿ ಹೊಸದಾಗಿ 39,305 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ. ಇದೇ ಸಮಯದಲ್ಲಿ 596 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ಸೋಮವಾರದ ಕೊರೋನಾ ಹೆಲ್ತ್ ಬುಲೆಟಿನ್ ನಲ್ಲಿ ಸೋಮವಾರ ಹೊಸದಾಗಿ 39,305 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,73,683ಕ್ಕೆ ಏರಿಕೆಯಾಗಿದೆ.ಒಟ್ಟು ಮೃತಪಟ್ಟವರ ಸಂಖ್ಯೆ … Continued

17 ಕೋಟಿ ಕೋವಿಡ್ ಲಸಿಕೆ ಡೋಸ್‌ :ಜಗತ್ತಿನಲ್ಲಿ ಅತಿ ವೇಗವಾಗಿ ನೀಡಿದ ದೇಶ ಭಾರತ

ನವ ದೆಹಲಿ: ಕೋವಿಡ್ -19 ಲಸಿಕೆಯ 17 ಕೋಟಿ ಪ್ರಮಾಣ ನೀಡಲು ಭಾರತ ಕೇವಲ 114 ದಿನಗಳನ್ನು ತೆಗೆದುಕೊಂಡಿದೆ, ಲಸಿಕೆ ನೀಡುವುದನ್ನು ವೇಗವಾಗಿ ಮಾಡಿದ ದೇಶ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. 17 ಕೋಟಿ ಡೋಸ್ ಕೊರೊನಾ ವೈರಸ್ ಲಸಿಕೆ ನೀಡಲು ಅಮೆರಿಕ 115 ದಿನಗಳನ್ನು ತೆಗೆದುಕೊಂಡರೆ, ಚೀನಾ ಅದೇ ಸಂಖ್ಯೆಯನ್ನು ದಾಟಲು … Continued

ಮೇ 17ರ ವೇಳೆಗೆ ಬೆಂಗಳೂರಲ್ಲಿ ಕೊರೊನಾ ಗರಿಷ್ಠಮಟ್ಟ ತಲುಪಬಹುದು:ತಜ್ಞರು

ಬೆಂಗಳೂರು; ಮಹಾರಾಷ್ಟ್ರದ ನಂತರ ದೇಶದಲ್ಲಿ ಕರ್ನಾಟಕವು ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ದಾಖಲಿಸುತ್ತಿದ್ದು, ಇದೀಗ ದೇಶದ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದೆ. ತಜ್ಞರು ಬೆಂಗಳೂರು ಕೋವಿಡ್ -19 ರ ಎರಡನೇ ಅಲೆಯು ಮೇ 17 ರ ನಂತರ ಚಪ್ಪಟೆಗೊಳ್ಳಬಹುದು ಅಥವಾ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳು ಮುಂದಿನ … Continued

ಇದೆಂಥ ಅ(ವ್ಯ)ವಸ್ಥೆ.. ಪೋಸ್ಟ್‌ ಮೋರ್ಟಂಗಾಗಿ ಮಗಳ ಶವ ಮಂಚದ ಮೇಲೆ ಹಾಕಿಕೊಂಡು 35 ಕಿಮೀ ಹೊತ್ತು ನಡೆದ ತಂದೆ..!

ಆನ್‌ಲೈನ್‌ನಲ್ಲಿ ಒಂದು ವಿಡಿಯೋ ಕಾಣಿಸಿಕೊಂಡಿದ್ದು, ಆ ವ್ಯಕ್ತಿ, ಕೆಲವು ಗ್ರಾಮಸ್ಥರೊಂದಿಗೆ, ತನ್ನ 16 ವರ್ಷದ ಮಗಳ ದೇಹವನ್ನು ಮಂಚದ ಮೇಲೆ ಜೋಡಿಸಿ, ಹಳ್ಳಿಯ ಮೂಲಕ ಕಾಲ್ನಡಿಗೆಯಲ್ಲಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತೆರಳುತ್ತಿದ್ದಾರೆ. ಭೋಪಾಲ್: ಒಬ್ಬ ವ್ಯಕ್ತಿಯು ತನ್ನ ಮಗಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಆಸ್ಪತ್ರೆಗೆ ತಲುಪಲು 35 ಕಿಮೀ ವರೆಗೆ ಸುಮಾರು … Continued

ಹತ್ಯೆ ಪ್ರಕರಣ: ಪರಾರಿಯಾದ ಒಲಿಂಪಿಕ್‌ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಲುಕ್ ಔಟ್ ನೋಟಿಸ್..!

ನವ ದೆಹಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ವಿರುದ್ಧ ದೆಹಲಿ ಪೊಲೀಸರು ಸೋಮವಾರ ಲುಕ್- ಔಟ್-ನೋಟಿಸ್‌ (ಎಲ್‌ಒಸಿ) ಹೊರಡಿಸಿದ್ದು, ವಾಯವ್ಯ ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ 23 ವರ್ಷದ ಮಾಜಿ ಕಿರಿಯ ರಾಷ್ಟ್ರೀಯ ಚಾಂಪಿಯನ್ ಹತ್ಯೆ ಪ್ರಕರಣದಲ್ಲಿ ಆತನ ಹೆಸರು ದಾಖಲಾದ ನಂತರ ಪರಾರಿಯಾಗಿದ್ದಾನೆ. ಕ್ರೀಡಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಜಗಳದ ಸಮಯದಲ್ಲಿ … Continued

ಭಾರತದಲ್ಲಿ ಸತತ ನಾಲ್ಕು ದಿನಗಳ ನಂತರ ನಾಲ್ಕು ಲಕ್ಷಕ್ಕಿಂತ ಕಡಿಮೆಯಾದ ದೈನಂದಿನ ಕೊರೊನಾ ಸೋಂಕು

ನವ ದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,66,161 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸತತ ನಾಲ್ಕು ದಿನಗಳ ನಂತರ ಇದೇ ಮೊದಲ ಬಾರಿಗೆ ಭಾರತದ ಕೋವಿಡ್-19 ದೈನಂದಿನ ಸೋಂಕಿನ ಸಂಖ್ಯೆ 4,00,000ಕ್ಕಿಂತ ಕಡಿಮೆ ದಾಖಲಾಗಿದೆ. ಇದೇ ಸಮಯದಲ್ಲಿ 3,754 ಹೆಚ್ಚು ಜನರು ಕೊರೋನಾ ಸೋಂಕಿಗೆ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.ಳೆದ ಎರಡು … Continued

ಕೋವಿಡ್‌-19 ರೋಗಿಗಳಲ್ಲಿ ಅಪಾಯಕಾರಿ ಮ್ಯೂಕೋರ್ಮೈಕೋಸಿಸ್ ಶಿಲೀಂಧ್ರ ಸೋಂಕಿನ ನಿರ್ವಹಣೆ: ಕೇಂದ್ರದಿಂದ ಸಲಹೆ

ನವ ದೆಹಲಿ: ಅನಿಯಂತ್ರಿತ ಮಧುಮೇಹ ಮತ್ತು ದೀರ್ಘಕಾಲದ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಇರುವ ಕೋವಿಡ್‌ -19 ರೋಗಿಗಳಲ್ಲಿ ಕಂಡುಬರುವ ಶಿಲೀಂಧ್ರ ಸೋಂಕು ಮ್ಯೂಕೋರ್ಮೈಕೋಸಿಸ್, ಇದನ್ನು ಗಮನಿಸದಿದ್ದಲ್ಲಿ ಮಾರಕವಾಗಬಹುದು ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ. ಸಲಹೆಯೊಂದರಲ್ಲಿ, ಶಿಲೀಂಧ್ರಗಳ ಸೋಂಕು ಮುಖ್ಯವಾಗಿ ಔಷಧಿಗಳನ್ನು ಸೇವಿಸುವ ಜನರ ಮೇಲೆ ಪರಿಣಾಮ ಬೀರುತ್ತದೆ, ಅದು ಪರಿಸರ ರೋಗಕಾರಕಗಳ ವಿರುದ್ಧ … Continued