ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹದ ಮೇಲೆ ಯಾವೆಲ್ಲ ಆಭರಣಗಳಿವೆ…?

ಅಯೋಧ್ಯೆ: ರಾಮ ಮಂದಿರದಲ್ಲಿ ಭಗವಾನ್‌ ರಾಮ ಲಲ್ಲಾ ವಿಗ್ರಹ ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅದ್ಧೂರಿ ಸಮಾರಂಭದಲ್ಲಿ ನೆರವೇರಿಸಿದರು. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂತರು, ಕಲಾವಿದರು, ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಏಳು ಸಾವಿರಕ್ಕೂ ಹೆಚ್ಚು ವಿಶೇಷ ಆಹ್ವಾನಿತರು ಭಾಗವಹಿಸಿದ್ದರು. ಜನವರಿ 23 ರಿಂದ ಭಕ್ತರಿಗಾಗಿ ದೇವಾಲಯವನ್ನು … Continued

ವೀಡಿಯೊ…| ರಾಮಮಂದಿರ ಉದ್ಘಾಟನೆ : ಅಯೋಧ್ಯೆಯಲ್ಲಿ ಪರಸ್ಪರ ಅಪ್ಪಿಕೊಂಡು ಆನಂದ ಭಾಷ್ಪ ಸುರಿಸಿದ ಸಾಧ್ವಿ ಋತಂಭರಾ-ಉಮಾಭಾರತಿ

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಉಮಾಭಾರತಿ ಪಾಲ್ಗೊಂಡಿದ್ದಾರೆ. ಅವರು 32 ವರ್ಷ 46 ದಿನಗಳ ಹಿಂದೆ ಇದೇ ಪವಿತ್ರ ಪಟ್ಟಣದಲ್ಲಿದ್ದರು. ಅಂದು ಬಾಬರಿ ಮಸೀದಿಯನ್ನು ಹಿಂದೂ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಇಂದು, ಅದೇ ಸ್ಥಳದಲ್ಲಿ ಭವ್ಯವಾದ ರಾಮಮಂದಿರವೊಂದು ನಿರ್ಮಾಣವಾಗಿದ್ದು, ಕೋಟ್ಯಂತರ ಹಿಂದೂಗಳು ಭಗವಾನ್ ರಾಮನ ಜನ್ಮಸ್ಥಳವೆಂದು ನಂಬುತ್ತಾರೆ. ರಾಂ ಜನ್ಮಭೂಮಿ ಆಂದೋಲನದ ಮುಂಚೂಣಿಯಲ್ಲಿದ್ದ … Continued

“ನಾನು ಈ ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ”: ರಾಮಲಲ್ಲಾ ವಿಗ್ರಹ ಕೆತ್ತಿದ ಮೈಸೂರಿನ ಶಿಲ್ಪಿ

ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಾಮಲಲ್ಲಾ ವಿಗ್ರಹವನ್ನು ಕೆತ್ತಿದ ಕರ್ನಾಟಕದ ಮೈಸೂರಿನ ಶಿಲ್ಪಿ, ತನ್ನನ್ನು ತಾನು ಭೂಮಿಯ ಮೇಲಿನ “ಅದೃಷ್ಟಶಾಲಿ” ಎಂದು ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ. ಇಂದು, ಸೋಮವಾರ (ಜನವರಿ 22ರಂದು) ತಾನು ಕೆತ್ತಿದ ರಾಮಲಲ್ಲಾ ಮೂರ್ತಿಯ ‘ಪ್ರಾಣ ಪ್ರತಿಷ್ಠಾ’ ನಡೆದ ದಿನ ಅರುಣ ಯೋಗಿರಾಜ ಅವರು ಹಿಂದೆಂದೂ ಕಾಣದ ರೀತಿಯಲ್ಲಿ ಸಹಜವಾಗಿಯೇ ಪುಳಕಿತರಾಗಿದ್ದರು. … Continued

‘ನಾನು ಶ್ರೀರಾಮನ ಬಳಿ ಕ್ಷಮೆಯಾಚಿಸುತ್ತೇನೆ, ಯಾಕೆಂದರೆ…’ : ಅಯೋಧ್ಯೆ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನಂತರ ಪ್ರಧಾನಿ ಮೋದಿ

ಅಯೋಧ್ಯಾ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಜನವರಿ 22) ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಿದರು ಮತ್ತು ಮಂದಿರ ನಿರ್ಮಾಣವು “ಭಾರತೀಯ ಸಮಾಜದಲ್ಲಿ ತಾಳ್ಮೆ, ಶಾಂತಿ ಮತ್ತು ಸೌಹಾರ್ದತೆಯ ಸಂಕೇತ” ಎಂದು ಹೇಳಿದರು. ಇದು ಕೇವಲ ಒಂದು ಕ್ಷಣವಲ್ಲ ಎಂದ ಅವರು ಇದು ನಮ್ರತೆಯ ಗೆಲುವು. ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನಿ ಮೋದಿ … Continued

ಪ್ರಧಾನಿ ಮೋದಿ ಹೆಲಿಕಾಪ್ಟರ್‌ನಿಂದ ಚಿತ್ರೀಕರಿಸಿದ ಅಯೋಧ್ಯೆಯ ರಾಮಮಂದಿರದ ವೈಮಾನಿಕ ವೀಡಿಯೊ | ವೀಕ್ಷಿಸಿ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮ ಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ದೇವಾಲಯದ ಪಟ್ಟಣಕ್ಕೆ ಆಗಮಿಸುವ ಮುನ್ನ ಪ್ರಧಾನಿ ಕಚೇರಿಯು ಭವ್ಯ ದೇವಾಲಯದ ವೈಮಾನಿಕ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊವನ್ನು ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್‌ನಿಂದ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಪ್ರಾಣ ಪ್ರತಿಷ್ಠೆ ಸಿದ್ಧತೆಗಾಗಿ ಪ್ರಧಾನಿ ಮೋದಿ ಅವರು 11 ದಿನಗಳ ಕಟ್ಟುನಿಟ್ಟಾದ … Continued

ಅಯೋಧ್ಯೆಯ ರಾಮ ಮಂದಿರಕ್ಕೆ ಪಾಕ್‌ ಆಕ್ರಮಿತ ಕಾಶ್ಮೀರದಿಂದ ನೀರು ಕಳುಹಿಸಿದ ಮುಸ್ಲಿಂ ವ್ಯಕ್ತಿ…!

ನವದೆಹಲಿ: ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಭಗವಾನ್‌ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಳಸಲು ಮುಸ್ಲಿಂ ವ್ಯಕ್ತಿಯೊಬ್ಬರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಶಾರದಾ ಪೀಠದ ಕುಂಡದಿಂದ ಪವಿತ್ರ ನೀರನ್ನು ಸಂಗ್ರಹಿಸಿ ಬ್ರಿಟನ್ ಮೂಲಕ ಭಾರತಕ್ಕೆ ಕಳುಹಿಸಿದ್ದಾರೆ…! 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರದಲ್ಲಿ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ … Continued

ವೀಡಿಯೊ.. | ಪ್ರತಿಷ್ಠಾಪನೆ ಸಮಾರಂಭದ ಮೊದಲು ಅಲಂಕಾರಗೊಳ್ಳುತ್ತಿರುವ ಅಯೋಧ್ಯೆ ರಾಮ ಮಂದಿರ ಹೇಗೆ ಕಾಣುತ್ತಿದೆ ನೋಡಿ

ನವದೆಹಲಿ : ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಗೆ ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಭಗವಾನ್ ರಾಮಲಲ್ಲಾ ಅವರ ಭವ್ಯವಾದ ಮಂದಿರವು ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಜ್ಜಾಗುತ್ತಿದೆ. ಡಿಡಿ ನ್ಯೂಸ್‌ ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊವು ಭವ್ಯವಾದ ದೇವಾಲಯದ ಒಳಗಿನ ವಿಶೇಷ ನೋಟವನ್ನು ನೀಡುತ್ತದೆ. ಅದರ ಕಂಬಗಳು ಮತ್ತು ಸ್ತಂಭಗಳನ್ನು ಹೂವಿನ ಹೂಗುಚ್ಛಗಳಿಂದ ಅಲಂಕರಿಸಲಾಗಿರುವುದರಿಂದ ಬೆಳಕಿನಿಂದ … Continued

ರಾಮಮಂದಿರ ಕಾರ್ಯಕ್ರಮದ ಬಗ್ಗೆ ಪಕ್ಷದ ನಿಲುವಿನಿಂದ ಅಸಮಾಧಾನ : ಗುಜರಾತ್ ಕಾಂಗ್ರೆಸ್ ಶಾಸಕ ರಾಜೀನಾಮೆ

ಗಾಂಧಿನಗರ: ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕ ಸಿ.ಜೆ. ಚಾವ್ಡಾ ಅವರು ಅಯೋಧ್ಯಾ ರಾಮಮಂದಿರದ ಬಗ್ಗೆ ಪಕ್ಷದ ಧೋರಣೆಯಿಂದ ಅಸಮಾಧಾನಗೊಂಡಿದ್ದು, ಶುಕ್ರವಾರ ತಮ್ಮ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಜಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಬೆಳಗ್ಗೆ ಗಾಂಧಿನಗರದಲ್ಲಿ ವಿಧಾನಸಭೆ ಸ್ಪೀಕರ್ ಶಂಕರ ಚೌಧರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ರಾಜ್ಯ ವಿಧಾನಸಭೆಯ ಅಧಿಕಾರಿ … Continued

ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೂ ಮುನ್ನ ರಾಮ ಲಲ್ಲಾ ವಿಗ್ರಹದ ಮುಖದ ಫೋಟೋ ಬಿಡುಗಡೆ

ನವದೆಹಲಿ : ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದ್ದು, ರಾಮ ಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗಿರುವ ರಾಮನ ವಿಗ್ರಹವನ್ನು ಸಮಾರಂಭಕ್ಕೆ ಕೆಲವು ದಿನಗಳ ಮುಂಚಿತವಾಗಿ ಶುಕ್ರವಾರ ಬಹಿರಂಗಪಡಿಸಲಾಗಿದೆ. ವಿಗ್ರಹವು ಭಗವಾನ್ ರಾಮನನ್ನು ಐದು ವರ್ಷದ ಮಗುವಿನಂತೆ ಚಿತ್ರಿಸಿದ್ದು, ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದು ನಿಂತಿರುವ ಭಂಗಿಯಲ್ಲಿದೆ.ಮೈಸೂರು ಮೂಲದ ಕಲಾವಿದ ಅರುಣ ಯೋಗಿರಾಜ … Continued

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ : ಜ.22ರಂದು ದೇಶಾದ್ಯಂತ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ನವದೆಹಲಿ: ಜನವರಿ 22 ರಂದು ನಿಗದಿಯಾಗಿರುವ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಆ ದಿನ ಕೇಂದ್ರ ಸರ್ಕಾರ ‘ಅರ್ಧ ದಿನ’ ರಜೆ ಘೋಷಿಸಿದೆ. ” ನೌಕರರು ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಲು, ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ … Continued