ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರದಿಂದ ಬಾಂಗ್ಲಾದೇಶದ ಯೂನಸ್ ಸರ್ಕಾರಕ್ಕೆ ಆರ್ಥಿಕ ಆಘಾತ…!

ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರಕ್ಕೆ ಹಣಕಾಸು ನೆರವಿಗೆ ದೊಡ್ಡ ಹೊಡೆತಬಿದ್ದಿದೆ. ಬಾಂಗ್ಲಾದೇಶಕ್ಕೆ ತನ್ನ ಎಲ್ಲ ನೆರವು ಮತ್ತು ನೆರವಿನ ಯೋಜನೆಗಳನ್ನು ಸ್ಥಗಿತಗೊಳಿಸಲು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (USAID) ಆದೇಶಿಸಿದೆ. ಇದನ್ನು ಬಾಂಗ್ಲಾದೇಶದ ಯೂನಸ್ ಸರ್ಕಾರಕ್ಕೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗುತ್ತಿದೆ. ಶನಿವಾರ ಯೋಜನೆಯ ಅನುಷ್ಠಾನ ಪಾಲುದಾರರಿಗೆ ಕಳುಹಿಸಲಾದ ಸಂದೇಶದಲ್ಲಿ, ಅಮೆರಿಕದ ಅಂತಾರಾಷ್ಟ್ರೀಯ … Continued

ಬಾಂಗ್ಲಾದೇಶದ ಹಂಗಾಮಿ ಮುಖ್ಯಸ್ಥ “ಮುಹಮ್ಮದ್ ಯೂನಸ್ ಅಲ್ಪಸಂಖ್ಯಾತರ ನರಮೇಧದಲ್ಲಿ ಭಾಗಿ”: ಪದಚ್ಯುತಿ ನಂತರ ಶೇಖ್ ಹಸೀನಾ ಮೊದಲ ಭಾಷಣ

ನವದೆಹಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ದೇಶದ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಶೇಖ್ ಹಸೀನಾ ಅವರು ಮುಹಮ್ಮದ್ ಯೂನಸ್ “ಹತ್ಯಾಕಾಂಡ” ನಡೆಸುತ್ತಿದ್ದಾರೆ ಮತ್ತು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು … Continued

ನಾಲ್ವರನ್ನು ಬಂಧಿಸಿದ ನಂತರ 54 ಇಸ್ಕಾನ್ ಸನ್ಯಾಸಿಗಳು ಭಾರತಕ್ಕೆ ಬರುವುದನ್ನು ತಡೆದ ಬಾಂಗ್ಲಾದೇಶ…!

ಢಾಕಾ : ಬಾಂಗ್ಲಾದೇಶವು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ನ ಕನಿಷ್ಠ 54 ಸದಸ್ಯರನ್ನು ಭಾರತಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದೆ ಮತ್ತು ಬೆನಾಪೋಲ್ ಗಡಿ ಚೆಕ್ಪಾಯಿಂಟ್‌ನಿಂದ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ವಲಸೆ ಪೊಲೀಸರು “ಅನುಮಾನಾಸ್ಪದ ಪ್ರಯಾಣ” ಎಂದು ಉಲ್ಲೇಖಿಸಿ, ಮಾನ್ಯವಾದ ದಾಖಲೆಗಳನ್ನು ಹೊಂದಿದ್ದರೂ ಅವರನ್ನು ಭಾರತಕ್ಕೆ ಪ್ರವೇಶಿದಂತೆ ನಿರ್ಬಂಧಿಸಿ ಹಿಂದಕ್ಕೆ … Continued

ಪ್ರಧಾನಿ ಮೋದಿಗೆ ಕರೆ ಮಾಡಿದ ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ; ಹಿಂದೂಗಳ ರಕ್ಷಣೆಯ ಭರವಸೆ

ನವದೆಹಲಿ : ಬಾಂಗ್ಲಾದೇಶವು ಹಿಂದೂಗಳು ಮತ್ತು ದೇಶದಲ್ಲಿ ವಾಸಿಸುವ ಎಲ್ಲ ಅಲ್ಪಸಂಖ್ಯಾತರ ಭದ್ರತೆ ಮತ್ತು ಸುರಕ್ಷತೆ ನೀಡುವ ಭರವಸೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ತಮಗೆ ಶುಕ್ರವಾರ ಕರೆ ಮಾಡಿ ಭರವಸೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. … Continued

ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಇಂದು ಪ್ರಮಾಣವಚನ : ಸೇನಾ ಮುಖ್ಯಸ್ಥ

ಢಾಕಾ : ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಗುರುವಾರ (ಆಗಸ್ಟ್ 8) ಪ್ರಮಾಣವಚನ ಸ್ವೀಕರಿಸಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನರಲ್ ವಾಕರ್‌, ಪ್ರಮಾಣ ವಚನ ಸಮಾರಂಭವು ರಾತ್ರಿ 8 ಗಂಟೆಗೆ (ಸ್ಥಳೀಯ ಕಾಲಮಾನ) ನಡೆಯುವ … Continued

ಬಾಂಗ್ಲಾದೇಶ ಬಿಕ್ಕಟ್ಟು : ನೊಬೆಲ್ ಪುರಸ್ಕೃತ 84 ವರ್ಷದ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ

ನವದೆಹಲಿ : ಭಾರೀ ಪ್ರತಿಭಟನೆಗಳ ನಡುವೆ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತ ಕಿರು ಹಣಕಾಸು ಪ್ರವರ್ತಕ ಮುಹಮ್ಮದ್ ಯೂನಸ್ ಅವರನ್ನು ಮಿಲಿಟರಿ ಬೆಂಬಲಿತ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಹಸೀನಾ ಅವರ ಪದಚ್ಯುತಿಯಲ್ಲಿ ಪ್ರತಿಭಟನೆ ಅಂತ್ಯಗೊಂಡ ನಂತರ ವಿದ್ಯಾರ್ಥಿ ಮುಖಂಡರು ಮಂಗಳವಾರ ಸಂಜೆ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ … Continued