ತುಹಿನ್ ಕಾಂತಾ ಪಾಂಡೆ ಸೆಬಿ ನೂತನ ಅಧ್ಯಕ್ಷ

ನವದೆಹಲಿ : ಐಎಎಸ್ ಅಧಿಕಾರಿ ತುಹಿನ್ ಕಾಂತಾ ಪಾಂಡೆ ಅವರನ್ನು ಸೆಬಿಯ ನೂತನ ಅಧ್ಯಕ್ಷರಾಗಿ ಗುರುವಾರ ನೇಮಕ ಮಾಡಲಾಗಿದೆ. ಒಡಿಶಾ ಕೇಡರ್‌ನ 1987-ಬ್ಯಾಚ್ ಅಧಿಕಾರಿಯಾದ ಇವರು ಮಾಧಬಿ ಪುರಿ ಬುಚ್ ಅವರ ಸ್ಥಾನಕ್ಕೆ ನೇಮಕವಾಗಿದ್ದಾರೆ. ಮಾಧಬಿ ಪುರಿ ಬುಚ್ ಅವರ ಮೂರು ವರ್ಷಗಳ ಅಧಿಕಾರಾವಧಿ ಫೆಬ್ರವರಿ 28 ರಂದು ಕೊನೆಗೊಳ್ಳಲಿದೆ. ಹಣಕಾಸು ಸಚಿವಾಲಯವು ಫೆಬ್ರವರಿ 17 … Continued

ಜಿಗಿತ ಅಂದ್ರೆ ಇದಪ್ಪ….: 3 ರೂ.ಗಳಿದ್ದ ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಷೇರಿನ ದರ ಒಂದೇ ದಿನಕ್ಕೆ 2.36 ಲಕ್ಷ ರೂ.ಗಳಿಗೆ ಏರಿಕೆ…!

ಎಂಆರ್‌ ಎಫ್‌ (MRF) ಲಿಮಿಟೆಡ್ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಯ ಷೇರು ಎಂದು ಭಾವಿಸಿದರೆ ಅದು ತಪ್ಪು.ಅಕ್ಟೋಬರ್ 29 ರಂದು ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಹೋಲ್ಡಿಂಗ್‌ ಕಂಪನಿ ಎಂಆರ್‌ಎಫ್‌ (MRF) ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ದುಬಾರಿ ಸ್ಟಾಕ್ ಆಗಿ ಹೊರಹೊಮ್ಮಿದೆ. ಕೇವಲ 3.50 ರೂ. ಅಗ್ಗದ ದರದಲ್ಲಿ ಸಿಗುತ್ತಿದ್ದ ಎಲ್ಸಿಡ್‌ ಇನ್ವೆಸ್ಟ್‌ಮೆಂಟ್ಸ್‌ (Elcid investments) … Continued

ಅನಿಲ ಅಂಬಾನಿ, ಇತರ 24 ವ್ಯಕ್ತಿ-ಕಂಪನಿಗಳಿಗೆ ಷೇರುಪೇಟೆಯಿಂದ 5 ವರ್ಷ ನಿಷೇಧ

ಮುಂಬೈ: ಉದ್ಯಮಿ ಅನಿಲ ಅಂಬಾನಿ ಸಹಿತ 24 ವ್ಯಕ್ತಿ, ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳ ಕಾಲ ಷೇರುಪೇಟೆಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಷೇರುಪೇಟೆ ನಿಯಂತ್ರಕ ಮಂಡಳಿ ಸೆಬಿ ನಿಷೇಧ ಹೇರಿದೆ. ರಿಲಯನ್ಸ್‌ ಹೋಮ್‌ ಫೈನಾನ್ಸ್‌ನಿಂದ (ಆರ್‌ಎಚ್‌ಎಫ್‌ಎಲ್‌) ವಂಚನೆಯ ಮಾರ್ಗದ ಮೂಲಕ ಹಣವನ್ನು ಬೇರೆಡೆಗೆ ತಿರುಗಿಸಿದ ಗುರುತರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿರುವುದಾಗಿ ಸೆಬಿ ಹೇಳಿದೆ. ಆರು … Continued

ಅದಾನಿ-ಹಿಂಡೆನ್‌ಬರ್ಗ್ ಪ್ರಕರಣ: ನಿಯಂತ್ರಕ ಸೆಬಿ ತನಿಖೆಗೆ ಸುಪ್ರೀಂಕೋರ್ಟ್ ಬೆಂಬಲ, ಎಸ್‌ಐಟಿ ತನಿಖೆಗೆ ನಕಾರ

ನವದೆಹಲಿ: ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯಲ್ಲಿ ಅದಾನಿ ಕಂಪನಿ ಸಮೂಹದ ವಿರುದ್ಧದ ವಂಚನೆ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ ಅಥವಾ ಪರ್ಯಾಯ ಸಂಸ್ಥೆಗಳಿಂದ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡಲು ಅಥವಾ ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಬುಧವಾರ … Continued

ಸೆಬಿ ದಂಡದ ವಿರುದ್ಧ ಮೇಲ್ಮನವಿಗೆ ಮುಖೇಶ್ ಅಂಬಾನಿ ನಿರ್ಧಾರ

ಕಂಪನಿಯಲ್ಲಿ ಎರಡು ದಶಕಗಳಷ್ಟು ಹಳೆಯದಾದ ಷೇರು ವಿತರಣೆಯಲ್ಲಿನ ಅಕ್ರಮಗಳ ಆರೋಪದ ಮೇಲೆ ಮಾರುಕಟ್ಟೆ ನಿಯಂತ್ರಕ ಸೆಬಿ ವಿಧಿಸಿರುವ ದಂಡದ ವಿರುದ್ಧ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಸಂಸ್ಥೆ ಗುರುವಾರ ತಿಳಿಸಿದೆ. ಜನವರಿ 2000 ರ ಸಂಚಿಕೆಗೆ ಚಂದಾದಾರರಾಗುವ ಮೂಲಕ ಅಂಬಾನಿ ಸಹೋದರರು ಮತ್ತು ಇತರ ಪ್ರವರ್ತಕ ಕುಟುಂಬ ಸದಸ್ಯರನ್ನು ಆರ್‌ಐಎಲ್‌ನಲ್ಲಿ … Continued

ಶಾರದಾ ಗ್ರುಪ್‌ ಹಗರಣ: ಸೆಬಿ ಅಧಿಕಾರಿಗಳ ನಿವಾಸಗಳ ಮೇಲೆ ಸಿಬಿಐ ದಾಳಿ

ಮುಂಬೈ: ಶಾರದಾ ಗ್ರೂಪ್ ಮಾಡಿದ ವಂಚನೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮುಂಬೈನ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಮೂವರು ಅಧಿಕಾರಿಗಳ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದೆ. ಮುಖ್ಯ ಜನರಲ್ ಮ್ಯಾನೇಜರ್ (ಸಿಜಿಎಂ) ಮತ್ತು ಜನರಲ್ ಮ್ಯಾನೇಜರ್ (ಜಿಎಂ) ದರ್ಜೆಯ ಅಧಿಕಾರಿಗಳಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಶೋಧ … Continued

ಸೆಬಿ ನಿಯಮ ಉಲ್ಲಂಘನೆ: ಹಣ ಪಾವತಿಸಿ ಸಮಸ್ಯೆ ಬಗೆಹರಿಸಿಕೊಂಡ ಇಂಡಿಗೋ

ನವದೆಹಲಿ: ಸೆಬಿಯ ನಿಯಮ ಉಲ್ಲಂಘನೆಗಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ನಡೆಸುತ್ತಿರುವ ಇಂಟರ್‌ಗ್ಲೋಬ್‌ ಏವಿಯೇಶನ್‌ ಲಿಮಿಟೆಡ್‌ ೨.೧೦ ಕೋಟಿ ರೂ. ಭರಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡಿದೆ. ಸೆಬಿಯ ಒಪ್ಪಿಗೆಯ ಕಾರ್ಯವಿಧಾನದ ಅಡಿಯಲ್ಲಿ, ತಪ್ಪನ್ನು ಒಪ್ಪಿಕೊಳ್ಳದೇ ಅಥವಾ ಅದನ್ನು ತಪ್ಪನ್ನು ನಿರಾಕರಿಸದೆ ದಂಡವನ್ನು ಪಾವತಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದೆ. ತನ್ನ ಪಾಲುದಾರ ರಾಹುಲ್ ಭಾಟಿಯಾ ಮತ್ತು ಇಂಟರ್ … Continued