ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ಬಂಧನ

ದಾಮೋಹ್: ಪ್ರಧಾನಿ ಕುರಿತು `ಸಂವಿಧಾನವನ್ನು ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಚಿವ ರಾಜಾ ಪಟೇರಿಯಾ ಅವರನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ. ಮಧ್ಯಪ್ರದೇಶ ರಾಜ್ಯದ ದಾಮೋಹ್ ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಅವರ ನಿವಾಸದಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ತಂಡವು … Continued

ಎಂಬಿಬಿಎಸ್ ಹಿಂದಿ ಪಠ್ಯಪುಸ್ತಕ ಬಿಡುಗಡೆ ಮಾಡಿದ ಅಮಿತ್‌ ಶಾ

ಭೋಪಾಲ್‌: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಮೂರು ವಿಷಯಗಳ ಹಿಂದಿಯಲ್ಲಿ ಪಠ್ಯಪುಸ್ತಕಗಳನ್ನು ಭಾನುವಾರ ಬಿಡುಗಡೆ ಮಾಡಿದರು. ಇದು ದೇಶದಲ್ಲೇ ಮೊದಲನೆಯದು. ಅವರು ವೈದ್ಯಕೀಯ ಜೀವರಸಾಯನಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ವೈದ್ಯಕೀಯ ಶರೀರಶಾಸ್ತ್ರದ ಹಿಂದಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದರು. ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದ್ದು … Continued

ದೃಷ್ಟಿ ವಿಕಲಚೇತನ ಟೆಕ್ಕಿಗೆ ಮೈಕ್ರೋಸಾಫ್ಟ್‌ ಕಂಪನಿಯಿಂದ ₹ 47 ಲಕ್ಷ ಪ್ಯಾಕೇಜ್ ಆಫರ್‌…!

ಇಂದೋರ್: ಮಧ್ಯಪ್ರದೇಶದ 25 ವರ್ಷದ ದೃಷ್ಟಿ ವಿಕಲಚೇತನ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಐಟಿ ದೈತ್ಯ ಮೈಕ್ರೋಸಾಫ್ಟ್‌ನಿಂದ ₹ 47 ಲಕ್ಷ ವಾರ್ಷಿಕ ಪ್ಯಾಕೇಜ್‌ನೊಂದಿಗೆ ಉದ್ಯೋಗದ ಆಫರ್ ಬಂದಿದೆ. ಯಶ್ ಸೋನಾಕಿಯಾ ಅವರು 2021ರಲ್ಲಿ ಇಂದೋರ್ ಮೂಲದ ಶ್ರೀ ಗೋವಿಂದರಾಮ್ ಸೆಕ್ಸಾರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಎಸ್‌ಜಿಎಸ್‌ಐಟಿಎಸ್) ನಿಂದ ತಮ್ಮ ಬಿ ಟೆಕ್ ಪದವಿ ಪಡೆದಿದ್ದಾರೆ, … Continued

ಮಳೆಗೆ ಸಂಪರ್ಕ ರಸ್ತೆ ಮುಳುಗಡೆ: ರಬ್ಬರ್ ಟ್ಯೂಬ್‌ಗೆ ಶವ ಕಟ್ಟಿ ತುಂಬಿದ ನದಿಯಲ್ಲೇ ಸಾಗಿಸಿದ ಗ್ರಾಮಸ್ಥರು | ವೀಕ್ಷಿಸಿ

ದಿಂಡೋರಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ರಾಮಸ್ಥರ ಗುಂಪೊಂದು ಪ್ರವಾಹದಿಂದ ತುಂಬಿರುವ ನರ್ಮದಾ ನದಿಯನ್ನು ದಾಟಿ ತಮ್ಮ ಗ್ರಾಮವನ್ನು ತಲುಪಲು ತೇಲುವ ರಬ್ಬರ್ ಟ್ಯೂಬ್‌ಗೆ ವ್ಯಕ್ತಿಯ ಶವವನ್ನು ಕಟ್ಟಿ ಒಯಿದ್ದಾರೆ. ಭಾರೀ ಮಳೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಲ್ಲಿ ಮುಳುಗಿರುವ ವಿದ್ಯಮಾನ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭಾನುವಾರ ವರದಿಯಾಗಿದೆ. ನದಿಗೆ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಅನಿವಾರ್ಯವಾಗಿ … Continued

ಇಂದೋರ್‌ನಲ್ಲಿ 5000 ಜನರೊಂದಿಗೆ ಭಾರತದ ನಕ್ಷೆ ರಚಿಸುವ ಮೂಲಕ ವಿಶ್ವ ದಾಖಲೆ ನಿರ್ಮಾಣ | ವೀಕ್ಷಿಸಿ

ಮಧ್ಯಪ್ರದೇಶದ ಇಂದೋರ್‌ನ 5000 ಜನರು ಯಶಸ್ವಿಯಾಗಿ ಭಾರತದ ನಕ್ಷೆಯನ್ನು ರಚಿಸಿದ್ದಾರೆ ಮತ್ತು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಭಾರತೀಯ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ರೂಪುಗೊಂಡ ನಕ್ಷೆಯು ಕೇವಲ ಮಾನವ ಸರಪಳಿಯಿಂದ ರೂಪುಗೊಂಡಿದೆ. ಮಧ್ಯಪ್ರದೇಶದ ಇಂದೋರಿನ ದಿವ್ಯ ಶಕ್ತಿಪೀಠದಲ್ಲಿ ‘ಜ್ವಾಲಾ’ ಎಂಬ ಸಾಮಾಜಿಕ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಸಲಾಗಿತ್ತು. ಭಾರತದ ನಕ್ಷೆಯ ರಚನೆಯು … Continued

ಆಘಾತಕಾರಿ ಘಟನೆ: ಅತ್ಯಾಚಾರ ಆರೋಪಿ ಜೊತೆ ಅತ್ಯಾಚಾರ ಸಂತ್ರಸ್ತೆಯನ್ನೂ ಹಗ್ಗಗಳಿಂದ ಕಟ್ಟಿ ಮೆರವಣಿಗೆ..!

ಅಲಿರಾಜ್‌ಪುರ: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜ್‌ಪುರ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯೊಬ್ಬಳ ಮೇಲೆ 21 ವರ್ಷದ ಯುವಕ ಭಾನುವಾರ ಅತ್ಯಾಚಾರ ಎಸಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆರೋಪಿ ಮತ್ತು ಅತ್ಯಾಚಾರ ಸಂತ್ರಸ್ತೆ ಇಬ್ಬರನ್ನೂ ಹಗ್ಗಗಳಿಂದ ಕಟ್ಟಿ, ಥಳಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಈ … Continued

ಮಧ್ಯಪ್ರದೇಶ: ಮೂರು ನಗರಗಳಲ್ಲಿ ಭಾನುವಾರ ಲಾಕ್‌ಡೌನ್‌ ಜಾರಿ

ಭೂಪಾಲ್: ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮೂರು ನಗರಗಳಲ್ಲಿ ಪ್ರತಿ ಭಾನುವಾರ ಲಾಕ್‌ಡೌನ್‌ ಜಾರಿ ಲಾಕ್‌ಡೌನ್‌ ಮಾಡಲಾಗಿದೆ. ಭೂಪಾಲ್, ಇಂದೋರ್ ಮತ್ತು ಜಬಲ್ ಪುರದಲ್ಲಿ ಪ್ರತಿ ಭಾನುವಾರ ಲಾಕ್ ಡೌನ್ ಜಾರಿಯಾಗಿದ್ದು, ಭಾನುವಾರ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದು, ಬಣಗುಡುತ್ತಿವೆ. ಈ ಮೂರು ನಗರಗಳಲ್ಲಿ ಪ್ರತಿ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿ ಮಧ್ಯಪ್ರದೇಶ ಸರ್ಕಾರ … Continued