ಮಹತ್ವದ ಸುದ್ದಿ… ಕರ್ನಾಟಕದಲ್ಲಿ 18-45 ವರ್ಷದವರಿಗೆ ಲಸಿಕೆ ನಾಳೆ ಆರಂಭವಿಲ್ಲ, ಸರ್ಕಾರ ಈ ಬಗ್ಗೆ ತಿಳಿಸಲಿದೆ ಎಂದ ಆರೋಗ್ಯ ಸಚಿವರು

ಬೆಂಗಳೂರು: ಈ ಹಿಂದೆ ಘೋಷಿಸಿದಂತೆ 18-45 ವಯಸ್ಸಿನ ಕೋವಿಡ್‌-19 ವ್ಯಾಕ್ಸಿನೇಷನ್ ಮೇ 1ರಿಂದ ಬೆಂಗಳೂರು ಮತ್ತು ಕರ್ನಾಟಕದ ಉಳಿದ ಭಾಗಗಳಲ್ಲಿ ಪ್ರಾರಂಭವಾಗುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ದೃಢಪಡಿಸಿದ್ದಾರೆ. ಹಾಗೂ 18 ರಿಂದ 45 ವರ್ಷದೊಳಗಿನವರು ಸರ್ಕಾರವು ತಿಳಿಸುವ ವರೆಗೂ ಆಸ್ಪತ್ರೆಗೆ ಹೋಗುವುದು ಬೇಡ ಎಂದು ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ. 1 … Continued

ಭಾರತದಲ್ಲಿ 3.86 ಲಕ್ಷ ದಾಟಿದ ಕೊರೊನಾ ಹೊಸ ಸೋಂಕು..

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3.80 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ದಾಖಲಾಗಿದೆ. ದೇಶದಲ್ಲಿ ಶುಕ್ರವಾರ 3,86,452 ಕೊರೊನಾ ಸೋಂಕಿತರು ಪತ್ತೆಯಾಗಿಗಿದ್ದು, 3498 ಮಂದಿ ಮೃತಪಟ್ಟಿದ್ದಾರೆ, 2,87,540 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಒಟ್ಟು 1,87,62,976 ಜನರಿಗೆ ಕೊರೊನಾ ಸೋಂಕು ತಗುಲಿದೆ, ಇದುವರೆಗೂ 1,53,84,418 ಮಂದಿ ಗುಣಮುಖರಾಗಿದ್ದಾರೆ. 2,08,330 … Continued

ಕೊರೊನಾ ಸೋಂಕಿನಿಂದ ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ ನಿಧನ

ನವ ದೆಹಲಿ: ಹಿರಿಯ ವಕೀಲ, ಕಾನೂನು ತಜ್ಞ, ಮಾಜಿ ಅಟಾರ್ನಿ ಜನರಲ್ ಮತ್ತು ಪದ್ಮವಿಭೂಷಣ, ಸೋಲಿ ಸೊರಬ್ಜಿ ಕೊರೊನಾ ವೈರಸ್ (ಕೋವಿಡ್ -19) ಸೋಂಕಿಗೆ ಒಳಗಾಗಿ ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರಿಗೆ 91. ವರ್ಷ ವಯಸ್ಸಾಗಿತ್ತು. ಬಾಂಬೆಯಲ್ಲಿ 1930 ರಲ್ಲಿ ಜನಿಸಿದ ಸೋಲಿ ಜೆಹಾಂಗೀರ್ ಸೊರಬ್ಜಿ 1953 ರಲ್ಲಿ … Continued

ಮಹತ್ವದ ಸುದ್ದಿ.. ಕೇಂದ್ರದಿಂದ ಹೊಸ ಮಾರ್ಗಸೂಚಿ: ಹೆಚ್ಚಿನ ಕೋವಿಡ್‌ ಪ್ರದೇಶದಲ್ಲಿ ಲಾಕ್‌ಡೌನ್‌, ರಾಜ್ಯಗಳಿಗೆ ಸೂಚನೆ

ನವ ದೆಹಲಿ: ಹೆಚ್ಚಿನ ಕೋವಿಡ್ ಹರಡುವ ಪ್ರದೇಶಗಳಲ್ಲಿ ತಕ್ಷಣವೇ ಲಾಕ್‌ಡೌನ್‌ಗಳನ್ನು ವಿಧಿಸುವಂತೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಆದಾಗ್ಯೂ, ಸರ್ಕಾರವು ಮೇ ತಿಂಗಳಿನ ತನ್ನ ಕೋವಿಡ್ ಮಾರ್ಗಸೂಚಿಗಳಲ್ಲಿ ರಾಷ್ಟ್ರೀಯ ಲಾಕ್‌ಡೌನ್ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಈ ಕುರಿತು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ವರದಿ ಪ್ರಕಾರ, ಗುರುವಾರ ಸಂಜೆ ಹೊರಡಿಸಿದ … Continued

ಮತಗಟ್ಟೆ ಸಮೀಕ್ಷೆ: ಪುದುಚೇರಿಯಲ್ಲಿ ಎನ್‌ಡಿಎ ಮೇಲುಗೈ ಮುನ್ಸೂಚನೆ

ಪುದುಚೇರಿ ನಿರ್ಗಮನ ಸಮೀಕ್ಷೆಯ ಫಲಿತಾಂಶಗಳು ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸುತ್ತದೆ ಎಂದು ಹೇಳಿದೆ. ರಿಪಬ್ಲಿಕ್-ಸಿಎನ್ಎಕ್ಸ್ ಮತದಾರರ ಸಮೀಕ್ಷೆಯು 30 ಸ್ಥಾನಗಳ ಪುದುಚೇರಿ ಅಸೆಂಬ್ಲಿಯಲ್ಲಿ 16-20 ಸ್ಥಾನಗಳೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು ಮುನ್ಸೂಚನೆ ನೀಡಿದ್ದು, ಕಾಂಗ್ರೆಸ್ ನೇತೃತ್ವದ ಎಸ್‌ಡಿಎ 11-13 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ವಿಧಾನಸಭೆಯಲ್ಲಿ ಬಹುಮತ 16 ಆಗಿದೆ. ರಿಪಬ್ಲಿಕ್-ಸಿಎನ್ಎಕ್ಸ್       ಎನ್‌ಡಿಎ: … Continued

ತಮಿಳುನಾಡು; ಎಲ್ಲ ಮತಗಟ್ಟೆ ಸಮೀಕ್ಷೆಗಳಲ್ಲೂ ಡಿಎಂಕೆಗೆ ಬಹುಮತ

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವೇ ದಿನಗಳಿರುವಾಗ, ಮತಗಟ್ಟೆ ಸಮೀಕ್ಷೆಗಳು ರಾಜ್ಯದಲ್ಲಿ ಡಿಎಂಕೆಗೆ ಭರ್ಜರಿ ಜಯಗಳಿಸುವ ಮುನ್ಸೂಚನೆ ನೀಡಿವೆ. ರಿಪಬ್ಲಿಕ್-ಸಿಎನ್ಎಕ್ಸ್ ನಿರ್ಗಮನ ಸಮೀಕ್ಷೆ, ಪಿ-ಮಾರ್ಕ್, ಸಿ-ವೋಟರ್ ಮತ್ತು ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆಗಳು ಡಿಎಂಕೆಗೆ 234 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ನೀಡಿವೆ, ಇದು ಈಗ 10 ವರ್ಷಗಳಿಂದ ಪ್ರತಿಪಕ್ಷದಲ್ಲಿದೆ. ಏತನ್ಮಧ್ಯೆ, ಎಐಎಡಿಎಂಕೆ 40 ರಿಂದ … Continued

ಕೇರಳ ಮತಗಟ್ಟೆ ಸಮೀಕ್ಷೆ:ಸತತ ಎರಡನೇ ಬಾರಿ ಜಯದತ್ತ ಎಡರಂಗ.. ಹೊಸ ದಾಖಲೆ ನಿರ್ಮಾಣ..!

140 ಸದಸ್ಯರನ್ನು ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಹೆಚ್ಚಿನ ರಾಜಕೀಯ ಪಕ್ಷಗಳು ಸತತ ಎರಡು ಬಾರಿ ಆಳ್ವಿಕೆ ನಡೆಸಲು ವಿಫಲವಾಗಿವೆ. ಆದರೆ ಕೇರಳದಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಈ ಸಲ ಆಡಳಿತಾರೂಢ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಎಡರಂಗದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ … Continued

ಮತಗಟ್ಟೆ ಸಮೀಕ್ಷೆ; ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ, ಬಿಜೆಪಿಗೆ ಕೆಲವೇ ಸೀಟುಗಳ ಅಂತರ..!

ಎಂಟು ಹತಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳು ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದೆ. ಗುರುವಾರ (ಏ.೨೯) ಕೊನೆಯ ಹಂತದ ಮತದಾನ ಮುಗಿದ ಬೆನ್ನಿಗೇ ವಿವಿಧ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಆದರೆ ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿಯೂ … Continued

ರಾಜ್ಯ ಸರ್ಕಾರಗಳಿಗೆ ಕೋವಾಕ್ಸಿನ್ ಬೆಲೆ ಕಡಿಮೆ ಮಾಡಿದ ಭಾರತ್ ಬಯೋಟೆಕ್

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಬೆಲೆಯನ್ನು ರಾಜ್ಯ ಸರ್ಕಾರಗಳಿಗೆ 200 ರೂ. ಕಡಿಮೆ ಮಾಡಿದೆ. ಈ ಮೊದಲು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 600 ರೂ. ಬಲೆ ನಿಗದಿ ಪಡಿಸಲಾಗಿತ್ತು. ಈಗ ಪ್ರತಿ ಡೋಸಿಗೆ 400 ರೂ. ಬೆಲೆ ನಿಗದಿ ಮಾಡಿದೆ. ಭಾರತದ ಬಯೋಟೆಕ್ ಹೇಳಿಕೆ ನೀಡಿದ್ದು, ದೇಶದ … Continued