ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ : ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು, ಸಯ್ಯದ್ ನಾಸೀರ್ ಹುಸೇನ್ ಹೇಳಿದ್ದೇನು?

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಸಂಜೆ ಪ್ರಕಟವಾಗಿದ್ದು, ಕಾಂಗ್ರೆಸ್‌ ನಿಂದ ಮೂವರು ಹಾಗೂ ಬಿಜೆಪಿಯಿಂದ ಒಬ್ಬರು ಜಯಗಳಿಸಿದ್ದಾರೆ. ಗೆಲುವಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ … Continued

ರಂಭಾಪುರಿ ಶ್ರೀಗಳ ವಿರುದ್ಧ ಪ್ರತಿಭಟನೆ : 59 ಜನರ ವಿರುದ್ಧ ಪ್ರಕರಣ

ಬಾಗಲಕೋಟೆ : ರಂಭಾಪುರಿ ಶ್ರೀಗಳ ಕಾರಿಗೆ ತಡೆ ಒಡ್ಡಿದ ವಿಚಾರದ ಘಟನೆಗೆ ಸಂಬಂಧಿಸಿದಂತೆ ಶ್ರೀಗಳ ಭಕ್ತರು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ. ತಾಲೂಕಿನ ಕಲಾದಗಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಶನಿವಾರ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರಳುತ್ತಿದ್ದ ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆದಿದ್ದಳು. … Continued

ಉಡುಪಿಯಲ್ಲಿ ನಾಲ್ವರ ಹತ್ಯೆ ಪ್ರಕರಣ: ಅತಿಯಾದ ಪ್ರೀತಿ-ವ್ಯಾಮೋಹವೇ ಕೊಲೆಗೆ ಕಾರಣ

ಉಡುಪಿ : ಏರ್‌ ಇಂಡಿಯಾದ ಗಗನಸಖಿ ಮತ್ತು ಆಕೆಯ ಕುಟುಂಬದ ಮೂವರು ಸದಸ್ಯರನ್ನು ಆಕೆಯ ಸಹೋದ್ಯೋಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಘಟನೆ ನಡೆದ ಮೂರು ತಿಂಗಳ ನಂತರ ಉಡುಪಿ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಫೆಬ್ರವರಿ 12 ರಂದು ಚಾರ್ಜ್‌ಶೀಟ್ ಸಲ್ಲಿಸಿದ ಮಲ್ಪೆ ಪೊಲೀಸರು, ಹತ್ಯೆಗೆ ಅತಿಯಾದ ಗೆಳೆತನ, ಪ್ರೀತಿ (Love), ವ್ಯಾಮೋಹ, … Continued

ವೀಡಿಯೊ…| ದಂತೇವಾಡದಲ್ಲಿ ನಕ್ಸಲರು ನಿರ್ಮಿಸಿಕೊಂಡ 130 ಮೀಟರ್ ಉದ್ದದ ಬೃಹತ್ ಸುರಂಗ ಪತ್ತೆ…!

ರಾಯ್ಪುರ: ಮಾವೋವಾದಿ ನಕ್ಸಲ್‌ ಪೀಡಿತ ಚತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭೂಗತ ಅಡಗುತಾಣವಾಗಿ ನಿರ್ಮಿಸಲಾದ 130 ಮೀಟರ್ ಉದ್ದದ ಸುರಂಗವನ್ನು ಪತ್ತೆ ಹಚ್ಚಿವೆ. ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿ ಭದ್ರತಾ ಪಡೆಗಳು ಹಿಂತಿರುಗುತ್ತಿದ್ದಾಗ ಅಡಗುತಾಣ ಪತ್ತೆಯಾಗಿದೆ. 10 ಅಡಿ ಆಳದ ಸುರಂಗವನ್ನು ಮೊದಲು ಸ್ಥಳೀಯ ಬುಡಕಟ್ಟು ಯುವಕರನ್ನು ಒಳಗೊಂಡಿರುವ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) … Continued

ಶೀಘ್ರವೇ 900ಕ್ಕೂ ಹೆಚ್ಚು ಪಿಎಸ್‌ ಐ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರು: ಗೃಹ ಸಚಿವ ಡಾ. ಪರಮೇಶ್ವರ

ಬೆಂಗಳೂರು : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ಶೀಘ್ರವೇ 900ಕ್ಕೂ ಹೆಚ್ಚು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪಿಎಸ್ ಐ ಪರೀಕ್ಷೆ ಬಹಳ ಸುಸೂತ್ರವಾಗಿ ನಡೆದಿದೆ. ಪರೀಕ್ಷೆಯಲ್ಲಿ … Continued

ಬೆಳಗಾವಿ : ಪ್ರೇಮಿಗಳೆಂದು ತಿಳಿದು ಅಕ್ಕ-ತಮ್ಮನನ್ನು ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಬೆಳಗಾವಿ : ಬೆಳಗಾವಿ ಪ್ರವೇಶಿಸುವ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದವರನ್ನು ಶೆಡ್ ನೊಳಗೆ ಕೂಡಿಹಾಕಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಗಾಂಜಾ ನಶೆಯಲ್ಲಿ ಏಳು ಜನ ಅನ್ಯಕೋಮಿನ ಯುವಕರು ಸೇರಿ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹೊರವಲಯದ ಯಮನಪುರದ ಸಚಿನ್ ಲಮಾಣಿ (22), ಮುಸ್ಕಾನ್ ಪಟೇಲ್ (23) … Continued

ಬಿಜೆಪಿ ಶಾಸಕ ಸುನಿಲಕುಮಾರ ಪೊಲೀಸ್ ವಶಕ್ಕೆ

ಬೆಂಗಳೂರು: ‘ಅಯೋಧ್ಯೆ ರಾಮಮಂದಿರದ ಕರಸೇವಕ ನಾನು. ನನ್ನನ್ನೂ ಬಂಧಿಸಿ’ ಎಂದು ಆಗ್ರಹಿಸಿ ನಗರದ ಸದಾಶಿವನಗರ ಪೊಲೀಸ್ ಠಾಣೆ ಎದುರು ಗುರುವಾರ ಬೆಳಿಗ್ಗೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲಕುಮಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯಲ್ಲಿ ಬಂಧನ ಮಾಡಿರುವ ಕರಸೇವಕರ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ (BJP) ನಿತ್ಯ ಪ್ರತಿಭಟನೆ … Continued

ಸುದ್ದಿಗೋಷ್ಠಿಗೆ ಮುನ್ನವೇ ಮಣಿಕಂಠ ರಾಠೋಡನ ವಶಕ್ಕೆ ಪಡೆದ ಪೊಲೀಸರು

ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ನನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಣಿಕಂಠ್ ರಾಠೋಡ್ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಸುದ್ದಿಗೋಷ್ಠಿಗೆ ಆಗಮಿಸುವ ಮುನ್ನವೇ ಮಣಿಕಂಠ್ ರಾಠೋಡ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ನಗರದ ಭಾರತ್ ಪ್ರೈಡ್ ಅಪಾರ್ಟ್ಮೆಂಟ್‌ನಲ್ಲಿದ್ದ ಮಣಿಕಂಠ್ ರಾಠೋಡ್ ನನ್ನು ಇಂದು, ಗುರುವಾರ ಚೌಕ್ … Continued

ಕಾಣೆಯಾಗಿದ್ದ ಮೂವರು ಅಕ್ಕತಂಗಿಯರ ಮೃತದೇಹಗಳು ಕಬ್ಬಿಣದ ಪೆಟ್ಟಿಗೆಯೊಳಗೆ ಪತ್ತೆ

ಚಂಡೀಗಢ: ಪಂಜಾಬಿನ ಜಲಂಧರ್ ಜಿಲ್ಲೆಯ ಕಾನ್ಪುರ ಗ್ರಾಮದಲ್ಲಿ ಮೂವರು ಸಹೋದರಿಯರು ತಮ್ಮ ಮನೆಯಲ್ಲಿ ಟ್ರಂಕ್‌ನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೂವರು ಹುಡುಗಿಯರು ತಮ್ಮ  ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬಾರದೆ ಇದ್ದಾಗ ಅವರ ತಂದೆ-ತಾಯಿ ಮಕ್ಸೂದನ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಲಸೆ … Continued

ಹಣಕ್ಕಾಗಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಅರಣ್ಯದಲ್ಲಿ ಶವ ಎಸೆದಿದ್ದ ಮೂವರು ಆರೋಪಿಗಳ ಬಂಧನ

ಶಿರಸಿ: ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಎಸೆದು ಹೋಗಿದ್ದ ಮೂವರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹಣಕ್ಕಾಗಿ ಕೊಲೆಗೈದು ಬಳಿಕ ಶವವನ್ನು ತಾಲೂಕಿನ ಕೊರ್ಲಕಟ್ಟಾ – ವಡ್ಡಿನಕೊಪ್ಪ ರಸ್ತೆಯ ಅರಣ್ಯದಲ್ಲಿ ಎಸೆದು ಹೋಗಿದ್ದರು. ಅರಣ್ಯದಲ್ಲಿ ಅಪರಿಚಿತ ವ್ಯಕ್ತಿಯ ಪತ್ತೆಯಾದ 24 ಗಂಟೆಗಳ ಒಳಗೆ ಮೂವರು ಕೊಲೆ ಆರೋಪಿಗಳನ್ನೂ ಬಂಧಿಸಲಾಗಿದೆ ಬಂಧಿತ … Continued