ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ನಿಧನ

ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ಇಂದು, ಸೋಮವಾರ ಮಧ್ಯಾಹ್ನ 1:30ಕ್ಕೆ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಗಳಿದ್ದ ಅವರು ಅಲ್ಪ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಸಿದ್ಧರದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ಅವರು ಶಿಕ್ಷಕರನ್ನು ಸಂಘಟಿಸಿದ್ದರು. ತಾಲೂಕಾ ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು‌. 1983 … Continued

ಕಾರವಾರ: ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಸುಂದರವಾಗಿ ನಿರ್ಮಾಣವಾಯ್ತು ಭಾರತದ ಸಂಸತ್ ಭವನ…!

ಕಾರವಾರ : ಯಾವುದಕ್ಕೇ ಆಕೃತಿಯಾದರೂ ಆದರೂ ಅದಕ್ಕೆ ಕಲಾತ್ಮಕ ರೂಪ ಕೊಡುವುದು ಕಲಾವಿದನ ಚಾಣಾಕ್ಷತೆ. ಈಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಕ್ಕಸಾಲಿಗರೊಬ್ಬರು  ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಭರತದ ಸಂಸತ್ ಭವನ ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಅಪರೂಪದ ಕಲಾಕೃತಿಯನ್ನು ತಯಾರಿಸಿದವರು ಮಿಲಿಂದ್ ಉದಯಕಾಂತ್ ಅಣ್ವೇಕರ್ ಎಂಬವರು. ಕಾರವಾರ ನಗರದಲ್ಲಿ ಅಕ್ಕಸಾಲಿಗರಾಗಿ … Continued

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಜನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ಈಘ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ಒತ್ತಾಯಿಸಲಾಗಿದೆ. ಕಾರವಾರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ವಿವಿಧ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳು ರಕ್ತದಲ್ಲಿ ಪತ್ರ … Continued

ಕಾರವಾರ: ಮನೆ ಅಂಗಳಕ್ಕೆ ಬಂದ ಬೃಹತ್‌ ಕಾಳಿಂಗ ಸರ್ಪ ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ | ವೀಕ್ಷಿಸಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋಟೆಗಾಳಿ ಗ್ರಾಮದಲ್ಲಿ ಕಂಡುಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಗೋಟೆಗಾಳಿಯ ವಾಸು ಪೆಡ್ನೇಕರ್ ಎಂಬವರ ಮನೆ ಬಳಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಬೃಹತ್ ಕಾಳಿಂಗ ಕಂಡು ಅತಂಕಗೊಂಡ ಅವರ ಮನೆಯವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ … Continued

ಕಾರವಾರ: ನೈಲಾನ್ ಬಲೆ ನುಂಗಿ ಬೃಹತ್‌ ಡಾಲ್ಫಿನ್ ಸಾವು | ವೀಕ್ಷಿಸಿ

ಕಾರವಾರ: ಇಲ್ಲಿನ ದೇವಭಾಗ ಕಡಲತೀರದಲ್ಲಿ ಡಾಲ್ಫಿನ್ ಮೃತ ದೇಹ ಸೋಮವಾರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಡಾಲ್ಫಿನ್ ಹೊಟ್ಟೆಯಲ್ಲಿ ನೈಲಾನ್ ಬಲೆ ಇರುವುದು ಪತ್ತೆಯಾಗಿದೆ ಮೀನಿನ ಬಲೆ ನುಂಗಿದ ಪರಿಣಾಮ ಡಾಲ್ಪಿನ್ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ದೇವಭಾಗ್ ಕಡಲ ತೀರದಲ್ಲಿ ಪತ್ತೆಯಾದ ಡಾಲ್ಫಿನ್ ಮೃತ ದೇಹ ಗಂಡಾಗಿದ್ದು ಸುಮಾರು 7.5 ಫೀಟ್ ಉದ್ದವಿದೆ. ಇಂಡೋ ಪೆಸಿಫಿಕ್ ಹಮ್ … Continued

ಕಾರವಾರ: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಳಿ 2 ಕೋಟಿ ರೂ.ಹಣ ಪತ್ತೆ..!

ಕಾರವಾರ: ರೈಲಿನ ಮೂಲಕ ಮುಂಬೈನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ದಾಖಲೆ ರಹಿತ ಎರಡು ಕೋಟಿ ರೂ.ಗಳ ಹಣವನ್ನು ಕಾರವಾರದ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ದಾಖಲೆ ಇಲ್ಲದೆ ಹಣ ಸಾಗಿಸುತ್ತಿರುವುದರಿಂದ ಇದು ಹವಾಲಾ ಹಣ ಇರಬಹುದು ಎಂದು ಶಂಕಿಸಲಾಗಿದೆ. ಆರೋಪಿಯನ್ನು ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಅಲಿಯಾಸ್ ಚೇನ್ ಸಿಂಗ್ ಎಂದು ಗುರುತಿಸಲಾಗಿದೆ. ಮಂಗಳೂರು … Continued

ಕಾರವಾರ: ಮೊಬೈಲ್ ಜಾಸ್ತಿ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವತಿ

ಕಾರವಾರ: ಮೊಬೈಲ್ ಜಾಸ್ತಿ ಬಳಕೆ ಮಾಡದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಬ್ಬುವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮೇಘ (20) ಎಂದು ಗುರುತಿಸಲಾಗಿದೆ. ಈ ಯುವತಿ ಮೂಲತಃ ಸಿದ್ದಾಪುರದವಳಾಗಿದ್ದು, ಕಾರವಾರದ ಹಬ್ಬುವಾಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದೆ. ಪ್ಯಾರಾಮೇಡಿಕಲ್ ಕೋರ್ಸ್ … Continued

ಕಾರವಾರದಲ್ಲಿ ಗಾಳಕ್ಕೆ ಸಿಕ್ಕಿಬಿದ್ದ ಅಪರೂಪದ ಡಿಸ್ಕೊ ಫಿಶ್…ವೀಕ್ಷಿಸಿ

ಕಾರವಾರ: ನಗರದ ಬೈತಕೋಲದ ಮೀನುಗಾರನ ಗಾಳಕ್ಕೆ ಅಪರೂಪದ ಮೀನು ಸಿಕ್ಕಿದ್ದು, ಇದಕ್ಕೆ ಡಿಸ್ಕೊ ಮೀನು (ತಂಬೂಸ್ ಮೀನು) ಎಂದು ಕರೆಯುತ್ತಾರಂತೆ. ಇದು ವಇವಿಧ ಬಣ್ಣಗಳಿಂದ ಕೂಡಿದ ಅತ್ಯಂತ ಸುಂದರ ಮೀನು. ಮಾಣಿಗೌಡ ಎಂಬ ಮೀನುಗಾರನ ಗಾಳಕ್ಕೆ ಈ ಅಪರೂಪದ ಮೀನು ಸಿಕ್ಕಿ ಬಿದ್ದಿದೆ. ಇದು ಹೆಚ್ಚಾಗಿ ಅಮೆಜಾನ್ ನದಿಯಲ್ಲಿ ಕಂಡುಬರುತ್ತದೆಯಂತೆ ಹಾಗೂ ಇದರ ಜೀವಿತಾವಧಿ ಸುಮಾರು12 … Continued

‘ಫೋನ್ ಮೂಲಕ ಪಿಂಚಣಿ’ ಮನೆಬಾಗಿಲೆಗೆ ಯೋಜನೆಗೆ ಹತ್ತು ದಿನದಲ್ಲಿ ಚಾಲನೆ: ಕಂದಾಯ ಸಚಿವ ಅಶೋಕ

ಕಾರವಾರ: ಫೋನ್ ಮೂಲಕ ಪಿಂಚಣಿಯನ್ನು ಫಲಾನುಭವಿಗಳಿಗೆ ತಲುಪಿಸುವ ಯೋಜನೆ ರೂಪಿಸಲಾಗುತ್ತಿದ್ದು, 10 ದಿನಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ‘ಕಂದಾಯ ಸಚಿವರ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಫೋನ್ ಕರೆ ಮಾಡಿದವರ … Continued

ಕಾರವಾರ: ಕೆಡಿಪಿ ಸಭೆಯಲ್ಲಿ ಸಚಿವದ್ವಯರ ಸಮ್ಮುಖದಲ್ಲೇ ಬಿಜೆಪಿ ಶಾಸಕರಿಬ್ಬರ ವಾಕ್ಸಮರ..!

ಕಾರವಾರ: ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರೆದುರೇ ಬಿಜೆಪಿ ಶಾಸಕರು ಪರಸ್ಪರ ವಾಗ್ವಾದ ಮಾಡಿಕೊಂಡ ವಿದ್ಯಮಾನ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರಾದ ಶಿವರಾಮ ಹೆಬ್ಬಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲೇ ನೆರೆ ಪರಿಹಾರ ಅನುದಾನ ವಿಚಾರಕ್ಕಾಗಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ … Continued